Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಮಾಂಸಹಾರವನ್ನು ಯಾವ ದಿನ ಸೇವಿಸಬೇಕು ! ವಾರದಲ್ಲಿ ಯಾವ ದಿನ ಸೇವಿಸಬಾರದು ಇದರಿಂದ ಆಗುವ ಪರಿಣಾಮಗಳೇನು!!

Do you know which is the right day for having nonveg

ಪ್ರತಿಯೊಬ್ಬ ಮನುಷ್ಯ ಹಾಗೂ ಜೀವಿಯು ಬಹಳ ಇಷ್ಟ ಪಟ್ಟು ತಿನ್ನುವುದು ಮಾಂಸಹಾರ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಅದಕ್ಕೆ ಕೆಲವು ನಿಯಮಗಳಿರುತ್ತವೆ, ಅದನ್ನು ಪಾಲಿಸಬೇಕು ಎಂದು ಹೇಳುತ್ತಾರೆ ಪಂಡಿತರು. ನಾವು ಹುಟ್ಟಿದ ದಿನ ಮಾಂಸಹಾರವನ್ನು ಸೇವನೆ ಮಾಡಬಾರದು.

ನಿಮ್ಮ ಜನ್ಮದಿನ ಎಂದರೆ ನೀವು ಜೀವಿಸಿದ ದಿನ
ಆ ದಿನ ನೀವು ಮತ್ತೊಂದು ಜೀವಿಯನ್ನು ಸಾಯಿಸಿ ಆಹಾರವನ್ನು ಸೇವನೆ ಮಾಡಬಾರದು. ಅದು ಮಹಾ ಪಾಪ ಎಂದು ಹೇಳಲಾಗುತ್ತದೆ. ಒಂದು ವೇಳೆ ತಿಂದರೆ ನೀನು ಜನ್ಮಿಸಿದ ದಿನ ಇನ್ನೊಂದು ಜೀವಿಯನ್ನು ಸಾಯಿಸಿದ ಪಾಪವನ್ನು ಮೂಟೆ ಕಟ್ಟಿಕೊಂಡಂತೆ ಹೀಗೆ ಮಾಡಿದರೆ ನೀವು ನರಕದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ.

ಎಲ್ಲರೂ ಸಾಮಾನ್ಯವಾಗಿ ಭಾನುವಾರ ರಜೆ ಇರುವ ಕಾರಣ ಹೆಚ್ಚಾಗಿ ಮಾಂಸಹಾರ ಸೇವನೆ ಮಾಡುತ್ತಾರೆ. ಆದರೆ ಹಿಂದೂ ಧರ್ಮದ ಪ್ರಕಾರ ಭಾನುವಾರ ಮಾಂಸಹಾರ ನಿಷೇಧವಾಗಿದೆ. ಆರೋಗ್ಯ ಆಯಸ್ಸಿಗಾಗಿ ಭಾನುವಾರ ಸೂರ್ಯ ಭಗವಾನನನ್ನು ಪೂಜಿಸುವ ಸಂಪ್ರದಾಯ ಇಂದು ಧರ್ಮದಲ್ಲಿ ಇದೆ. ಇದರಿಂದ ಭಾನುವಾರ ಮಾಂಸಹಾರವನ್ನು ಸೇವನೆ ಮಾಡುವುದರಿಂದ ನಿಮಗೆ ಅನಾರೋಗ್ಯಗಳು ಹೆಚ್ಚಾಗುತ್ತವೆ ಎಂದು ಹೇಳುತ್ತವೆ ಶಾಸ್ತ್ರಗಳು.

ಸೋಮವಾರ ಶಿವನಿಗೆ ಇಷ್ಟವಾದ ದಿನ. ಈ ದಿನ ನೀವೇನಾದರೂ ಮಾಂಸಹಾರವನ್ನು ಸೇವನೆ ಮಾಡಿದರೆ ನಿಮ್ಮ ಐಶ್ವರ್ಯ ಅಂತಸ್ತು ಸಂಪತ್ತು ಎಲ್ಲವೂ ನಷ್ಟವಾಗಿ ಹೋಗುತ್ತದೆ. ಮಂಗಳವಾರ ದಿನದಂದು ಓದೋ ವಿದ್ಯಾರ್ಥಿಗಳು ಹಾಗೂ ಮದುವೆಯಾಗದ ಪುರುಷ ಹಾಗೂ ಮಹಿಳೆಯರು ಮಾಂಸಹರವನ್ನು ಸೇವನೆ ಮಾಡಬಾರದು ಎಂದು ಹೇಳಲಾಗಿದೆ.

