Life Lesions: ಯಾಕೆ ಯಾವಾಗಲು ದೇವರನ್ನು ನಂಬುವವರಿಗೆ ಮತ್ತು ಒಳ್ಳೆಯವರಿಗೆ ದೇವರು ಕಷ್ಟವನ್ನು ಕೊಡುತ್ತಾನೆ ಗೊತ್ತೇ, ಅದಕ್ಕೆ ತಕ್ಕ ಉತ್ತರ ಇಲ್ಲಿಡಿ ನೋಡಿ.
Life Lesions: Do you know why God always gives hardship to those who believe in God and good people, see here for the appropriate answer.
Life Lesions: ಜೀವನದಲ್ಲಿ ಜನರು ತಮಗೆ ಕಷ್ಟ ಬಂದಾಗ ದೇವರನ್ನು ಬೈದುಕೊಳ್ಳುತ್ತಿರುತ್ತಾರೆ. ಮತ್ತೆ ಖುಷಿಯಲ್ಲಿದ್ದಾಗ ದೇವಸ್ಥಾನಕ್ಕೆ ಹೋಗುವುದು ಮತ್ತು ದೇವರನ್ನು ಹೊಗಳುವುದು ಮಾಡುತ್ತಿರುತ್ತಾರೆ. ಮತ್ತೆ ಒಳ್ಳೆಯವರು ಎಲ್ಲಾ ಕಷ್ಟ ನನಗೆ ಬರುತ್ತದೆ ಎಂದು ಸಂಕಷ್ಟದಲ್ಲಿ ಇರುತ್ತಾರೆ. ಅಂತಹವರು ಈ ವಿಷಯವನ್ನು ತಿಳಿದರೆ ನಿಮಗೆ ಗೊತ್ತಾಗುತ್ತದೆ ದೇವರು ಇದ್ದಾರಾ ಇಲ್ಲವಾ ಎಂದು ಹಾಗಾದರೆ ಆ ಕಥೆ ಯಾವುದು ಎಂಬುದನ್ನು ನೋಡೋಣ ಬನ್ನಿ.(Why good people always suffers )
ಒಂದು ಊರಿನಲ್ಲಿ ವಿಶ್ವನಾಥ್ ಮತ್ತು ಹೇಮಂತ್ ಎಂಬ ಇಬ್ಬರು ಸ್ನೇಹಿತರು ಇರುತ್ತಾರೆ. ವಿಶ್ವನಾಥ್ ದೇವರನ್ನು ಅತಿಹೆಚ್ಚಿನದಾಗಿ ನಂಬುತ್ತಿರುತ್ತಾನೆ(Those who believe in god). ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ದೇವರ ಪೂಜೆ ಮಾಡದೆ ಯಾವ ಕೆಲಸವೂ ಸಹ ಮಾಡುತ್ತಿರಲಿಲ್ಲ. ಆದರೆ ಹೇಮಂತ್ ಹಾಗಲ್ಲ ಅವನು ದೇವರನ್ನು ನಂಬುತ್ತಿರಲಿಲ್ಲ. ಹಾಗಂತ ದೇವರ ವಿಷಯ ಅವರಿಬ್ಬರ ಸ್ನೇಹದ ಮಧ್ಯೆ ಯಾವತ್ತು ಅಡ್ಡಿಯಾಗಿ ಬಂದಿಲ್ಲ.
ಹೀಗೆ ಒಂದು ದಿನ ವಿಶ್ವನಾಥ್ ಮತ್ತು ಹೇಮಂತ್ ಇಬ್ಬರೂ ಸಹ ಪಟ್ಟಣಕ್ಕೆ ಕೆಲಸಕ್ಕೆ ಹೊರಡುತ್ತಿರಬೇಕಾದರೆ ಒಂದು ನಿರ್ಜನ ಪ್ರದೇಶದಲ್ಲಿ ಒಂದು ಮೂಟೆಯನ್ನು ಹೇಮಂತ್ ಕಾಣುತ್ತಾನೆ. ಆಗ ಅವನು ಓಡಿ ಹೋಗಿ ನೋಡಿದರೆ ಅಲ್ಲಿ ಕಲ್ಲಿದ್ದಲು ಇರುತ್ತದೆ. ಆಗ ಹೇಮಂತ್ ನಾವು ಪಟ್ಟಣದಲ್ಲಿ ಹೋಗಿ ಕೆಲಸ ಸಿಗುವವರೆಗೂ ಈ ಕಲ್ಲಿದ್ದಲನ್ನು ಮಾರಿ ಬಂದಂತಹ ಹಣದಿಂದ ಜೀವನವನ್ನು ಸಾಗಿಸೋಣ ಎಂದು ವಿಶ್ವನಾಥ್ಗೆ ಹೇಳುತ್ತಾನೆ. ಆಗ ವಿಶ್ವನಾಥ್ ಕೂಡ ಸರಿಯೆಂದು ಹೇಳುತ್ತಾನೆ.
ಹೀಗೆ ಮುಂದೆ ಹೋಗುತ್ತಿರಬೇಕಾದರೆ ವಿಶ್ವನಾಥ್ ನ ಕಾಲಿಗೆ ಒಂದು ಮುಳ್ಳು ಚುಚ್ಚಿ ಕೊಳ್ಳುತ್ತದೆ. ಆ ಮುಳ್ಳು ಎಷ್ಟು ಒಳಗೆ ಹೋಗಿರುತ್ತದೆ ಎಂದರೆ, ಎಷ್ಟೇ ಕೀಳಲು ಪ್ರಯತ್ನ ಮಾಡಿದರು ಸಹ ಆ ಮುಳ್ಳು ಬರುತ್ತಿರುವುದಿಲ್ಲ. ಆಗ ಅಲ್ಲಿಗೆ ಒಬ್ಬ ಸಂತರು(Saint) ಬರುತ್ತಾರೆ. ಅಲ್ಲಿಯೇ ಇದ್ದಂತಹ ಎಲೆಯನ್ನು ತೆಗೆದು ಅದರ ರಸವನ್ನು ಗಾಯದ ಮೇಲೆ ಹಾಕುತ್ತಾರೆ. ಆಗ ಮುಳ್ಳು ಸರಾಗವಾಗಿ ಬರುತ್ತದೆ.
