ಬೆಲ್ಲವನ್ನು ನೀವು ಪ್ರತಿದಿನ ಬಳಕೆ ಮಾಡುವುದರಿಂದ ಆಗುವ ಪ್ರಯೋಜನಗಳು, ಒಂದಲ್ಲ ಎರಡಲ್ಲ, ತಿಳಿದರೆ ಈಗಲೇ ಅಂಗಡಿಗೆ ಹೋಗಿ ತರುವಿರಿ.
Jaggery Benefits: Uses and Nutritional health benefits of Jaggery.
Jaggery Benefits: ಬೆಲ್ಲವನ್ನು ನಿಮ್ಮ ಪ್ರತಿನಿತ್ಯ ಜೀವನದಲ್ಲಿ ನೀವು ಸೇವನೆ ಮಾಡುವುದರಿಂದ ಜೀರ್ಣ ಕ್ರಿಯೆಗೆ ನಿಮಗೆ ಸಹಾಯಕಾರಿಯಾಗುತ್ತದೆ ಮತ್ತು ಅಜೀರ್ಣ ಕ್ರಿಯೆಯನ್ನು ಹೋಗಲಾಡಿಸುತ್ತದೆ. ನಿಮಗೆ ತಿಂದ ಆಹಾರ ಜೀರ್ಣ ಆಗುತ್ತಿಲ್ಲ ಅಜೀರ್ಣವಾಗುತ್ತಿದೆ ಎಂದರೇ ನೀವು ಆಗ ಬೆಲ್ಲದ ಜೊತೆ ಸ್ವಲ್ಪ ಈರುಳ್ಳಿಯನ್ನು ತಿಂದರೆ ಒಳ್ಳೆಯದು. ನೀವು ಬೆಲ್ಲವನ್ನು ಪ್ರತಿದಿನ ಸೇವನೆ ಮಾಡಿದರೆ ಬೆಲ್ಲವು ನಿಮ್ಮ ಹೊಟ್ಟೆಯನ್ನು ಸದಾ ಕಾಲ ತಂಪಾಗಿ ಇಟ್ಟಿರುತ್ತದೆ.
ಹಲಸಿನ ಬೀಜವನ್ನು ಬಿಸಾಕಬೇಡಿ, ಇದರ ಪ್ರಯೋಜನಗಳನ್ನು ತಿಳಿದರೆ ನೀವೇ ಆಶ್ಚರ್ಯ ಪಡ್ತೀರಾ, ಏನೇನೆಲ್ಲ ಮಾಡಬಹುದು ಗೊತ್ತಾ.
ದೇಹದಲ್ಲಿ ರಕ್ತ ಕಡಿಮೆ ಇರುವವರು ಅಥವಾ ರಕ್ತಹೀನತೆ ಇರುವವರು ಬೆಲ್ಲ ಸೇವನೆ ಅವರಿಗೆ ಬಹಳ ಅತ್ಯುತ್ತಮ. ಇದರಲ್ಲಿ ಕಬ್ಬಿಣದ ಅಂಶ ಬಹಳ ಹೇರಳವಾಗಿರುವುದರಿಂದ ಇದನ್ನು ಸೇವನೆ ಮಾಡಿದರೆ ಅವರಿಗೆ ತುಂಬಾನೇ ಒಳ್ಳೆಯದು. ಹದಿ ಹರೆಯದ ಹೆಣ್ಣು ಮಕ್ಕಳು ಮತ್ತು ಗರ್ಭಿಣಿಯರು ಬೆಲ್ಲವನ್ನು ತಿನ್ನುವುದರಿಂದ ಅವರು ಅನುಭವಿಸುವ ರಕ್ತದೊತ್ತಡ ಸಮಸ್ಯೆಯನ್ನು ತಡೆಯಬಹುದು.
