ಹೆಚ್ಚೇನೂ ಇಲ್ಲ ಕೇವಲ ಈ ಮೂರೂ ವಸ್ತುಗಳು ಇದ್ದರೆ ಸಾಕು, ಬರಿ 5 ನಿಮಿಷದಲ್ಲಿ ಮನೆಯಲ್ಲಿಯೇ ಕುಂಕುಮ ತಯಾರಿಸಬಹುದು.
Kumkum: You can make kumkum at home by using these simple things.
Kumkum: ನೀವು ನಿಮ್ಮ ಮನೆಯಲ್ಲಿಯೇ ಕುಳಿತುಕೊಂಡು ಕುಂಕುಮವನ್ನು ತಯಾರಿಸಿಕೊಳ್ಳಬಹುದು ಬರೀ 2 ನಿಮಿಷ ಸಾಕು ಹಾಗೆಯೇ ನಿಮ್ಮ ಮನೆಯಲ್ಲಿ ಇರುವ ವಸ್ತುಗಳಿಂದಲೇ ನೀವು ಕುಂಕುಮವನ್ನು ತಯಾರು ಮಾಡಬಹುದು. ನಮ್ಮ ಹಿಂದೂ ಧರ್ಮದಲ್ಲಿ ಕುಂಕುಮವನ್ನು ಎಲ್ಲರೂ ಬಹಳ ಶ್ರೇಷ್ಠ ಎಂದು ಹಣೆಗೆ ಇಟ್ಟುಕೊಳ್ಳುತ್ತಾರೆ ಜೊತೆಗೆ ದೇವರಿಗೂ ಸಹ ಇಡುತ್ತಾರೆ. ಆದರೆ ಜನರಿಗೆ ಅವರು ಬಳಸುತ್ತಿರುವ ಕುಂಕುಮ ಎಷ್ಟು ಪರಿಶುದ್ಧವಾಗಿದೆ ಎಂದು ತಿಳಿದವರು ಇಲ್ಲ.
ಹಾಗಾದರೆ ಹೊರಗಡೆಯಿಂದ ಕುಂಕುಮವನ್ನು ನೀವು ತರದೆ ನಿಮ್ಮ ಮನೆಯಲ್ಲಿ ಇರುವ ಒಂದೆರಡು ಮೂರು ವಸ್ತುಗಳನ್ನು ಬಳಸಿಕೊಂಡು ನಿಮ್ಮ ಮನೆಯಲ್ಲಿಯೇ ಎರಡು ಮೂರು ನಿಮಿಷದಲ್ಲಿ ಕುಂಕುಮವನ್ನು ತಯಾರು ಮಾಡುವುದು ಹೇಗೆ ಎಂದು ಸಂಪೂರ್ಣವಾಗಿ ಇಲ್ಲಿ ತಿಳಿಯಿರಿ. ಮೊದಲಿಗೆ ದೇವರ ಪೂಜೆಗೆ ಬಳಸುವ ಅರಿಶಿನವನ್ನು ತೆಗೆದುಕೊಳ್ಳಬೇಕು ಅಥವಾ ನೀವು ಅಡುಗೆಗೆ ಬಳಸುವ ಅರಿಶಿನವನ್ನು ಸಹ ಬಳಸಿಕೊಳ್ಳಬಹುದು.
ಇದಕ್ಕೆ ನೀವು ನಂತರ ಒಂದು ಅರ್ಧ ಚಮಚದಷ್ಟು ಸುಣ್ಣವನ್ನು ಹಾಕಿಕೊಳ್ಳಿ ಅಕಸ್ಮಾತ್ ನೀವೇನಾದರೂ ಸುಣ್ಣದ ಕ್ವಾಂಟಿಟಿ ಕಡಿಮೆ ಮಾಡಿದರೆ ಕುಂಕುಮದ ಬಣ್ಣ ಸ್ವಲ್ಪ ಕಡಿಮೆ ಕೆಂಪು ಬಣ್ಣದಲ್ಲಿ ಬರುತ್ತದೆ. ನೀವು ಇಲ್ಲಿ ಸುಣ್ಣದ ಬಳಕೆಯನ್ನು ಜಾಸ್ತಿ ಮಾಡಿದರೆ ನಿಮಗೆ ಕಲರ್ ಜಾಸ್ತಿ ಬರುತ್ತದೆ. ನಂತರ ನೀವು ಇದಕ್ಕೆ ಎರಡರಿಂದ ಮೂರು ಹನಿಗಳಷ್ಟು ನಿಂಬೆ ರಸವನ್ನು ಸೇರಿಸಿಕೊಳ್ಳಿ. ನಿಂಬೆಹಣ್ಣಿನ ರಸ ಹಾಕುವುದರಿಂದ ತುಂಬಾನೇ ಚೆನ್ನಾಗಿರುತ್ತದೆ ಮತ್ತು ಒಳ್ಳೆಯ ಕಲರ್ ಕೂಡ ಬರುತ್ತದೆ.
