Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸತ್ಯ ಹರಿಶ್ಚಂದ್ರ ಯಾರು ಗೊತ್ತಾ?? ಆತನು ಸತ್ಯವನ್ನೇ ಹೇಳಲು ಕಾರಣವೇನು ಗೊತ್ತಾ?? ಅಪರೂಪದ ಮಾಹಿತಿ !!

ಇತ್ತಿಚಿನ ದಿನಗಳಲ್ಲಿ ಎಲ್ಲ ಸಂದರ್ಭಗಳಲ್ಲೂ ನಾವು ಸತ್ಯಹರಿಶ್ಚಂದ್ರನ ನೆನೆಸಿಕೊಳ್ಳುತ್ತಿರುತ್ತೇವೆ. ಉದಾಹರಣೆಗೆ ನಿಮ್ಮ ಸ್ನೇಹಿತನೊಬ್ಬ ಏನಾದರೂ ನಿಜ ಹೇಳಿದರೆ ಸಾಕು ನೀನೇನು ಸತ್ಯ ಹರಿಶ್ಚಂದ್ರನ ಎಂದು ಹೇಳುತ್ತಿರುತ್ತೇವೆ. ಹಾಗಿದ್ದರೆ ಅವು ಯಾವುವು ಎಂದು ನೋಡೋಣ ಬನ್ನಿ.

ಸತ್ಯ ಹರಿಶ್ಚಂದ್ರನ ಸೂರ್ಯವಂಶದ ರಾಜ. ಇವರು ತಾನು ಹುಟ್ಟಿದಾಗಿಂದಲೂ ಒಂದು ಸುಳ್ಳನ್ನು ಸಹ ಹೇಳಲಿಲ್ಲ. ಅದಕ್ಕಾಗಿಯೇ ಇವರ ಹೆಸರಿನ ಮುಂದೆ ಸತ್ಯ ಎನ್ನುವ ಹೆಸರು ಬಂತು. ಒಂದು ದಿನ ವಿಶ್ವಾಮಿತ್ರರಿಗೆ ಇವರ ಬಗ್ಗೆ ತಿಳಿಯಿತು. ಅಂದರೆ ಸತ್ಯ ಹರಿಶ್ಚಂದ್ರ ಸುಳ್ಳನ್ನು ಸಹ ನುಡಿಯುವುದಿಲ್ಲವೆ? ಹಾಗಾದರೆ ಅವರನ್ನು ಪರೀಕ್ಷಿಸಬೇಕು ಎಂದು ವಿಶ್ವ ಮಿತ್ರ ಸತ್ಯ ಹರಿಶ್ಚಂದ್ರನ ಅರಮನೆಗೆ ಆಗಮಿಸುತ್ತಾನೆ.

ಸತ್ಯ ಹರಿಶ್ಚಂದ್ರನ ಬಳಿ ನನಗೆ ಸ್ವಲ್ಪ ಹಣ ಬೇಕು ಎಂದು ಕೇಳಿದಾಗ ಸತ್ಯ ಹರಿಶ್ಚಂದ್ರನ ಅರಮನೆಯ ಖಜಾನೆ ಇರುವಂತಹ ರೂಮಿಗೆ ಕರೆದುಕೊಂಡು ಹೋಗಿ ಎಷ್ಟು ಬೇಕು ತೆಗೆದುಕೊಳ್ಳಿ ಮಹಾಪ್ರಭುಗಳೆ ಎಂದು ಸತ್ಯ ಹರಿಶ್ಚಂದ್ರ ಹೇಳುತ್ತಾನೆ. ಆಗ ವಿಶ್ವಮಿತ್ರ ನನಗೆ ಈಗ ಯಾವ ಹಣವು ಬೇಡ ನಾನು ಬಂದು ಹಣ ಕೇಳಿದಾಗ ನೀವು ಕೊಡಬೇಕು ಎಂದು ಹೇಳಿ ಮಾತನ್ನು ತೆಗೆದುಕೊಂಡು ವಿಶ್ವಮಿತ್ರ ಅಲ್ಲಿಂದ ಹೊರಟು ಹೋಗುತ್ತಾನೆ.

