Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

SSP Postmetric Scholarship 2024 ಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್!

ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ಇಂದ ಸಹಾಯ ಆಗುತ್ತಿದೆ. ಇದೀಗ SSP ಸ್ಕಾಲರ್ಶಿಪ್ ಗೆ ಅಪ್ಲೈ ಮಾಡುವ ದಿನಾಂಕವನ್ನು ಸರ್ಕಾರ ವಿಸ್ತರಿಸಿದ್ದು

SSP Postmetric Scholarship 2024: ನಮ್ಮ ರಾಜ್ಯ ಸರ್ಕಾರವು (State Government) ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ಮಾಡಲು, ಅವರಿಗೆ ಓದಿಗೆ ನೆರವಾಗಲು ನೀಡುತ್ತಿರುವ ವಿದ್ಯಾರ್ಥಿವೇತನವೇ SSP Scholarship. ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ಇಂದ ಸಹಾಯ ಆಗುತ್ತಿದೆ. ಇದೀಗ SSP ಸ್ಕಾಲರ್ಶಿಪ್ ಗೆ ಅಪ್ಲೈ ಮಾಡುವ ದಿನಾಂಕವನ್ನು ಸರ್ಕಾರ ವಿಸ್ತರಿಸಿದ್ದು, ಇನ್ನು ಅಪ್ಲೈ ಮಾಡದೆ ಇದ್ದ ವಿದ್ಯಾರ್ಥಿಗಳಿಗೆ ಇದು ಗುಡ್ ನ್ಯೂಸ್. ಈದ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ? ಯಾವೆಲ್ಲಾ ದಾಖಲೆಗಳು ಬೇಕು? ಎಲ್ಲಾ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

2023-24ನೇ ಸಾಲಿನ ಪೋಸ್ಟ್ ಮೆಟ್ರಿಕ್ ಸ್ಕಾಲರ್ಶಿಪ್ (Post metric scholarship):

ಮೆಟ್ರಿಕ್ ನಂತರ ಅಂದರೆ 19ನೇ ತರಗತಿ ನಂತರ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕೆ ಸೇರುವ ಕೋರ್ಸ್ ಗಳನ್ನು ಪೋಸ್ಟ್ ಮೆಟ್ರಿಕ್ ಕೋರ್ಸ್ ಎನ್ನುತ್ತಾರೆ. ಪಿಯುಸಿ (PUC), ಪದವಿ (Degree), ಸ್ನಾತಕೋತ್ತರ ಪದವಿ (Master’s), ಡಿಪ್ಲೊಮಾ (Diploma), ಟೆಕ್ನಿಕಲ್ ಕೋರ್ಸ್ (Engineering), ಜಾಬ್ ಓರಿಯಂಟೆಡ್ ಕೋರ್ಸ್ ಇವುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆಯುತ್ತಾರೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

  • SSLC Register number
  • Caste Certificate ಮತ್ತು Income Certificate
  • ಆಧಾರ್ ಕಾರ್ಡ್ ನಂಬರ್
  • ಫೋನ್ ನಂಬರ್ ಮತ್ತು ಇಮೇಲ್ ಐಡಿ
  • ಕಾಲೇಜ್ ಅಡ್ಮಿಷನ್ ಸ್ಲಿಪ್ ಅಥವಾ ರಿಜಿಸ್ಟರ್ ನಂಬರ್
  • ವಿಕಲಚೇತನ ವಿದ್ಯಾರ್ಥಿ ಆಗಿದ್ದಲ್ಲಿ UIDAI ನಂಬರ್
  • ವಿದ್ಯಾರ್ಥಿಯ ಅಡ್ರೆಸ್ ಮತ್ತು ವಾಸಸ್ಥಳದ ಸಂಪೂರ್ಣ ಪುರಾವೆ
  • ಎಲ್ಲಾ ದಾಖಲೆಗಳ ಇ-ದೃಢೀಕರಣ
  • ಹಾಸ್ಟೆಲ್ ನಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಅಲ್ಲಿನ ವಿವರ

OBC ವಿದ್ಯಾರ್ಥಿಗಳಿಗೆ SSP ಸ್ಕಾಲರ್ಶಿಪ್:

ಈ ಒಂದು SSP ಸ್ಕಾಲರ್ಶಿಪ್ ಮೂಲಕ ವಿದ್ಯಾರ್ಥಿಗಳ ಕಾಲೇಜ್ ಫೀಸ್ ಮರುಪಾವತಿ (College Fees Repayment), ವಿದ್ಯಾಸಿರಿ (Vidyasiri) ಮೂಲಕ ಊಟ ವಸತಿ ಸೌಲಭ್ಯ, ಸ್ಕಾಲರ್ಶಿಪ್, ಇದೆಲ್ಲವೂ ಹಿಂದುಳಿದ ವರ್ಗದವರಿಗೆ ಸಿಗಲಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಸ್ಕಾಲರ್ಶಿಪ್ ಪಡೆಯಲು OBC ವಿದ್ಯಾರ್ಥಿಗಳಿಗೆ ಅರ್ಹತೆ ಮಾನದಂಡ:

ಈ ಸ್ಕಾಲರ್ಶಿಪ್ ಅಪ್ಲೈ ಮಾಡುವವರು ಹಿಂದುಳಿದ OBC ವರ್ಗಕ್ಕೆ ಸೇರಿದವರು, ಪ್ರವರ್ಗ-1, ಅಲೆಮಾರಿ ವರ್ಗ, ಅರೆ ಅಲೆಮಾರಿ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ SSP Scholarship:

ನಮ್ಮ ರಾಜ್ಯದಲ್ಲಿ ಪಿಯುಸಿ, ಡಿಪ್ಲೊಮಾ, ಡಿಗ್ರಿ, ಮಾಸ್ಟರ್ ಡಿಗ್ರಿ ಓದುತ್ತಿರುವ ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ SSP ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಿ, 2023-24ನೇ ಸಾಲಿಗೆ ಕಾಲೇಜ್ ಫೀಸ್ ಶುಲ್ಕ ಮರುಪಾವತಿ ಪಡೆಯಬಹುದು ಎಂದು ಬೆಂಗಳೂರಿನಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯ ಮಾಹಿತಿ ನೀಡಿದೆ.

ಅಲ್ಪಸಂಖ್ಯಾತ ವರ್ಗಕ್ಕೆ (Minority Category) ಸೇರಿದ ವಿದ್ಯಾರ್ಥಿಗಳಿಗೆ ಅರ್ಹತೆಯ ಮಾನದಂಡ:

  • ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ, ಈ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಾಗಿರಬೇಕು
  • ನಮ್ಮ ರಾಜ್ಯದ ವಾಸಿಗಳೇ ಆಗಿರಬೇಕು
  • ಕಳೆದ ವರ್ಷದ ಪರೀಕ್ಷೆಯಲ್ಲಿ ಮಿನಿಮಮ್ 50% ಮಾರ್ಕ್ಸ್ ಗಳಿಸಿರಬೇಕು
  • ಇವರ ಮನೆಯವರ ವಾರ್ಷಿಕ ಆದಾಯ 2 ಲಕ್ಷಗಳ ಒಳಗಿರಬೇಕು, ಮೆರಿಟ್ ಕಮ್ ಮೀನ್ಸ್ ಶುಲ್ಕ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.

ಪರಿಶಿಷ್ಟ ಜಾತಿಯವರಿಗೆ (SC) ಪೋಸ್ಟ್ ಮೆಟ್ರಿಕ್ ಸ್ಕಾಲರ್ಶಿಪ್:

ಈ ವರ್ಗದವರು ಮೆಟ್ರಿಕ್ ನಂತರ ಯಾವುದೇ ಕೋರ್ಸ್ ಮಾಡುತ್ತಿದ್ದರೂ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಇಂದ ಪೋಸ್ಟ್ ಮೆಟ್ರಿಕ್ ಸ್ಕಾಲರ್ಶಿಪ್ ನೀಡಲಾಗುತ್ತದೆ. ಇವರು ಪ್ರಸ್ತುತ 2023-24ನೇ ಸಾಲಿನಲ್ಲಿ ಸ್ಕಾಲರ್ಶಿಪ್ ಪಡೆಯಲು 15/2/204ರ ಒಳಗೆ ಅರ್ಜಿ ಸಲ್ಲಿಸಬಹುದು.

ಪರಿಶಿಷ್ಟ ಪಂಗಡ (ST)ವರ್ಗದವರಿಗೆ ಪೋಸ್ಟ್ ಮೆಟ್ರಿಕ್ ಸ್ಕಾಲರ್ಶಿಪ್:

ಈ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಕೂಡ ಸಮಾಜ ಕಲ್ಯಾಣ ಇಲಾಖೆ ಇಂದ ಮೆಟ್ರಿಕ್ ನಂತರದ ವ್ಯಾಸಂಗ ಮಾಡುತ್ತಿರುವವರಿಗೆ ಸ್ಕಾಲರ್ಶಿಪ್ ನೀಡಲಾಗುತ್ತದೆ. ಇವರು ಕೂಡ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 31/3/2024 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಆಗಿರುತ್ತದೆ.

ಅಧಿಕೃತ ವೆಬ್ಸೈಟ್:

ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಲು ಈ https://ssp.postmatric.karnataka.gov.in/ ಲಿಂಕ್ ಗೆ ಭೇಟಿ ನೀಡಿ.

Leave a comment