Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Tirupati Online Ticket: ಇನ್ಮೇಲೆ ತಿರುಪತಿಯಲ್ಲಿ ದೇವರ ದರ್ಶನಕ್ಕೆ ದಿನಗಟ್ಟಲೇ ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ! ಟಿಟಿಡಿ ಇಂದ ಭಕ್ತರಿಗೆ ಸಿಹಿ ಸುದ್ದಿ!

ಟಿಕೆಟ್ ಪಡೆಯಲು ಭಕ್ತರು ಶಿಫಾರಸು ಪತ್ರ ಸಲ್ಲಿಸಬೇಕು. ಆಗ ನಿಮ್ಮ ಫೋನ್ ಗೆ ಲಿಂಕ್ ಜೊತೆಗೆ ಮೆಸೇಜ್ ಬರುತ್ತದೆ. ಲಿಂಕ್ ಕ್ಲಿಕ್ ಮಾಡಿದರೆ, ಪೇಮೆಂಟ್ ಮಾಡುವ ಲಿಂಕ್ ಓಪನ್ ಆಗುತ್ತದೆ.

Tirupati Online Ticket: ನಮ್ಮ ದೇಶದಲ್ಲಿ ಅತ್ಯಂತ ಹೆಚ್ಚಿನ ಜನರು ಬಂದು ಹೋಗುವ ಪುಣ್ಯಕ್ಷೇತ್ರಗಳಲ್ಲಿ ಒಂದು ತಿರುಪತಿ. ತಿರುಪತಿಗೆ ಬಂದು ತಿಮ್ಮಪ್ಪನ ದರ್ಶನ ಪಡೆದರೆ ಬದುಕಿನ ಎಲ್ಲಾ ಕಷ್ಟಗಳು ಕಳೆದು ಹೋಗುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ. ಹಾಗಾಗಿ ಇಡೀ ವರ್ಷ ಇಲ್ಲಿ ಜಮಸಂದಣಿ ಇದ್ದೇ ಇರುತ್ತದೆ. ತಿಮ್ಮಪ್ಪನ ದರ್ಶನ ಪಡೆಯಲು ಭಕ್ತರು ಗಂಟೆಗಟ್ಟಲೇ ಕೆಲವೊಮ್ಮೆ ದಿನಗಟ್ಟಲೇ ಕಾಯಬೇಕಾಗುತ್ತದೆ. ಆದರೆ ಈಗ ಟಿಟಿಡಿ ಹೊಸ ನಿರ್ಧಾರ ತೆಗೆದುಕೊಂಡಿದ್ದು ಇದರಿಂದ ಭಕ್ತರಿಗೆ ಅನುಕೂಲ ಆಗಲಿದೆ..

ಟಿಟಿಡಿ ಇಂದ ಗುಡ್ ನ್ಯೂಸ್: (Tirupati Online Ticket)

ತಿರುಪತಿಗೆ ಬರುವ ಭಕ್ತರಿಗೆ ಅನುಕೂಲ ಆಗಲಿ ಎಂದು ಟಿಟಿಡಿ ಈಗ ಹೊಸ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಟಿಟಿಡಿ ಮುಂದಾಗಿದ್ದು, ತಿರುಪತಿಯಲ್ಲಿ ವಿಐಪಿ ಬ್ರೇಕ್ ದರ್ಶನಕ್ಕೆ ಆನ್ಲೈನ್ ಮೂಲಕವೇ ಟಿಕೆಟ್ ಖರೀದಿ ಮಾಡಲು ಅನುಕೂಲ ಮಾಡಿಕೊಡಲಾಗುತ್ತದೆ. ಈ ಕ್ರಮವನ್ನು ತೆಗೆದುಕೊಳ್ಳಲು ಈಗಾಗಲೇ ಟೆಸ್ಟಿಂಗ್ ಸಹ ನಡೆಯುತ್ತದೆ ಎಂದು ತಿಳಿದುಬಂದಿದೆ. MBC 34 ಕೌಂಟರ್ ನಲ್ಲಿ ಟಿಕೆಟ್ ಪಡೆಯಲು ಭಕ್ತರು ಗಂಟೆಗಟ್ಟಲೆ ಕ್ಯೂ ನಿಲ್ಲಬೇಕು. ಹಾಗಾಗಿ ಟಿಟಿಡಿ ಹೊಸ ಕ್ರಮ ತೆಗೆದುಕೊಳ್ಳಲಿದೆ.