ಸ್ವಲ್ಪ ದಿನಗಳ ನಂತರ ವಿಶ್ವ ಮಿತ್ರ ತಾನು ಸೃಷ್ಟಿಸಿರುವ ಮಾತಂಗ ಕನ್ಯೆಯರನ್ನು ವಿವಾಹವಾಗಲು ಹೇಳುತ್ತಾನೆ. ಆದರೆ ಸತ್ಯ ಹರಿಶ್ಚಂದ್ರ ಈಗಾಗಲೇ ವಿವಾಹವಾಗಿರುವುದಾಗಿ ಅಷ್ಟೇ ಅಲ್ಲದೆ ಬೇರೆ ಯಾರ ಹೆಣ್ಣಿನ್ನ ಕೂಡ ಕಣ್ಣೆತ್ತಿಯೂ ಸಹ ನೋಡುವುದಿಲ್ಲ ವೆಂದು ಹೇಳುತ್ತಾನೆ. ಅಷ್ಟೇ ಅಲ್ಲದೆ ನಾನು ರಾಜ್ಯವನ್ನು ಬೇಕಾದರೂ ತ್ಯಜಿಸುತ್ತೇನೆ ಆದರೆ ಮತ್ತೊಂದು ವಿವಾಹಕ್ಕೆ ನಾನು ಒಪ್ಪುವುದಿಲ್ಲ ಎಂದು ಹೇಳುತ್ತಾನೆ ವಿಶ್ವ ಮಿತ್ರರಿಗೂ ಬೇಕಾಗಿರುವುದು ಇದೆ.

ಆಗ ವಿಶ್ವ ಮಿತ್ರ ಸತ್ಯ ಹರಿಶ್ಚಂದ್ರನನ್ನು ಕುಟುಂಬ ಸಮೇತರಾಗಿ ರಾಜ್ಯವನ್ನು ಬಿಟ್ಟು ಹೋಗುವುದಾಗಿ ಅಷ್ಟೇ ಅಲ್ಲದೆ ಆ ಸಮಯದಲ್ಲಿ ವಿಶ್ವ ಮಿತ್ರನು ಅಂದು ಒಂದು ದಿನ ಕೇಳಿದ್ದ ಹಣವನ್ನು ಈಗ ಕೇಳುತ್ತಾನೆ. ಆಗ ಸತ್ಯ ಹರಿಶ್ಚಂದ್ರನ ನನೆಗೆ ಒಂದು ತಿಂಗಳುಗಳ ಕಾಲ ಸಮಯ ಕೊಡಿ ನಾನು ನಿಮ್ಮ ಹಣವನ್ನು ತಿಳಿಸುತ್ತೇನೆ. ಎಂದು ಹೇಳುತ್ತಾನೆ. ಆಗ ವಿಶ್ವಮಿತ್ರನು ತನ್ನ ಸೇವಕ ನಕ್ಷತ್ರಕನ್ನನ್ನು ಹಿಂದೆ ಕಳಿಸುತ್ತಾನೆ.

ಸತ್ಯ ಹರಿಶ್ಚಂದ್ರನ ಹೆಂಡತಿಯ ಹೆಸರು ಚಂದ್ರಮತಿ ಹಾಗೂ ಅವರ ಮಗ ರೋಹಿತಾಶ್ವ. ಇದುವರೆಗೂ ಅವರು ಆಸ್ಥಾನದಲ್ಲಿ ಬೆಳೆದಿದ್ದರಿಂದ ಒಂದು ಸ್ವಲ್ಪವೂ ಕೂಡ ಕಷ್ಟ ಎಂದು ಅವರಿಗೆ ತಿಳಿದಿರುವುದಿಲ್ಲ. ಅಷ್ಟೇ ಅಲ್ಲದೆ ಒಂದು ಕಡೆ ಹತ್ರಕ ಬೇರೆ ನನ್ನ ಹಣವನ್ನು ಕೊಟ್ಟರೆ ನಾನು ಆಸ್ಥಾನಕ್ಕೆ ಹೋಗುತ್ತೇನೆ ಎಂದು ತಿಳಿಸಿರುತ್ತಾರೆ. ಆ ಸಮಯದಲ್ಲಿ ಕಾಡ್ಗಿಚ್ಚು ಬೇರೆ ಆಗುತ್ತದೆ. ಆಗ ಚಂದ್ರಮತಿ ತಾನು ಹಾಗೂ ತನ್ನ ಗಂಡ ಪಡುತ್ತಿರುವ ಕಷ್ಟವನ್ನು ಸಹಿಸಿಕೊಳ್ಳಲಾರದೆ ಆ ಬೆಂಕಿ ಒಳಗೆ ಬೀಳುತ್ತಾಳೆ. ಆದರೆ ಬೆಂಕಿಗೂ ಗೊತ್ತು ಅವಳು ಎಷ್ಟು ನಿಷ್ಠೆಯಂತೆ ಎಂದು ಅದಕ್ಕಾಗಿ ಅವಳನ್ನು ಸಹ ಬೆಂಕಿ ಆಹುತಿಸುವುದಿಲ್ಲ.

ನಂತರ ಸತ್ಯ ಹರಿಶ್ಚಂದ್ರನ ಚಂದ್ರಮತಿಯನ್ನು ಅಲ್ಲಿಯೇ ಇದ್ದಂತಹ ಕಾಲ ಕೌಶಿಕ ಎಂಬ ಬ್ರಾಹ್ಮಣನ ಹತ್ತಿರ ಚಂದ್ರಮತಿಯನ್ನು ಮಾರಿ ಬಂದ ಹಣವನ್ನು ನಕ್ಷತ್ರನಿಗೆ ಕೊಡುತ್ತಾರೆ. ಆದರೆ ಅವನು ಈ ಹಣ ನಾನು ಹಿಂದಿರುಗಲು ಆಗುವುದಿಲ್ಲ. ನನಗೆ ಮತ್ತಷ್ಟು ಹಣ ಬೇಕು ಎಂದು ಕೇಳಿದಾಗ ಸತ್ಯ ಹರಿಶ್ಚಂದ್ರನನ್ನು ಹತ್ತಿರದಲ್ಲೇ ಇದ್ದಂತಹ ಸ್ಮಶಾನದಲ್ಲಿ ತನ್ನನ್ನು ತಾನು ಮಾಡಿಕೊಂಡು ಬಂದಂತಹ ಹಣವನ್ನು ನಕ್ಷತ್ರನಿಗೆ ಕೊಟ್ಟು ಕಳಿಸುತ್ತಾನೆ. ಹೀಗಿರುವಾಗಲೇ ಲೋಹಿತಾಶ್ವನನ್ನು ಒಂದು ಹಾವು ಕಚ್ಚಿ ಅವನು ಮರಣ ಹೊಂದಿರುತ್ತಾನೆ. ನಂತರ ಅವನ ಹೆಣವನ್ನು ಸುಡುವುದಕ್ಕೂ ಸಹ ಚಂದ್ರಮತಿಯ ಬಳಿ ಹಣ ಇರುವುದಿಲ್ಲ. ಆಗ ಸ್ಮಶಾನಕ್ಕೆ ಬಂದು ಅಲ್ಲಿ ಯಾರನ್ನು ಸುಟ್ಟಂತಹ ಅರ್ಧಬರ್ಧ ಇರುವಂತಹ ಕಟ್ಟಿಗೆಗಳನ್ನು ತಾನು ಆಯ್ದುಕೊಂಡು ಬಂದು ಸುಡುತ್ತಿರುತ್ತಾಳೆ.

ಆಗ ಅಲ್ಲಿಗೆ ಬಂದಂತಹ ಸ್ಮಶಾನದ ಕಾವಲುಗಾರ ಹೆಣ ಸುಡುವುದಕ್ಕೆ ಹಣ ಕಟ್ಟಬೇಕು ಎಂದು ಹೇಳುತ್ತಾನೆ. ಆಗ ಅವಳ ಬಳಿ ಹಣವಿಲ್ಲ ಎಂದು ಹೇಳಿದಾಗ ಸರಿ ಆಯ್ತು ನೀನು ಧರಿಸಿರುವ ಮಂಗಳಸೂತ್ರವನ್ನು ಕೊಡು ಎಂದು ಕೇಳುತ್ತಾನೆ. ಆಗ ತಾನು ನೀಡುವುದಿಲ್ಲ ಇದು ವಶಿಷ್ಠರು ಕೊಟ್ಟಿರುವಂತಹ ವರ ಎಂದು ಹೇಳಿದಾಗ ಅಲ್ಲಿಯವರೆಗೂ ನೋಡದಂತಹ ಸ್ಮಶಾನ ಕಾವಲುಗಾರನನ್ನು ತಲೆ ಎತ್ತಿ ನೋಡುತ್ತಾಳೆ. ಅದು ಬೇರೆ ಯಾರು ಆಗಿರುವುದಿಲ್ಲ ಸತ್ಯ ಹರಿಶ್ಚಂದ್ರನೇ ಆಗಿರುತ್ತಾರೆ. ವಿಶ್ವಮಿತ್ರನಿಗೆ ಆಗ ತಿಳಿಯುತ್ತದೆ ಸತ್ಯ ಹರಿಶ್ಚಂದ್ರ ಎಂಬುವನು ಎಂದಿಗೂ ಧರ್ಮವನ್ನು ತಪ್ಪುವುದಿಲ್ಲವೆಂದು ತಾನು ಬೇಕೆಂದು ಮಾಡಿರುವುದಾಗಿ ಈಗ ಆ ಸ್ಥಾನಕ್ಕೆ ಹೋಗಿ ಎಂದು ಹೇಳಿ ಸತ್ಯ ಹರಿಶ್ಚಂದ್ರನನ್ನು ತಮ್ಮ ರಾಜ್ಯಕ್ಕೆ ಮತ್ತು ಕಳುಹಿಸುತ್ತಾರೆ.

Leave a comment