Gold Polish at Home: ಚಿನ್ನ ಅದೆಷ್ಟೇ ಹಳೆಯದಾದರೂ ಈ ಒಂದೇ ಒಂದು ಸೀಕ್ರೆಟ್ ನಿಂದ, ಕೇವಲ 1 ನಿಮಿಷದಲ್ಲಿ ಪಳ ಪಳ ಎಂದು ಹೊಳೆಯುತ್ತದೆ.
Gold Polish at Home: Secret home tips to clean gold at home.
Gold Polish at Home: ನಾವು ಬಳಸುವಂತಹ ಚಿನ್ನ ಅಂದರೆ ಉದಾಹರಣೆಗೆ ಕೈ ಗೆ ಹಾಕಿರುವ ಉಂಗುರಗಳು(Ring) ಆಗಿರಬಹುದು ಅಥವಾ ಕತ್ತಿನಲ್ಲಿ ಹಾಕಿಕೊಳ್ಳುವಂತಹ ಚೈನ್(Necklace) ಆಗಿರಬಹುದು ಕಿವಿಯಲ್ಲಿ ಧರಿಸುವಂತಹ ಓಲೆಗಳು ಆಗಿರಬಹುದು ಇವುಗಳಲ್ಲಿ ನಮಗೆ ತಿಳಿಯದಂತೆ ಡಸ್ಟ್ ಪಾರ್ಟಿಕಲ್ಸ್ ಅಥವಾ ಸ್ವಲ್ಪ ಮಟ್ಟಿಗೆ ಎಣ್ಣೆ ಪದಾರ್ಥ ಇಳಿದಿರುತ್ತದೆ. ಅವುಗಳನ್ನು ಹೇಗೆ ಕ್ಲೀನ್ ಮಾಡಿಟ್ಟುಕೊಳ್ಳಬೇಕು ಎಂಬುದನ್ನು ನೋಡೋಣ ಬನ್ನಿ.
ಗೋಲ್ಡ್ ಕ್ಲೀನ್ ಮಾಡುವ ವಿಧಾನ.
ಒಂದು ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಒಂದು ಎರಡು ಚಮಚದಷ್ಟು ಸಕ್ಕರೆಯನ್ನು(Sugar) ಹಾಕಿ ಯಾವ ಚಿನ್ನವನ್ನು ಕ್ಲೀನ್ ಮಾಡಬೇಕು ಅದನ್ನು ಹಾಕಿಕೊಳ್ಳಬೇಕು. ಸುಮಾರು ಅದರೊಳಗೆ ಎರಡು ಚಮಚದಿಂದ ಮೂರು ಚಮಚದಷ್ಟು ನೀರನ್ನು ಹಾಕಿ ಚಿನ್ನವನ್ನು ಮುಳುಗುವವರೆಗೂ ನೀರನ್ನು ಹಾಕಿಕೊಳ್ಳಬೇಕು. ಅದನ್ನು ಸುಮಾರು ಅರ್ಧ ಗಂಟೆಗಳ ಕಾಲ ಬಿಟ್ಟುಬಿಡಬೇಕು.
ನಂತರ ಒಂದು ಮೈಲ್ಡ್ ಆಗಿರುವಂತಹ ಶಾಂಪೂ ಆಗಿರಬಹುದು ಅಥವಾ ಸೋಪನ್ನು ಸಹ ಬಳಸಬಹುದು. ಒಂದು ಟೂತ್ ಬ್ರಷ್ ನಲ್ಲಿ ಸಕ್ಕರೆ ಪಾಕದಲ್ಲಿ ನೆನೆಸಿಟ್ಟಂತಹ ಚಿನ್ನವನ್ನು ತಿಕ್ಕಿ ತೊಳೆಯಬೇಕು. ಆಗ ಅದರಲ್ಲಿ ಇರುವಂತಹ ಎಣ್ಣೆ ಪದಾರ್ಥ ಗಳಾಗಿರಬಹುದು ಅಥವಾ ಡಸ್ಟ್ ಪಾರ್ಟಿಕಲ್ ಆಗಿರಬಹುದು ಅತಿ ಬೇಗನೆ ಹೋಗಿ ನೀವು ಚಿನ್ನ ತರುವಾಗ ಯಾವ ಕಲರ್ ಇರುತ್ತದೆ ಅದೇ ಕಲರ್ ಆಗಿರುತ್ತದೆ.
ನೀವು ಕೈಗೆ ಧರಿಸುವಂತಹ ಉಂಗುರಗಳಲ್ಲಿ ಪಾತ್ರೆ ತೊಳಿಯುವಾಗ ಅಥವಾ ಬಟ್ಟೆ ಒಗೆಯುವಾಗ ಅದರಲ್ಲಿ ಸೋಪಿನ ಪಾರ್ಟಿಕಲ್ಸ್ ಹೋಗಿರುತ್ತದೆ. ಅದು ಸಹ ಹೋಗುತ್ತದೆ. ನಂತರ ಕತ್ತಿಗೆ ಹಾಕಿರುವ ಚೈನ್ ಆಗಿರಬಹುದು ಅಥವಾ ಕಿವಿಗೆ ಆಕೀರುವಂತಹ ಓಲೆ ಆಗಿರಬಹುದು. ನಾವು ತಲೆಗೆ ಎಣ್ಣೆ ಹಾಕುವಾಗ ಅದು ಸಹ ಎಣ್ಣೆಯ ಅಂಶವನ್ನು ಹೊಂದಿರುತ್ತದೆ.
ಈ ರೀತಿ ಮಾಡುವುದರಿಂದ ಯಾವುದೇ ಎಣ್ಣೆಯ ಅಂಶ ಇಲ್ಲದೆ ಕ್ಲೀನ್ ಆಗಿ ಸ್ವಚ್ಛವಾಗುತ್ತದೆ. ಎಷ್ಟೋ ಜನರಿಗೆ ಈ ಐಡಿಯಾ ತಿಳಿಯದೆ, ಚಿನ್ನ ಕ್ಲೀನ್ ಮಾಡುವವರ ಬಳಿ ಹೋಗಿ ಕ್ಲೀನ್ ಮಾಡಿಸಿಕೊಳ್ಳುತ್ತಾರೆ. ಅದಕ್ಕೆ ಹಣ ವೇಸ್ಟ್. ನಿಮ್ಮ ಅರ್ಧ ಗಂಟೆ ಅಥವಾ ಒಂದು ಗಂಟೆಗಳ ಸಮಯ ಇಲ್ಲಿ ಇಟ್ಟರೆ ನೀವು ಹಣವನ್ನು ಉಳಿಸಬಹುದು ಮತ್ತು ನಿಮಗೆ ಚಿನ್ನ ಅವರು ಏನು ಮಾಡುತ್ತಾರೆ ಎಂಬ ಭಯ ಕೂಡ ಇರುವುದಿಲ್ಲ.