Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold and Silver Rate: ಹೊಸ ತಿಂಗಳ ಮೊದಲ ದಿನ ಚಿನ್ನದ ಬೆಲೆ ಹೇಗಿದೆ? ಏರಿಕೆಯೋ ಇಳಿಕೆಯೋ?

ಮೊದಲಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bangalore) ಚಿನ್ನದ ಬೆಲೆ ಹೇಗಿದೆ ಎಂದು ತಿಳಿಯೋಣ.

Gold and Silver Rate: ಚಿನ್ನದ ಆಭರಣಗಳು (Gold Ornaments), ಬೆಳ್ಳಿಯ ವಸ್ತುಗಳು (Silver Ornaments) ಎಂದರೆ ನಮ್ಮ ದೇಶದ ಜನರಿಗೆ ಬಹಳ ಆಸಕ್ತಿ ಮತ್ತು ಪ್ರೀತಿ. ಚಿನ್ನದ ಆಭರಣಗಳನ್ನು ಪರಂಪರೆಯ ಸಂಕೇತದ ರೀತಿಯಲ್ಲಿ ಉಳಿಸಿಕೊಂಡು, ಧರಿಸಿಕೊಂಡು ಬರುತ್ತಾರೆ. ವಿಶೇಷವಾಗಿ ಮಹಿಳೆಯರಿಗೆ ಚಿನ್ನದ ಆಭರಣಗಳ ಮೇಲೆ ವಿಪರೀತ ಆಸೆ, ಆಸಕ್ತಿ. ಕೆಲವರು ಚಿನ್ನದ ಬೆಲೆ ಇಳಿಕೆ ಆಗುತ್ತಿದ್ದ ಹಾಗೆ ಚಿನ್ನ ಖರೀದಿಗೆ ಹೋದರೆ, ಇನ್ನು ಕೆಲವರು ಎಲ್ಲಾ ಸಮಯದಲ್ಲು ಚಿನ್ನ ಖರೀದಿ ಮಾಡುತ್ತಾರೆ.

ಹಬ್ಬ ಹರಿದಿನಗಳು, ವಿಶೇಷ ದಿನಗಳು, ಹುಟ್ಟುಹಬ್ಬ ಇಂಥ ಸಮಯಗಳಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚು. ಮದುವೆ ಸಂಭ್ರಮಗಳು ಶುರುವಾದರೆ ಕೇಳೋ ಹಾಗೆ ಇಲ್ಲ, ಹೆಚ್ಚಿಗೆ ಚಿನ್ನದ ಆಭರಣಗಳನ್ನು ಖರೀದಿ ಮಾಡುತ್ತಾರೆ, ವಿವಿಧ ಡಿಸೈನ್ ಗಳಲ್ಲಿ ಎಲ್ಲರಿಗೂ ಇಷ್ಟ ಆಗುವ ಹಾಗೆ ಚಿನ್ನ ದೊರಕುತ್ತದೆ. ಚಿನ್ನಕ್ಕೆ ಮಾತ್ರವಲ್ಲ ಬೆಳ್ಳಿಗೂ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ. ಪೂಜೆಯ ವಸ್ತುಗಳಲ್ಲಿ ಬೆಳ್ಳಿ ಇದ್ದೇ ಇರುತ್ತದೆ. ಬೆಳ್ಳಿಯ ಬೆಲೆಯ ಏರಿಕೆ ಇಳಿಕೆಗಳನ್ನು ಕೂಡ ಜನರು ಗಮನಿಸುತ್ತಾರೆ.

ಚಿನ್ನ ಕೇವಲ ಅಲಂಕಾರದ ಅಥವಾ ಶ್ರೀಮಂತಿಯ ಸಂಕೇತ ಅಲ್ಲ, ಚಿನ್ನ ಕಷ್ಟಕಾಲಕ್ಕೆ ಸಹಾಯ ಮಾಡುವ ದುಬಾರಿ ವಸ್ತು ಕೂಡ ಹೌದು. ಒಂದು ರೀತಿ ಇನ್ವೆಸ್ಟ್ಮೆಂಟ್ (Gold Investment) ಇದ್ದ ಹಾಗೆ. ಇಂದು ಚಿನ್ನ ಖರೀದಿ ಮಾಡಿ, ಮುಂದೊಂದು ದಿನ ನಿಮಗೆ ಹಣಕಾಸಿನ ವಿಚಾರದಲ್ಲಿ ಕಷ್ಟ ಎದುರಾದಾಗ ಚಿನ್ನವನ್ನು ಅಡವಿಟ್ಟು ಅಥವಾ ಮಾರಿ ನಿಮ್ಮ ತೊಂದರೆಗಳನ್ನು ಸರಿಪಡಿಸಿಕೊಳ್ಳಬಹುದು. ಹಾಗಾಗಿ ಬಹಳಷ್ಟು ಜನರು ಚಿನ್ನವನ್ನು ಹೂಡಿಕೆ ರೀತಿಯಲ್ಲೂ ಖರೀದಿ ಮಾಡುತ್ತಾರೆ ಎಂದರೆ ತಪ್ಪಲ್ಲ.

