Pension Scheme New Update: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಪೆನ್ಶನ್ ಕುರಿತಾಗಿ ಹೊಸ ಅಧಿಸೂಚನೆ ಬಿಡುಗಡೆ!
22/12/2003ರ ನಂತರ ನೇಮಕಾತಿ ಮಾಡಿಕೊಂಡಿರುವ ಸಿಬ್ಬಂದಿಗಳಿಗೆ ಕೇಂದ್ರ ಸರ್ಕಾರ ಈ ಸೌಲಭ್ಯ ಜಾರಿಗೆ ತಂದಿತು. ಡಿಫೈನ್ಸ್ ಪೆನ್ಶನ್ ಯೋಜನೆಗೆ ಅರ್ಜಿ ಸಲ್ಲಿಸಲು,
Pension Scheme New Update 2024: 18 ವರ್ಷಗಳ ಹಿಂದೆ 1/4//2006ಕ್ಕಿಂತ ಮೊದಲು ನೇಮಕಾತಿಯಲ್ಲಿ ಸರ್ಕಾರಿ ಕೆಲಸ ಸಿಕ್ಕಿರುವ, ಅದಾದ ಬಳಿಕ ರಾಜ್ಯ ಸರ್ಕಾರದ ಇಲಾಖೆಗಳಿಗೆ ಆಯ್ಕೆಯಾಗಿರುವ ಸಿಬ್ಬಂದಿಗಳಿಗೆ ಈ ಹಿಂದಿನ ಡಿಫೈನ್ಸ್ ಯೋಜನೆಗಳಿಗೆ ಸೇರಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ನೀಡಲಾಗಿದೆ. ರಾಜ್ಯ ಸರ್ಕಾರದ ಕ್ರಮ ಸಂಖ್ಯೆ 2ರ ಅನುಸಾರ, ಗವರ್ನಮೆಂಟ್ ಕೆಲಸ ಇರುವವರಿಗೆ ರಾಷ್ಟ್ರೀಯ ಪೆನ್ಶನ್ ಯೋಜನೆಯನ್ನು ಜಾರಿಗೆ ತರಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದ್ದು, ಈ ಬಗ್ಗೆ ಮಾರ್ಗಸೂಚನೆಗಳನ್ನು ಹೊರಡಿಸಬೇಕಿದೆ.
ಡಿಫೈನ್ ಪೆನ್ಶನ್ ಯೋಜನೆ: (Pension Scheme)
22/12/2003ರ ನಂತರ ನೇಮಕಾತಿ ಮಾಡಿಕೊಂಡಿರುವ ಸಿಬ್ಬಂದಿಗಳಿಗೆ ಕೇಂದ್ರ ಸರ್ಕಾರ ಈ ಸೌಲಭ್ಯ ಜಾರಿಗೆ ತಂದಿತು. ಡಿಫೈನ್ಸ್ ಪೆನ್ಶನ್ ಯೋಜನೆಗೆ ಅರ್ಜಿ ಸಲ್ಲಿಸಲು, 31/8/2023 ಕೊನೆಯ ದಿನಾಂಕ ಆಗಿರುತ್ತದೆ ಎಂದು ಕೇಂದ್ರ ಸರ್ಕಾರವೇ ಸಮಯ ನೀಡಿತ್ತು. ಕೇಂದ್ರ ಸರ್ಕಾರದ ಈ ಅಧಿಸೂಚನೆಯಲ್ಲಿ ಇರುವ ಸೌಲಭ್ಯವನ್ನು ರಾಜ್ಯ ಸರ್ಕಾರಕ್ಕೂ ತರಬೇಕು ಎಂದು ನಿರ್ಧಾರ ಮಾಡಲಾಯಿತು. 1/4/2006ರ ನಂತರ ಕೆಲಸಕ್ಕೆ ಸೇರಿರುವ ಸರ್ಕಾರಿ ಕೆಲಸಗಾರರಿಗೆ ಡಿಫೈನ್ ಪೆನ್ಶನ್ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಕ್ರಮಗಳ ಬಗ್ಗೆ ತಿಳಿಯೋಣ.
ರಾಜ್ಯ ಸರ್ಕಾರದ ಹೊಸ ನಿರ್ಧಾರ:
ನಮ್ಮ ರಾಜ್ಯದ ಸಿವಿಲ್ ಸ್ಕೀಮ್ ನಲ್ಲಿ ಖಾಲಿ ಇದ್ದ ಹುದ್ದೆಗಳನ್ನು 1/4/2006 ರ ನಂತರ ಭರ್ತಿ ಮಾಡಿ, ಸರ್ಕಾರಿ ಕೆಲಸಕ್ಕೆ ಸೇರಿರುವವರಿಗೆ, ಈ ಕೆಲವು ಕಂಡೀಷನ್ ಗಳ ಅನುಸಾರ, ಡಿಫೈನ್ ಪೆನ್ಶನ್ ಸೌಲಭ್ಯವನ್ನು ನೀಡಬೇಕು ಎಂದು ಸರ್ಕಾರ ಅನುಮತಿ ನೀಡಿದೆ..
