ನಿಮ್ಮ ರಾಶಿಗೆ ಅನುಗುಣವಾಗಿ ಬಣ್ಣಗಳನ್ನು ಆಯ್ಕೆಮಾಡಿಕೊಂಡರೆ ಉತ್ತಮ, ಯಾವ ರಾಶಿಗೆ ಯಾವ ಬಣ್ಣ ಒಳ್ಳೆಯದು ಫುಲ್ ಡೀಟೇಲ್ಸ್ ಇಲ್ಲಿದೆ.
Zodiac Signs and their colors: ಒಬ್ಬ ಮನುಷ್ಯ ಎಂಬ ವಿಷಯಕ್ಕೆ ಬಂದರೆ ಅವನು ತನಗೆ ಇಷ್ಟ ಪಟ್ಟಂತೆ ಒಂದು ಬಣ್ಣವನ್ನು ಇಚ್ಚಿಸುತ್ತಾನೆ. ಆದರೆ ರಾಶಿ ವಿಷಯಕ್ಕೆ ಬಂದರೆ ಅವನ ರಾಶಿಗೆ ಸಂಬಂಧಿಸಿದಂತೆ ಕೆಲವು ಬಣ್ಣಗಳನ್ನು ಇಷ್ಟಪಡಲೇಬೇಕಾಗುತ್ತದೆ. ಹಾಗಾದರೆ ಯಾವ ಯಾವ ರಾಶಿಗೆ ಯಾವ ಯಾವ ಬಣ್ಣ ಸರಿ ಹೊಂದಬಹುದು ಮತ್ತು ಒಂದು ವೇಳೆ ನೀವು ಅದೇ ರಾಶಿಯವರಾಗಿದ್ದರೆ ಅಂತಹ ಬಣ್ಣಗಳನ್ನು ಅತಿ ಹೆಚ್ಚು ಇಷ್ಟಪಡುವುದು ಉತ್ತಮವಾಗಿದೆ. ಹಾಗಾದರೆ ಅವು ಯಾವುವು ಎಂಬುದನ್ನು ತಿಳಿಯೋಣ ಬನ್ನಿ
ಮೇಷ ರಾಶಿ ಮೇಷ ರಾಶಿಗಳಿಗೆ ಕೆಂಪು ಮತ್ತು ಕೆಂಪು ಮಿಶ್ರಿತ ಬಣ್ಣಗಳು ಹಾಗೂ ನಿಂಬೆ ಹಸಿರು ಮತ್ತು ಹಸಿರು ಬಿಳಿ ಬಣ್ಣಗಳು ತುಂಬಾ ಅದೃಷ್ಟವನ್ನು ತಂದು ಕೊಡುತ್ತದೆ.
ವೃಷಭ ರಾಶಿ ವೃಷಭ ರಾಶಿಯವರಿಗೆ ಹಳದಿ ಮತ್ತು ಹಸಿರು ಬಣ್ಣ ತುಂಬಾ ಆಗಿ ಬರುತ್ತದೆ ಹಾಗೂ ಹಸಿರು ಬಣ್ಣದ ಯಾವುದೇ ಮಿಶ್ರಿತ ಬಟ್ಟೆಗಳು ಅಥವಾ ಬಣ್ಣಗಳು ಆದರೂ ಕೂಡಿಬರುತ್ತವೆ, ಆದರೆ ಕೆಂಪು ಮಾತ್ರ ವಿರುದ್ಧವಾಗಿ ಇರುತ್ತದೆ.
ಮಿಥುನ ರಾಶಿ ಮಿಥುನ ರಾಶಿಯವರಿಗೆ ಹಳದಿ ಬಣ್ಣ ಮತ್ತು ಹಳದಿ ಬಣ್ಣದ ಮಿಶ್ರಿತ ಯಾವುದೇ ಬಣ್ಣಗಳು ಸರಿಹೊಂದುತ್ತವೆ. ಇದು ಅವರ ಮನಸ್ಸಿನ ಮೇಲೆ ಆಗುವಂತಹ ಪ್ರೇರಣೆಯನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲದೆ ಅವರಿಗೆ ಯಶಸ್ಸನ್ನು ತಂದುಕೊಡುವುದಲ್ಲದೆ ಅವರ ಮನಸ್ಸು ಯಾವಾಗಲೂ ಸಹ ಧನಾತ್ಮಕವಾಗಿರಲು ಸಹಾಯಮಾಡುತ್ತದೆ.
ಕರ್ಕಾಟಕ ಕರ್ಕಾಟಕ ರಾಶಿಯವರಿಗೆ ಬಿಳಿ ಹಾಗೂ ಬಿಳಿ ಮಿಶ್ರಿತ ಬಣ್ಣಗಳು ಯಾವುದೇ ಸಹ ಕೂಡಿಬರುತ್ತದೆ ಇದು ಅವರ ಜೀವನದಲ್ಲಿ ಮುಂದೆ ಬರಲು ಸಹಾಯ ಮಾಡುತ್ತದೆ.