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ 15 ರಿಂದ 25 ವರ್ಷದ ಯುವಕ ಅಥವಾ ಯುವತಿಯರಿಗೆ ಮೊಡವೆಗಳು ಸಾಮಾನ್ಯವಾಗಿ ಬಂದಿರುತ್ತವೆ ಅವರು ಬೆಲ್ಲವನ್ನು ಸೇವನೆ ಮಾಡುವುದರಿಂದ ಅವರಿಗೆ ಬರುವ ಮೊಡವೆಗಳ ಸಂಖ್ಯೆ ಬಹಳ ಕಮ್ಮಿ ಆಗುತ್ತವೆ. ನೀವು ಕಡ್ಡಾಯವಾಗಿ ಪ್ರತಿದಿನ ಬೆಲ್ಲವನ್ನು ಸೇವನೆ ಮಾಡಿದರೆ ನಿಮ್ಮ ತ್ವಚೆ ಇದ್ದಕ್ಕಿದ್ದ ಹಾಗೆ ಬಹಳ ಹೊಳಪು ಬರುತ್ತದೆ. ನಿಮಗೇನಾದರೂ ಗಂಟಲು ಕೆರೆತ ಅಥವಾ ಗಂಟಲು ನೋವು ಬಂದರೆ ಬೆಳ್ಳುಳ್ಳಿ ಈರುಳ್ಳಿಯನ್ನು ಚೆನ್ನಾಗಿ ಬೆಂಕಿಯಲ್ಲಿ ಸುಟ್ಟು ಬೆಲ್ಲದ ಜೊತೆ ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.
ನೀವು ಬೆಲ್ಲದ ಒಂದು ತುಣುಕನ್ನು ನಿಮ್ಮ ಬಾಯಿಗೆ ಹಾಕಿಕೊಂಡು ಚೀಪಿದರೆ ನಿಮ್ಮ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ. ಅಸ್ತಮಾ ಕಾಯಿಲೆ ಇರುವವರು ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ತಿನ್ನುವುದು ಬಹಳ ಒಳ್ಳೆಯದು. ನಿಯಮಿತವಾದ ಬೆಲ್ಲದ ಸೇವನೆ ಕಾಲಿನ ಅಥವಾ ಕೈನ ಕೀಲು ನೋವು ಸಂಧಿ ನೋವನ್ನು ಕಡಿಮೆ ಮಾಡುತ್ತದೆ. ವಯಸ್ಸಾದವರಲ್ಲಿ ಬರುವ ಮಂಡಿ ನೋವು ಕೀಲು ನೋವು ಕೈ ನೋವು ಇವುಗಳನ್ನು ತಡೆಯಬೇಕೆಂದರೆ ನೀವು ಬೆಲ್ಲವನ್ನು ತಿನ್ನುವುದರಿಂದ ಅದರ ನೋವು ಸಂಪೂರ್ಣವಾಗಿ ಕಡಿಮೆಯಾಗಿ ಹೋಗುತ್ತದೆ.
ನಿಮಗೇನಾದರೂ ಕೆಲಸದ ಒತ್ತಡ ಅಥವಾ ಬೇರೆ ಯಾವುದೇ ಕಾರಣಕ್ಕೆ ನಿಮಗೆ ತಲೆನೋವು ಏನಾದರೂ ಬಂದರೆ ನೀವು ಆ ಸಮಯದಲ್ಲಿ ಒಂದು ತುಂಡು ಬೆಲ್ಲವನ್ನು ತಿಂದು ಸ್ವಲ್ಪ ಸಮಯ ಮಲಗಿದರೆ ನಿಮ್ಮ ತಲೆನೋವು ಮಂಗಮಾಯವಾಗುತ್ತದೆ. ಇನ್ನು ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಅಧಿಕ ನೋವು ಕಾಣಿಸಿದರೆ ಮಾತ್ರೆ ತೆಗೆದುಕೊಳ್ಳುವ ಬದಲು ಬೆಲ್ಲವನ್ನು ಸೇವನೆ ಮಾಡುವುದರಿಂದ ನೋವು ಕಡಿಮೆಯಾಗುವುದು. ನೀವು ಹೀಗೆ ಪ್ರತಿದಿನ ಬೆಲ್ಲವನ್ನು ಸೇವನೆ ಮಾಡಿದರೆ ನಮ್ಮಗೆ ಗೊತ್ತಿಲ್ಲದ ಹಾಗೆ ನಮ್ಮ ದೇಹಕ್ಕೆ ಆಗುವ ನಾನಾ ರೀತಿಯ ಪ್ರಯೋಜನಗಳು ಬೆಲ್ಲದಿಂದ ಇವೆ ಹಾಗಾಗಿ ಎಲ್ಲರೂ ಪ್ರತಿದಿನ ಬೆಲ್ಲವನ್ನು ಸೇವನೆ ಮಾಡಬೇಕು.