Cockroach Tips: ಮನೆಯಲ್ಲಿ ಜಿರಳೆ ಕಾಟ ಇದಿಯಾ, ಚಿಂತೆ ಬಿಡಿ ಈ ಒಂದು ಉಪಾಯ ಮಾಡಿ ಸಾಕು ಮನೆಯಲ್ಲಿ ಒಂದು ಜಿರಳೆಯೂ ಉಳಿಯುವುದಿಲ್ಲ 2 ನಿಮಿಷ ಸಾಕು.
Do you have a cockroach infestation in your house, don't worry, just do this one trick, not even a single cockroach will stay in your house, 2 minutes is enough.
Cockroach Tips: ನಿಮ್ಮ ಮನೆಯಲ್ಲಿ ಇರುವ ಈ ಒಂದು ವಸ್ತು ಸಾಕು ನಿಮ್ಮ ಮನೆಯಲ್ಲಿ ಅಡಗಿ ಕೂತಿರುವ ಜಿರಳೆಗಳು ಬಂದ್ ಆಗುತ್ತವೆ. ಇದನ್ನು ಜೀರಳೆ ಗಳು ತಿಂದರೆ ಒಂದು ಜಿರಳೆ ಕೂಡ ನಿಮ್ಮ ಮನೆಯಲ್ಲಿ ಉಳಿಯುವುದಿಲ್ಲ. ಇಲ್ಲಿ ಹೇಳಿರುವ ಟಿಪ್ಸ್ ಅನ್ನು ನೀವು ಸರಿಯಾಗಿ ತಿಳಿದುಕೊಂಡರೆ ನಿಮ್ಮ ಕೆಲಸ ಕೂಡ ಸುಲಭವಾಗುತ್ತದೆ ಹಾಗೆ ಹಣ ಕೂಡ ಉಳಿತಾಯ ಆಗುತ್ತದೆ. ನಿಮ್ಮ ಮನೆಯಲ್ಲಿ ಜಿರಳೆ ಓಡಾಟ ಜಾಸ್ತಿ ಆಗಿದ್ದರೆ ಅದು ನಿಮ್ಮ ಆರೋಗ್ಯಕ್ಕೂ ಕೂಡ ಬಹಳ ಹಾನಿಕಾರಕ. ಇನ್ನು ರಾತ್ರಿ ಸಮಯದಲ್ಲಿ ಜಿರಳೆಗಳ ಕಾಟ ಅತಿ ಹೆಚ್ಚು ಅಂತಾನೆ ಹೇಳಬಹುದು.
ಎಲ್ಲಿ ನೋಡಿದರೂ ಸಹ ಜಿರಳೆಗಳು ಓಡಾಡುತ್ತಿರುತ್ತವೆ, ಹಾಗಾದರೆ ಇವುಗಳನ್ನು ಓಡಿಸುವುದು ಹೇಗೆ? ತುಂಬಾನೇ ಸುಲಭ ಮನೆಯಲ್ಲಿ ಇರುವ ಈ ಮೂರು ವಸ್ತುಗಳು ಸಾಕು. ಒಂದೇ ಒಂದು ಜಿರಳೆಗಳು ಕೂಡ ನಿಮ್ಮ ಮನೆಯಲ್ಲಿ ಕೂರುವುದಿಲ್ಲ. ಇದನ್ನು ತಿಂದರೆ ಜಿರಳೆಯ ಸತ್ತೆ ಹೋಗುತ್ತದೆ. ಹಾಗಾದರೆ ಯಾವುದೇ ರೀತಿಯಾ ಕೆಮಿಕಲ್ ಗಳನ್ನು ಉಪಯೋಗಿಸದೆ ಮನೆಯಲ್ಲಿ ಸಿಗುವ ವಸ್ತುಗಳಿಂದ ಮಾಡುವ ಈ ಜಿರಳೆ ಔಷಧಿಯನ್ನು ಹೇಗೆ ತಯಾರು ಮಾಡುವುದು ಎಂದು ಒಮ್ಮೆ ಇಲ್ಲಿ ತಿಳಿದುಕೊಳ್ಳಿ.
