Dr YAN: ದೇಶಕ್ಕಾಗಿ ಮೋದಿ -ಶಿಕ್ಷಕರಿಗಾಗಿ ಡಾ ವೈ ಎ ಎನ್
ತನ್ನ ಇಲ್ಲಿಯವರೆಗಿನ ಎಂ ಎಲ್ ಸಿ ಸಂಬಳವನ್ನು ಅನಾರೋಗ್ಯ ಶಿಕ್ಷಕರ ಚಿಕಿತ್ಸೆಗಾಗಿ ಅಥವಾ ಅವರ ಮಕ್ಕಳ ಶಿಕ್ಷಣಕ್ಕಾಗಿ ಅಥವಾ ಅವರ ಕುಂದು ಕೊರತೆಗಳಿಗಾಗಿ ಮೀಸಲಿಟ್ಟು
ಇದು ಶಿಕ್ಷಕರ ಮನದಾಳದ ಮಾತು.
Dr YAN: ಸುಮಾರು 25 ವರ್ಷಗಳಿಂದ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಐದು ಜಿಲ್ಲೆಗಳು ಚಿತ್ರದುರ್ಗ ತುಮಕೂರು ದಾವಣೆಗೆರೆ ಕೋಲಾರ ಚಿಕ್ಕಬಳ್ಳಾಪುರ ಕ್ಷೇತ್ರದ ಶಿಕ್ಷಕರ ನಾಡಿ ಮಿಡಿತವಾಗಿ ಅವರ ಪ್ರತಿಯೊಂದು ಸಮಸ್ಯೆಯನ್ನು ತನ್ನ ಸಮಸ್ಯೆಯೆಂದು ಭಾವಿಸಿ ಅದಕ್ಕೆ ಪರಿಹಾರ ಕೊಡಿಸುವಲ್ಲಿ ಡಾ ವೈ ಎ ನಾರಾಯಣ ಸ್ವಾಮಿಯವರು ಮೊದಲಿಗರು.
ತನ್ನ ಇಲ್ಲಿಯವರೆಗಿನ ಎಂ ಎಲ್ ಸಿ ಸಂಬಳವನ್ನು ಅನಾರೋಗ್ಯ ಶಿಕ್ಷಕರ ಚಿಕಿತ್ಸೆಗಾಗಿ ಅಥವಾ ಅವರ ಮಕ್ಕಳ ಶಿಕ್ಷಣಕ್ಕಾಗಿ ಅಥವಾ ಅವರ ಕುಂದು ಕೊರತೆಗಳಿಗಾಗಿ ಮೀಸಲಿಟ್ಟು ಅವರ ಮನೆ ಮಗನಾಗಿದ್ದಾರೆ.ಇನ್ನೂ ಮಹಿಳಾ ಶಿಕ್ಷಕಿಯರು ತಮ್ಮ ಸ್ವಂತ ಸಹೋದರನ ರೀತಿ ನಮ್ಮನ್ನು ಕಾಣುತ್ತಾ ನಮ್ಮ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ಅವರ ಬೆನ್ನಿಗೆ ಹಾಕಿಕೊಂಡು ನಮಗೆ ಪರಿಹಾರ ನೀಡುತ್ತಾರೆ ಇಂತ ಎಂ ಎಲ್ ಸಿ ಯನ್ನು ಪಡೆದ ನಾವೇ ಧನ್ಯರೆಂದು ಕೊಂಡಾಡುತ್ತಿದ್ದಾರೆ.
ಈ ಬಾರಿಯ ಚುನಾವಣೆಯ ಪ್ರಚಾರವನ್ನು ಈಗಾಗಲೇ ಶಿಕ್ಷಕರೇ ತಮ್ಮ ಚುನಾವಣೆಯೆಂದು ಭಾವಿಸಿ ಅವರೇ ಅಖಾಡದಲ್ಲಿ ಇದ್ದಾರೆ ಎನ್ನುವಂತೆ ಎಲ್ಲಾ ಐದು ಜಿಲ್ಲೆಗಳಲ್ಲಿ ಸಾವಿರಾರು ಶಿಕ್ಷಕರು ತಾವೇ ಖುದ್ದು ಡಾ ವೈ ಎ ನಾರಾಯಣಸ್ವಾಮಿಯವರ ಪರ ಕ್ಯಾಂಪೇನ್ ಶುರು ಮಾಡಿರುವುದು ವಿಶೇಷವೇ ಸರಿ.ಎಲ್ಲಾ ಶಿಕ್ಷಕರ ಕೂಗು ಮತ್ತು ಸಂದೇಶ ಒಂದೇ ನಮ್ಮ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಡಾ ವೈ ಎ ನಾರಾಯಣ ಸ್ವಾಮಿಯವರು ಬಿಟ್ಟು ಬೇರೆ ಯಾರೂ ಬರಲು ಬಿಡಲ್ಲ ಎಂಬುದು.