Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Chamundeshwari Temple: ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯದ ಕುರಿತು ನಿಮಗೆ ತಿಳಿಯದ ಅಚ್ಚರಿ ಮಾಹಿತಿ ಇಲ್ಲಿದೆ ನೋಡಿ!

ಹೌದು ಸ್ನೇಹಿತರೆ ಹೊಯ್ಸಳರ ಕಾಲದಲ್ಲಿ ಈ ದೇವಾಲಯವನ್ನು ಕಟ್ಟಲಾಯಿತು. ಆದರೆ ವಿಜಯನಗರದ ಅರಸರು ಅವರ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯಕ್ಕೆ ವಿಶೇಷ ರೂಪನ್ನು ನೀಡಿ ನಿರ್ಮಾಣ ಮರು ಮಾಡಿದರು.

ಸ್ನೇಹಿತರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅನೇಕ ದೇವಾಲಯಗಳಿವೆ. ಎಲ್ಲಾ ದೇವಾಲಯ ಗಳಿಗಿಂತಲೂ ಅತಿ ಹೆಚ್ಚಿನ ಶಕ್ತಿ ಹೊಂದಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಪ್ರತಿನಿತ್ಯ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಚಾಮುಂಡಮ್ಮನ ಆಶೀರ್ವಾದ ಪಡೆಯುತ್ತಾರೆ‌. ಹೀಗಿರುವಾಗ ಯಾರಿಗೂ ಸಹ ನಾವು ತಿಳಿಸುವಂತಹ ಮಾಹಿತಿ ಕುರಿತು ತಿಳಿದಿರಲು ಸಾಧ್ಯವಿಲ್ಲ. ಹೀಗಾಗಿ ನಾವಿವತ್ತು ಶ್ರೀ ಕ್ಷೇತ್ರ ಚಾಮುಂಡೇಶ್ವರಿ ದೇವಾಲಯದಲ್ಲಿರುವ ಕೆಲವು ಅಚ್ಚರಿಯ ಮಾಹಿತಿಗಳನ್ನು ಬಿಚ್ಚಿಡಲು ಈ ಪುಟವನ್ನು ಬರೆದಿದ್ದೇವೆ, ಆದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ಹೊಯ್ಸಳರ ಕಾಲದಲ್ಲಿ ಈ ದೇವಾಲಯವನ್ನು ಕಟ್ಟಲಾಯಿತು. ಆದರೆ ವಿಜಯನಗರದ ಅರಸರು ಅವರ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯಕ್ಕೆ ವಿಶೇಷ ರೂಪನ್ನು ನೀಡಿ ನಿರ್ಮಾಣ ಮರು ಮಾಡಿದರು. ಹಲವಾರು ಶತಮಾನಗಳ ಹಿಂದೆ ಚಾಮುಂಡೇಶ್ವರಿ ದೇವಾಲಯದಲ್ಲಿ ಪ್ರಾಣಿಬಲಿ ನರಬಲಿಯನ್ನು ಕೂಡ ಮಾಡುತ್ತಿದ್ದರು. ಆದರೀಗ ಅದು ಅಕ್ರಮ ಎಂದು ಜನರಿಗೆ ಅರಿವಾದ ಮೇಲೆ ಎಲ್ಲವನ್ನು ನಿಲ್ಲಿಸಲಾಗಿದೆ.

ಶಿವನ ಮಡದಿಯಾದ ಸತಿದೇವಿಯು ದಕ್ಷ ಯಜ್ಞದಲ್ಲಿ ಆಹುತಿಯಾದಗ ತಾಯಿಯ ದೇಹದ 51 ಭಾಗ ಬೇರೆ ಬೇರೆ ಕಡೆ ಬೀಳುತ್ತದೆ. ಅವುಗಳನ್ನು ಶಕ್ತಿಪೀಠ ಎಂದು ಕರೆಯಲಾಗುತ್ತದೆ ಮುಖ್ಯವಾಗಿ ಇರುವಂತಹ ಹದಿನೆಂಟು ಮಹಾ ಶಕ್ತಿಪೀಠಗಳಲ್ಲಿ ಚಾಮುಂಡೇಶ್ವರಿ ದೇವಿಯ ಸ್ಥಾನವು ಒಂದು‌. ಈ ಸ್ಥಳದಲ್ಲಿ ಸತಿದೇವಿಯ ಕೂದಲು ಬಿದ್ದಿದೆ ಎಂದು ಹಲವಾರು ವರದಿಗಳು ತಿಳಿಸುತ್ತದೆ.

ಇನ್ನು ಈ ದೇವಸ್ಥಾನಕ್ಕೆ ಸಾವಿರ ಮೆಟ್ಟಿಲುಗಳಿದ್ದು, ಗೋಪುರದ ಮೇಲೆ ಏಳು ಚಿನ್ನದ ಲೇಪ ಇರುವಂತಹ ಕಳಶಗಳನ್ನು ಸ್ಥಾಪಿಸಲಾಗಿದೆ. ಇನ್ನು ಗರ್ಭಗುಡಿಯಲ್ಲಿ ದೇವಿಯು 8 ಭುಜಗಳುಳ್ಳ ರೌದ್ರಾವತಾರದಲ್ಲಿ ದರುಶನ ನೀಡುತ್ತಾಳೆ. ಇನ್ನು ದ್ವಾರದ ಮೇಲ್ಭಾಗದಲ್ಲಿ ದೇವಿಯ ಹಲವಾರು ರೂಪಗಳನ್ನು ಕೆತ್ತಲಾಗಿದೆ.

ಹಾಗೆಯೇ ಇಂದ್ರಾದಿ ಅಷ್ಟದಿಕ್ಪಾಲಕರನ್ನು ಕಾಣಬಹುದು. ಇನ್ನೂ ಚಾಮುಂಡೇಶ್ವರಿ ದೇವಾಲಯದಲ್ಲಿರುವ ಹತ್ತು ಹಲವಾರು ವಿಶೇಷತೆಗಳನ್ನು ತಿಳಿದುಕೊಳ್ಳಬೇಕಾದರೆ ಕೆಳಗಿನ ವಿಡಿಯೋವನ್ನು ತಪ್ಪದೆ ವೀಕ್ಷಿಸಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆಯೇನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Here are surprising facts you didn’t know about Sri Chamundeshwari Temple in Mysore!

Leave a comment