ಆನ್ಲೈನ್ ಟಿಕೆಟ್ ಡೌನ್ಲೋಡ್:

ಟಿಕೆಟ್ ಪಡೆಯಲು ಭಕ್ತರು ಶಿಫಾರಸು ಪತ್ರ ಸಲ್ಲಿಸಬೇಕು. ಆಗ ನಿಮ್ಮ ಫೋನ್ ಗೆ ಲಿಂಕ್ ಜೊತೆಗೆ ಮೆಸೇಜ್ ಬರುತ್ತದೆ. ಲಿಂಕ್ ಕ್ಲಿಕ್ ಮಾಡಿದರೆ, ಪೇಮೆಂಟ್ ಮಾಡುವ ಲಿಂಕ್ ಓಪನ್ ಆಗುತ್ತದೆ. ಆನ್ಲೈನ್ ಮೂಲಕ ಹಣ ಪಾವತಿ ಮಾಡಿದ ಬಳಿಕ, ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಬಹುದು. ಎರಡು ದಿನಗಳ ಕಾಲ ಈ ವ್ಯವಸ್ಥೆಯ ಟೆಸ್ಟಿಂಗ್ ನಡೆಸಿ, ಜನರ ಅಭಿಪ್ರಾಯವನ್ನು ಪಡೆದುಕೊಳ್ಳಲಾಗಿದೆ.

ಜನರಿಗೆ ಇದರಿಂದ ಅನುಕೂಲ ಸಿಗುತ್ತಿರುವ ಕಾರಣ, ಟಿಟಿಡಿ ಪರ್ಮನೆಂಟ್ ಆಗಿ ಈ ಹೊಸ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ತಿಂಗಳು ತಿರುಪತಿಗೆ ಹೋಗುವುದಕ್ಕಿಂತ ಮೊದಲು, ಈ ಹೊಸ ಕ್ರಮದ ಬಗ್ಗೆ ತಿಳಿದುಕೊಳ್ಳಿ. ಇಲ್ಲವಾದರೆ ಅಲ್ಲಿಗೆ ಹೋದಮೇಲೆ ತೊಂದರೆ ಆಗಬಹುದು. ಈ ತಿಂಗಳು ರಥಸಪ್ತಮಿ ಇದ್ದು, ಆ ವೇಳೆ 3 ದಿನಗಳು ಸರ್ವದರ್ಶನ ಟೈಮ್ ಸ್ಲಾಟ್ ಟೋಕನ್ ಕ್ಯಾನ್ಸಲ್ ಮಾಡಲಾಗಿದೆ ಎಂದು ಟಿಟಿಡಿ ಈಗಾಗಲೇ ತಿಳಿಸಿದೆ.

ಈ ಬಗ್ಗೆ ತಿರುಪತಿಯ EO ಧರ್ಮ ರೆಡ್ಡಿ ಅವರು ಈ ವಿಚಾರ ತಿಳಿಸಿದ್ದಾರೆ. ಫೆಬ್ರವರಿ 15, 16 ಮತ್ತು 17ನೇ ತಾರೀಕಿನಂದು ಸರ್ವದರ್ಶನ್ ಟೈಮ್ ಸ್ಲಾಟ್ ಟೋಕನ್ ರದ್ದು ಮಾಡಲಾಗಿದೆ. ಆ ದಿನ VIP Break ದರ್ಶನ ಕೂಡ ಇರುವುದಿಲ್ಲ. ಹಿರಿಯರು, ಮಕ್ಕಳು, ವಿಶೇಷಚೇತನರಿಗೆ ವಿಶೇಷ ದರ್ಶನ ಭಾಗ್ಯ ಇರುವುದಿಲ್ಲ. ಈ ಮೂರು ದಿವಸ ಸೇವೆಗಳನ್ನು ರದ್ದು ಮಾಡಲಾಗಿದೆ.

TTD: new updates for online tickets

Leave a comment