Horoscope: ಈ 3 ರಾಶಿಯವರಿಗೆ ಕೊನೆಗೂ ಬಂದೆ ಬಿಡ್ತು ಶನಿ ಮಾರ್ಗಿ ಯೋಗ, ಇವರು ಎಲ್ಲೆ ಹೋದರು ಯಶಸ್ಸು, ಜಯ, ಕೀರ್ತಿ!!
ನಂತರ ಹೇಮಂತ್, ಆ ಸಂತರಿಗೆ ಈ ರೀತಿ ಹೇಳುತ್ತಾನೆ ಅದು ಏನೆಂದರೆ ನೋಡಿ ಗುರುಗಳೇ, ಇವನು ಯಾವಾಗಲೂ ಸಹ ದೇವರು ಎಂದು ದೇವರನ್ನೇ ನಂಬುತ್ತಿರುತ್ತಾನೆ. ಆದರೆ ಅವನು ದೇವರನ್ನು ನಂಬಿದ್ದಕ್ಕೆ ಅವನ ಕಾಲಿಗೆ ಮುಳ್ಳು ಚುಚ್ಚಿ ಅವನು ನರಳುತ್ತಿದ್ದನೆ. ಆದರೆ ನಾನು ದೇವರನ್ನು ನಂಬಲಿಲ್ಲ ಯಾರನ್ನು ಸಹ ನಂಬಲಿಲ್ಲ ಆದರೆ ನನಗೆ ಒಂದು ಚೀಲದಷ್ಟು ಕಲ್ಲಿದ್ದಲು ಸಿಕ್ಕಿದೆ ಎಂದು ಹೇಳಿ ನಗುತ್ತಿರುತ್ತಾನೆ.
ನಂತರ ಸಂತರು ಈ ರೀತಿ ಉತ್ತರಿಸುತ್ತಾರೆ. ನಿನಗೆ ಇವತ್ತು ವಜ್ರ ಸಿಗಬೇಕಾಗಿತ್ತು ಆದರೆ ಅದರ ಚಿಲ್ಲರೆ ಪ್ರತಿರೂಪವಾದಂತಹ ಕಲ್ಲಿದ್ದಲು ಸಿಕ್ಕಿದೆ ಅಷ್ಟೇ. ಆದರೆ ವಿಶ್ವನಾಥನಿಗೆ ಚುಚ್ಚಿಕೊಂಡ ಅಂತಹ ಮುಳ್ಳು ಅದು ಅತಿ ಹೆಚ್ಚು ವಿ,ಷಕಾರಿ ಆತನ ಪ್ರಾ,ಣವೇ ಹೋಗಬೇಕಾಗಿತ್ತು, ಆದರೆ ಇಲ್ಲಿಗೆ ನನ್ನನ್ನು ಕಳುಹಿಸಿ ಆ ದೇವರು ಅವನನ್ನು ಉಳಿಸಿದ್ದಾನೆ. ಇದರಲ್ಲೇ ತಿಳಿದುಕೋ ಯಾರು ಇಂತವರು ಎಂದು ಆಗ ಹೇಮಂತ್ ಮತ್ತು ವಿಶ್ವನಾಥರು ಆ ಗುರುಗಳ ಕಾಲಿಗೆ ಬೀಳುತ್ತಾರೆ. ಆದರೆ ಎದ್ದು ನೋಡಿದರೆ ಗುರುಗಳು ಅಲ್ಲಿಂದ ಮಾಯವಾಗಿರುತ್ತಾರೆ. ಆಗ ಅವರಿಗೆ ತಿಳಿಯುತ್ತದೆ ಬಂದಿರುವುದು ದೇವರೇ ಎಂದು.
ಈ ಕತೆಯಿಂದ ನಾವು ತಿಳಿಯಬೇಕಾದದ್ದು ಏನು ಎಂದರೆ ನಮ್ಮ ಜೀವನದಲ್ಲಿ ಏನು ಏನು ಆಗಬೇಕು ಎಂಬುದನ್ನು ದೇವರು ಮೊದಲೇ ಬರೆದಿಡುತ್ತಿರುತ್ತಾನೆ. ನಾವು ಅದರ ಪಾತ್ರವನ್ನು ವಹಿಸಬೇಕು ಅಷ್ಟೇ. ಎಲ್ಲವೂ ಸಹ ಪರಮೇಶ್ವರನ ಕೈಯಲ್ಲಿ ಇರುತ್ತದೆ. ನಾವು ದೇವರನ್ನು ನಂಬಿಕೊಂಡು ನಮ್ಮ ಕೆಲಸದಲ್ಲಿ ನಾವು ನಿರತವಾಗಿರಬೇಕು ಆಗಲೇ ನಾವು ಜೀವನದಲ್ಲಿ ಏನಾದರೂ ಸಾಧನೆಯನ್ನು ಮಾಡಲು ಸಾಧ್ಯ ಆಗುತ್ತದೆ.
ಹೆಚ್ಚಿನ ವಿವರವನ್ನು ಈ ವಿಡಿಯೋದಲ್ಲಿ ನೋಡಬಹುದು