Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gruha Lakshmi Scheme: ಗೃಹ ಲಕ್ಷ್ಮೀ ಹಣ ಇನ್ನು ಬಂದಿಲ್ಲ ಅಂದ್ರೆ ಚಿಂತೆ ಬಿಡಿ, ಸುಲಭವಾಗಿ ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿಕೊಳ್ಳಿ.

If you did not get the Gruha Lakshmi amount, you can check the status on your mobile like this.

Gruha Lakshmi Scheme: ಕಾಂಗ್ರೆಸ್ ಸರ್ಕಾರ ಈ ಬಾರಿ ತಾವು ಅಧಿಕಾರಕ್ಕೆ ಬಂದರೆ ಐದು ಗ್ಯಾರೆಂಟಿ ಯೋಜನೆಗಳನ್ನು ಜರಿಗೆ ತರುವುದಾಗಿ ಶಪತ ಮಾಡಿತ್ತು. ಇನ್ನು ಅದರಂತೆ ಅಧಿಕಾರಕ್ಕೆ ಬಂದ ನಂತರ ಒಂದಲ್ಲ ಎರಡಲ್ಲ ಈಗಾಗಲೇ ನಾಲ್ಕು ಯೋಜನೆಗಳಿಗೆ ಚಾಲನೆ ನೀಡಿದೆ. ಇನ್ನು ಅದರಂತೆ ಐದನೇ ಯೋಜನೆ ಯುವನಿಧಿಗೆ ಕೂಡ ಇದೆ ವರ್ಷದ ಕೊನೆಯಲ್ಲಿ ಚಾಲನೆ ನೀಡುವುದಾಗಿ ಸರ್ಕಾರ ಮಾಹಿತಿ ನೀಡಿದೆ. ರಾಜ್ಯ ಸರ್ಕಾರದ ಉತ್ತಮ ಯೋಜನೆಗಳ ಪೈಕಿ ಗೃಹ ಲಕ್ಷ್ಮೀ ಯೋಜನೆಯು ಸಹ ಒಂದಾಗಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ ಮನೆಯ ಗೃಹ ಲಕ್ಷ್ಮೀ ಅಂದರೆ ಮನೆಯ ಯಜಮಾನಿಯ ಖಾತೆಗೆ ನೇರವಾಗಿ ಪ್ರತಿ ತಿಂಗಳು 2000 ರೂಗಳನ್ನು ಜಮಾ ಮಾಡಲಾಗುತ್ತದೆ.

ಇನ್ನು ಗೃಹ ಲಕ್ಷ್ಮೀ ಯೋಜನೆಯ ಲಾಭ ಪಡೆಯಲು ಎಲ್ಲರೂ ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದರು. ಇನ್ನು ಆಗಸ್ಟ್ 30 ರಂದು ಈ ಗೃಹ ಲಕ್ಷ್ಮೀ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುವ ಮೂಲಕ, ಈ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳಾ ಫಲಾನುಭವಿಗಳ ಖಾತೆಗೆ 2000 ರೂಗಳನ್ನು ಜಮಾ ಮಾಡಲಾಗಿದೆ. ಇನ್ನು ಹಣ ಪಡೆದ ಅನೇಕ ಮಹಿಳೆಯರು ಇದೀಗ ಈ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದ ಈ ಹಣದ ಕಾರಣದಿಂದ ಅನೇಕ ಜನರ ಮನೆಯ ಪರಿಸ್ಥಿತಿ ಕೊಂಚ ಸ್ಥಿರವಾಗುವಲ್ಲಿ ಸಹಾಯ ಮಾಡುತ್ತದೆ.

ಇನ್ನು ಇದೀಗ 1.10 ಕೋಟಿಗೂ ಹೆಚ್ಚು ಮಹಿಳೆಯರು ಈ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಇವುಗಳಲ್ಲಿ ಕೇವಲ ಅರ್ಧ ಫಲಾನುಭವಿಗಳ ಖಾತೆಗೆ ಮಾತ್ರ ಹಣ ಜಮಾ ಆಗಿದ್ದು, ಇನ್ನುಳಿದವರು ಈ ಬಗ್ಗೆ ಚಿಂತಿಸುತ್ತಿದ್ದಾರೆ. ಇನ್ನು ತಾವು ಸಲ್ಲಿಸಿರುವ ಅರ್ಜಿಯ ಡಿಬಿಟಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ನೀಡುತ್ತೇವೆ ಬನ್ನಿ..

ನಿಮ್ಮ ಖಾತೆಗೆ ಗೃಹ ಲಕ್ಷ್ಮಿ ಹಣ ಬಂದಿಲ್ಲ ಅಂದರೆ ಈ ರೀತಿ ಚೆಕ್ ಮಾಡಿ:

ನಿಮ್ಮ ಡಿಬಿಟಿ ಸ್ಟೇಟಸ್ (DBT Status) ಚೆಕ್ ಮಾಡಲು ನೀವು, ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಬೇಕು. ಇನ್ನು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೆ ನಿಮ್ಮ ಮೊಬೈಲ್ ನಂಬರ್ ಅನ್ನು ನೊಂದಾಯಿಸಿಕೊಳ್ಳಿ, ನಂತರ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ ಅದನ್ನು ನೀವು ಎಂಟರ್ ಮಾಡಿ. ನಂತರ ನಿಮ್ಮ ಅನ್ನಭಾಗ್ಯ ಡಿಬಿಟಿ ಸ್ಟೇಟಸ್  ಚೆಕ್ ಮಾಡಲು ನಿಮ್ಮ ಪಡಿತರ ಚೀಟಿಯ ಸಂಖ್ಯೆ ಎಂಟರ್ ಮಾಡಿ.

ಪರಿಶೀಲಿಸಿದರೆ ನಿಮ್ಮ ಅರ್ಜಿಯ ಸ್ಟೇಟಸ್ ನಿಮಗೆ ಕಂಡು ಬರುತ್ತದೆ. ಇನ್ನು ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದಾದರೂ ತಪ್ಪುಗಳು ಇದ್ದಲ್ಲಿ ನಿಮ್ಮ ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ರಿಜೆಕ್ಟ್ ಆಗಿರಬಹುದು, ನಿಮ್ಮ ಪಡಿತರ ಚೀಟಿಯ ತಿದ್ದುಪಡಿ ಮಾಡಿಸಿಕೊಂಡು ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಿ ಇದರ ಲಾಭ ಪಡೆಯಿರಿ. DBT Status Online.

If you did not get the Gruha Lakshmi amount you can check the status on your mobile like this
If you did not get the Gruha Lakshmi amount, you can check the status on your mobile like this. image credit to original sources.
Leave a comment