Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Mandya DCC Bank Recruitment: ಮಂಡ್ಯ DDC ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ! ಆಸಕ್ತರು ಕೊನೆಯ ದಿನಾಂಕದ ಒಳಗೆ ಉತ್ತರಿಸಿ

ಮಾಹಿತಿ ತಂತ್ರಜ್ಞಾನ ಮುಖ್ಯ ವ್ಯವಸ್ಥಾಪಕರು-ಗ್ರೇಡ್1 (Information Technology Chief Manager-Grade 1) - 1 ಹುದ್ದೆ

Mandya DCC Bank Recruitment: ಚೆನ್ನಾಗಿ ಓದಿ, ಇನ್ನು ಕೆಲಸ ಸಿಗದೆ ಕಷ್ಟಪಡುತ್ತಿರುವವರಿಗೆ ಇದೀಗ ಒಂದು ಒಳ್ಳೆಯ ಅವಕಾಶ ಸಿಕ್ಕಿದೆ. ಮಂಡ್ಯ ಜಿಲ್ಲಾ ಸಹಕಾರ ಸಂಘ ನಿಯಮಿತ ಸೇವಾ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಕೃತವಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು, ಆಸಕ್ತಿ ಮತ್ತು ಅರ್ಹತೆ ಎರಡನ್ನು ಹೊಂದಿರುವ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬಹುದು. ಜನವರಿ 18ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ.

ಆಸಕ್ತಿ ಇರುವ ಅಭ್ಯರ್ಥಿಗಳು ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹಾಗೆಯೇ ಈ ಬ್ಯಾಂಕ್ ನೇಮಕಾತಿಗೆ ಸಂಬಂಧಿಸಿದ ಹಾಗೆ ಇಂದು ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ, ಕೊನೆಯವರೆಗೂ ಓದಿ.. ಉದ್ಯೋಗಗಳಿಗೆ ಸಂಬಂಧಿಸಿದ ಹಾಗೆ ಪ್ರತಿ ದಿನ ಪೂರ್ತಿ ಮಾಹಿತಿ ಪಡೆಯಲು, ನಮ್ಮ ವಾಟ್ಸಾಪ್ ಗ್ರೂಪ್ ಗೆ ಸೇರಿಕೊಳ್ಳಿ. ಈಗ ನೇಮಕಾತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯೋಣ..

Mandya DCC Bank Recruitment:

ನೇಮಕಾತಿ ಸಂಸ್ಥೆ: ಮಂಡ್ಯ ಜಿಲ್ಲಾ ಸಹಕಾರಿ ಸಂಘ ನಿಯಮಿತ ಸೇವಾ ಬ್ಯಾಂಕ್
ಹುದ್ದೆಗಳ ಹೆಸರು: ಅಟೆಂಡರ್, ಅಸಿಸ್ಟಂಟ್ ಮತ್ತು ಡ್ರೈವರ್
ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ; 94
ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಆನ್ಲೈನ್ ಮೂಲಕ
ಕೆಲಸದ ಸ್ಥಳ: ಮಂಡ್ಯ

ಹುದ್ದೆಗಳ ವಿವರ:

ಮಾಹಿತಿ ತಂತ್ರಜ್ಞಾನ ಮುಖ್ಯ ವ್ಯವಸ್ಥಾಪಕರು-ಗ್ರೇಡ್1 (Information Technology Chief Manager-Grade 1) – 1 ಹುದ್ದೆ
ಕಿರಿಯ ಸಹಾಯಕರು (Junior Assistant) – 70 ಹುದ್ದೆ
ವಾಹನ ಚಾಲಕರು (Driver) – 2 ಹುದ್ದೆ
ಅಟೆಂಡರ್ – 21 ಹುದ್ದೆಗಳು

ಪ್ರಮುಖ ದಿನಾಂಕಗಳು:

18/1/2024 – ಅರ್ಜಿ ಸಲ್ಲಿಕೆ ಶುರುವಿನ ದಿನಾಂಕ
19/2/2024 -ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
19/2/2024 – ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ

ವಿದ್ಯಾರ್ಹತೆ:

ಮಂಡ್ಯ ಜಿಲ್ಲಾ ಸಹಕಾರ ಸಂಘ ನಿಯಮಿತ ಸೇವಾ ಬ್ಯಾಂಕ್ ಇಂದ ಬಿಡುಗಡೆ ಆಗಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ ಎಷ್ಟಿರಬೇಕು ಎಂದರೆ..
ಮಾಹಿತಿ ತಂತ್ರಜ್ಞಾನ ಮುಖ್ಯ ವ್ಯವಸ್ಥಾಪಕರು-ಗ್ರೇಡ್1 – MTech
ಕಿರಿಯ ಸಹಾಯಕರು – PUC
ವಾಹನ ಚಾಲಕರು – 10ನೇ ತರಗತಿ ಜೊತೆಗೆ ಡ್ರೈವಿಂಗ್ ಲೈಸೆನ್ಸ್
ಅಟೆಂಡರ್ – 10ನೇ ತರಗತಿ

ಈ ಬಗ್ಗೆ ಸಂಪೂರ್ಣವಾಗಿ ಪೂರ್ತಿ ಮಾಹಿತಿ ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅಲ್ಲಿ ನೀಡಿರುವ ಪ್ರತಿ ವಿಷಯದ ಬಗ್ಗೆ ಗಮನ ಹರಿಸಿ ಓದಿ..

