Meta Facebook Instagram: ನಿಮ್ಮ ಖಾತೆಗು ಕೂಡ ವೇರಿಫೈಡ್ ಬ್ಲೂ ಟಿಕ್ ಪಡೆಯಬಹುದು ಈ ಸಿಂಪಲ್ ವಿಧಾನ ಮಾಡಿದರೆ ಸಾಕು.
Your account can also get verified Blue Tick by doing this simple method.
ಒಂದು ಕಾಲ ಇತ್ತು ಮೊದಲು ಸೆಲೆಬ್ರಿಟಿಗಳು, ಬಿಸಿನೆಸ್ ಮ್ಯಾನ್ ಗಳು, ಹಾಗೂ ಸಮಾಜದಲ್ಲಿ ಹೆಸರು ಮಾಡಿದಂತಹ ಜನಗಳಿಗೆ ಮಾತ್ರ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಬ್ಲೂ ಟಿಕ್ ಅನ್ನು ಕೊಡಲಾಗುತ್ತಿತ್ತು. ಈ ಬ್ಲೂ ಟಿಕ್ ಎನ್ನುವುದು ವ್ಯಕ್ತಿ ಸಮಾಜದಲ್ಲಿ ಎಷ್ಟು ಗುರುತಿಸಿಕೊಂಡಿದ್ದಾನೆ ಎಂಬುದರ ಆಧಾರದ ಮೇಲೆ ಕೊಡುತ್ತಿದ್ದರು ಆದರೆ ಈಗ ಟ್ವಿಟ್ಟರನ್ನು ಎಲಾನ್ ಮಾಸ್ಕ್ Elon Musk ಅವರು ಪಡೆದುಕೊಂಡ ನಂತರ ಅವರು ಸಾಕಷ್ಟು ಬದಲಾವಣೆಗಳನ್ನು ತಂದರು. ಹಾಗಾಗಿ ಬೇರೆ ಫ್ಲ್ಯಾಟ್ ಫಾರ್ಮ್ ನ ಸೋಶಿಯಲ್ ಮೀಡಿಯಾಗಳು ಕೂಡ ಅದೇ ರೀತಿ ಬದಲಾವಣೆಗಳನ್ನು ತರಲು ಹೊರಟಿವೆ.
ಅದರಂತೆ ಈಗ ಫೇಸ್ಬುಕ್ Face book Meta ಕೂಡ ತನ್ನದೇ ಸ್ವಾಮಿತ್ಯದ Instagram ಅನ್ನು ನಡೆಸುತ್ತಿದ್ದು ಅದರಲ್ಲಿ Instagram ಬಳಸುವವರಿಗೆ ತಿಂಗಳಿಗೆ monthly ಸಬ್ಸ್ಕ್ರಿಪ್ಷನ್ ಮುಖಾಂತರ ಪ್ರತಿ ತಿಂಗಳು ಹಣ ಕಟ್ಟಿಸಿಕೊಂಡು Instagram ಉಪಯೋಗಿಸುವ ಎಲ್ಲರಿಗೂ blue tick ಕೊಡಲು ನಿರ್ಧಾರ ಮಾಡಿದೆ, ಇಲ್ಲಿ ಎಲ್ಲರಿಗೂ ಎಂದರೆ ಪ್ರತಿ ತಿಂಗಳು ಯಾರು 699 ರೂಪಾಯಿಗಳನ್ನು ಕೊಡುತ್ತಾರೋ ಅವರಿಗೆ ಮಾತ್ರ ಬ್ಲೂ ಟಿಕ್ ಅನ್ನು ಅಂದರೆ ವೆರಿಫೈಟಿಕ್ಕನು ಕೊಡಲಾಗುತ್ತದೆ ಹಾಗೂ ಬ್ಲೂ ಟಿಕ್ ಹೊಂದಿರುವ ಖಾತೆಯನ್ನು ಅಧಿಕೃತ ಎಂದು ಘೋಷಿಸಲಾಗುತ್ತದೆ.
