Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Kitchen Tips : ತೆಂಗಿನಕಾಯಿ ಒಂದು ದಿನ ಬರೋದು 1 ತಿಂಗಳು ಬರುತ್ತೆ, ಬೇರೇನೂ ಬೇಡ ಕೇವಲ ಈ ರೀತಿ ಮಾಡಿದರೆ ಸಾಕು !!

How to keep broken coconut for long time

0

ಮನೆಯಲ್ಲಿ ಹಬ್ಬ ಹರಿದಿನಗಳು ಬಂದರೆ ಸಾಕು ಒಂದಲ್ಲ ಎರಡಲ್ಲ ಸುಮಾರು ಐದರಿಂದ ಆರು ತೆಂಗಿನಕಾಯಿಗಳನ್ನು (Coconut) ಹೊಡೆಯುತ್ತೇವೆ. ಹಾಗೂ ಎಷ್ಟೋ ಜನ ಮನೆಗಳಲ್ಲಿ ತೆಂಗಿನಕಾಯಿಯನ್ನು ಅತಿಹೆಚ್ಚಿನ ದಾಗಿ ಸಾಂಬಾರ್ ಗಳಲ್ಲಿ ಬಳಸುವುದಿಲ್ಲ. ಹಾಗಾಗಿ ಹೊಡೆದ ತೆಂಗಿನಕಾಯಿ ಕೆಲವೊಮ್ಮೆ ಬೇಗ ಹಾಳಾಗಿ ಹೋಗಬಹುದು. ಒಂದು ವೇಳೆ ಫ್ರಿಡ್ಜ್ ಇದ್ದವರು ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳುತ್ತಾರೆ. ಒಂದು ವೇಳೆ ಇಲ್ಲದವರು ಏನು ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ.

Gas Tips : ಈ ಸೀಕ್ರೆಟ್ ಗೊತ್ತಾದರೆ ಗ್ಯಾಸ್ ಬೇಗ ಕಾಲಿನೇ ಆಗೋದಿಲ್ಲ, ಒಂದೇ ತಿಂಗಳು ಬರುವ ಗ್ಯಾಸ್ 3 ತಿಂಗಳು ಬರುತ್ತೆ !!

ಒಂದು ವೇಳೆ ನಿಮ್ಮ ಮನೆಯಲ್ಲಿ ಏನಾದರೂ ಫ್ರಿಜ್ ಇಲ್ಲ ದಿದ್ದರೂ ಸಹ ತೆಂಗಿನಕಾಯಿ ಫ್ರೆಶ್ ಆಗಿನೇ ಸುಮಾರು 15 ದಿನಗಳ ಕಾಲ ಬರಬೇಕು ಎಂದುಕೊಂಡಿದ್ದರೆ ನೀವು ಈ ರೀತಿ ಮಾಡಬೇಕು. ಅದು ಏನೆಂದರೆ ಮೊದಲು ಹೊಡೆದ ತೆಂಗಿನ ಕಾಯಿಯನ್ನು ಒಂದು ಬಟ್ಟಲಿನಲ್ಲಿ ನೀರನ್ನು ತೆಗೆದುಕೊಂಡು ತೆಂಗಿನಕಾಯಿ ತುಂಬುವ ತನಕ ನೀರನ್ನು ಹಾಕಿ ಇಡಬೇಕು 3 ದಿನಗಳು ಕಳೆದ ನಂತರ ನೀರನ್ನು ಬದಲಾಯಿಸಬೇಕು. ಅಷ್ಟೇ ಅಲ್ಲದೆ ತೆಂಗಿನಕಾಯಿ ಹೊಡೆದ ನಂತರ ಮೊದಲು ಕಣ್ಣು ಇರುವ ಅಥವಾ ಜುಟ್ಟು ಇರುವ ಭಾಗವನ್ನು ಬಳಸಿಕೊಳ್ಳಬೇಕು. ಏಕೆಂದರೆ ಅದೇ ಮೊದಲು ಕೆಟ್ಟ ಹೋಗುವಂತಹ ಚಿಪ್ಪು ಆಗಿರುತ್ತದೆ.

