Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Karnataka Weather: ಶಿವರಾತ್ರಿ ವೇಳೆಗೆ ಶುರುವಾಗಬಹುದು ಮಳೆ! ಹವಾಮಾನ ಇಲಾಖೆಯಿಂದ ಹೊಸ ಮಾಹಿತಿ

ಇನ್ನು ಕೂಡ ಶಿವರಾತ್ರಿ ಹಬ್ಬ ಬಂದಿಲ್ಲ, ಬೇಸಿಗೆ ಕಾಲ ಕೂಡ ಶುರುವಾಗಿಲ್ಲ, ಅಷ್ಟರ ಒಳಗೆ ಚಳಿ ಕಡಿಮೆಯಾಗಿ ಬಿಸಿಲು ಜಾಸ್ತಿಯಾಗುತ್ತಿದೆ.

ಇನ್ನು ಫೆಬ್ರವರಿ ತಿಂಗಳು ನಡೆಯುತ್ತಿರುವಾಗಲೇ ಚಳಿ ಕಡಿಮೆಯಾಗಿ ಎಲ್ಲೆಡೆ ಬಿಸಿಲು ಶುರುವಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಈಗ ಮ್ಯಾಕ್ಸಿಮಾಮ್ ಟೆಂಪರೇಚರ್ ದಾಖಲಾಗುತ್ತಿದೆ. ಶಿವರಾತ್ರಿಗಿಂತಲು ಮೊದಲೇ 34-35℃ ತಾಪಮಾನ ಆಗುತ್ತಿದ್ದು, ಈಗಲೇ ಹೀಗಾದರೆ ಬೇಸಿಗೆ ಶುರುವಾದ ಮೇಲೆ ಹೇಗೋ ಎನ್ನುವ ಆತಂಕ ಜನರಲ್ಲಿ ಶುರುವಾಗಿದೆ. ಆದರೆ ಹವಾಮಾನ ಇಲಾಖೆ ಒಂದು ಸಂತೋಷದ ಸುದ್ದಿ ನೀಡಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ: Karnataka Weather

ಇನ್ನು ಕೂಡ ಶಿವರಾತ್ರಿ ಹಬ್ಬ ಬಂದಿಲ್ಲ, ಬೇಸಿಗೆ ಕಾಲ ಕೂಡ ಶುರುವಾಗಿಲ್ಲ, ಅಷ್ಟರ ಒಳಗೆ ಚಳಿ ಕಡಿಮೆಯಾಗಿ ಬಿಸಿಲು ಜಾಸ್ತಿಯಾಗುತ್ತಿದೆ. ರಾಜ್ಯದ ಹಲವೆಡೆ ಫೆಬ್ರವರಿ ತಿಂಗಳಿನಲ್ಲಿ ಬಿಸಿಲು ಅತಿಯಾಗಿದೆ ಎನ್ನುವ ವಿಚಾರ ಜನರಿಂದಲೂ ಕೇಳಿಬಂದಿದೆ. ಬೇಸಿಗೆ ಶುರುವಾದರೆ ಹೇಗೆ ತಡೆದುಕೊಳ್ಳೋದು ಎನ್ನುವ ಆತಂಕ ಕೂಡ ಹೆಚ್ಚಾಗಿದೆ. ಆದರೆ ರಾಜ್ಯದ ಜನತೆ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ .

Karnataka Weather Report: ರಾಜ್ಯದಲ್ಲಿ ಮುಂದಿನ 6 ದಿನಗಳು ಭಾರೀ ಮಳೆ! ಎಲ್ಲರೂ ಎಚ್ಚರಿಕೆಯಿಂದ ಇರಿ

ಮಾರ್ಚ್ ವೇಳೆಗೆ ಮಳೆ:

ಮುಂದಿನ ದಿನಗಳಲ್ಲಿ ತಾಪಮಾನ ವಾತಾವರಣ ಹೇಗಿರುತ್ತದೆ ಎನ್ನುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು ಮಾರ್ಚ್ ತಿಂಗಳ ವೇಳೆಗೆ ಬೆಂಗಳೂರಿನಲ್ಲಿ ಮಳೆ ಆಗಬಹುದು ಎಂದು ಸೂಚನೆ ನೀಡಲಾಗಿದೆ. ಇದರ ಅನುಸಾರ ಮಾರ್ಚ್ ತಿಂಗಳಿನಲ್ಲೇ ಮಳೆಗಾಲ ಶುರುವಾಗಬಹುದು ಎನ್ನಲಾಗಿದ್ದು, ರಾಜ್ಯದ ಹಲವೆಡೆ ಮಳೆ ಇರಲಿದೆ. ಇದರಿಂದ ವಾತಾವರಣ ತಂಪಾಗಿರಲಿದೆ.