ಮೊದಲಿಗೆ ನೀವು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಸುಮಾರು ಒಂದು ಚಮಚದಷ್ಟು ಪುಡಿ ಮಾಡಿರುವ ಸಕ್ಕರೆಯನ್ನು ಹಾಕಿಕೊಳ್ಳಬೇಕು. ನಿಮ್ಮ ಮನೆಯಲ್ಲಿ ಎಷ್ಟು ಜಿರಳೆಗಳ ಪ್ರಮಾಣ ಇರುತ್ತದೆ ಅದರ ಮೇಲೆ ನೀವು ಇದನ್ನು ಹಾಕಿಕೊಳ್ಳಬೇಕಾಗುತ್ತದೆ. ನಂತರ ನೀವು ಒಂದು ಮೂರರಿಂದ ನಾಲ್ಕು ಚಮಚದಷ್ಟು ಗೋಧಿ ಹಿಟ್ಟನ್ನು ಹಾಕಿಕೊಳ್ಳಬೇಕಾಗುತ್ತದೆ. ಹಾಗೆಯೇ ಗೋಧಿ ಹಿಟ್ಟಿನ ಜೊತೆಗೆ ನೀವು ಇದಕ್ಕೆ ಒಂದು ಚಮಚದಷ್ಟು ಅಡುಗೆ ಸೋಡಾವನ್ನು(Cooking soda) ಬೆರೆಸಿಕೊಳ್ಳಬೇಕು.
ಜಿರಳೆಗಳು ಸಕ್ಕರೆಗೆ ಅಟ್ರಾಕ್ಟ್ ಆಗುತ್ತವೆ, ಅದಕ್ಕೋಸ್ಕರ ಇದನ್ನು ತಿನ್ನುವುದಕ್ಕೆ ಬರುತ್ತವೆ ಆದರೆ ಇದರಲ್ಲಿ ಇರುವಂತಹ ಸೋಡಾಪುಡಿ ಜಿರಳೆಯನ್ನು ಸಾಯಿಸಿಬಿಡುತ್ತದೆ. ಸೋಡಾಪುಡಿ ಜಿರಳೆಗೆ ಆಗುವುದಿಲ್ಲ ಆದ್ದರಿಂದ ನಾವು ಇಲ್ಲಿ ಮೂರು ವಸ್ತುಗಳನ್ನ ಬೇರೆಸಿದ್ದೇವೆ ನಂತರ ಇದಕ್ಕೆ ಸ್ವಲ್ಪ ನೀರನ್ನು ಬೆರೆಸಿಕೊಂಡು ಅದನ್ನು ಉಂಡೆ ಮಾಡುವ ಶೆಪಿನಲ್ಲಿ ಮಾಡಿಕೊಳ್ಳಿ. ಇದನ್ನು ನೀವು ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಿ. ನಿಮ್ಮ ಮನೆಯಲ್ಲಿ ಎಷ್ಟು ಜಿರಳೆಗಳು ಇವೆ ಅದಕ್ಕೆ ತಕ್ಕಂತೆ ಉಂಡೆಗಳನ್ನು ಮಾಡಿಕೊಳ್ಳಿ.
ಜಿರಳೆಗಳು ಓಡಾಡುವ ಸ್ಥಳ ಯಾವುದು ಆಗಿರುತ್ತದೆ ಅಲ್ಲಿ ನೀವು ಈ ಉಂಡೆಗಳನ್ನು ಇಡಬೇಕು. ಅತಿ ಹೆಚ್ಚಾಗಿ ಜಿರಳೆಗಳು ಓಡಾಡುವ ಸ್ಥಳ ಅಡುಗೆಮನೆ. ಅಡುಗೆ ಮನೆ ಸಿಂಕ್ ಕೆಳಗಡೆ ಗ್ಯಾಸ್ ಕೆಳಗಡೆ ಮತ್ತು ಶೌಚಾಲಯದಲ್ಲಿ ನೀವು ಇದನ್ನು ಇಡಬೇಕಾಗುತ್ತದೆ. ನೀವು ಈ ರೀತಿಯಾಗಿ ಮಾಡುವುದರಿಂದ ಜಿರಳೆ ಅದನ್ನು ತಿನ್ನುವುದಕ್ಕೆ ಬಂದು ತಿಂದ ಸ್ವಲ್ಪ ನಂತರ ಸತ್ತು ಹೋಗುತ್ತದೆ. ನೀವು ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಜಿರಳೆಕಾಟ ಎಂದಿಗೂ ಮತ್ತೆ ಕಾಣಿಸುವುದಿಲ್ಲ. ಈ ರೀತಿ ನೀವು ಮನೆಯಲ್ಲಿ ಮಾಡಿದ ಜಿರಳೆ ಔಷಧಿಯನ್ನು ಉಪಯೋಗ ಮಾಡುವುದರಿಂದ ಎಲ್ಲಾ ಜಿರಳೆಗಳು ಸತ್ತು ಹೋಗುತ್ತವೆ ಹಾಗೆಯೇ 15 ದಿನಕ್ಕೊಮ್ಮೆ ತಯಾರಿಸಿಕೊಂಡು ಇದೇ ರೀತಿ ಮಾಡಿದರೆ ಒಂದು ಜಿರಳೆ ಕೂಡ ನಿಮ್ಮ ಮನೆಯಲ್ಲಿ ಉಳಿಯುವುದಿಲ್ಲ.