ಹಲಸಿನ ಬೀಜವನ್ನು ಬಿಸಾಕಬೇಡಿ, ಇದರ ಪ್ರಯೋಜನಗಳನ್ನು ತಿಳಿದರೆ ನೀವೇ ಆಶ್ಚರ್ಯ ಪಡ್ತೀರಾ, ಏನೇನೆಲ್ಲ ಮಾಡಬಹುದು ಗೊತ್ತಾ.
Jackfruit Seeds Benefits: Don't throw away jackfruit seeds, you will be surprised if you know its benefits, you know what it can do.
Jackfruit Seeds Benefits: ನಾವು ಸೇವನೆ ಮಾಡುವ ಹಲಸಿನ ಹಣ್ಣಿನಿಂದ ನಮ್ಮ ದೇಹಕ್ಕೆ ಎಷ್ಟೆಲ್ಲ ರೀತಿಯ ಪ್ರಯೋಜನಗಳು ಇದೆಯೋ ಅದೇ ರೀತಿ ಹಲಸಿನ ಬೀಜದಲ್ಲಿಯೂ ಸಹ ನಮಗೆ ಅಷ್ಟೇ ಉಪಯೋಗ ಇದೆ. ಆದರೆ ನಮಗೆ ಹಲಸಿನ ಬೀಜದ ಬಗ್ಗೆ ಅತಿಯಾದ ಮಾಹಿತಿ ಇಲ್ಲ ಅದನ್ನು ಇದರ ಮಾಹಿತಿ ತಿಳಿಯದೆ ಎಷ್ಟೊಂದು ಜನರು ಬಿಸಾಕುತ್ತಾರೆ. ಹಲಸಿನ ಬೀಜದಿಂದ ನಾವು ಏನೆಲ್ಲಾ ಅಡುಗೆಯನ್ನು ಮಾಡಬಹುದು.
ಮತ್ತು ನಮಗೆ ಇದರಿಂದ ಏನೆಲ್ಲ ಉಪಯೋಗ ಇದೆ ಎಂದು ಸಂಪೂರ್ಣವಾಗಿ ತಿಳಿಯೋಣ ಬನ್ನಿ ಹಲಸಿನ ಬೀಜವನ್ನು ನಾವು ಬೇಯಿಸಿಕೊಂಡು ತಿನ್ನಬಹುದು ಅದರಿಂದ ಪಲ್ಯ ತಯಾರಿಸಬಹುದು ಸಾಂಬಾರ್ ಕೂಡ ಮಾಡಬಹುದು ಇದೆಲ್ಲವೂ ಕೂಡ ನಮಗೆ ಕಷ್ಟ ಎಂದು ಹೇಳಿದರೆ ನೀವು ಕೊನೆಯದಾಗಿ ಹಲಸಿನ ಬೀಜವನ್ನು ಉರಿಯುವುದು ತಿನ್ನುವುದು ಬಹಳ ಸುಲಭವಾದ ಕೆಲಸ.
ನೀವು ಒಂದು ಬಾಣಲಿಯನ್ನು ತೆಗೆದುಕೊಂಡು ಅದಕ್ಕೆ ಹಲಸಿನ ಬೀಜವನ್ನು ಹಾಕಿಕೊಂಡು ಕಡಿಮೆ ಉರಿಯಲ್ಲಿ ಚೆನ್ನಾಗಿ ಉರಿದುಕೊಳ್ಳಬೇಕು. ಹೀಗೆ ಮಾಡಿಕೊಂಡ ನಂತರ ಹಲಸಿನ ಸಿಪ್ಪೆ ಕಪ್ಪಾಗುವ ತನಕ ನೀವು ಅದನ್ನು ಚೆನ್ನಾಗಿ ಫ್ರೈ ಮಾಡಬೇಕು ಅದನ್ನು ಸ್ವಲ್ಪ ಸಮಯದವರೆಗೆ ಬಾಣಲಿಯಲ್ಲಿ ಇರಲು ಬಿಡಬೇಕು ಏಕೆಂದರೆ ಬಾಣಲಿ ಬಿಸಿಯಾಗಿರುವುದರಿಂದ ಹಲಸಿನ ಒಳಬೀಜ ಚೆನ್ನಾಗಿ ಡ್ರೈ ಆಗುತ್ತದೆ.
ಹೀಗೆ ಉರಿದು ಇಟ್ಟುಕೊಂಡಿರುವ ಹಲಸಿನ ಬೀಜವನ್ನು ನೀವು ಸಾಯಂಕಾಲದ ಸಮಯದಲ್ಲಿ ತಿನ್ನಬಹುದು ಮಕ್ಕಳಿಗೂ ಕೂಡ ಕೊಡಬಹುದು ಟಿವಿ ನೋಡುವ ಸಮಯದಲ್ಲಿ ತಿನ್ನಬಹುದು. ಮಲೆನಾಡಿನ ಭಾಗದಲ್ಲಿ ವಾಸ ಮಾಡುವ ಮಕ್ಕಳಿಗೆ ಸಾಮಾನ್ಯವಾಗಿ ಇದರ ಪರಿಚಯ ಗೊತ್ತೇ ಇರುತ್ತದೆ. ಇನ್ನು ಹಲಸಿನ ಬೀಜದ ಉಪಯೋಗಗಳನ್ನು ನೋಡುವುದಾದರೆ: ಹಲಸಿನ ಬೀಜದಲ್ಲಿ ರೈಬೊಫ್ಲವಿನ್ ಎಂಬ ಅಂಶವು ಬಹಳ ಹೆಚ್ಚಾಗಿರುತ್ತದೆ. ಇವುಗಳು ನಮ್ಮ ಆಹಾರದ ಪೋಷಕಾಂಶಗಳನ್ನು ಬಹಳ ಶಕ್ತಿಯುತವಾಗಿ ಇರಲು ಸಹಾಯ ಮಾಡುತ್ತವೆ.
ಹಾಗೆಯೇ ಇದರಲ್ಲಿರುವ ಪೋಷಕಾಂಶಗಳು ನಮ್ಮ ಕಣ್ಣು, ಕೂದಲು ಹಾಗೂ ನಮ್ಮ ಚರ್ಮವನ್ನು ಸಹ ಚೆನ್ನಾಗಿರಲು ಸಹಾಯ ಮಾಡುತ್ತದೆ. ಹಲಸಿನ ಬೀಜದಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಅಂಶ ಇರುತ್ತದೆ. ಈ ಪ್ರೋಟಿನ್ ಅಂಶ ನಮ್ಮ ಸ್ನಾಯುಗಳ ಬೆಳವಣಿಗೆ ಹಾಗೂ ನಮ್ಮ ಚಯಾಪಚಯ ಕ್ರಿಯೆ ಸರಿಯಾದ ಕ್ರಮದಲ್ಲಿ ಆಗುವುದಕ್ಕೆ ಸಹಾಯಮಾಡುತ್ತದೆ.