Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಿಂಬೆಹಣ್ಣು ಹಾಳಾಗಿದೆ ಕೊಳೆತಿದೆ ಎಂದು ಎಸೆಯಬೇಡಿ, ಕೊಳೆತ ನಿಂಬೆಹಣ್ಣಿನಿಂದ ನಿಮ್ಮ ಮನೆಯ ದೊಡ್ಡ ಕೆಲಸಗಳು ಬಹಳ ಕಡಿಮೆ ನಿಮಿಷದಲ್ಲಿ ಆಗುತ್ತದೆ.

Kitchen Tips: If you have rotten lemons in your home don't through them, instead of throwing them use it like this.

Kitchen Tips: ಸಾಮಾನ್ಯವಾಗಿ ಜನರು ಏನು ಮಾಡುತ್ತಾರೆ ಎಂದರೆ ಮನೆಯಲ್ಲಿರುವ ನಿಂಬೆ ಹಣ್ಣುಗಳು ಕೊಳೆತು ಹೋದರೆ ಅವುಗಳನ್ನು ಕೂಡಲೇ ಮನೆಯಿಂದ ಆಚೆ ಎಸೆಯುತ್ತಾರೆ ಅಥವಾ ಡಸ್ಟ್ ಬಿನ್ ಗೆ ಹಾಕುತ್ತಾರೆ. ಹೀಗೆ ಯಾವುದೇ ಕಾರಣಕ್ಕೂ ಮಾಡಬೇಡಿ, ಏಕೆಂದರೆ ಕೊಳೆತಿರುವ ನಿಂಬೆಹಣ್ಣಿನಿಂದ ನಿಮ್ಮ ಮನೆಗೆ ಆಗುವ ಬೇಕಾದಷ್ಟು ಕೆಲಸಗಳಿವೆ. ನಿಂಬೆ ಹಣ್ಣು ಪ್ರತಿಯೊಬ್ಬರ ಮನೆಯಲ್ಲಿಯೂ ಸಾಮಾನ್ಯವಾಗಿ ಇದ್ದೇ ಇರುತ್ತದೆ.

ಅವುಗಳನ್ನು ನಾವು ಉಪಯೋಗ ಮಾಡದೇ ಇರುವಾಗ ಅಥವಾ ಹೆಚ್ಚು ದಿನಗಳ ಕಾಲ ಇಟ್ಟಾಗ ಅವುಗಳು ಕೊಳೆತು ಹೋಗುತ್ತದೆ. ಆಗ ಸಾಮಾನ್ಯವಾಗಿ ಎಲ್ಲರೂ ಕಸದ ಬುಟ್ಟಿಗೆ ಹಾಕುತ್ತಾರೆ ಖಂಡಿತವಾಗಿಯೂ ಹೀಗೆ ಮಾಡಬೇಡಿ. ಇದು ಬಹಳ ಉಪಯೋಗಕ್ಕೆ ಬರುತ್ತದೆ ಇದರ ಉಪಯೋಗ ತಿಳಿದರೆ ನೀವು ಮತ್ತೊಮ್ಮೆ ಕೊಳೆತ ನಿಂಬೆಹಣ್ಣನ್ನು ಎಂದಿಗೂ ಆಚೆ ಎಸೆಯುವುದೇ ಇಲ್ಲ.

ಇನ್ನು ಹಲ್ಲಿ ಒಂದು ನಿಮ್ಮ ಮನೆಯಲ್ಲಿ ಮನೆಯಲ್ಲಿ ಇರಲ್ಲ..!! ಹಲ್ಲಿ ಯನ್ನೂ ಹೊಡಿಸುವ ಸೂಪರ್ ಹಿಟ್ ಟಿಪ್ಸ್…

ಹಾಳಾದ ನಿಂಬೆ ಹಣ್ಣಿನಿಂದ ಹಾಗುವ ಉಪಯೋಗಗಳು.

ಮೊದಲಿಗೆ ನೀವು ಕೊಳೆತಿರುವ ನಿಂಬೆ ಹಣ್ಣನ್ನು ತೆಗೆದುಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ಹಾಗೆಯೇ ಇದಕ್ಕೆ ಸ್ವಲ್ಪ ನೀರನ್ನು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ನಂತರ ಅದನ್ನು ಒಂದು ಕಾಟನ್ ಬಟ್ಟೆಯಿಂದ ಶೋಧಿಸಿಕೊಳ್ಳಿ ಇದಕ್ಕೆ ಒಂದು ಚಮಚದಷ್ಟು (Baking Soda) ಅಡುಗೆ ಸೋಡವನ್ನು ಬೆರೆಸಿಕೊಳ್ಳಬೇಕು. ನಂತರ ನೀವು ಈ ಮಿಶ್ರಣವನ್ನು ಒಂದು ಬಾಟಲಿಗೆ ಹಾಕಿಕೊಂಡು ಸ್ಟೋರ್ ಮಾಡಿಕೊಳ್ಳಿ. ನೀವೇನಾದರೂ ಇದನ್ನು ಜಾಸ್ತಿ ತಯಾರು ಮಾಡಿದರೆ ಸುಮಾರು 15 ದಿನಗಳ ವರೆಗೆ ಶೇಖರಣೆ ಮಾಡಿ ಇಡಬಹುದು.

