Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕರ್ಣನ ಅಂತಿಮ ಸಮಯದಲ್ಲಿ ಮಹಾದೇವ ಯಾಕೆ ಹೀಗೆ ಮಾಡಿದ್ದರು ಗೊತ್ತ?? ನಡೆದದ್ದು ಎನು ಗೊತ್ತಾ??

Do you know why Mahadev did this during Karna's final time?? Do you know what happened??

ಮಹಾಭಾರತ ಯುಗದಲ್ಲಿ ಪಾಂಡವರು ಮತ್ತು ಕೌರವರ ಮಧ್ಯೆ ಸಿಲುಕಿ ಸೂತಪುತ್ರನ್ನಾಗಿ ಹುಟ್ಟಿದ ಕರ್ಣನು ತನ್ನ ಜೀವನದಲ್ಲಿ ಅನುಭವಿಸಿದ ಕಷ್ಟಗಳಿಗೆ ನೋವುಗಳಿಗೆ ಪಾರವೇ ಇಲ್ಲ. ಮಹಾಭಾರತ ಯುಗದಲ್ಲಿ ಶ್ರೇಷ್ಠ ಯೋಧ ಎಂದರೆ ಅದು ಕರ್ಣ ಮಾತ್ರ. ಕರ್ಣನ ಜೀವನದ ಆದಿಯು ಅಷ್ಟೇನೂ ಸುಲಭವಾಗಿರಲಿಲ್ಲ ಬಹಳ ಕಠಿಣವಾಗಿತ್ತು.

ತನ್ನ ಜೀವನ ಪರ್ಯಂತ ಬರಿ ಮೋಸ ಅವಮಾನಗಳನ್ನು ಸಮರ್ಪಿಸಿಕೊಂಡು ಉತ್ತಮ ಯೋಧನಾಗಬೇಕು ಎಂಬ ಬಯಕೆಯನ್ನು ಕಂಡಿದ್ದ ಕರ್ಣನು ಜೀವನದ ತುಂಬಾ ಬಹಳ ನ್ಯಾಯಯುತವಾಗಿ ಸಾಗಲು ಮತ್ತು ನ್ಯಾಯ ಯುತವಾಗಿ ಇರಲು ಯಾರಿಗೂ ಮೋಸ ಮಾಡದೆ ಸತ್ಯವನ್ನೆ ನುಡಿಯಲು ಪ್ರಾಮಾಣಿಕನಾಗಿರಲು ಸಿದ್ಧನಾದ.

ಮಿತ್ರ ಧರ್ಮವನ್ನು ಪಾಲನೆ ಮಾಡುವ ಭರದಲ್ಲಿ ಆತ ಅದರ್ಮಿಯಾಗಿದ್ದು ನಿಜಕ್ಕೂ ದುರದೃಷ್ಟವೇ ಎಂದು ಹೇಳಬಹುದು. ಹಾಗಾದರೆ ಕರ್ಣನ ಅಂತಿಮ ದಿನಗಳಲ್ಲಿ ಅಂತಿಮ ಸಮಯದಲ್ಲಿ ಏನಾಯಿತು ಎಂದು ನೋಡೋಣ ಬನ್ನಿ. ಕರ್ಣನು ಮರಣಶೆಯಲ್ಲಿ ಮಲಗಿದ್ದ ಕರ್ಣನು ತನ್ನ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದ ಅಂತಹ ಸಮಯದಲ್ಲಿ ಪರಶುರಾಮರು ಕರ್ಣ ಮಲಗಿದ್ದ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ನೆಲದ ಮೇಲೆ ಉರುಳಿ ಬಿದ್ದಿದ್ದ ಕಣ್ಣನನ್ನು ನೋಡಿ ದುಖಿತರಾಗುತ್ತಾರೆ. ಏ ಕರ್ಣ ನಿನಗೆ ಇಂತಹ ಸ್ಥಿತಿ ಬರವಾರದಾಗಿತ್ತು ಆದರೂ ಇವೆಲ್ಲಾ ಪೂರ್ವ ನಿರ್ದಾರಿತ ಧರ್ಮವೇ ಜಯಿಸಬೇಕು ಆಗಾಗಿ ಶ್ರೀ ಕೃಷ್ಣ ಯಾವ ಪಕ್ಷದಲ್ಲಿ ಇರುತ್ತಾರೆ ಅದೇ ಪಕ್ಷ ಗೆಲ್ಲಬೇಕು.

ಶ್ರೀ ಕೃಷ್ಣ ಪಾಂಡವರ ಪರವಾಗಿ ಯುದ್ದ ಕಾರಣ ಪಾಂಡವರು ಧರ್ಮದ ಪರವಾಗಿ ನಿಂತಿದ್ದರು. ಆದಕಾರಣ ಪಾಂಡವರ ಪಕ್ಷ ಗೆದ್ದಿತು. ಕರ್ಣ ನಿನ್ನಲ್ಲಿ ಅನೇಕ ರೀತಿಯ ದಿವ್ಯ ಅಸ್ತ್ರಗಳು ಇವೆ. ಇವೆಲ್ಲವೂ ನಷ್ಟವಾಗಿಲ್ಲ ದಿವ್ಯ ಅಸ್ತ್ರಗಳು ಎಲ್ಲಿಂದ ಬಂತು ಅಲ್ಲಿಗೆ ಹೋಗಬೇಕು ಹಾಗಾಗಿ ನಿನ್ನಲ್ಲಿ ಇರುವಂತಹ ದಿವ್ಯ ಅಸ್ತ್ರಗಳನ್ನು ಮಹಾದೇವರಿಗೆ ಕೊಟ್ಟುಬಿಡಿ ಎಂದು ಪರಶುರಾಮರು ಕರ್ಣನಿಗೆ ಹೇಳುತ್ತಾರೆ.

ಹಾಗೆಯೇ ಕರ್ಣನು ಸಹ ತನ್ನಲ್ಲಿದ್ದ ದಿವ್ಯ ಅಸ್ತ್ರಗಳನ್ನು ಮಹಾದೇವರ ಪಾದಗಳಿಗೆ ಅರ್ಪಿಸಿ ಹಸುನೆಗುತ್ತಾನೆ ಎಂದು ಲೋಕ ಕಥೆಯಲ್ಲಿ ಹೇಳಲಾಗಿದೆ. ನಂತರ ಕರ್ಣನು ತನ್ನಲ್ಲಿ ಇದ್ದ ಎಲ್ಲಾ ಅಸ್ತ್ರಗಳನ್ನು ಮಹಾದೇವರಿಗೆ ಒಪ್ಪಿಸಿದ ಮೇಲೆ ತಾನು ಮಲಗಿದ್ದ ಭೂಮಿಯಲ್ಲಿ ಕೊನೆಯುಸಿರನ್ನು ಎಳೆಯುತ್ತಾರೆ. Do you know why Mahadev did this during Karna’s final time?? Do you know what happened??

Leave a comment