Virat Kohli : ಕಿಂಗ್ ಕೊಹ್ಲಿ ರಿಟೈರ್ ಆಗೋ ದಿನದ ಮುಹೂರ್ತ ಫಿಕ್ಸ್ ಮಾಡಿದ ಜ್ಯೋತಿಷಿ! RCB ಕಪ್ ಗೆಲ್ಲೊ ಮೊದಲೇ ಕೊಹ್ಲಿ ರಿಟೈರ್ಮೆಂಟ್?
Virat Kohli: ವಿರಾಟ್ ಅವರ ಬಗ್ಗೆ ಒಬ್ಬ ಜ್ಯೋತಿಷಿ ಕೊಹ್ಲಿ ಅವರ ಭವಿಷ್ಯದ ಬಗ್ಗೆ 8 ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ಈಗ ವೈರಲ್ ಆಗುತ್ತಿದೆ.
Virat Kohli : ವಿರಾಟ್ ಕೊಹ್ಲಿ ಯಾರಿಗೆ ತಾನೆ ಇಷ್ಟವಿಲ್ಲ. ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ಆರಾಧ್ಯ ದೈವ ಎಂದರೆ ಅದು ವಿರಾಟ್. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರದರೆ ವಿರಾಟ ದೇವರ ಮತ್ತೊಂದು ರೂಪ ಎಂಬಂತೆ ಜನರು ಹುಚ್ಚೆದ್ದು ಕುಣಿಯುತ್ತಾರೆ. ಏಷ್ಟು ಏಳು ಬೀಳುಗಳನ್ನು ಕಂಡರೂ ವಿರಾಟ ಮೇಲಿನ ಅಭಿಮಾನ ಪ್ರೀತಿ ಕಿಂಚಿತ್ತೂ ಕಡಿಮೆ ಆಗಿಲ್ಲ. ಭಾರತೀಯರ ನೆಚ್ಚಿನ ಆಟಗಾರ ಹಾಗೂ ವ್ಯಕ್ತಿತ್ವ. ಕರ್ನಾಟಕದ ಪಾಲಿಗೆ ಆಪತ್ಭಾಂದವ. ಐಪಿಎಲ್ ನ ಬೆಂಗಳೂರು ತಂಡಕ್ಕೆ ಕೋಹ್ಲಿ ಇದ್ದರೆ ಒಂದು ರೀತಿಯ ಕಳೆ. ಇವರ ಬಗ್ಗೆ ಒಬ್ಬ ಜ್ಯೋತಿಷಿ ಕೊಹ್ಲಿ ಅವರ ಭವಿಷ್ಯದ ಬಗ್ಗೆ 8 ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ಈಗ ವೈರಲ್ ಆಗುತ್ತಿದೆ.
Virat Kohli :
ವಯಕ್ತಿಕ ಜೀವನದ ಬಗ್ಗೆ ಒಂದಿಷ್ಟು ಮಾಹಿತಿ :-
ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಪ್ರಪಂಚದ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದಾರೆ. ವಿರಾಟ್ ಕೊಹ್ಲಿ ಜನಿಸಿದ್ದು ನವೆಂಬರ್ ೫, ೧೯೮೮.ಇವರ ತಂದೆ ಹೆಸರುಪ್ರೇಮ್ ಕೋಹ್ಲಿ . ಹಾಗೂ ತಾಯಿ ಸರೋಜ್ ಕೋಹ್ಲಿ ಅಣ್ಣ ವಿಕಾಶ್ ಮತ್ತು ಹಾಗೂ ಅಕ್ಕ ಭಾವನಾ, ಇವರು ಖ್ಯಾತ ನಟಿ ಅನುಷ್ಕಾ ಶರ್ಮಾ ಅವರನ್ನು ೨೧ ಡಿಸೆ೦ಬರ್ ೨೦೧೭ ರಲ್ಲ್ಲಿ ಮದುವೆ ಆಗಿದ್ದಾರೆ. ಕೊಹ್ಲಿ ೨೦೦೮ರಲ್ಲಿ ಮಲೇಶಿಯಾದಲ್ಲಿ ನಡೆದ ೧೯ ವರ್ಷ ವಯಸ್ಸಿನೊಳಗಿರುವವರ ಕ್ರಿಕೆಟ್ ವಿಶ್ವಕಪ್‍ನಲ್ಲಿ ಭಾರತ ತಂಡದ ನಾಯಕರಾಗಿದ್ದರು.
ಆಗ ಭಾರತ ಜಯವನ್ನು ಸಾಧಿಸಿತ್ತು. ಇವರು ಭಾರತ ತಂಡದ ನಾಯಕನಾಗಿ ಹಲವಾರು ಪಂದ್ಯಗಳಲ್ಲಿ ಜಯ ತಂದಿದ್ದಾರೆ. ಇವರು ಐಪಿಎಲ್ ನಲ್ಲಿ ಪ್ರತಿ ವರ್ಷ ಕರ್ನಾಟಕದ ಪರವಾಗಿ ಆಟವನ್ನು ಆಡುತ್ತಾರೆ. ಕರ್ನಾಟಕದ ಜನರ ಮೇಲೆ ಇವರಿಗೆ ಅಭಿಮಾನ.. ಸಚಿನ್ ತೆಂಡೂಲ್ಕರ್ ಅವರ ಸಾಧನೆಯ ಹಾದಿಯಲ್ಲಿ ನಡೆಯುತ್ತಾ ಭಾರತದ ಹೆಮ್ಮೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಾ ನಿರುವ ವಿರಾಟ್ ಕೊಹ್ಲಿ ಅವರ ಕೊಡುಗೆ ಅಪಾರ.
ವೈರಲ್ ಆಗುತ್ತಿರುವ ಪೋಸ್ಟ್ ನಲ್ಲಿ ಏನಿದೆ ?
ವಿರಾಟ್ ಅವರ ವೃತ್ತಿ ಜೀವನದ ಬಗ್ಗೆ ಭವಿಷ್ಯ ಹೇಳಿದ್ದು, 2021-2025 ವೃತ್ತಿ ಬದುಕಿನಲ್ಲಿ ಭಾರಿ ಬದಲಾವಣೆ ಆಗಲಿದೆ. ಯಶಸ್ಸಿನ ಪರ್ವ ಇವರನ್ನು ಹುಡುಕಿ ಬರಲಿದೆ. ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಈ ಸಮಯದಲ್ಲಿ ಸಿಗಲಿದೆ. ಹಾಗೆ 2025-27 ರ ಸಮಯದಲ್ಲಿ ವೃತ್ತಿ ಜೀವನದಲ್ಲಿ ಕೆಲವು ತೊಡಕುಗಳು ಎದುರಾಗಲಿದೆ.2028 ಇವರ ವೃತ್ತಿ ಜೀವನದಿಂದ ನಿವೃತ್ತಿ ಪಡೆಯಲಿದ್ದಾರೆ ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ. ಈ ಸುದ್ದಿಯೂ ಅಭಿಮಾನಿಗಳಲ್ಲಿ ಆತಂಕವನ್ನು ಮೂಡಿಸಿದೆ. ವಿರಾಟ್ ಕೋಹ್ಲಿ ಅಭಿಮಾನಿಗಳು ನಿವೃತ್ತಿಯ ವಿಚಾರವಾಗಿ ಬಹಳ ಆತಂಕ ಪಡುತ್ತಾ ಇದ್ದಾರೆ.
Virat Kohli: Astrologer predicts about Virat Kohli’s retirement.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.