ಈ ಮಿಶ್ರಣವನ್ನು ನೀವು ನಿಮ್ಮ ಮನೆಯಲ್ಲಿ ಆಗಿರುವ ಕಲೆಗಳನ್ನು ಈ ಕ್ಲೀನರ್ ನಂತೆ ಬಳಸಿ ಕ್ಲೀನ್ ಮಾಡಬಹುದು. ನಿಮ್ಮ ಮನೆಯಲ್ಲಿ ಅತಿ ಹೆಚ್ಚಾಗಿ ಕಲೆಗಳು ಆಗಿರುವ ಅಥವಾ ಬಾರಿ ವರ್ಷಗಳ ಹಿಂದೆ ಆಗಿರುವ ಕೆಟ್ಟ ಕೊಳೆಗಳನ್ನು ನೀವು ಈ ಮಿಶ್ರಣವನ್ನು ಸ್ವಲ್ಪ ಅದಕ್ಕೆ ಬೆರೆಸಿ ತಿಕ್ಕಿದರೆ ಸಾಕು ಸಂಪೂರ್ಣವಾಗಿ ಎಲ್ಲಾ ಹೊರೆಟು ಹೋಗುತ್ತದೆ. ನಂತರ ನೀವು ಇದನ್ನು ಬಳಸಿದ ಮೇಲೆ ನಿಮಗೆ ಆಶ್ಚರ್ಯ ಆಗುತ್ತದೆ ಏಕೆಂದರೆ ನಿಮ್ಮ ಮನೆಯಲ್ಲಿ ಬಹಳ ವರ್ಷಗಳಿಂದ ಉಳಿದುಕೊಂಡಿರುವ ಕಲೆ ಸ್ವಲ್ಪ ಇರುವುದಿಲ್ಲ.

ಅಜೀರ್ಣ ಮತ್ತು ಹೊಟ್ಟೆ ಉಬ್ಬರಕ್ಕೆ ಹೇಳಿ ಗುಡ್ ಬಾಯ್..!!

ಮನೆಯಲ್ಲಿರುವ ದೇವರ ಸಾಮಾನುಗಳನ್ನು ನೀವು ಪೀತಾಂಬರಿ ಅಥವಾ ಹುಣಸೆಹಣ್ಣು ಇವುಗಳಿಂದ ಉಜ್ಜಿ ತಿಕ್ಕುತ್ತೇವೆ. ಆದರೆ ಆದರೆ ನೀವು ಮಾಡಿ ಇಟ್ಟುಕೊಂಡಿರುವಂತಹ ಲಿಕ್ವಿಡ್ ನಿಂದ ಸ್ವಲ್ಪ ಸಮಯದವರೆಗೆ ನೆನೆಯಲು ಬಿಟ್ಟು ನಂತರ ಉಜ್ಜಿದರೆ ಸಾಕು ಎಲ್ಲಾ ಸಂಪೂರ್ಣ ವಾಗೀ ಕ್ಲೀನ್ ಆಗುತ್ತದೆ. ನಂತರ ನಿಮ್ಮ ಮನೆಯ ನೆಲದಲ್ಲಿ ಆಗಿರುವ ಹಳೆಯ ಕಲೆಗಳಿಗೆ ನೀವು ಇಲ್ಲಿ  ಲಿಕ್ವಿಡ್ ಒಂದು ಚಮಚ ಬಳಸಿ ನಿಮ್ಮ ಮನೆಯನ್ನು ಒಮ್ಮೆ ಒರೆಸಿ ನೋಡಿ ನಿಮ್ಮ ಮನೆಯ ನೆಲ ತುಂಬಾನೇ ಚೆನ್ನಾಗಿ ಕ್ಲೀನ್ ಆಗುತ್ತದೆ.

ಯಾಕೆಂದರೆ ಸೋಡಾ ಪೌಡರ್ ಮತ್ತು ನಿಂಬೆಹಣ್ಣಿನ ರಸ ಹಾಕುವುದರಿಂದ ಎಂತಹ ಹಠಮಾರೀ ಕೊಳಕು ಇದ್ದರು ಸಹ ಸಂಪೂರ್ಣವಾಗಿ ಕ್ಲೀನ್ ಆಗುತ್ತದೆ. ಸುಮ್ಮನೆ ಕೊಳತ ನಿಂಬೆಹಣ್ಣನ್ನು ಬಿಸಾಡುವ ಬದಲು ಈ ರೀತಿಯಾಗಿ ತಲೆ ಉಪಯೋಗಿಸಿ ನೀವು ಈ ರೀತಿಯ ಮಿಶ್ರಣವನ್ನು ಒಮ್ಮೆ ಮಾಡಿಕೊಂಡು ನಿಮ್ಮ ಮನೆಯಲ್ಲಿರುವ ಕೆಟ್ಟ ಕಲೆಗಳನ್ನು ಚೆನ್ನಾಗಿ ಕ್ಲೀನ್ ಮಾಡಿದರೆ ಸಾಕು ನಿಮಗೆ ಯಾವುದೇ ರೀತಿಯ ಕೆಮಿಕಲ್ ಗಳನ್ನು ಬಳಸುವ ಅವಶ್ಯಕತೆ ಬರುವುದಿಲ್ಲ.

ಖಾಲಿ ಹೊಟ್ಟೆಯಲ್ಲಿ ಒಂದೇ ಒಂದು ಬೆಳ್ಳುಳ್ಳಿಯ ಎಸಳನ್ನು ತಿಂದು ನೋಡಿ! ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳು ಒಮ್ಮೆಲೆ ದೂರ!

lemons
image credited to the original sources. If you have rotten lemons in your home don’t through them, instead of throwing them use it like this.
Leave a comment