ಇಷ್ಟು ಪ್ರಾಮುಖ್ಯತೆ ಹೊಂದಿರುವ ಚಿನ್ನದ ಬೆಲೆ ಇಂದು ಎಷ್ಟಿದೆ ಎಂದು ನೋಡುವುದಾದರೆ, ಕಳೆದ ಕೆಲವು ತಿಂಗಳುಗಳಿಂದ ಚಿನ್ನದ ಬೆಲೆಯಲ್ಲಿ ವಿಪರೀತ ಏರಿಕೆ (Increase in Gold Rate) ಆಗಿರುವುದಂತೂ ನಿಜ. ಚಿನ್ನದ ಬೆಲೆ ಸುಮಾರು ₹20 ರೂಪಾಯಿ ವರೆಗು ಜಾಸ್ತಿಯಾಗಿತ್ತು. ಆದರೆ ನಿನ್ನೆಯ ಬೆಲೆಗೆ ಹೋಲಿಸಿ ನೋಡಿದರೆ, ಚಿನ್ನದ ಬೆಲೆಯಲ್ಲಿ ದೊಡ್ಡ ಬದಲಾವಣೆ ಇಲ್ಲ. ಹಾಗಿದ್ದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ನೋಡುವುದಾದರೆ..

ಮೊದಲಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bangalore) ಚಿನ್ನದ ಬೆಲೆ ಹೇಗಿದೆ ಎಂದು ತಿಳಿಯೋಣ..

  • ಇಂದು ಬೆಂಗಳೂರಿನಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಮ್ ಗೆ ₹4,745 ರೂಪಾಯಿಗಳು,
  • 10 ಗ್ರಾಮ್ ಗೆ ₹47,450 ರೂಪಾಯಿಗಳು.
  • 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಮ್ ಗೆ ₹5,800 ರೂಪಾಯಿಗಳು,
  • 10 ಗ್ರಾಮ್ ಗೆ ₹58,000 ರೂಪಾಯಿಗಳು.
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 1 ಗ್ರಾಮ್ ಗೆ ₹6,327 ರೂಪಾಯಿಗಳು,
  • 10 ಗ್ರಾಮ್ ಗೆ ₹63,270 ರೂಪಾಯಿಗಳು.

ಪಕ್ಕದ ರಾಜ್ಯವಾದ ಹೈದರಾಬಾದ್ (Hyderabad) ನಲ್ಲಿ ಇಷ್ಟೇ ಬೆಲೆ ಇದ್ದು

  • 18 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಮ್ ಗೆ ₹4,745 ರೂಪಾಯಿಗಳು.
  • 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಮ್ ಗೆ ₹5,800 ರೂಪಾಯಿಗಳು.
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 1 ಗ್ರಾಮ್ ಗೆ ₹6,327 ರೂಪಾಯಿಗಳು.

ಚೆನ್ನೈನಲ್ಲಿ (Chennai) ಬೆಲೆ ಏರಿಕೆ ಕಂಡುಬಂದಿದ್ದು.

  • 18 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಮ್ ಗೆ ₹4,792 ರೂಪಾಯಿಗಳು.
  • 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಮ್ ಗೆ ₹5,850 ರೂಪಾಯಿಗಳು.
  • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 1 ಗ್ರಾಮ್ ಗೆ ₹6,382 ರೂಪಾಯಿಗಳು.

ಇನ್ನು ಬೆಳ್ಳಿ ಬೆಲೆ ಬಗ್ಗೆ ನೋಡುವುದಾದರೆ.

  • ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹74,000 ಆಗಿದೆ.
  • ಚೆನ್ನೈನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹78,000 ಆಗಿದೆ.
  • ಹೈದರಾಬಾದ್ ನಲ್ಲೂ ಬೆಳ್ಳಿ ಬೆಲೆ ₹78,000 ಆಗಿದೆ.

ಇದಿಷ್ಟು ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆ ಆಗಿದ್ದು, ಚಿನ್ನ ಬೆಳ್ಳಿ ಖರೀದಿಗೆ ಪ್ಲಾನ್ ಮಾಡಿರುವವರು ಖರೀದಿ ಮಾಡಬಹುದು.

Gold and Silver Rate on February 1st, 2024

Leave a comment