ಯಾವ ಪಾತ್ರೆಯಲ್ಲಿ ನೀರನ್ನು ಕುಡಿಯುವುದು ಉತ್ತಮ ಗೊತ್ತೇ, ಅಪ್ಪಿ ತಪ್ಪಿಯೂ ಇಂತಹ ಪಾತ್ರಗಳಲ್ಲಿ ಮಾತ್ರ ನೀರು ಕುಡಿಯಬೇಡಿ.
Right Vessels to drink water.
ಎಷ್ಟೋ ಜನರು ನೀರನ್ನು ಹಲವು ರೀತಿಯಲ್ಲಿ ಶೇಖರಿಸಿ ಕುಡಿಯುತ್ತಾರೆ. ಹಾಗಾದರೆ ಯಾವ ಯಾವ ವಸ್ತುಗಳಲ್ಲಿ ನೀರನ್ನು ಶೇಕರಿಸಿ ಕುಡಿದರೆ ದೇಹದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ನೋಡೋಣ ಬನ್ನಿ.
ಬೆಳ್ಳಿ ಲೋಟ ಬೆಳ್ಳಿ ಲೋಟದಲ್ಲಿ ನೀರನ್ನು ಕುಡಿಯುವುದರಿಂದ ಶೀತ ಮತ್ತು ಜ್ವರ ಇದ್ದರೆ ಬೇಗ ಕಡಿಮೆಯಾಗುತ್ತದೆ. ಹಿತ್ತಾಳೆ ಲೋಟದಿಂದ ನೀರನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಅಷ್ಟೇ ಅಲ್ಲದೆ ಜೀರ್ಣ ವ್ಯವಸ್ಥೆಯನ್ನು ಸಹ ಸರಿ ಮಾಡುತ್ತದೆ.
ತಾಮ್ರದ ಗ್ಲಾಸ್ ನಲ್ಲಿ ನೀರನ್ನು ಕುಡಿಯುವುದರಿಂದ ರಕ್ತ ಶುದ್ದಿಯಾಗುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿರುವ ಕಲ್ಮಶಗಳನ್ನು ಬೆವರು ಮತ್ತು ಮೂತ್ರದ ಮೂಲಕ ಹೊರ ಹಾಕುತ್ತದೆ. ತಾಮ್ರದ ಪಾತ್ರೆಯಲ್ಲಿ ನೀರನ್ನು ಸ್ವೀಕರಿಸಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಬಿಪಿ ಗೆ ಇದರಿಂದ ಸಹಾಯ ಮಾಡುತ್ತದೆ.
ಎಷ್ಟೋ ಜನ ಪ್ಲಾಸ್ಟಿಕ್ ಗ್ಲಾಸ್ ಅಥವಾ ಪ್ಲಾಸ್ಟಿಕ್ ಬಾಟಲನ್ನು ಬಳಸುತ್ತಾರೆ. ಆದರೆ ಇದು ಸಂಪೂರ್ಣ ತಪ್ಪು. ಏಕೆಂದರೆ ಪ್ಲಾಸ್ಟಿಕ್ ಬಾಟಲ್ ಒಂದು ಕೆಮಿಕಲ್ಸ್ ನಿಂದ ಮಾಡಲ್ಪಟ್ಟಂತಹ ಜಾಡಿ ಆಗಿದೆ. ಆದ್ದರಿಂದ ಅದರಲ್ಲಿ ನೀರನ್ನು ಶೇಖರಿಸಿ ಕುಡಿಯುವುದರಿಂದ ದೇಹಕ್ಕೆ ಹಲವಾರು ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಮಣ್ಣಿನ ಪಾತ್ರೆಯಲ್ಲಿ ನೀರನ್ನು ಶೇಖರಿಸಿ ಇಡುವುದರಿಂದ ಇದು ನೈಸರ್ಗಿಕವಾಗಿ ತಂಪಾಗಿ ಇರುತ್ತದೆ. ಅಷ್ಟೇ ಅಲ್ಲದೆ ಪಚನ ಕ್ರಿಯೆ ಕೂಡ ಸರಿಯಾಗಿ ನಡೆಯುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಬಹಳಷ್ಟು ದಿನ ನೀರನ್ನು ಸಂಗ್ರಹಿಸಿ ಇಡಬಹುದು.
ಗಾಜಿನ ಗ್ಲಾಸ್ ಗಾಜಿನ ಗ್ಲಾಸ್ ನೀರು ಕುಡಿದರೂ ಸಹ ಅದು ಉತ್ತಮವಾಗಿದೆ ಏಕೆಂದರೆ ಇದು ಪಾರದರ್ಶಕವಾಗಿರುವುದರಿಂದ ಅದರಲ್ಲಿ ಇರುವಂತಹ ಕ್ರಿಮಿ ಕೀಟಗಳಾಗಲಿ ಅಥವಾ ನೀರಿನ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ನಮ್ಮ ದೈನಂದಿನ ಜೀವನದಲ್ಲಿ ನಾವು ಊಟಕ್ಕಿಂತ ಅತಿ ಹೆಚ್ಚಾಗಿ ನೀರನ್ನು ಸೇವಿಸುತ್ತೇವೆ. ಹಾಗಾಗಿ ನೀರನ್ನು ಹೇಗೆ ಸೇವಿಸುತ್ತೇವೆ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ಆದರೆ ನೀವು ಬಹಳಷ್ಟು ಪ್ಲಾಸ್ಟಿಕ್ ಅನ್ನು ಬಳಸುವುದು ಕಡಿಮೆ ಮಾಡಿದರೆ ಒಳ್ಳೆಯದು . ಇಲ್ಲದಿದ್ದರೆ ಇದು ಆರೋಗ್ಯಕ್ಕೆ ತುಂಬಾ ಕೆಡುಕನ್ನು ಉಂಟು ಮಾಡುತ್ತದೆ. ಅಷ್ಟೇ ಅಲ್ಲದೆ ತಾಮ್ರದ ಪಾತ್ರೆಯಲ್ಲಿ ರಾತ್ರಿಯಿಡಿ ನೀರನ್ನು ಇಟ್ಟು ಬೆಳಗ್ಗೆ ಎದ್ದು ಬರಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದಿನವಿಡಿ ಆಕ್ಟಿವ್ ಆಗಿರಲು ಇದು ತುಂಬಾ ಸಹಾಯ ಮಾಡುತ್ತದೆ.