ಸಿಂಹ ರಾಶಿ ಸಿಂಹ ರಾಶಿಯವರಿಗೆ ಕೇಸರಿ ಮತ್ತು ಕೇಸರಿ ಬಣ್ಣದ ಮಿಶ್ರಿತ ಯಾವುದೇ ಬಣ್ಣಗಳು ಸಹ ಕೂಡಿಬರುತ್ತದೆ. ಇಷ್ಟೇ ಅಲ್ಲದೆ ಅವರಿಗೆ ಕೆಂಪು ಬಣ್ಣವು ಭಾಗ್ಯವನ್ನು ಸಹ ತಂದೊಡುತ್ತದೆ.
ಕನ್ಯಾ ರಾಶಿ ಕನ್ಯಾ ರಾಶಿಯವರಿಗೆ ನೀಲಿ ಬಣ್ಣ ಮತ್ತು ಇತರ ಮಿಶ್ರಿತ ಬಣ್ಣಗಳು ಕೂಡಿಬರುತ್ತದೆ. ಇದು ಅವರು ಧರಿಸುವುದರಿಂದ ಶುಭ ಕಾರ್ಯಗಳಾಗಲಿ ಅಥವಾ ಬೇರೆ ಕಾರ್ಯಕ್ರಮಗಳಾಗಲಿ ಶ್ರೇಯಸ್ಕರವಾಗಿ ನಡೆಯುತ್ತವೆ.
ತುಲಾ ರಾಶಿಯವರಿಗೆ ಗುಲಾಬಿ ಬಣ್ಣ ಆಗಿಬರುತ್ತದೆ. ಇದು ಅವರ ಜೀವನದಲ್ಲಿ ಸೌಭಾಗ್ಯವನ್ನು ತಂದುಕೊಡುತ್ತದೆ. ಅಷ್ಟೇ ಅಲ್ಲದೆ ಇವರಿಗೆ ಹಳದಿ ಬಣ್ಣ ಮತ್ತು ತಿಳಿ ಹಳದಿ ಬಣ್ಣಗಳು ಕೂಡಿ ಬರುತ್ತವೆ.
ವೃಶ್ಚಿಕ ರಾಶಿ ವೃಶ್ಚಿಕ ರಾಶಿ ಅವರಿಗೆ ಕಪ್ಪು ಬಣ್ಣವು ಕೂಡಿಬರುತ್ತದೆ. ಅಷ್ಟೇ ಅಲ್ಲದೆ ಅವರ ಜೀವನದಲ್ಲಿ ಯಶಸ್ಸನ್ನು ಸಹ ತರುತ್ತದೆ.
ಧನು ರಾಶಿ ಧನು ರಾಶಿಯವರಿಗೆ ನೇರಳೆ ಬಣ್ಣವು ಕೂಡಿ ಬಂದು ಶುಭ ಕಾರ್ಯಗಳಲ್ಲೂ ಸಹ ಈ ಬಣ್ಣವನ್ನು ಧರಿಸುವುದರಿಂದ ಒಳಿತು ಆಗುತ್ತದೆ.
ಮಕರ ರಾಶಿ ಮಕರ ರಾಶಿಯವರಿಗೆ ಕಪ್ಪು ಮತ್ತು ನೀಲಿ ಬಣ್ಣ ಮಿಶ್ರಿತ ಬಣ್ಣಗಳು ಹಾಗೆ ಬರುತ್ತವೆ. ಅದರಿಂದ ಈ ಬಣ್ಣಗಳನ್ನು ಬಳಸುವುದು ಉತ್ತಮವಾಗಿದೆ.
ಕುಂಭ ರಾಶಿ ಕುಂಭ ರಾಶಿಯವರಿಗೆ ತಿಳಿ ನೀಲಿ ಅಥವಾ ಆಕಾಶದ ಬಣ್ಣ ತುಂಬಾ ಅದೃಷ್ಟವನ್ನು ತಂದುಕೊಡುತ್ತದೆ. ಅಷ್ಟೇ ಅಲ್ಲದೆ ಅವರ ಜೀವನದಲ್ಲಿ ಯಶಸ್ಸು ಕೂಡ ತಂದು ಕೊಡುವ ಒಂದು ಬಣ್ಣವಾಗಿದೆ.
ಮೀನ ರಾಶಿ ಮೀನ ರಾಶಿಯವರಿಗೆ ಹಳದಿ ಮತ್ತು ಕಿತ್ತಳೆ ಕೇಸರಿ ಬಣ್ಣ ಹಾಗೆ ಬರುತ್ತದೆ. ಈ ಬಣ್ಣಗಳನ್ನು ಅತಿ ಹೆಚ್ಚಾಗಿ ಬಳಸುವುದರಿಂದ ಅವರ ಜೀವನದಲ್ಲಿ ನೆಮ್ಮದಿಯಿಂದ ಇರಲು ಸಹಾಯಮಾಡುತ್ತದೆ.