ನಿಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದ್ದರೆ ಹೆದರುವ ಅಗತ್ಯವಿಲ್ಲ! ಸರ್ಕಾರ ಇದೀಗ ಹೆಣ್ಣು ಮಗುವಿನ ಸಂಪೂರ್ಣ ಜವಾಬ್ದಾರಿ ವಹಿಸಲಿದೆ! ಇಂದೇ ಅರ್ಜಿ ಸಲ್ಲಿಸಿ.
ಈ ಯೋಜನೆಯ ಅಡಿಯಲ್ಲಿ ಹೆಣ್ಣು ಮಕ್ಕಳು ಉಚಿತವಾಗಿ ವಿಧ್ಯಾಭ್ಯಾಸವನ್ನು ಪಡೆಯಬಹುದು. ಹೆಣ್ಣು ಮಗು 6 ನೇ ತರಗತಿ ವ್ಯಾಸಂಗ ಮಾಡುವಾಗ ನಂತರ ಆಕೆಗೆ 3000 ರೂಗಳನ್ನು, ಮತ್ತು 8 ನೇ ತರಗತಿಗೆ
Bhagya Lakshmi Bond: ನಮ್ಮ ದೇಶದಲ್ಲಿ ಹೆಣ್ಣು ಮಗು ಜನಿಸಿದರೆ, ಆ ಮಗುವನ್ನು ಹೊರೆ ಎಂದು ಭಾವಿಸುತ್ತಾರೆ. ಇನ್ನು ಅನೇಕರು ಹೆಣ್ಣು ಮಕ್ಕಳು ಜನಿಸುವ ಮುನ್ನವೇ ಭ್ರೂಣ ಹ’ತ್ಯೆಗೆ ಪ್ರಯತ್ನಿಸುತ್ತಾರೆ. ಇನ್ನು ಕೆಲವರು ಹೆಣ್ಣು ಮಕ್ಕಳು ಜನಿಸಿದ ನಂತರ ಅದನ್ನು ತಿರಸ್ಕರಿಸುತ್ತಾರೆ. ಇನ್ನು ಇಂತಹವುಗಳನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಮೂಲಕ ಬಡ ಪೋಷಕರು ತಮ್ಮ ಹೆಣ್ಣು ಮಕ್ಕಳ ವಿದ್ಯಾಭ್ಯಾಸ (Girl Education) ಹಾಗೂ ಮದುವೆ ಅಂತಹ ಖರ್ಚುಗಳ ವೆಚ್ಚವನ್ನು ಸರ್ಕಾರವು ನೋಡಿಕೊಳ್ಳಲಿದೆ.
ರಾಜ್ಯ ಸರ್ಕಾರವು 2017 ರಲ್ಲಿ ಹೆಣ್ಣು ಮಕ್ಕಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಯನ್ನು (Bhagya Lakshmi Bond Scheme) ಜಾರಿಗೆ ತಂದಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ, ಆ ಹೆಣ್ಣು ಮಗುವಿಗೆ 50000 ಬಾಂಡ್ ಅನ್ನು ನೀಡಲಾಗುವುದು. ಇನ್ನು ಹೆಣ್ಣು ಮಗುವಿನ ತಾಯಿಗೆ ಸುಮಾರು 5100 ರೂಗಳನ್ನು ನೀಡಲಾಗುವುದು. ಹೆಣ್ಣು ಮಕ್ಕಳ ಸಂಪೂರ್ಣ ವಿಧ್ಯಾಭ್ಯಾಸ ಖರ್ಚನ್ನು ಸರ್ಕಾರವೇ ನೋಡಿಕೊಳ್ಳಲಿದ್ದು, ಆ ಹೆಣ್ಣು ಮಗುವಿಗೆ 21 ವರ್ಷ ತುಂಬಿದ ನಂತರ ಆಕೆಗೆ ಸುಮಾರು 2 ಲಕ್ಷ ಹಣವನ್ನು ನೀಡಲಾಗುತ್ತದೆ.
ಈ ಯೋಜನೆಯ ಅಡಿಯಲ್ಲಿ ಹೆಣ್ಣು ಮಕ್ಕಳು ಉಚಿತವಾಗಿ ವಿಧ್ಯಾಭ್ಯಾಸವನ್ನು ಪಡೆಯಬಹುದು. ಹೆಣ್ಣು ಮಗು 6 ನೇ ತರಗತಿ ವ್ಯಾಸಂಗ ಮಾಡುವಾಗ ನಂತರ ಆಕೆಗೆ 3000 ರೂಗಳನ್ನು, ಮತ್ತು 8 ನೇ ತರಗತಿಗೆ 5 ಸಾವಿರ ಮತ್ತು, 10 ನೇ ತರಗತಿ ವ್ಯಾಸಂಗದ ವೇಳೆ 7 ಸಾವಿರ ಮತ್ತು ಪಿಯುಸಿ ಓದುವ ವೇಳೆ 8 ಸಾವಿರ ಹಣವನ್ನು ಸರ್ಕಾರದಿಂದ ನೀಡಲಾಗುತ್ತದೆ. ಹೆಣ್ಣು ಮಗಳು ತನ್ನ ವಿದ್ಯಾಭ್ಯಾಸಕ್ಕಾಗಿ ಒಟ್ಟು 23 ಸಾವಿರ ಹಣವನ್ನು ಸರ್ಕಾರದ ಕಡೆಯಿಂದ ಪಡೆಯುತ್ತಾಳೆ.
ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.
ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸಲು, ಪೋಷಕರ ವಾರ್ಷಿಕ ಆದಾಯ (Annual Income) 2 ಲಕ್ಷಕ್ಕಿಂತ ಕಡಿಮೆ ಇರಬೇಕು. ಇನ್ನು ಹೆಣ್ಣು ಮಗುವಿನ ತಾಯಿಯ ವೈಯಸ್ಸು 18 ಕ್ಕಿಂತ ಹೆಚ್ಚಿರಬೇಕು. ಇನ್ನು ಹೆಣ್ಣು ಮಗು ಜನಿಸಿದ ನಂತರ http://wcd.nic.in ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿಯನ್ನು ಡೌನ್ ಲೋಡ್ ಮಾಡಿ ಭರ್ತಿ ಮಾಡಿ, ಅದರ ಜೊತೆಗೆ ಮಗುವಿನ ಜನನ ಪ್ರಮಾಣ (Child Birth Certificate) ಪತ್ರವನ್ನು ತೆಗೆದುಕೊಂಡು ನಂತರ ಅದನ್ನು ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ (Anganawadi Kendra) ನೀಡಬೇಕು.
ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.
ನಿಮ್ಮ ಮಗುವಿನ ಜನನ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Income and Caste Certificate), ಪೋಷಕರ ಮದುವೆ ಪ್ರಮಾಣ ಪತ್ರ (Parents Marriage Certificate), ಪೋಷಕರ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಬ್ಯಾಂಕ್ ಪಾಸ್ ಬುಕ್ ದಾಖಲೆಗಳನ್ನು ಯೋಜನೆಯ ಅರ್ಜಿಯ ಜೊತೆಗೆ ಅಂಗನವಾಡಿ ಕೇಂದ್ರಕ್ಕೆ ನೀಡಬೇಕು.
Bhagya Lakshmi Bond Scheme For Girl Child.