Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಿಮ್ಮ ಕೈಯಲ್ಲಿರುವ ಉಗುರುಗಳೇ ನಿಮ್ಮ ಯಶಸ್ಸಿನ ಮೂಲವೂ ಆಗಬಹುದು, ಕೃಷ್ಣ ಸಂದೇಶ, ಉಗುರುಗಳನ್ನು ತೆಗೆದು ಈ ಮರದ ಕೆಳಗೆ ಹಾಕಿ, ನಿಮ್ಮ ಸಮಸ್ಯೆಗಳು ದೂರ ಆಗುತ್ತವೆ !!

ಸಾಮಾನ್ಯವಾಗಿ ನಮ್ಮ ಕೈ ಬೆರಳುಗಳಲ್ಲಿರುವ ಉಗುರುಗಳ ಬಗ್ಗೆ ನಮಗೆ ಅಷ್ಟು ಗಮನ ಇರೋದಿಲ್ಲ. ಉಗುರುಗಳನ್ನ ಬ್ಲಾಕ್ ಮ್ಯಾಜಿಕ್ ಅಥವಾ ಇತರ ಮಾಟ ಮಂತ್ರಗಳಲ್ಲಿ ಬಳಸಲಾಗುತ್ತೆ ಎಂದು ನಂಬಲಾಗಿದೆ. ಇದು ಎಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲ ಆದರೆ ಉಗುರುಗಳ ಮಹತ್ವವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇದರಿಂದಲೂ ಕೂಡ ನಮಗೆ ಪ್ರಯೋಜನವಿದೆ. ಆ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡುತ್ತಿದ್ದೇವೆ. ಮುಂದೆ ಓದಿ.

ಉದ್ದವಾದ ಉಗುರುಗಳನ್ನು ಬಿಟ್ಟರೆ ಸಮಸ್ಯೆ ಗ್ಯಾರಂಟಿ. ಹಾಗಾಗಿ ನಾವು ಉಗುರುಗಳನ್ನು ಆಗಾಗ ಕತ್ತರಿಸುತ್ತೇವೆ. ಇದು ಶಿಸ್ತೂ ಕೂಡ ಹೌದು. ಆದರೆ ಉಗುರುಗಳನ್ನು ಕತ್ತರಿಸಿ ಎಲ್ಲೆಲ್ಲಿಯೂ ಬಿಸಾಕುತ್ತೇವೆ. ಅದರ ಬಗ್ಗೆ ಯಾರಿಗೂ ಗಮನ ಇರುವುದಿಲ್ಲ. ಆದರೆ ಹೀಗೆ ಮಾಡುವುದು ಖಂಡಿತವಾಗಿಯೂ ತಪ್ಪು. ಕತ್ತರಿಸಿದ ಉಗುರುಗಳನ್ನು ಬಿಸಾಡುವುದಕ್ಕೂ ಕೂಡ ಸರಿಯಾದ ಕ್ರಮವನ್ನು ಅನುಸರಿಸಬೇಕು.

ನಮ್ಮ ದೇಹದ ಒಂದು ಅಂಶವೇ ಆಗಿರುವ ಉಗುರನ್ನ ನೀವು ಕಸದ ಬುಟ್ಟಿಗೆ ಬಿಸಾಡಿದರೆ ನಿಮ್ಮಲ್ಲಿ ನೆಗೆಟಿವಿಟಿ ಅಥವಾ ನಕಾರಾತ್ಮಕತೆ ಹುಟ್ಟಿಕೊಳ್ಳಬಹುದು. ಇದು ಖಂಡಿತವಾಗಿಯೂ ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಇನ್ನು ಉಗುರುಗಳನ್ನು ಕತ್ತರಿಸುವಾಗ ಕೂಡ ಕೆಲವು ನಿಯಮಗಳಿಗೆ ಮಂಗಳವಾರ, ಶುಕ್ರವಾರ, ಶನಿವಾರದಂತಹ ಶುಭದಿನದಂದು ಉಗುರುಗಳನ್ನು ಕತ್ತರಿಸುವುದು ಯೋಗ್ಯವಲ್ಲ ಎಂದು ಶಾಸ್ತ್ರಗಳಲ್ಲಿಯೂ ಕೂಡ ಹೇಳಲಾಗಿದೆ.

ಹಾಗಾದರೆ ಕತ್ತರಿಸಿದ ಉಗುರುಗಳನ್ನು ಎಲ್ಲಿ ಹಾಕಬೇಕು? ಈ ಪ್ರಶ್ನೆಗೆ ನಾವು ಉತ್ತರ ತಿಳಿಸುತ್ತೇವೆ. ನೀವು ಕತ್ತರಿಸಿದ ಉಗುರುಗಳನ್ನು ಯಾವುದಾದರೂ ಮರದ ಕೆಳಗೆ ಅಥವಾ ಗಿಡದ ಪಾಟ್ ನಲ್ಲಿ ಹಾಕಬಹುದು ಆದರೆ ಹೆಚ್ಚಿನ ಲಾಭ ಸಿಗಬೇಕು, ನಿಮಗೆ ಆರ್ಥಿಕವಾಗಿ ಪ್ರಯೋಜನ ಆಗಬೇಕು ಅಂದ್ರೆ ಉಗುರುಗಳನ್ನು ಕತ್ತರಿಸಿದ ಬಳಿಕ ಅದನ್ನ ತೆಗೆದುಕೊಂಡು ಹೋಗಿ ಯಾವುದಾದರು ಆಲದ ಮರದ ಬುಡದಲ್ಲಿ ಹಾಕಿ.

ಇದರಿಂದ ನಿಮ್ಮಲ್ಲಿರುವ ನಕಾರಾತ್ಮಕತೆ ಹೋಗಿ ಮರದಲ್ಲಿರುವ ಸಕಾರಾತ್ಮಕತೆ ನಿಮ್ಮನ್ನ ಆವರಿಸುತ್ತದೆ ಜೊತೆಗೆ ಆರ್ಥಿಕವಾಗಿಯೂ ಕೂಡ ನಿಮಗೆ ಲಾಭ ದೊರೆಯುತ್ತದೆ.ಇನ್ನು ನೀವು ಸುಖ ಸಂಪತ್ತನ್ನು ಪಡೆದುಕೊಳ್ಳಬೇಕು ಅಂದ್ರೆ ಇನ್ನೊಂದು ಮುಖ್ಯವಾದ ಕೆಲಸವನ್ನು ಮಾಡಬೇಕು. ಬುಧವಾರದ ದಿನ ನಿಮ್ಮ ಕೈ ಹಾಗೂ ಕಾಲುಗಳ ಉಗುರುಗಳನ್ನು ಕತ್ತರಿಸಿ ಒಂದು ಪೇಪರ್ ನಲ್ಲಿ ಸುತ್ತಿ ಇಟ್ಟುಕೊಳ್ಳಿ. ನಂತರ ಶನಿವಾರ ಆ ಪೇಪರ್ ನಲ್ಲಿ ಇರುವ ಉಗುರುಗಳ ಜೊತೆಗೆ ಒಂದು ಲವಂಗವನ್ನು ಹಾಕಿ ಅದನ್ನು ಸಂಪೂರ್ಣವಾಗಿ ಸುಟ್ಟು ಹಾಕಬೇಕು.

ಉಗುರುಗಳು ಸುಟ್ಟು ಬೂದಿಯಾದ ಬಳಿಕ ಆ ಬೂದಿಯನ್ನು ತೆಗೆದುಕೊಂಡು ಹೋಗಿ ಯಾವುದಾದರು ಮರದ ಬುಡದಲ್ಲಿ ಹಾಕಬೇಕು. ಹೀಗೆ ಮಾಡಿದರೆ ಆರ್ಥಿಕವಾಗಿ ತೊಂದರೆಯಲ್ಲಿ ಇರುವವರಿಗೆ ಉತ್ತಮ ಲಾಭ ದೊರೆಯುತ್ತದೆ ನೀವು ಆರ್ಥಿಕವಾಗಿ ಸದೃಢರಾಗುತ್ತೀರಿ. ಹಾಗಾಗಿ ಸ್ನೇಹಿತರೆ ಇನ್ನು ಮುಂದೆ ಉಗುರುಗಳನ್ನು ಕತ್ತರಿಸಿ ಎಲ್ಲೆಂದರಲ್ಲಿ ಬಿಸಾಡುವ ಬದಲು ಈ ರೀತಿ ಮಾಡಿ ನೋಡಿ ನಿಮಗೆ ಉತ್ತಮ ಪರಿಹಾರ ಖಂಡಿತ ದೊರೆಯುತ್ತದೆ.

 

Leave a comment