ಫ್ರಿಡ್ಜ್ ಇಲ್ಲದಿದ್ದರೂ ಸಹ ಇನ್ನೊಂದು ರೀತಿಯಲ್ಲಿ ತೆಂಗಿನಕಾಯಿಯನ್ನು ಸ್ಟೋರ್ ಮಾಡಬಹುದು ಅಥವಾ ಸಂರಕ್ಷಿಸಿ, ಅದು ಹೇಗೆಂದರೆ ಹೊಡೆದ ತೆಂಗಿನ ಒಂದು ಭಾಗವನ್ನು ತೆಗೆದುಕೊಂಡು ಅದರ ಒಳಗೆ ಇರುವಂತಹ ನೀರನ್ನು ಒಂದು ಒಣಗಿದ ಬಟ್ಟೆಯಲ್ಲಿ ಒರೆಸಿಕೊಳ್ಳಬೇಕು. ನಂತರ ಅದಕ್ಕೆ ಒಂದು ಸ್ಪೂನ್ ಸಾಲ್ಟ್ ಉಪ್ಪನ್ನು ತೆಗೆದುಕೊಂಡು ಅದರೊಳಗೆ ಹಾಕಿ ಚಮಚದಿಂದ ಉಪ್ಪನ್ನು ಚಿಪ್ಪಿನ ತುಂಬಾ ಸವರಬೇಕು. ಯಾವುದೇ ಕಾರಣಕ್ಕೂ ಸಹ ಬೆರಳಿನಿಂದ ಉಪ್ಪನ್ನು ಸವರಬಾರದು. ಆದ್ದರಿಂದಲೂ ಸಹ ತೆಂಗಿನಕಾಯಿ ಕೆಡುವುದಿಲ್ಲ..

Fridge tips: ಮನೇಲಿ ಫ್ರಿಡ್ಜ್ ಇದೆ ಕರೆಂಟ್ ಬಿಲ್ ತುಂಬಾ ಜಾಸ್ತಿ ಬರ್ತಾ ಇದೆ ಅಂತೀರಾ, ಇನ್ನುಮುಂದೆ ಆ ಚಿಂತೆ ಬಿಡಿ, ಇಷ್ಟು ಮಾಡಿ ಸಾಕು, ಭೇಷ್ ಅಂತೀರಾ !!

ಇನ್ನು ಎಷ್ಟೋ ಜನರ ಮನೆಯಲ್ಲಿ ಸಹ ಫ್ರಿಜ್ ಗಳಿದ್ದರೂ ಅದನ್ನು ಸರಿಯಾದ ರೀತಿಯಲ್ಲಿ ಇಡದೆ ಹೋದರೆ ಅದು ಒಣಗಿದ ಕೊಬ್ಬರಿಯಂತೆ ಆಗುತ್ತದೆ ಇಲ್ಲದಿದ್ದರೆ ಅದರ ಟೇಸ್ಟ್ ಬದಲಾಗಿರುತ್ತದೆ. ಅಂತಹವರಿಗೂ ಸಹ ಒಂದೆರಡು ಟಿಪ್ಸ್ ಇದೆ. ಅದು ಏನೆಂದರೆ ಹೊಡೆದಂತಹ ತೆಂಗಿನಕಾಯಿಯನ್ನು ಒಂದು ಕವರ್ ನಲ್ಲಿಟ್ಟು ಗಾಳಿ ಅದರ ಒಳಗೆ ಹೋಗದಂತೆ ಕಟ್ಟಿ ಫ್ರಿಜ್ ನಲ್ಲಿ ಇಡಬೇಕು. ಇಲ್ಲದಿದ್ದರೆ ತೆಂಗಿನಕಾಯಿಯನ್ನು ತುರಿದು ಒಂದು ಏರ್ ಟೈಟ್ ಬಾಕ್ಸ್ ನಲ್ಲಿ ಇಟ್ಟುಡೀಪ್ ಫ್ರಿಡ್ಜ್ ನಲ್ಲಿ ಇಟ್ಟರೆ ಸುಮಾರು ಒಂದು ತಿಂಗಳ ಕಾಲ ತೆಂಗಿನಕಾಯಿಯನ್ನು ನಾವು ಬಳಸಿಕೊಳ್ಳಬಹುದು.

Broken coconuts
Respected images are credited to the original owners

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply