ಇಷ್ಟೇ ಸಾಕು ಬೇರೇನು ಬೇಡ ಪ್ರತಿದಿನ ಮಲಗುವ ಮುನ್ನ, ಈ 2 ಪದಗಳ ಮಂತ್ರ ಪಠಿಸಿದರೆ ಸಾಕು ನಿಮ್ಮ ಕಷ್ಟಗಳೆಲ್ಲ ಮಂಗಮಾಯವಾಗುತ್ತವೆ, ಚಿಂತೆ ಬಿಡಿ !!
ಆಂಜನೇಯ ಎಷ್ಟು ಶಕ್ತಿಶಾಲಿ ಎನ್ನುವುದು ಎಲ್ಲರಿಗೂ ಗೊತ್ತು. ಶ್ರೀ ರಾಮನ ಭಕ್ತನಾದ ಆಂಜನೇಯ ಕಷ್ಟದಲ್ಲಿರುವವರನ್ನು ಸಲಹುತ್ತಾನೆ. ಕೈಹಿಡಿದು ಮೇಲೆ ಎತ್ತುತ್ತಾನೆ. ಆಂಜನೇಯನನ್ನು ಯಾರು ಬಹಳ ಭಕ್ತಿಯಿಂದ ನಾಮ ಸ್ಮರಣೆ ಮಾಡುತ್ತಾರೋ ಅಂತವರಿಗೆ ಆಂಜನೇಯನ ಕೃಪೆ ಸದಾ ಇದ್ದೇ ಇರುತ್ತದೆ ಆದರೆ ರಾಮಪ್ರೇಮಿ ಹನುಮಂತನಿಗೆ ಸುಳ್ಳು ಹೇಳುವುದು ಅಥವಾ ತಪ್ಪು ಮಾಡುವುದು ಇಷ್ಟವಾಗುವುದಿಲ್ಲ ಅಂತವರಿಗೆ.
ಆಂಜನೇಯನ ಕೃಪೆ ಎಂದಿಗೂ ಸಿಗುವುದಿಲ್ಲ. ಅದೇ ನೀವು ಕಷ್ಟದಲ್ಲಿದ್ದಾಗ ಪರಿಹಾರಕ್ಕಾಗಿ ಆಂಜನೇಯನ ಬೀಜಾಕ್ಷರ ಮಂತ್ರವನ್ನು ಪಠಿಸಿದರೆ ನಿಮಗೆ ಖಂಡಿತವಾಗಿಯೂ ಆಂಜನೇಯ ಒಳ್ಳೆಯದನ್ನು ಮಾಡುತ್ತಾನೆ.ಹೌದು, ದಿನ ಪಠಿಸಬಹುದಾದ, ಪಠಿಸಬೇಕಾದ ಬೀಜಾಕ್ಷರ ಮಂತ್ರದ ಬಗ್ಗೆ ನಾವು ಈ ಲೇಖನದಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಿದ್ದೇವೆ.
ಈ ಮಂತ್ರದ ಬಗ್ಗೆ ಹಾಗೂ ಆಂಜನೇಯನ ಮಹಿಮೆಯ ಬಗ್ಗೆ ನೀವು ನಿಮ್ಮ ಸ್ನೇಹಿತರ ಜೊತೆಗೂ ತಪ್ಪಡೇ ಹಂಚಿಕೊಳ್ಳಿ. ಆಂಜನೇಯನ ಶಕ್ತಿಶಾಲಿಯಾದ ಬೀಜಾಕ್ಷರ ಮಂತ್ರವನ್ನು ಮಂಗಳವಾರದ ದಿನದಂದು ಆರಂಭಿಸಿ ದಿನವೂ 11 ಬಾರಿ ಪಠಿಸಿದರೆ ಅದರಿಂದ ಆಗುವ ಪ್ರಯೋಜನವನ್ನು ಬಣ್ಣಿಸಲು ಸಾಧ್ಯವಿಲ್ಲ. ಜೀವನದಲ್ಲಿ ಯಾವುದಾದರೂ ಕಷ್ಟದ ಸಮಯದಲ್ಲಿ ಸಿಲುಕಿ ಕೊಂಡಾಗ, ಏನು ಮಾಡಬೇಕು ಎಂದು ದಿಕ್ಕೆ ತೋಚದೆ.
ಇರುವ ಸಮಯದಲ್ಲಿ ಆಂಜನೇಯನ ಬೀಜಾಕ್ಷರ ಮಂತ್ರವನ್ನು ಪಠಣೆ ಮಾಡಬಹುದು. ಈ ಮಂತ್ರವನ್ನು 11 ಬಾರಿ ಪಠಣೆ ಮಾಡುವುದರಿಂದ ನಿಮಗೆ ಮುಂದಿನ ದಾರಿ ಸಂಪೂರ್ಣವಾಗಿ ಕಾಣಿಸುತ್ತದೆ. ನಾನು ಏನು ಮಾಡಬೇಕು ಎನ್ನುವುದರ ಬಗ್ಗೆ ನಿಮಗೆ ಅರಿವು ಮೂಡುತ್ತದೆ. ನಿಮ್ಮಲ್ಲಿರುವ ಶಕ್ತಿ, ಚೈತನ್ಯ ನಿಮ್ಮನ್ನ ಕಷ್ತದಿಂದ ಪಾರುಮಾಡುತ್ತದೆ.
ಆಂಜನೇಯನ ಬೀಜಾಕ್ಷರ ಮಂತ್ರ ಹೀಗಿದೆ:
ಓಂ ಎಂ ಭೀಮ್ ಹನುಮತೆ
ಶ್ರೀ ರಾಮ ದೂತಾಯ ನಮ:
ಹನುಮಂತ ಶ್ರೀರಾಮನ ಭಂಟ. ಹಾಗಾಗಿ ಆಂಜನೇಯ ಸ್ವಾಮಿಯ ಕಋಪೆ ಸಿಗಬೇಕು ಅಂದ್ರೆ ನೀವು ಶ್ರೀರಾಮನನ್ನು ನೆನೆಯಲೇ ಬೇಕು. ಈ ಬೀಜಾಕ್ಷರಿ ಮಂತ್ರದಲ್ಲಿಯೂ ಹನುಮನನ್ನು ಶ್ರಿರಾಮನ ದೂತ ಎಂದೇ ಬಣ್ಣಿಸಲಾಗಿದೆ. ಈ ಮಂತ್ರವನ್ನು ನೀವು ದಿನವೂ 11 ಬಾರಿ ಪಠಣೆ ಮಾಡಬೇಕು ದಿನ ಪಠಣೆ ಮಾಡಲು ಸಾಧ್ಯವಾಗದೆ ಇದ್ದ ಪಕ್ಷದಲ್ಲಿ ಕನಿಷ್ಠ ಮಂಗಳವಾರದ ದಿನವಾದರೂ ಈ ಮಂತ್ರವನ್ನು ತಪ್ಪದೇ ಹೇಳಿ.
ಮನೆಯಲ್ಲಿ ಆಂಜನೇಯನ ವಿಗ್ರಹ ಅಥವಾ ಫೋಟೋ ಇದ್ದರೆ ಅದರ ಎದುರು ಕುಳಿತು ಶಾಂತವಾಗಿ ಈ ಮಂತ್ರವನ್ನು ಜಪಿಸಿದರೆ ಒಳ್ಳೆಯದು. ಇನ್ನು ಕಷ್ಟದ ಸಮಯದಲ್ಲಿ ಯಾವುದೇ ಸ್ಥಳದಲ್ಲಿ ಕೂಡ ನೀವು ಆಂಜನೇಯನ ಬೀಜಾಕ್ಷರಿ ಮಂತ್ರದ ಮೂಲಕ ನೆನೆಯಬಹುದು ಇದರಿಂದ ಆಂಜನೇಯನ ಕೃಪೆ ಖಂಡಿತವಾಗಿಯೂ ನಿಮಗೆ ಸಿಗುತ್ತದೆ.