Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Labour Card Scholarship 2024: ಲೇಬರ್ ಕಾರ್ಡ್ ಹೊಂದಿರುವವರ ಮಕ್ಕಳಿಗೆ ₹20,000 ವಿದ್ಯಾರ್ಥಿವೇತನ! ಶಿಕ್ಷಣಕ್ಕೆ ಸರ್ಕಾರದ ಸಹಾಯಹಸ್ತ.

ಕಾರ್ಮಿಕರ ಮಕ್ಕಳಿಗೆ ಉತ್ತಮವಾದ ಶಿಕ್ಷಣ ದೊರಕಿ, ಅವರು ಮುಂದಕ್ಕೆ ಬೆಳೆಯಬೇಕು ಎಂದು ಸರ್ಕಾರವು ಈ ವಿದ್ಯಾರ್ಥಿವೇತನ ಮೂಲಕ ಅವರಿಗೆ ಪ್ರೋತ್ಸಾಹ ಧನವನ್ನು ನೀಡಲಿದೆ.

Labour Card Scholarship 2024: ನಮ್ಮ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಕಷ್ಟದಲ್ಲಿರುವ ಕಾರ್ಮಿಕರಿಗೆ ಹಾಗೂ ಅವರ ಮಕ್ಕಳಿಗೆ ಅನುಕೂಲ ಅಗುವಂಥ ಅನೇಕ ಯೋಜನೆಗಳು ಮತ್ತು ಸೌಲಭ್ಯಗಳನ್ನಜ್ ಜಾರಿಗೆ ತರುತ್ತಿದೆ. ಕಾರ್ಮಿಕ ವರ್ಗದ ಜನರಿಗೆ ಸಹಾಯ ಆಗಲಿ ಎಂದು ಲೇಬರ್ ಕಾರ್ಡ್ (Labour Card) ಅನ್ನು ಕೂಡ ವಿತರಣೆ ಮಾಡಲಾಗಿದೆ. ಈ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕವಾಗಿ ಸಹಾಯ ಆಗಲಿ ಎಂದು ಸರ್ಕಾರವು 2023ರ Labour Card Scholarship ಗೆ ಅರ್ಜಿ ಆಹ್ವಾನಿಸಿದೆ.

Labour Card Scholarship 2024:

ಕಾರ್ಮಿಕರ ಮಕ್ಕಳಿಗೆ ಉತ್ತಮವಾದ ಶಿಕ್ಷಣ ದೊರಕಿ, ಅವರು ಮುಂದಕ್ಕೆ ಬೆಳೆಯಬೇಕು ಎಂದು ಸರ್ಕಾರವು ಈ ವಿದ್ಯಾರ್ಥಿವೇತನ ಮೂಲಕ ಅವರಿಗೆ ಪ್ರೋತ್ಸಾಹ ಧನವನ್ನು ನೀಡಲಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು, ಈ ವಿದ್ಯಾರ್ಥಿ ವೇತನಕ್ಕೆ ಯಾರೆಲ್ಲಾ ಅರ್ಹತೆ ಪಡೆಯುತ್ತಾರೆ? ಯಾವೆಲ್ಲಾ ದಾಖಲೆಗಳು ಬೇಕು? ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವಾಗ? ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..

2024 ಲೇಬರ್ ಕಾರ್ಡ್ ವಿದ್ಯಾರ್ಥಿವೇತನದ ಸಂಪೂರ್ಣ ಮಾಹಿತಿ:

ವಿದ್ಯಾರ್ಥಿವೇತನದ ಹೆಸರು: ಶೈಕ್ಷಣಿಕ ಪ್ರೋತ್ಸಾಹ ಧನಸಹಾಯ
ಪ್ರೋತ್ಸಾಹ ಹಣ: ₹6000 ಇಂದ ₹20,000ದ ವರೆಗು
ವಿದ್ಯಾರ್ಥಿಗಳ ಅರ್ಹತೆ: 10ನೇ ತರಗತಿ, ಡಿಪ್ಲೊಮಾ, ಪಿಯುಸಿ, ಐಟಿಐ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ಪಡೆಯುತ್ತಿರುವವರು ಅಪ್ಲೈ ಮಾಡಬಹುದು.

