ಅತಿ ಶೀಘ್ರದಲ್ಲಿ ಶುರುವಾಗಲಿದೆ ಬಿಗ್ ಬಾಸ್ ಸೀಸನ್ 10, ಈ ಸರಿ ಬರಲಿರುವ ಟಾಪ್ ಸ್ಪರ್ಧಿಗಳು ಇವರೇ ನೋಡಿ.
Bigg Boss Kannada Season 10: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಶುರುವಾಗುವ ಹಾಗೆ ಈ ಬಾರಿ ಕೂಡ ಬಿಗ್ ಬಾಸ್ ಸೀಸನ್ 10 ಯಾವಾಗ ಶುರುವಾಗುತ್ತದೆ ಎಂದು ಕಲರ್ಸ್ ಕನ್ನಡ ವಾಹಿನಿ ಮಾಹಿತಿ ಇನ್ನು ಬಿಡುಗಡೆ ಮಾಡಿಲ್ಲ. ಆದರೆ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಬಿಗ್ ಬಾಸ್ ಸೀಸನ್ ಹತ್ತರ ಆರಂಭಕ್ಕೆ ಇನ್ನು ಕೇವಲ ಕೆಲವೇ ದಿನಗಳ ಮಾತ್ರ ಬಾಕಿ ಉಳಿದಿದೆ.
ಈಗ ನಡೆಯುತ್ತಿರುವ ಅನುಬಂಧ ಅವಾರ್ಡ್ ಕಾರ್ಯಕ್ರಮವು ಮುಗಿದ ನಂತರ ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾಗುವುದು ಖಚಿತವಾಗಿದೆ. ಇನ್ನು ಕನ್ನಡದ ಹೆಸರಾಂತ ಶೋ ಆಗಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಸಲು ಬಹಳಷ್ಟು ಜನರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದೃಷ್ಟ ಎಂಬುದು ಎಲ್ಲರ ಕೈ ಇರುವುದಿಲ್ಲ ಹಾಗಾದರೆ ಈ ಬಾರಿ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳಾಗಿ ಯಾರು ಹೋಗುತ್ತಾರೆ ಎಂದು ನೋಡೋಣ ಬನ್ನಿ.
ಪ್ರತಿ ಬಾರಿ ಮಾಡಿದಂತೆ ಈ ಬಾರಿ ಸ್ಪರ್ಧಿಗಳ ವಿಚಾರದಲ್ಲಿ ಸ್ವಲ್ಪ ವಾಹಿನಿ ತಲೆಕೆಡಿಸಿಕೊಂಡು ಸ್ಪರ್ಧಿಗಳನ್ನು ಹುಡುಕುತಿದೆ ಯಾಕೆಂದರೆ ಇದರಿಂದ ವಾಹಿನಿಯ ಪ್ರಶಂಸೆಗೆ ಧಕ್ಕೆ ಉಂಟಾಗುವುದು ಸಹ ಪ್ರಮುಖ ಅಂಶವಾಗಿದೆ. ವಾಹಿನಿಯು ಈ ಬಾರಿ ಒಳ್ಳೆಯ ರೀತಿಯಲ್ಲಿ ಸಕ್ಸಸ್ ಕಂಡವರನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕರೆತರಲು ಸಜ್ಜಾಗಿದೆ.
ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮದ ಕಡೆಯಿಂದ ಹಲವರಿಗೆ ಕರೆಯೋಲೆ ಕೂಡ ಹೋಗಲಾಗಿದೆ ಎಂದು ಹೇಳಲಾಗಿದೆ. ಮೊದಲಿಗೆ ನೋಡುವುದಾದರೆ ಶಿವರಾಜ ಕೆ ಆರ್ ಪೇಟೆ ಅವರಗೆ ಇರುವಂತಹ ಟ್ಯಾಲೆಂಟ್ ಕಾಮಿಡಿ ಮತ್ತು ಜನ ಮಂಡನೆಯನ್ನು ನೋಡಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಲಾಗಿದೆ.
