Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gruha Lakshmi: ಗೃಹಲಕ್ಷ್ಮಿ ಹಣ ಬಂದಿಲ್ಲ ಅಂದ್ರೆ, ಸರ್ಕಾರದಿಂದ ಈ ಮೆಸೇಜು ಬಂದಿದ್ದರೆ ಮತ್ತೆ ನೀವು ಅರ್ಜಿ ಸಲ್ಲಿಸಬೇಕು!!

If you didn't get the Gruha Lakshmi money, you need to resubmit the application.

Gruha Lakshmi: ರಾಜ್ಯ ಸರ್ಕಾರದಿಂದ ಯಾವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 2000 ಬಂದಿಲ್ಲ ಅಂಥವರಿಗೆ ಕರ್ನಾಟಕ ಸರ್ಕಾರದಿಂದ ಈ ರೀತಿಯಾಗಿ ಮೆಸೇಜು ಬರುತ್ತೆ. ಕರ್ನಾಟಕ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಯಾರ್ಯಾರಿಗೆ ಬಂದಿಲ್ಲ ಅಂತವರಿಗೆ ಸರ್ಕಾರದ ವತಿಯಿಂದ ಅವರವರ ಮೊಬೈಲ್ ಫೋನ್ ಗಳಿಗೆ ಒಂದು ಮೆಸೇಜನ್ನು ಈಗಾಗಲೇ ಕಳುಹಿಸಲಾಗಿದೆ.

ಅದೇನೆಂದರೆ ನಿಮ್ಮ ಯೋಜನೆಯ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಬಾಕಿ ಇದೆ. ದಯವಿಟ್ಟು ನಿಮ್ಮ ಹತ್ತಿರದ ಬೆಂಗಳೂರು 1 ಕರ್ನಾಟಕ 1 ಗ್ರಾಮ 1 ಬಾಬೂಜಿ ಸೇವಾ ಕೇಂದ್ರಕ್ಕೆ ಬೇಟೆನೀಡಿ ಎಂದು ಕರ್ನಾಟಕ ರಾಜ್ಯ ಸರ್ಕಾರ. ಯಾರ್ಯಾರಿಗೆ ಹಣ ಬಂದಿಲ್ಲ ಅಂತವರಿಗೆ ಈ ರೀತಿಯಾದ ಮೆಸೇಜ್ ಬಂದಿರುವ ಸಾಧ್ಯತೆ ಇರುತ್ತದೆ.

ಈ ರೀತಿಯಾಗಿ ಸರ್ಕಾರದ ಕಡೆಯಿಂದ ನಿಮಗೆ ಮೆಸೇಜು ಬಂದರೆ ಹಣ ಬರುವುದಿಲ್ಲ ಮತ್ತು ಈ ರೀತಿಯಾಗಿ ನಿಮಗೆ ಮೆಸೇಜ್ ಯಾಕೆ ಬಂದಿದೆ ಎಂದರೆ ನೀವು ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಟೆಕ್ನಿಕಲ್ ಅಥವಾ ಬೇರೆ ಕಾರಣಗಳಿಂದ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಂಪೂರ್ಣವಾಗಿ ಪೂರ್ಣಗೊಂಡಿರುವುದಿಲ್ಲ.

ಅದಕ್ಕಾಗಿ ಸರ್ಕಾರದ ಕಡೆಯಿಂದ ನಿಮ್ಮ ಮೊಬೈಲ್ ಫೋನ್ ಗಳಿಗೆ ಈ ರೀತಿಯಾದ ಮೆಸೇಜ್ ಬರುತ್ತಿದೆ. ನೀವು ಹಾಕಿರುವ ಅರ್ಜಿ ಸರಿಯಾದ ರೀತಿಯಲ್ಲಿ ಸಲ್ಲಿಕೆ ಆಗಿಲ್ಲ ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಿ ಎಂದು ರಾಜ್ಯ ಸರ್ಕಾರದವರು ಮಹಿಳೆಯರ ಮೊಬೈಲ್ ಫೋನ್ ಗಳಿಗೆ ಈ ಮೆಸೇಜ್ ಕಳುಹಿಸಿದ್ದಾರೆ.

ಈ ರೀತಿಯಾದ ಮೆಸೇಜ್ ನಿಮಗೆ ಬಂದಿದ್ದರೆ ನೀವು ಕೂಡಲೇ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮತ್ತು ನಿಮ್ಮ ಬ್ಯಾಂಕ್ ಕಾರ್ಡಿಗೆ ಜೋಡಣೆಯಾಗಿರುವ ಮೊಬೈಲ್ ನಂಬರ್ ತೆಗೆದುಕೊಂಡು ಹೋಗಿ ನೀವು ಅರ್ಜಿ ಎಲ್ಲಿ ಸಲ್ಲಿಸಿದ್ದೀರಾ ಅಲ್ಲಿಗೆ ಹೋಗಿ ಈ ರೀತಿಯಾಗಿ ಮೆಸೇಜ್ ಬಂದಿರುವುದನ್ನು ತೋರಿಸಿ ಅವರು ಮತ್ತೆ ನಿಮ್ಮ ಅಪ್ಲಿಕೇಶನ್ ಅನ್ನು ಸಬ್ಮಿಟ್ ಮಾಡುತ್ತಾರೆ.

ಅದಾದ ನಂತರದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ರೂ.2000 ಹಣ ಬರುತ್ತದೆ. ನಿಮಗೇನಾದರೂ ಈ ರೀತಿಯಾಗಿ ಮೆಸೇಜ್ ಬಂದಿದ್ದರೆ ನೀವು ಕೂಡಲೇ ನಿಮ್ಮ ಅತ್ತಿರದ ಗ್ರಾಮ 1 ಕೇಂದ್ರಕ್ಕೆ ಹೋಗಿ ಅಪ್ಲಿಕೇಶನ್ ಹಾಕಬೇಕಾಗುತ್ತದೆ..

If you didn't get the Gruha Lakshmi money, you need to resubmit the application.
If you didn’t get the Gruha Lakshmi money, you need to resubmit the application.
Leave a comment