Land Akarband: ನಿಮ್ಮ ಜಮೀನಿಗೆ ಆಕಾರ ಬಂದ ಎಲ್ಲಿ ಮತ್ತು ಹೇಗೆ ತೆಗೆದುಕೊಳ್ಳುವುದು ಮತ್ತು ಇದರ ಉಪಯೋಗವೇನು, ಪೂರ್ತಿ ಮಾಹಿತಿ ಇಲ್ಲಿದೆ.
Land Akarband: ಆಕಾರ ಬಂದ ದಾಖಲೆ ಅಥವಾ ಮೊಹರು ನಿಮ್ಮ ಜಮೀನಿಗೆ ಯಾವ ರೀತಿ ಸಂಬಂಧಪಟ್ಟಿರುತ್ತದೆ ಮತ್ತು ಅದನ್ನು ಹೇಗೆ ಪಡೆದುಕೊಳ್ಳುವುದು ಎಲ್ಲಿ ಪಡೆದುಕೊಳ್ಳುವುದು ಆಕಾರ ಬಂದ ಎಂದರೇನು ಯಾವ ಯಾವ ಸಮಯದಲ್ಲಿ ಈ ಒಂದು ಆಕಾರ ಬಂದ ನಿಮ್ಮ ಜಮೀನಿಗೆ ಉಪಯೋಗವಾಗುತ್ತದೆ. ಇದರ ಜೊತೆಗೆ ಆಕಾರ ಬಂದ್ ದಾಖಲೆಯನ್ನು ಎಲ್ಲಿ ಮತ್ತು ಹೇಗೆ ತೆಗೆದುಕೊಳ್ಳುವುದು ಮತ್ತು ಇದರಿಂದ ನಿಮ್ಮ ಜಮೀನಿಗೆ ಏಕೆ ಮುಖ್ಯವಾಗಿರುತ್ತದೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.
ಯಾವುದೇ ಒಂದು ಜಮೀನಿನ ಅಂತಿಮ ವಿಸ್ತೀರ್ಣ ಇರುವ ಪತ್ರವನ್ನು ಆಕರ ಬಂದ್ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಜಮೀನಿಗೆ ಕೊನೆಯ ಮೂಲ ಪತ್ರ ಆಗಿರುತ್ತದೆ. ಈ ಒಂದು ದಾಖಲೆಯಲ್ಲಿ ಭೂಮಿಯ ಒಟ್ಟು ವಿಸ್ತೀರ್ಣ ಮತ್ತು ಅದರ ಸರ್ವೇ ನಂಬರ್ ಭೂಮಿ ಹೊಂದಿರುವ ಮಾಲೀಕನ ಹೆಸರು ಮತ್ತು ಜಮೀನಿನ ಒಟ್ಟು ಸರ್ವೆ ನಂಬರ್ ವಿಸ್ತೀರ್ಣ ಮತ್ತು ಆ ಜಮೀನಿನಲ್ಲಿ ಎಷ್ಟು ಕರಾಬು ಜಾಗ ಇದೆ ಎಂದು ಪ್ರತಿಯೊಂದು ಸಹ ಸಂಪೂರ್ಣವಾಗಿ ಕೊಟ್ಟಿರುತ್ತಾರೆ.
ಆಕಸ್ಮಾತಾಗಿ ಈ ಒಂದು ಆಕಾರ್ ಬಂದ್ ಪತ್ರದಲ್ಲಿ ಏನಾದರೂ ತಪ್ಪು ಇದ್ದರೆ ನೀವೇನಾದರೂ ತಿದ್ದುಪಡಿ ಮಾಡಬೇಕು ಎಂದರೆ ಮುಖ್ಯ ನ್ಯಾಯಾಧೀಶರು ಅಂದರೆ ಕೋರ್ಟ್ ನಲ್ಲಿ ನೀವು ಇದನ್ನು ಕೋರ್ಟ್ ಆದೇಶದ ಮೇರೆಗೆ ತಿದ್ದುಪಡಿ ಮಾಡಿಕೊಳ್ಳಬೇಕಾಗುತ್ತದೆ. ಇದು ತೀರಾ ಅಪರೂಪದ ಘಟನೆಗಳು ಆಗಿರುತ್ತವೆ. ಮತ್ತು ಬಹು ಮುಖ್ಯವಾಗಿ ನೋಡುವುದಾದರೆ ನೀವು ಜಮೀನನ್ನು ಮಾರಾಟ ಮಾಡಲು ಅಥವಾ ತೆಗೆದುಕೊಳ್ಳಲು ಈ ಒಂದು ಆಕಾರ್ ಬಂದ್ ಪತ್ರ ನಿಮಗೆ ಬೇಕಾಗುತ್ತದೆ.