ಇನ್ನು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳ ಫೇಮಸ್ ಆಗಿರುವ ಡಾ. ಬ್ರೋ ಅವರಿಗೂ ಕೂಡ ಮನವಿ ಹೋಗಿದೆಯಂತೆ. ಏಕೆಂದರೆ ವೀಕೆಂಡ್ ವಿಥ್ ರಮೇಶ್(weekend with ramesh) ಕಾರ್ಯಕ್ರಮದಲ್ಲಿ ಇವರನ್ನು ಕರೆಸುವ ಪ್ರಯತ್ನ ಮಾಡಿದಾಗ ವಾಹಿನಿ ತಿರಸ್ಕರಿಸಿತು. ಹೀಗಾಗಿ ಡಾ. ಬ್ರೋ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಸೂಚನೆಗಳು ಎದ್ದು ಕಾಣುತ್ತಿವೆ.
ಮತ್ತು ಕಲರ್ಸ್ ಕನ್ನಡ ವಾಹಿನಿಯ ಮೂಲಕ ತಮ್ಮ ಕಾಮಿಡಿ ಪಾತ್ರಗಳ ಮೂಲಕ ಗೆದ್ದು ಪ್ರಸಂಶೇ ಗಳಿಸಿರುವ ಪ್ರಕಾಶ್ ಅವರನ್ನು ಕೂಡ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕರೆಯೋಲೆ ನೀಡಲಾಗಿದೆ. ಸ್ಯಾಂಡಲ್ವುಡ್ ಗೆ ನಿರೂಪಕಿ ಆಗಿ ಎಂಟ್ರಿ ಕೊಟ್ಟಿರುವ ಜಾನ್ಹವಿ ಕೂಡ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಯಾಗಲಿದ್ದಾರೆ. ಇನ್ನು ಕಲರ್ಸ್ ಕನ್ನಡ ವಾಹಿನಿಯ ಜೊತೆಗೆ ಅಸೋಸಿಯೇಟ್ ಆಗಿರುವ ಮಾಸ್ಟರ್ ಆನಂದ ಅವರ ತಮ್ಮ ಅರುಣ್ ಹರಿಹರನ್ ಕೂಡ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುವ ಸಾಧ್ಯತೆ ಇದೆ.
ಇನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲಾಗುತ್ತಿರುವ ಬುಲೆಟ್ ಅವರ ಮಗ ರಕ್ಷಕ್ ಕೂಡ ಈ ಬಾರಿ ಬಿಗ್ ಬಾಸ್ ಸ್ಪರ್ಧಿ ಎಂದು ಹೇಳಲಾಗುತ್ತಿದ್ದು ಸಾಕಷ್ಟು ಟ್ರೋಲ್ ಮತ್ತು ರೋಸ್ಟ್ ಆಗುತ್ತಿರುವ ರಕ್ಷಕ್ ಅವರು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇದ್ದರೆ ಒಳ್ಳೆಯ ಸಂಚಿಕೆಗಳು ಆಗುತ್ತವೆ ಎಂಬುದು ಬಿಗ್ ಬಾಸ್ ಅಭಿಪ್ರಾಯ. ಇನ್ನು ಮೊನ್ನೆಯಷ್ಟೇ ಜೈ’ಲಿಗೆ ಗುರಿಯಾಗಿದ್ದ ಅಭಿನಯ ಅವರು ಕೂಡ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹೆಸರು ಪಡೆದ ಕಾಗೆ ಆರಿಸಿ ಡ್ರೋನ್ ಆರಿಸಿ ಹೆಸರು ಪಡೆದಿರುವ ಪ್ರತಾಪ್ ಕೂಡ ಬಿಗ್ ಬಾಸ್ ಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ . ಒಳ್ಳೆಯ ಸ್ಪರ್ಧಿಗಳು ಇದ್ದರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಳ್ಳೆಯದು ಇಲ್ಲವಾದರೆ ಜನರು ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡದೆ ತಿರಸ್ಕಾರ ಮಾಡುತ್ತಾರೆ ಎನ್ನುವ ಭಯ ಕೂಡ ಬಿಗ್ ಬಾಸ್ ಆಯೋಜಕರಿಗೆ ಇರುವುದರಿಂದ ಸ್ಪರ್ಧಿಗಳ ಆಯ್ಕೆಯಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಿದೆ.
[…] ಅತಿ ಶೀಘ್ರದಲ್ಲಿ ಶುರುವಾಗಲಿದೆ ಬಿಗ್ ಬಾಸ್… […]