1. 1/4/2006ರ ಸರ್ಕಾರಿ ಕೆಲಸಕ್ಕೆ ನೇಮಕಾತಿ ಆಗಿರುವ ನೌಕರರಿಗೆ ಡಿಫೈನ್ಸ್ ಪೆನ್ಶನ್ ಯೋಜನೆಯ ಸೌಲಭ್ಯ ಪಡೆಯಲು ಆಸಕ್ತಿ ಇದ್ದರೆ, ಅಂಥವರು 30/6/2024ರ ಒಳಗೆ ತಮಗೆ ಒಪ್ಪಿಗೆ ಇದೆ ಎಂದು ಸರ್ಕಾರಕ್ಕೆ ಡಿಫೈನ್ಸ್ ಪೆನ್ಶನ್ ಯೋಜನೆಯನ್ನು ವ್ಯಾಪ್ತಿಗೆ ತರಬೇಕು ಎಂದು ತಿಳಿಸಬೇಕು.
2. ಒಂದು ಸಾರಿ ಆಯ್ಕೆ ಮಾಡಿದರೆ, ಮತ್ತೆ ಬದಲಾವಣೆ ಮಾಡಲು ಆಗೋದಿಲ್ಲ.
3. ಇಲ್ಲಿ ತಿಳಿಸಿದ ಹಾಗೆ ಆ ಸರ್ಕಾರಿ ಕೆಲಸಗಾರರು ಹೊಸದಾಗಿ ಮತ್ತೆ ನಮೂನೆ ನೀಡದೆ, ನ್ಯಾಷನಲ್ ಪೆನ್ಶನ್ ಸ್ಕೀಮ್ ನಲ್ಲಿ ಮುಂದುವರೆಯುತ್ತಾರೆ.
4. ಡಿಫೈನ್ಸ್ ಪೆನ್ಶನ್ ಸ್ಕೀಮ್ ಯೋಜನೆಗೆ ಅರ್ಹತೆ ಹೊಂದುವ ನೇಮಕಾತಿ ಇರುವ ಸಿಬ್ಬಂದಿಗಳನ್ನು ಖಚಿತಪಡಿಸಿಕೊಂಡು, 31/7/2024ರ ಒಳಗೆ ಅವರೆಲ್ಲರೂ ಡಿಫೈನ್ಸ್ ಪೆನ್ಶನ್ ಯೋಜನೆಗೆ ಒಳ ಪಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಇದಕ್ಕಾಗಿ ಆಯಾ ಇಲಾಖೆಯ ಮುಖ್ಯಸ್ಥರಿಗೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ.
5. ಆಯಾ ಇಲಾಖೆಯ ಮುಖ್ಯಸ್ಥರು, ಬಂದಿರುವ ಎಲ್ಲಾ ಅಪ್ಲಿಕೇಶನ್ ಗಳನ್ನು ಸರಿಯಾಗಿ ಚೆಕ್ ಮಾಡಿ, ಯಾರಿಗೆಲ್ಲಾ ಒಪ್ಪಿಗೆ ಇದೆಯೋ ಅಂಥವರ ಲಿಸ್ಟ್ ಅನ್ನು 31/8/2024ರ ಒಳಗೆ ತಯಾರಿಸಿ ಸರ್ಕಾರಕ್ಕೆ ನೀಡಬೇಕು.
6. ಸರ್ಕಾರಿ ನೌಕರರು ತಮಗೆ ಡಿಫೈನ್ಸ್ ಪೆನ್ಶನ್ ಯೋಜನೆ ಒಪ್ಪಿಯಾದರೆ 30/6-2024ರ ಒಳಗೆ ತಮ್ಮ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಎಲ್ಲಾ ಇಲಾಖೆಗಳಲ್ಲಿ ಸಿಬ್ಬಂದಿಗಳ ಒಪ್ಪಿಗೆಯನ್ನು ಪರಿಶೀಲಿಸಿ, ಕ್ರಮ ಸಂಖ್ಯೆ4, ಕ್ರಮ ಸಂಖ್ಯೆ5 ರ ಅನುಸಾರ ಮುಂದಿನ ಕ್ರಮ ತೆಗೆದುಕೊಳಬೇಕು ಎಂದು ಆದೇಶ ನೀಡಲಾಗಿದೆ.
Good news for government employees! A New Notification Has Been Released About Pension!