Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಯಾವುದೇ ಕಾರಣಕ್ಕೂ ಫ್ರೀ ಬಸ್ ನಿಲ್ಲಲ್ಲ ನಾನೇ ಗ್ಯಾರಂಟಿ ಎಂದ ಸಿಎಂ ಸಿದ್ದರಾಮಯ್ಯ!!

Shakti Yojana: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯನ್ನು ಕುರಿತು ಕೆಲವರು ತೆಗೆದುಹಾಕುವ ಪ್ರಯತ್ನವನ್ನು ಕೂಡ ಮಾಡಿದರು. ಇಷ್ಟೇ ಅಲ್ಲದೆ ಜೊತೆಗೆ ಸುಪ್ರೀಂ ಕೋರ್ಟ್ ಮೊರೆ ಕೂಡ ಹೋದರು. ಆದರೆ ಈ ವಿಷಯವನ್ನು ಕುರಿತಾಗಿ ಮೌನವಾಗಿ ನೋಡುತ್ತಿದ್ದ ಸಿಎಂ ಸಿದ್ದರಾಮಯ್ಯನವರು ಇದೀಗ ಉತ್ತರವನ್ನು ಕೊಟ್ಟಿದ್ದಾರೆ ಅದೇನೆಂದರೆ ಟ್ವಿಟ್ ಮೂಲಕ ಸಿಎಂ ಸಿದ್ದರಾಮಯ್ಯನವರು ಪ್ರತಿಕ್ರಿಯೆ ನೀಡಿದ್ದು.

ಯಾವುದೇ ಕಾರಣಕ್ಕೂ ಇವರ ಗ್ಯಾರಂಟಿ ಯೋಜನೆಗಳು ಬಿಡುಗಡೆಯಾಗುವುದಿಲ್ಲ ಎಂದು ಸೋಶಿಯಲ್ ಮೀಡಿಯಾ ಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದರು. ಆದರೆ ಇದೀಗ ಅವರು ಮಾಡಿರುವ ಯೋಜನೆಗಳು ಕೇವಲ ಕಾಲ್ಪನಿಕ ಸಂಪೂರ್ಣವಾಗಿ ಇರುವುದಿಲ್ಲ ಎಂದು ಎಲ್ಲೆಡೆ ಅಪಪ್ರಚಾರ ಮಾಡಿಕೊಂಡು ಬರ್ತಾ ಇದ್ದಾರೆ. ಇಂತಹ ಸುಳ್ಳು ಮಾತಿಗಳಿಗೆ ನೀವು ಕಿವಿ ಕೊಡಬೇಡಿ ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ನಿಲ್ಲುವುದಿಲ್ಲ.

ನಮ್ಮದು ನುಡಿದಂತೆ ನಡೆಯುವ ಸರ್ಕಾರ ಇದಕ್ಕೆ ನಾನೇ ಗ್ಯಾರಂಟಿ ಎಂದು ಸಿಎಂ ಸಿದ್ದರಾಮಯ್ಯನವರು ತಮ್ಮ ಮಾತಿನ ಮೂಲಕ ಜನಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತಿಕ್ರಿಯಿಸಿ ಒಂದು ರಾಜಕೀಯ ಪಕ್ಷ ಶಕ್ತಿ ಯೋಜನೆಯನ್ನು ನಿಲ್ಲಿಸುತ್ತದೆ ಎಂದು ಆರೋಪವನ್ನು  ಹೇಳುತ್ತಿದೆ. ಈ ಯೋಜನೆಯ ಯಶಸ್ಸನ್ನು ಸಹಿಸಿಕೊಳ್ಳಲು ಆಗದೆ ಇರುವ ವಿರೋಧ ಪಕ್ಷದವರು ಈ ರೀತಿ ಮಾಡುತ್ತಿದ್ದಾರೆ ಕೇವಲ ಐದು ವರ್ಷ ಮಾತ್ರ ಅಲ್ಲ ಮುಂದಿನ 10 ವರ್ಷಗಳ ಕಾಲ ಶಕ್ತಿ ಯೋಜನೆ ಮುಂದುವರೆಯುತ್ತದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.

ಈ ಯೋಜನೆಯ ಲಾಭವನ್ನು ಪಡೆಯಲು ಸದ್ಯಕ್ಕೆ ಯಾರು ಕೂಡ ಪಾಸ್ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ. ಮುಂದಿನ ಐದು ವರ್ಷಗಳ ಕಾಲವೂ ಸಹ ನಾವೇ ಅಧಿಕಾರಕ್ಕೆ ಬರ್ತೀವಿ ಹಾಗಾಗಿ ರಾಜ್ಯಾದ್ಯಂತ ಎಲ್ಲಾ ಮಹಿಳೆಯರು ಕರ್ನಾಟಕ ರಾಜ್ಯದ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ಇದರಲ್ಲಿ ಯಾವುದೇ ರೀತಿಯ ಗೊಂದಲಗಳು ಜನಗಳಿಗೆ ಬೇಕಾಗಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಈ ರೀತಿಯಾಗಿ ಸಚಿವರು ಸೂಚನೆ ನೀಡಿತು ಸಾರ್ವಜನಿಕರ ಶಕ್ತಿ ಯೋಜನೆ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಗೊಂದಲಕಾರಿ ಸಂದೇಶಗಳನ್ನು ನಂಬಬಾರದು. ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯು ಎಂದಿಗೂ ಕೂಡ
ನಿಲ್ಲುವುದಿಲ್ಲ ಬದಲಾಗಿ ಎಂದಿನಂತೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

Leave a comment