Karnataka Labour Welfare Board ಮಾನದಂಡ:

ಕರ್ನಾಟಕ ಲೇಬರ್ ವೆಲ್ಫೇರ್ ಬೋರ್ಡ್ ಈಗ ಸಂಘಟಿತ ಕಾರ್ಮಿಕ ವರ್ಗದವರ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಸಹಾಯ ಆಗಲಿ ಎಂದು 2023-24ನೇ ವರ್ಷದ ವಾರ್ಷಿಕ ಶೈಕ್ಷಣಿಕ ಪ್ರೋತ್ಸಾಹ ಸಹಾಯ ಧನ ನೀಡುವುದಕ್ಕಾಗಿ ಅರ್ಜಿ ಆಹ್ವಾನಿಸಿದೆ. ಅಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

  • ಈ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡುವ ವಿದ್ಯಾರ್ಥಿಯ ತಂದೆ ಅಥವಾ ತಾಯಿ ಕಾರ್ಮಿಕರಾಗಿದ್ದರೆ ಅವರ ತಿಂಗಳ ಆದಾಯ ₹35000 ಕ್ಕಿಂತ ಕಡಿಮೆ ಇರಬೇಕು.
  • ಒಂದು ಮನೆಯಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಈ ಸೌಲಭ್ಯ ಪಡೆಯಬಹುದು.
  • ವಿದ್ಯಾರ್ಥಿಗಳು ಕರ್ನಾಟಕ ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
    ಇದು ಇಲಾಖೆಯಿಂದ ಸಿಕ್ಕಿರುವ ಅಧಿಕೃತ ಮಾಹಿತಿ ಆಗಿದೆ.

ಅರ್ಜಿ ಸಲ್ಲಿಕೆಗೆ ಅರ್ಹತೆ:

  • ಇಲಾಖೆಗೆ ವಂತಿಕೆ ಪಾವತಿ ಮಾಡುತ್ತಿರುವ ಕಾರ್ಮಿಕ ವರ್ಗದವರ ಮಕ್ಕಳು ಅರ್ಜಿ ಸಲ್ಲಿಸಬಹುದು
  • ಅರ್ಜಿ ಸಲ್ಲಿಸುವ ಅಭ್ಯರ್ಥಿ ಹಿಂದಿನ ವರ್ಷದಲ್ಲಿ ಇಂತಿಷ್ಟು ಅಂಕ ಗಳಿಸಿರಬೇಕು
  • ಸಾಮಾನ್ಯ ವರ್ಗದ ಅಭ್ಯರ್ಥಿ : 50%
  • SC/ST ಅಭ್ಯರ್ಥಿ : 45% ಮಾರ್ಕ್ಸ್ ಗಳಿಸಿ ಪಾಸ್ ಆಗಿರಬೇಕು

ಯಾವ ತರಗತಿಗೆ ಎಷ್ಟು ಪ್ರೋತ್ಸಾಹ ಧನ ಸಿಗುತ್ತದೆ?

  • 8 ರಿಂದ 10ನೇ ತರಗತಿ ವರೆಗು ಓದುತ್ತಿರುವ ವಿದ್ಯಾರ್ಥಿಗಳಿಗೆ ₹6000 ಪ್ರೋತ್ಸಾಹಧನ ಸಿಗಲಿದೆ
  • ಪಿಯುಸಿ, ಡಿಪ್ಲೊಮಾ, ಟಿಸಿಹೆಚ್, ಐಟಿಐ, ಓದುತ್ತಿರುವವರಿಗೆ ₹8000
  • ಪದವಿ ಓದುತ್ತಿರುವವರಿಗೆ ₹10,000
  • ಸ್ನಾತಕೋತ್ತರ ಪದವಿ ಓದುತ್ತಿರುವವರಿಗೆ ₹12,000
  • ಇಂಜಿನಿಯರಿಂಗ್, ಮೆಡಿಸಿನ್ ಓದುತ್ತಿರುವವರಿಗೆ ₹20,000 ಪ್ರೋತ್ಸಾಹ ಧನ ಸಿಗುತ್ತದೆ.

ಅಧಿಕೃತ ವೆಬ್ಸೈಟ್:

https://klwbapps.karnataka.gov.in/ ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಇನ್ನಷ್ಟು ಮಾಹಿತಿಗಾಗಿ.

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, ಕಾರ್ಮಿಕ ಕಲ್ಯಾಣ ಭವನ, ನಂಬರ್ 148, 1ನೇ & 2ನೇ ಮಹಡಿ, ಮತ್ತಿಕೆರೆ ಮುಖ್ಯರಸ್ತೆ, ಯಶವಂತಪುರ, ಬೆಂಗಳೂರು-560022. ಈ ಅಡ್ರೆಸ್ ಗೆ ಭೇಟಿ ನೀಡಬಹುದು. ಅಥವಾ 080-23485188,8277291175, 8277120505 ಈ ನಂಬರ್ ಗಳಿಗೆ ಕರೆಮಾಡಿ ಮಾಹಿತಿ ಪಡೆಯಬಹುದು.

₹20,000 Labour Card Scholarship 2024 for children of Labor Card holders!

Leave a comment