ಮೇ ವೇಳೆಗೆ ಅತ್ಯಂತ ಹೆಚ್ಬು ಬಿಸಿಲು:

ಮಾರ್ಚ್ ನಲ್ಲೇನೋ ಮಳೆ ಇರಬಹುದು ಆದರೆ ಏಪ್ರಿಲ್ ಮೇ ವೇಳೆಗೆ ಬಿಸಿಲಿನ ತಾಪಮಾನ ಜಾಸ್ತಿ ಇರಬಹುದು ಎಂದು ಹೇಳಲಾಗುತ್ತಿದೆ. ಈ ವರ್ಷದ ಬೇಸಿಗೆಯಲ್ಲಿ ಬೆಂಗಳೂರಿನ ಗರಿಷ್ಠ ತಾಪಮಾನ 36℃ ಗಿಂತ ಜಾಸ್ತಿಯಾಗಬಹುದು ಎನ್ನಲಾಗಿದೆ. 2005 ರಲ್ಲಿ 35.9℃ ಟೆಂಪರೇಚರ್ ದಾಖಲಾಗಿತ್ತು, ಇದು ಬೆಂಗಳೂರಿನಲ್ಲಿ ದಾಖಲಾದ ಅತಿಹೆಚ್ಚಿನ ಟೆಂಪರೇಚರ್ ಆಗಿದ್ದು, ಈ ವರ್ಷ ಈ ರೆಕಾರ್ಡ್ ಬ್ರೇಕ್ ಆಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

Karnataka Budget 2024: ಫೆಬ್ರವರಿ 16ರಂದು ರಾಜ್ಯ ಸರ್ಕಾರದಿಂದ ಬಜೆಟ್ ಮಂಡನೆ, ಜನತೆಗೆ ಏನೆಲ್ಲಾ ಸಿಗಬಹುದು ಗೊತ್ತೇ?

ಮಳೆ ಕಡಿಮೆ:

ಹವಾಮಾನ ಇಲಾಖೆಯ ಪ್ರಕಾರ ಈ ತಿಂಗಳು ಬೆಂಗಳೂರಿನಲ್ಲಿ 7.1ಮೀಟರ್ ನಷ್ಟು ಮಳೆ ಆಗಬೇಕಿತ್ತು, ಆದರೆ ಆಗಿಲ್ಲ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಬೀಸಬೇಕಿದ್ದು, ಅದರಿಂದ ಬೆಂಗಳೂರಿನಲ್ಲಿ ಟೆಂಪರೇಚರ್ ಕಡಿಮೆ ಅಗಬೇಕು. ಹಿಂದಿನ 2 ದಿನಗಳಿಂದ ಇದೇ ರೀತಿ 1℃ ಟೆಂಪರೇಚರ್ ಕಡಿಮೆ ಆಗಿದೆ. ಆದರೆ ಫೆಬ್ರವರಿ ತಿಂಗಳ ಕೊನೆಯಲ್ಲಿ ಮತ್ತೆ ಟೆಂಪರೇಚರ್ ಏರಿಕೆ ಆಗಬಹುದು.

ಬೇಸಿಗೆಯಲ್ಲಿ ಮಳೆ:

ಹವಾಮಾನ ಇಲಾಖೆಯ ಪ್ರಕಾರ ಬೇಸಿಗೆ ವೇಳೆ ಇಡೀ ರಾಜ್ಯದಲ್ಲಿ 50-60% ಅಷ್ಟು ಮಳೆ ಇರಲಿದೆ. ಬೆಂಗಳೂರಿನಲ್ಲಿ ಜಾಸ್ತಿ ಮಳೆಯಾಗಬಹುದು ಎಂದು ಸೂಚಿಸಲಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಕಡಿಮೆ ಆಗಲಿದೆ.

Rain may start during Shivaratri! New information from Meteorological Department

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment