Gruha Jyothi Scheme : ಗೃಹ ಜ್ಯೋತಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸುಲಭ ವಿಧಾನ, ಇಂತವರಿಗೆ ಮಾತ್ರ ಆದ್ಯತೆ !!
Gruha Jyothi Scheme : Easy way to apply online for Gruha Jyothi Scheme, Preference only for those who have !!
Gruha Jyothi Scheme : ಗೃಹ ಜ್ಯೋತಿ ಯೋಜನೆ, ನಮ್ಮ ಕರ್ನಾಟಕ ಆನ್‌ಲೈನ್ ಅಪ್ಲಿಕೇಶನ್ ಈಗ ಅದರ ಅಧಿಕೃತ ವೆಬ್‌ಸೈಟ್ ಗಳಾದ http://sevasindhugs.karnataka.gov.in ಮತ್ತು https://bescom.karnataka.gov.in/page/Gruha+Jyothi/en ನಲ್ಲಿ ಲಭ್ಯವಾಗಿದೆ. ಸೇವಾ ಸಿಂಧು ಗೃಹ ಜ್ಯೋತಿ ಯೋಜನೆಗೆ (ಯೋಜನಾ) ಅರ್ಹತೆ ಹೊಂದಿರುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು, ಈ ಮೇಲಿರುವ ಲಿಂಕ್ ಅನ್ನು ಉಪಯೋಗಿಸಿಕೊಂಡು ಆನ್‌ಲೈನ್‌ನಲ್ಲಿಯೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಕರ್ನಾಟಕ ಗೃಹ ಜ್ಯೋತಿ ಯೋಜನೆ ಅಪ್ಲಿಕೇಶನ್ ಅನ್ನು 19 ಜೂನ್ 2023 ರಲ್ಲಿ ಆಕ್ಟಿವೆಟ್ ಮಾಡಲಾಗಿದೆ. ಇನ್ನು ಈ ಅಪ್ಲಿಕೇಶನ್ ನಲ್ಲಿ ಸುಮಾರು 55000 ಅಷ್ಟು ಗ್ರಾಹಕರು ಈಗಾಗಲೇ ಗೃಹ ಜ್ಯೋತಿ ಯೋಜನೆಯ ಈ ಲಿಂಕ್ ನಲ್ಲಿ https://sevasindhugs.karnataka.gov.in/gruhajyothi/directApply.do ರಿಜಿಸ್ಟರ್ ಮಾಡಿಕೊಂಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆ 2023 ಶುರುವಾಗಿದ್ದು, ಇದರ ಅಡಿಯಲ್ಲಿ ಕರ್ನಾಟಕದ ಜನರಿಗೆ ಉಚಿತ ವಿದ್ಯುತ್‌ಗಾಗಿ ಸೇವಾ ಸಿಂಧು ವೆಬ್ ಸೈಟ್ ಅನ್ನು ಕ್ರಿಯೇಟ್ ಮಾಡಲಾಗಿದೆ.
ಆನ್ಲೈನ್ ಮೂಲಕ ಕರ್ನಾಟಕ ಗೃಹ ಜ್ಯೋತಿ ಯೋಜನೆಯಲ್ಲಿ (ಗೃಹಜ್ಯೋತಿ ಯೋಜನೆ) ನೀವು ನೋಂದಣಿ ಮಾಡಬಹುದಾಗಿದೆ. ಇದೀಗ ರಿಜಿಸ್ಟ್ರೇಷನ್ ಸಹ ಶುರುವಾಗಿದ್ದು, ಕೆಳಗಿನ ವೆಬ್ ಸೈಟ್ ಮೂಲಕ ನೀವು ಲಾಗಿನ್ ಆಗಬಹುದಾಗಿದೆ.
http://sevasindhugs.karnataka.gov.in/gruhajyothi/directApply.do ಗ್ರಾಹಕರು ಕೇವಲ ವೆಬ್ಸೈಟ್ ನ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗೆ ಕರ್ನಾಟಕ ಗೃಹ ಜ್ಯೋತಿ ಸ್ಕೀಮ್ ನಲ್ಲಿ ಕೇವಲ ಆನ್ ಲೈನ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.
sevasindhu.karnataka.gov.in ಕರ್ನಾಟಕ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಗ್ರಾಹಕರು ಅರ್ಜಿಯನ್ನು ಸಲ್ಲಿಸಬೇಕಾದರೆ ಆನ್‌ಲೈನ್‌ನಲ್ಲಿ ಮೂಲಕ, ಗ್ರಾಹಕರು ESCOM NAME (BSECOM, CESC, GSECOM, MESCOM, HESCOM, HRECS) ಯಾವುದಾದರೂ ಒಂದು ಆಪ್ಷನ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ ನಂತರ ಖಾತೆ ಐಡಿ/ಸಂಪರ್ಕ ಐಡಿ, ಖಾತೆದಾರರ ಹೆಸರನ್ನು ಎಂಟ್ರಿ ಮಾಡಬೇಕಾಗುತ್ತದೆ.
ESCOM ನಲ್ಲಿ, ESCOM ಪ್ರಕಾರ ಖಾತೆ ಹೊಂದಿರುವ ಗ್ರಾಹಕರು ಅವರ ವಿಳಾಸ, ಅವರ ಉದ್ಯೋಗದ ವಿವರಗಳು, ಆಧಾರ್ ಸಂಖ್ಯೆ, ಆಧಾರ್‌ನಲ್ಲಿರುವ ರೀತಿಯೆ ಅವರ ಹೆಸರು, ಮೊಬೈಲ್ ಸಂಖ್ಯೆ ಇವುಗಳನ್ನು ನೊಂದಾಯಿಸಬೇಕಾಗುತ್ತದೆ.
ಕೊನೆಯದಾಗಿ ಡಿಕ್ಲರೇಶನ್ ಅನ್ನು ಸಂಪೂರ್ಣವಾಗಿ ಓದಿ ನನಗೆ ಒಪ್ಪಿಗೆ ಇದೇ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ, ಅರ್ಜಿಯನ್ನು ಸಲ್ಲಿಸಬೇಕು.
ಉಚಿತ 200 ವೋಲ್ಟ್ ವಿದ್ಯುತ್ ಗಾಗಿ, ಈ ಕೆಳಗಿರುವ ಲಿಂಕ್ ಅನ್ನು ಬಳಸಿ:
https://sevasindhugs.karnataka.gov.in/gruhajyothi/directApply.do?serviceId=1989
ಗೃಹ ಜ್ಯೋತಿ ಸ್ಕೀಮ್ ಯೋಜನೆಯ ಲಿಂಕ್ ಗಾಗಿ ಇದನ್ನು ಬಳಸಿ:
https://bescom.karnataka.gov.in/page/Gruha+Jyothi/en