ಓದುವ ಹುಡುಗರಿಗೆ ಬುದ್ಧಿ ಮಂದವಾಗುತ್ತದೆ ಮತ್ತು ಮದುವೆಯಾಗುವ ಮಹಿಳೆ ಅಥವಾ ಪುರುಷನಿಗೆ ಮದುವೆ ಯೋಗ ತಡವಾಗುತ್ತದೆ ಎಂದು ಹೇಳಲಾಗಿದೆ. ಗುರುವಾರ ಎಂದರೆ ಗುರುವನ್ನು ಪೋಜಿಸುವ ದಿನ ಎಂದು ಹಿಂದೂ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ದಿನ ನೀವೇನಾದರೂ ಮಾಂಸ ಆಹಾರವನ್ನು ಸೇವನೆ ಮಾಡಿದರೆ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ನೀವು ದೇವಸ್ಥಾನಕ್ಕೆ ಓದ ದಿನ ಮಾಂಸಹಾರವನ್ನು ತಿನ್ನಬಾರದು ದೇವಸ್ಥಾನದಲ್ಲಿ ಶತಗೋಪುರವನ್ನು ತಲೆಯ ಮೇಲೆ ಇಟ್ಟ ಮೇಲೆ ಆ ದಿನ ಸಂಪೂರ್ಣವಾಗಿ ಮಾಂಸಹಾರವನ್ನು ಸೇವಿಸಬಾರದು. ಶುಕ್ರವಾರ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವವರು ಮಾಂಸ ಸೇವನೆಯನ್ನು ಮಾಡಬಾರದು ಹಾಗೂ ಮುಟ್ಟಬಾರದು ಇದರಿಂದ ನೀವು ಲಕ್ಷ್ಮಿಯ ಕೋಪಕ್ಕೆ ತುತ್ತಾಗಿ ನಿಮಗೆ ಎಲ್ಲಿಲ್ಲದ ಕಷ್ಟಗಳು ಉದ್ಭವವಾಗುತ್ತದೆ.

ಇನ್ನು ಶನಿವಾರ ಶನಿ ದೇವರ ವಾರ ನೀವು ಸಂಪೂರ್ಣವಾಗಿ ಮಾಂಸವನ್ನು ನಿಷೇಧ ಮಾಡಬೇಕಾಗುತ್ತದೆ. ಈ ದಿನ ಕಲಿಯುಗದ ದೇವನಾದ ವೆಂಕಟೇಶ್ವರ ನನ್ನು ಪೂಜಿಸುವವರು ಮಾಂಸವನ್ನು ತಿನ್ನಲೇಬಾರದು. ಹಾಗೆಯೇ ಯಾರಿಗಾದರೂ ಸನ್ನಿ ದೋಷ ಆಶ್ರಮ ಶನಿ ಇರುವವರು ಮಾಂಸಹರವನ್ನು ಮುಟ್ಟಲೇಬಾರದು. ಒಂದು ವೇಳೆ ನೀವು ತಿಂದರೆ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ನಿಧಾನವಾಗಿ ನಿಮ್ಮ ಆರೋಗ್ಯ ಕ್ಷಿಷಮಿಸುತ್ತದೆ. ಹಬ್ಬಗಳು ಅಥವಾ ವ್ರತಗಳನ್ನು ಮಾಡುವ ದಿನ ಮಾಂಸಹಾರ ನಿಷಿದ್ಧ ತಿನ್ನಬಾರದು ಹಾಗೂ ಮುಟ್ಟಬಾರದು. ಹೊರಗಡೆಯಿಂದ ಮನೆಗೆ ತರಬಾರದು ಅಥವಾ ಮನೆಗೆ ಬರಬಾರದು. ಹಿಂದೂ ಧರ್ಮದ ಪ್ರಕಾರ ಬುಧವಾರ ಮಾಂಸವನ್ನು ಸೇವನೆ ಮಾಡಬಹುದು. ಆದರೆ ನೀವು ಆ ದಿನ ಹಬ್ಬ ಅರಿದಿನಗಳು ಹುಟ್ಟಿದ ದಿನವನ್ನು ನೋಡಿ ಮಾಂಸವನ್ನು ಸೇವನೆ ಮಾಡಬೇಕು ಎಂದು ಕೆಲವು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ…

Leave a comment