ವಯಸ್ಸಿನ ಮಿತಿ:

ಮಂಡ್ಯ ಜಿಲ್ಲಾ ಸಹಕಾರ ಸಂಘ ನಿಯಮಿತ ಸೇವಾ ಬ್ಯಾಂಕ್ ಇಂದ ಬಿಡುಗಡೆ ಆಗಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸಿನ ಮಿತಿ ಎಷ್ಟಿರಬೇಕು ಎಂದರೆ.. ಕನಿಷ್ಠ 18 ವರ್ಷ ಆಗಿರಬೇಕು, ಆದರೆ ವಯೋಮಿತಿ ಸಡಿಲಿಕೆ ಇದೆ..
ಜೆನೆರಲ್ ವರ್ಗದವರು – 35 ವರ್ಷದ ಒಳಗಿರಬೇಕು
ಪ್ರವರ್ಗ 2A, 2B, 3A, 3B ವರ್ಗ – 38 ವರ್ಷಗಳು
SC/ST/ಪ್ರವರ್ಗ 1 :- 40 ವರ್ಷಗಳು

ವೇತನ ಶ್ರೇಣಿ:

ಮಂಡ್ಯ ಜಿಲ್ಲಾ ಸಹಕಾರ ಸಂಘ ನಿಯಮಿತ ಸೇವಾ ಬ್ಯಾಂಕ್ ಇಂದ ಬಿಡುಗಡೆ ಆಗಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳ ವೇತನ ಶ್ರೇಣಿ ಎಷ್ಟು ಎಂದು ತಿಳಿಯೋಣ..

ಮಾಹಿತಿ ತಂತ್ರಜ್ಞಾನ ಮುಖ್ಯ ವ್ಯವಸ್ಥಾಪಕರು-ಗ್ರೇಡ್1 – ₹43,100 ಇಂದ ₹83,900 ರೂಪಾಯಿಗಳು.
ಕಿರಿಯ ಸಹಾಯಕರು – ₹30,350 ಇಂದ ₹58,250 ರೂಪಾಯಿಗಳು.
ವಾಹನ ಚಾಲಕರು – ₹27,650 ಇಂದ ₹52,650 ರೂಪಾಯಿಗಳು
ಅಟೆಂಡರ್ – ₹23,500 ಇಂದ ₹47,650 ರೂಪಾಯಿಗಳು

ವೇತನ ಶ್ರೇಣಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಓದಿ, ತಿಳಿದುಕೊಳ್ಳಬಹುದು..

ಅರ್ಜಿ ಶುಲ್ಕ:

ಮಂಡ್ಯ ಜಿಲ್ಲಾ ಸಹಕಾರ ಸಂಘ ನಿಯಮಿತ ಸೇವಾ ಬ್ಯಾಂಕ್ ಇಂದ ಬಿಡುಗಡೆ ಆಗಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಎಷ್ಟು ಅರ್ಜಿ ಶುಲ್ಕ ಪಾವತಿ ಮಾಡಬೇಕು ಎಂದರೆ..
ಜೆನೆರಲ್ ಪ್ರವರ್ಗ 2A, 2B, 3A, 3B ವರ್ಗ – ₹1500
SC/ST/ಪ್ರವರ್ಗ 1/ಮಾಜಿ ಸೈನಿಕ ಅಭ್ಯರ್ಥಿಗಳು :- ₹750

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಮೊದಲನೆಯದಾಗಿ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು..
*ವೆಬ್ಸೈಟ್ ನಲ್ಲಿ New Registration/Already Registered ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
*ಇದು ನಿಮಗೆ ನೇರವಾಗಿ ಅಪ್ಲಿಕೇಶನ್ ಇರುವ ಪೇಜ್ ಗೆ ಡೈರೆಕ್ಟ್ ಮಾಡುತ್ತದೆ.
*ಅಲ್ಲಿ ಕೇಳಲಾಗುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಫಿಲ್ ಮಾಡಿ, ಹಾಗೆಯೇ ಕೇಳಿರುವ ಎಲ್ಲಾ ದಾಖಲೆಗಳ ಸಾಫ್ಟ್ ಕಾಪಿಯನ್ನು ಸ್ಕ್ಯಾನ್ ಮಾಡಿ, ಅಪ್ಲೈ ಮಾಡಿ
*ಬಳಿಕ ಅಪ್ಲಿಕೇಶನ್ ಫೀಸ್ ಫಿಲ್ ಮಾಡಿ
*ನಂತರ ಅಪ್ಲಿಕೇಶನ್ ಪ್ರಿಂಟ್ ಔಟ್ ತೆಗೆದುಕೊಳ್ಳಿ.

Click Here To Apply

Also Read: Karnataka Job Fair: ರಾಜ್ಯದಲ್ಲಿ ನಡೆಯಲಿದೆ ದೊಡ್ಡ ಉದ್ಯೋಗ ಮೇಳ! ಹೊಸ ಹೆಲ್ಪ್ ಲೈನ್ ಶುರು!

 

Leave a comment