Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Post Office Scheme: ನಿಮ್ಮ ಮಗುವಿನ ಹೆಸರಿನಲ್ಲಿ,  ಪೋಸ್ಟ್ ಆಫೀಸ್ ನ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದರೆ 45 ಲಕ್ಷ ಲಾಭ ಪಡೆಯಬಹುದು.

If you invest in this post office scheme, you will get three times the profit at maturity.

Post Office Scheme: ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೂಡಿಕೆ ಮಾಡಿ ಹಣ ಉಳಿಸುವುದು ಬಹಳ ಮುಖ್ಯ. ಇನ್ನು ಅಲ್ಪಾವಧಿಯಲ್ಲಿ ಅಧಿಕ ಲಾಭ ಪಡೆಯಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಯಾವ ಯೋಜನೆಯಲ್ಲಿ ಅಥವಾ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದರೆ ಉತ್ತಮ ಆದಾಯ ಪಡೆಯಬಹುದು ಎನ್ನುವುದರ ಬಗ್ಗೆ ಅನೇಕರಿಗೆ ಹರಿವು ಇರುವುದಿಲ್ಲ. ಇನ್ನು ಕೇಂದ್ರ ಸರ್ಕಾರದಿಂದ ಅನೇಕ ಯೋಜನೆಗಳನ್ನು ಇದೀಗ ಜಾರಿಗೆ ತರಲಾಗಿದೆ. ಇಂತಹ ಸರಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಲಾಭ ಪಡೆಯುವುದರ ಜೊತೆಗೆ ನಿಮ್ಮ ಹೂಡಿಕೆ ಕೂಡ ಸುರಕ್ಷಿತವಾಗಿರುತ್ತದೆ.

ಇನ್ನು ಸುಕನ್ಯಾ ಸಮೃದ್ಧಿ ಯೋಜನೆಯ ಮೂಲಕ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಅವರ ಪೋಷಕರು ಈ ಯೋಜನೆಯ ಅಡಿಯಲ್ಲಿ ಹಣ ಹೂಡಿಕೆ ಮಾಡಿ ಅವರ ವಿಧ್ಯಾಭ್ಯಾಸ ಹಾಗೂ ಮದುವೆ ಖರ್ಚುಗಳನ್ನು ನೋಡಿಕೊಳ್ಳುವ ಆಲೋಚನೆಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಸದ್ಯ ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ನೀವು ನಿಮ್ಮ ಹೂಡಿಕೆಯ ಮೊತ್ತಕ್ಕೆ ತ್ರಿಗುಣ ಲಾಭವನ್ನು ಪಡೆಯಬುಹುದು. ಇನ್ನು ಈ ಯೋಜನೆಯು ಸರ್ಕಾರದ ಜನಪ್ರಿಯ ಉಳಿತಾಯ ಯೋಜನೆಗಳ ಪೈಕಿ ಒಂದಾಗಿ ಗುರುತಿಸಿಕೊಂಡಿದೆ.

ನೀವು ಈ ಯೋಜನೆಯ ಅಡಿಯಲ್ಲಿ ಸುಮಾರು 15 ಲಕ್ಷ ರೂಪಾಯಿಗಳನ್ನು ಸುಮಾರು 15 ವರ್ಷಗಳ ಕಾಲ ಹೂಡಿಕೆ ಮಾಡಿದರೆ ನೀವು ನಿಮ್ಮ ಖಾತೆ ಮೆಚ್ಯೂರಿಟಿ ಪಡೆದುಕೊಂಡ ನಂತರ ನೀವು ಸುಮಾರು 45 ಲಕ್ಷ ಆದಾಯವನ್ನು ಪಡೆಯುತ್ತೀರಿ. ಇದೀಗ ಈ ಯೋಜನೆಯ ಬಡ್ಡಿ ದರವನ್ನು ಇದೀಗ ಕೇಂದ್ರ ಸರ್ಕಾರವು ಇದೆ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಹೆಚ್ಚಿಸಿದ್ದು, ಕಳೆದ ವರ್ಷ 7.6% ಬಡ್ಡಿ ದರ ಇತ್ತು, ಆದರೆ ಇದೀಗ 40 ಬೋನಸ್ ಪಾಯಿಂಟ್ ಗಳ ಹೆಚ್ಚಳದಿಂದ ಇದೀಗ ಒಟ್ಟು 8% ಬಡ್ಡಿ ದರವನ್ನು ಈ ಯೋಜನೆಯ ಅಡಿಯಲ್ಲಿ ಪಡೆಯಬಹುದು. Sukanya Samriddhi Yojana.

ಪೋಷಕರು ಈ ಯೋಜನೆಯ ಅಡಿಯಲ್ಲಿ ಸುಮಾರು 1.5 ಲಕ್ಷದವರೆಗೂ ಗರಿಷ್ಟ ಠೇವಣಿ ಮಾಡುವ ಅವಕಾಶವನ್ನು ನೀಡಲಾಗಿದೆ. ಇನ್ನು ಈ ಯೋಜನೆಯ ಲಾಭ ಪಡೆಯಲು ಹೆಣ್ಣು ಮಗುವಿನ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇರಬೇಕು. ಹಾಗೆ ಯೋಜನೆ 15 ವರ್ಷಗಳ ನಂತರ ಮೆಚ್ಯೂರಿಟಿ ಪಡೆಯಲಿದ್ದು, ಆ ವರೆಗೆ ಹೂಡಿಕೆ ಮಾಡಬೇಕು. ಇನ್ನು ನೀವು ನಿಮ್ಮ ಹೂಡಿಕೆಯನ್ನು 21 ವರ್ಷಗಳವರೆಗೂ ಮುಂದುವರೆದರೆ ನೀವು ಅಧಿಕ ಲಾಭವನ್ನು ಪಡೆಯಬಹುದು. ಹೌದು, ನೀವು ಪ್ರತಿ ವರ್ಷ 1.5 ಲಕ್ಷ ರೂಪಾಯಿಯನ್ನು ಸುಮಾರು 21 ವರ್ಷಗಳಿಗೆ ಉಳಿಸಿದರೆ ನೀವು ಒಟ್ಟು 69,80,093 ಲಕ್ಷ ರೂಪಾಯಿಗಳನ್ನು ಪಡೆಯುತ್ತೀರಿ.

If you invest in this post office scheme, you will get three times the profit at maturity.
If you invest in this post office scheme, you will get three times the profit at maturity.  Image credited to original sources.
Leave a comment