ಇನ್ನು ಮೆಟಾ ಬ್ಲೂ ಟಿಕ್ ಅನ್ನು ಬಳಸುವ ಚಂದದಾರರು ಸರ್ಕಾರಿ ಐಡಿ ಕಾರ್ಡನ್ನು ಉಪಯೋಗಿಸಿಕೊಂಡು ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಬಹುದು ಒಮ್ಮೆ ನಿಮ್ಮ ಐಡಿಯನ್ನು ಪರಿಶೀಲನೆ ಮಾಡಿದ ನಂತರ ನಿಮ್ಮ ಖಾತೆಯನ್ನು ಸುರಕ್ಷಣೆ ಮತ್ತು ಹೆಚ್ಚು ವೈಶಿಷ್ಟ್ಯಗಳನ್ನು ಕೊಟ್ಟು ನಿಮ್ಮ ಖಾತೆಯನ್ನು ಅಧಿಕೃತವಾಗಿ ವೆರಿಫೈಡ್ ಪರ್ಸನ್ ಎಂದು ನಿರ್ಧರಿಸಲಾಗುತ್ತದೆ.
ಇನ್ನು ನೀವು ಬ್ಲೂ ಟಿಕ್ ಅನ್ನು ಪಡೆಯಬೇಕಾದರೆ ಮಾಡಬೇಕಾದ ಕೆಲಸಗಳೇನೆಂದರೆ.
1)ನಿಮ್ಮ ಬಳಿ ಐಒಎಸ್ ಅಥವಾ ಆಂಡ್ರಾಯ್ಡ್ ಮೊಬೈಲ್ ಇದ್ದು ಅದರಲ್ಲಿ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಅಪ್ಲಿಕೇಶನ್ಗಳನ್ನು ಓಪನ್ ಮಾಡಬೇಕು.
2)ನಿಮಗೆ ಯಾವ ಪ್ರೊಫೈಲನ್ನು ಬ್ಲೂ ಟಿಕ್ ಮಾಡಬೇಕು ಎಂದು ಬಯಸುವಿರೋ ಮೊದಲು ಆ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ.
3)ನಂತರ ಸೆಟ್ಟಿಂಗ್ಸ್ ಗೆ ಹೋಗಿ ಮೆಟ ವೆರಿಫೈಡ್ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಿ ಅಲ್ಲಿ ನೀವು ಯಾವ ರೀತಿ ಹಣ ಕಟ್ಟಲು ಬಯಸುವಿರಿ ಎಂಬುದನ್ನು ಆಯ್ಕೆ ಮಾಡಿ.
ನೀವು ಸತತವಾಗಿ ಮೊಬೈಲ್ ನೋಡುತ್ತೀರಾ! ಕಣ್ಣಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ! ಹಾಗಾದರೆ ಈ ನಿಯಮವನ್ನು ಪಾಲಿಸಿ !!
ಯಾವುದೇ ಆದ ಪ್ಯಾನ್ ಕಾರ್ಡ್ pan card ಆಧಾರ್ ಕಾರ್ಡ್ Aadhaar card ಹಾಗೂ ಪಾಸ್ ಬುಕ್ passbook ಅನ್ನು ಬಳಸಿ ನಿಮ್ಮ ದೃಡೀಕರಣವನ್ನು ಖಚಿತಪಡಿಸಿಕೊಳ್ಳಿ.ನಿಮ್ಮ ಸರ್ಕಾರಿ ಐ ಡಿ ಪ್ರೂಫ್ ಸರಿಯಾಗಿದ್ದರೆ ಮತ್ತು ನೀವು ನಿಮ್ಮ ಪ್ರೊಫೈಲ್ ನಲ್ಲಿ ಕೊಟ್ಟ ಹೆಸರು ಮತ್ತು ಐಡಿ ಪ್ರೂಫ್ ಗೆ ಹೊಂದಾಣಿಕೆ ಆದರೆ ಹಣ ಕಟ್ಟಿದ ಬಳಿಕ ನಿಮ್ಮ ಪ್ರೊಫೈಲ್ ಬ್ಯಾಡ್ಜ್ Profile badge ಕಾಣಿಸಿಕೊಳ್ಳುತ್ತದೆ. ಅಧಿಕೃತವಾದ ಬ್ಲೂಟಿಕನ್ನು ಪಡೆಯಲು 18 ವರ್ಷದ ಮೇಲೆ ಇರಬೇಕು ಹಾಗೂ ಸರ್ಕಾರಿ ಐಡಿ ಪ್ರೂಫ್ ಅನ್ನು ಹೊಂದಿರಬೇಕು..
