Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Winter Tips : ಮಳೆಗಾಲದಲ್ಲಿ ಬಟ್ಟೆಗಳಿಂದ ಬರುವ ವಾಸನೆಯನ್ನು ತೆಗೆಯುವುದು ಹೇಗೆ ಗೊತ್ತಾ? ಇಲ್ಲಿದೆ ಸುಲಭವಾದ ಪರಿಹಾರ

Do you know how to remove smell from clothes in rainy season? Here's an easy solution?

Get real time updates directly on you device, subscribe now.

Rainy season : ಇದೀಗ ಮಳೆಗಾಲ ಶುರುವಾಗಿದೆ, ನಮ್ಮಲ್ಲಿ ಅನೇಕರಿಗೆ ಮಳೆ ಎಂದರೆ ಬಹಳ ಇಷ್ಟ, ಆದರೆ ಮಳೆಯ ಕಾರಣದಿಂದ ಸಾಕಷ್ಟು ಮಂದಿ ಅನೇಕ ತೊಂದರೆಗಳನ್ನು ಸಹ ಎದುರಿಸುತ್ತಿದ್ದಾರೆ. ಇನ್ನು ಮಳೆಗಾಲದಲ್ಲಿ ಬಿಸಿಲು ಕಡಿಮೆ ಇರುವ ಕಾರಣ ನಿಮ್ಮ ಬಟ್ಟೆಗಳಲ್ಲಿ ಒಂದು ರೀತಿಯ ವಾಸನೆ ಬರುತ್ತಿರುತ್ತದೆ (Clothes smelling). ಇನ್ನು ಈ ವಾಸನೆಯ ಕಾರಣದಿಂದ ಬಟ್ಟೆಗಳನ್ನು ಧರಿಸಲು ಮನಸಾಗುವುದಿಲ್ಲ.

ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಕಷ್ಟ ಪಡುತ್ತಿದ್ದರೆ; ಒಮ್ಮೆ ಈ ಆಹಾರಗಳನ್ನು ಜೊತೆಯಾಗಿ ಸೇವಿಸಿ ನೋಡಿ, ಕಡಿಮೆ ಖರ್ಚು ದುಪ್ಪಟ್ಟು ಲಾಭ.

ಈ ವಾಸನೆಯಿಂದ ಮುಕ್ತಿ ಪಡೆಯಲು ಅನೇಕರು ತಮ್ಮ ಬಟ್ಟೆಗಳಿಗೆ ನಾನಾ ರೀತಿಯ ಡಿಟರ್ಜೆಂಟ್ ಹಾಗೂ ಪೌಡರ್ (Detergents and powders) ಗಳನ್ನು ಬಳಸುತ್ತಾರೆ. ಇಂದು ನಾವು ನಿಮಗೆ ಬಟ್ಟೆಯ ವಾಸನೆಯನ್ನು ತೆಗೆದು ಹಾಕಲು ಕೆಲವು ಸುಲಭವಾದ ಟಿಪ್ಸ್ ಗಳನ್ನು ನೀಡುತ್ತೇವೆ (Tips to remove clothes smell), ಒಮ್ಮೆ ನೀವು ಸಹ ಇದನ್ನು ಪ್ರಯತ್ನಿಸಿ ನೋಡಿ. ಈ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಈ ಪುಟವನ್ನು ಪೂರ್ತಿಯಾಗಿ ಓದಿ…

Krushi Bhagya : ರಾತ್ರೋರಾತ್ರಿ ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ, ಈ ರೀತಿ ಅರ್ಜಿಯನ್ನು ಸಲ್ಲಿಸಿದರೆ ಸಾಕು ರೈತರ ಬ್ಯಾಂಕ್ ಅಕೌಂಟ್ ಗೆ ನೇರ ಹಣ ಜಮಾವಣೆ.

ಮಳೆಯ ಕಾರಣದಿಂದ ಬಟ್ಟೆಗಳು ಸರಿಯಾಗಿ ಒಣಗಿರುವುದಿಲ್ಲ. ಬಟ್ಟೆಗಳಲ್ಲಿ ತೇವಾಂಶ ಹಾಗೆ ಇರುತ್ತದೆ, ಈ ಕಾರಣದಿಂದ ಬಟ್ಟೆಗಳಲ್ಲಿ ವಿಚಿತ್ರವಾದ ವಾಸನೆ ಬರಲು ಶುರುವಾಗುತ್ತದೆ. ಇನ್ನು ಇದನ್ನು ತಡೆಯಲು, ಬಟ್ಟೆಗಳಿಗೆ ಡಿಟರ್ಜೆಂಟ್ ಜೊತೆಗೆ ವಿನೆಗರ್ (Detergent with Vinegar) ಅನ್ನು ಸಹ ಬಳಸಿ. ವಿನೆಗರ್ ಬಟ್ಟೆಗಳಲ್ಲಿನ ವಾಸನೆಯನ್ನು ತೆಗೆಯುವಲ್ಲಿ ಸಹಾಯ ಮಾಡುತ್ತದೆ. ಹಾಗೆ ಬ್ಯಾಕ್ಟೀರಿಯಾ ಬೆಳೆವಣಿಗೆಯನ್ನು ಸಹ ತಡೆಯುತ್ತದೆ.

Car Maintenance tips :ಕಾರ್ ಸ್ಟಾರ್ಟ್ ಆಗದೆ ಇದ್ದಾಗ ಈ 3 ಟಿಪ್ಸ್ ಫಾಲೋ ಮಾಡಿದ್ದಾರೆ ಸಾಕು ಮೆಕ್ಯಾನಿಕ್ ಕರೆಯುವ ಅವಶ್ಯಕತೆ ಇರುವುದೇ ಇಲ್ಲ !!

ಇನ್ನು ಬಟ್ಟೆಗಳ ಕೊಂಚ ಒಣಗಿದ ನಂತರ ಇವುಗಳ ಮಧ್ಯೆ ಕರ್ಪೂರದ(camphor) ತುಂಡುಗಳನ್ನು ಇಟ್ಟು ನೋಡಿ, ಇದು ವದ್ದೆ ಬಟ್ಟೆಗಳಲ್ಲಿ ಬರುವ ವಾಸನೆಯನ್ನು ಹೋಗಲಾಡಿಸುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ ಕರ್ಪೂರದಲ್ಲಿ ಆ್ಯಂಟಿ ಫಂಗಲ್ ಅಂಶವಿದ್ದು (camphor has anti fungal properties)  ಇದು ಅನೇಕ ಚರ್ಮ ರೋಗಗಳನ್ನು ಬರದಂತೆ ತಡೆಯುವ ಶಕ್ತಿ ಹೊಂದಿದೆ.

ಇನ್ನು ನಿಮ್ಮ ಅಡುಗೆಗೆ ಬಳಸುವ ಬೇಕಿಂಗ್ ಸೋಡಾವನ್ನು(Baking soda) ಬಳಸಿ ನೀವು ನಿಮ್ಮ ಬಟ್ಟೆಗಳಿಂದ ವಾಸನೆಯನ್ನು ತೆಗೆಯಬಹುದು. ಹೌದು ನೀರಿಗೆ ಬೇಕಿಂಗ್ ಸೋಡಾ ಬೆರೆಸಿ ಅದರಲ್ಲಿ ನಿಮ್ಮ ಬಟ್ಟೆಗಳನ್ನು ನೆನೆಸಿಟ್ಟು, ಕೊಂಚ ಸಮಯದ ನಂತರ ಅದನ್ನು ಡಿಟರ್ಜೆಂಟ್ ಹಾಕಿ ತೊಳೆಯುವುದರ ಮೂಲಕ ಬಟ್ಟೆಗಳಿಂದ ವಾಸನೆಯನ್ನು ತೆಗೆಯಬಹುದು.

clothes smell during winter season
Respected images are credited to the original sources,

Get real time updates directly on you device, subscribe now.

Leave a comment