ಆನಂತರ ನೀವು ಅರಿಶಿನಗೆ ಸುಣ್ಣದ ನೀರನ್ನು ಸ್ವಲ್ಪ ಸ್ವಲ್ಪ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳುತ್ತಾ ಬರಬೇಕು. ನಂತರ ನೀವು ಅದನ್ನು ಮಿಶ್ರಣ ಮಾಡುತ್ತಾ ಮಾಡುತ್ತಾ ಅದು ಕಲರ್ ಬರುವತನಕ ಚೆನ್ನಾಗಿ ಮಿಕ್ಸ್ ಮಾಡುತ್ತಾ ಹೋಗಬೇಕು. ನೀವು ಅದನ್ನು ಮಿಕ್ಸ್ ಮಾಡುತ್ತಾ ಹೋದಂಗೆ ನಿಮಗೆ ಕೆಂಪು ಬಣ್ಣದ ಕುಂಕುಮ ರೆಡಿ ಆಗುತ್ತದೆ. ಇದನ್ನು ನೀವು ಒಂದು ಪ್ಲೇಟಿನಲ್ಲಿ ಹಾಕಿ ಒಣಗಲು ಬಿಟ್ಟರೆ ಸಾಕು. ನೀವು ಈ ರೀತಿಯಾಗಿ ಮಿಶ್ರಣವನ್ನು ಮಾಡಿಕೊಂಡು ನಿಮಗೆ ಯಾವ ಕಲರ್ ಬೇಕು ಆ ಕಲರ್ ನೀವು ಕುಂಕುಮ ಪಡೆದುಕೊಳ್ಳಬಹುದು.
ಇದೀಗ ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್..!! ತಿದ್ದುಪಡೆ ಮನೆ ಯಜಮಾನಿ ಹಾಗೂ ಹೆಸರು ಸೇರಿಸುವುದು..
ಸ್ವತಹ ಮನೆಯಲ್ಲಿ ತಯಾರಿಸಿದ ಈ ಕುಂಕುಮವನ್ನು ನೀವು ದೇವರಿಗೆ ಮತ್ತು ನಿಮ್ಮ ಹಣೆಗೆ ಎಲ್ಲಾ ಕಡೆ ಉಪಯೋಗಿಸಬಹುದು ಬರಿ ಎರಡು ನಿಮಿಷದಲ್ಲಿ ತಯಾರಾಗಿರುವ ಈ ಕುಂಕುಮ ಯಾವುದೆ ರೀತಿಯ ಕೆಮಿಕಲ್ ಬಳಸಿರುವುದಿಲ್ಲ ಹಾಗಾಗಿ ಹಬ್ಬ ಹರಿದಿನಗಳ ದಿನದಂದು ನೀವು ಮನೆಯಲ್ಲಿ ಆ ಸಮಯಕ್ಕೆ ಕುಂಕುಮ ಬೇಕು ಎಂದರೆ ಬರಿ ಎರಡು ನಿಮಿಷದಲ್ಲಿ ಈ ರೀತಿ ತಯಾರು ಮಾಡಿಕೊಂಡರೆ ಸಾಕಾಗುತ್ತೆ. ಈ ರೀತಿ ಮನೆಯಲ್ಲಿಯೇ ಕುಂಕುಮವನ್ನು ತಯಾರು ಮಾಡುವುದನ್ನು ನೀವು ಸಹ ನಿಮ್ಮ ಮನೆಯಲ್ಲಿ ಒಮ್ಮೆ ತಯಾರು ಮಾಡಿ ನೋಡಿ…
ಚಿಕ್ಕ ಸೊಳ್ಳೆ ಗುಂಗುರು ನೋಣ ಯಾವುದು ಕೂಡ ನಿಮ್ಮ ಅಡುಗೆ ಮನೆಯಲ್ಲಿ ಇರುವುದಿಲ್ಲ ಇದನ್ನು ಬಳಸಿದರೆ..!!