ಆಕಾರ ಬಂದ್ ಪತ್ರ ಇಲ್ಲ ಎಂದರೆ ನಿಮ್ಮ ಜಮೀನು ಯಾವುದೇ ಕಾರಣಕ್ಕೂ ನೊಂದಣಿ ಅಂದರೆ ರಿಜಿಸ್ಟರ್ ಆಗುವುದಿಲ್ಲ. ಇದರ ಅರ್ಥ ಇಷ್ಟೇ, ನೀವು ಜಮೀನನ್ನು ಮಾರಾಟ ಮಾಡಬೇಕು ತೆಗೆದುಕೊಳ್ಳಬೇಕು ಅಥವಾ ಭಾಗ ಮಾಡಿಕೊಳ್ಳಬೇಕು. ದಾನ ಮಾಡಬೇಕು ಎಂದರೆ ನಿಮಗೆ ಬಹು ಮುಖ್ಯವಾಗಿ ಈ ಒಂದು ಆಕಾರ ಬಂದ್ ಪತ್ರ ಬೇಕೇ ಬೇಕು.
ಇನ್ನು ನೀವು ಒಂದು ಆಕಾರ ಬಂದ್ ಪತ್ರವನ್ನು ಪಡೆಯಲು ಜಮೀನಿನ ಇದಕ್ಕೆ ಪತ್ರವನ್ನು ಹೇಗೆ ಮತ್ತು ಎಲ್ಲಿ ಪಡೆಯಬೇಕು ಎಂದು ನೋಡುವುದಾದರೆ ನಿಮ್ಮ ತಾಲೂಕಿನ ಆಫೀಸ್ ಗಳಲ್ಲಿ ಇರುವ ಜೆರಾಕ್ಸ್ ಅಂಗಡಿಗಳಲ್ಲಿ ಆಕಾರ್ ಬಂದ್ ದಾಖಲೆಗೋಸ್ಕರ ಅರ್ಜಿ ನಿಮಗೆ ಸಿಗುತ್ತದೆ. ನೀವು ಅದನ್ನು ತೆಗೆದುಕೊಂಡು ಅರ್ಜಿ ಜೊತೆ ಸಂಪೂರ್ಣವಾಗಿ ಭರ್ತಿ ಮಾಡಿ ಆಧಾರ ಕಾರ್ಡ್ ಪಹಣಿ ಮುಂತಾದ ದಾಖಲೆಗಳನ್ನು ನಮೂನೆ ಮಾಡಿ ತಹಸೀಲ್ದಾರ್ ಆಫೀಸಿನ ಸರ್ವೆ ಅಧಿಕಾರಿಗಳಿಗೆ ಈ ಒಂದು ಅರ್ಜಿಯನ್ನು ನೀವು ಸಲ್ಲಿಕೆ ಮಾಡಬೇಕು.
ಸರ್ವೆ ಡಿಪಾರ್ಟ್ಮೆಂಟ್ ಅವರು ಸಕಾಲದಲ್ಲಿ ಅರ್ಜಿ ಸಲ್ಲಿಸುತ್ತಾರೆ. ನೀವು ಈ ಒಂದು ಅರ್ಜಿಯನ್ನು ಸಲ್ಲಿಕೆ ಮಾಡಿದ ಬಳಿಕ 7 ರಿಂದ 15 ದಿನ ಆದ ಬಳಿಕ ನಿಮಗೆ ಆಕರ್ ಬಂದ ದಾಖಲೆ ಸಿಗುತ್ತದೆ . ಈ ಒಂದು ಆಕಾರ್ ಬಂದ್ ಪತ್ರದ ಶುಲ್ಕ ಬರಿ ರೂ.50 ಆಗಿರುತ್ತದೆ.ನೀವು ಈ ರೀತಿಯಾಗಿ ಆಕಾರ ಬಂದ್ ಪತ್ರ ಪಡೆಯಬಹುದು…