ಉತ್ತಮ ಆರೋಗ್ಯ ಪಡೆಯಲು ಅಡುಗೆಗೆ ಯಾವ ಎಣ್ಣೆ ಬಳಸಿದರೆ ಉತ್ತಮ, ಈ 3 ಎಣ್ಣೆಗಳು ಮಾತ್ರ ಬಹಳ ಶ್ರೇಷ್ಠ.
Which oil is good for health: ನಮಗೆ ನಿಮಗೆ ತಿಳಿದಿರುವ ಹಾಗೆ ನಾವು ಪ್ರತಿನಿತ್ಯ ಹಲವಾರು ರೀತಿಯ ಎಣ್ಣೆಗಳನ್ನು ಅಡುಗೆಗಳಲ್ಲಿ ಬಳಸುತ್ತಿರುತ್ತೇವೆ. ಆದರೆ ಎಷ್ಟು ಜನ ಒಂದೇ ಎಣ್ಣಿಗೆ ಎಂದು ಪರಿಮಿತ ರಾಗಿಬಿಟ್ಟಿರುತ್ತಾರೆ. ಆದರೆ ಅದು ಸಂಪೂರ್ಣ ತಪ್ಪು. ಸ್ವಲ್ಪ ದಿನಗಳಿಗೊಮ್ಮೆ ನಾವು ಅಡುಗೆಯಲ್ಲಿ ಬಳಸುವಂತಹ ಎಣ್ಣೆಯನ್ನು ಚೇಂಜ್ ಮಾಡುತ್ತಲೇ ಇರಬೇಕು.
ಏಕೆಂದರೆ ಒಂದೊಂದು ಎಣ್ಣೆಯಲ್ಲಿ ಇರುವಂತಹ ವಿಟಮಿನ್ಸ್ ಆಗಲಿ ಅಥವಾ ಪೋಷಕಾಂಶಗಳಾಗಲಿ ಮತ್ತೊಂದು ಎಣ್ಣೆಯಲ್ಲಿ ಇರುವುದಿಲ್ಲ. ಆದರೆ ಒಂದೇ ಎಣ್ಣೆ ಬಳಸುವ ವ್ಯಕ್ತಿಗಳು ಕೆಲವೊಂದು ಪೋಷಕಾಂಶಗಳ ಕೊರತೆಯನ್ನು ಅನುಭವಿಸಬೇಕಾಗುತ್ತದೆ. ಹಾಗಾದರೆ ಯಾವ ಯಾವ ಎಣ್ಣೆಗಳಲ್ಲಿ ಯಾವ ಯಾವ ಅಂಶಗಳು ಇರುತ್ತವೆ ಮತ್ತು ಅದು ನಮ್ಮ ದೇಹದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ನೋಡೋಣ ಬನ್ನಿ.
ಮುಖ್ಯವಾಗಿ ನಮ್ಮ ಭಾರತಕ್ಕೆ ಬಂದರೆ ನಾವು ಪ್ರಮುಖವಾಗಿ 11 ರೀತಿಯ ಎಣ್ಣೆಗಳನ್ನು ಅಡುಗೆಗೆ ಬಳಸಲಾಗುತ್ತದೆ ಹಾಗೂ ಅವುಗಳಲ್ಲಿ ಯಾವ ಯಾವ ರೀತಿಯ ಪೋಷಕಾಂಶಗಳು ಆಡಗಿಕೊಂಡು ಇರುತ್ತವೆ. ಅದು ನಮ್ಮ ದೇಹದ ಮೇಲೆ ಯಾವ ಪ್ರಭಾವ ಬೀರುತ್ತದೆ ಎಂಬುದನ್ನು ನೋಡುವುದಾದರೆ,
ತುಪ್ಪ ತುಪ್ಪದಲ್ಲಿ ಅತಿ ಹೆಚ್ಚು ಜೀರ್ಣಶಕ್ತಿಯನ್ನು ಹೆಚ್ಚಿಸುವ ಅಂಶವನ್ನು ಹೊಂದಿದೆ. ಸಾಸಿವೆ ಎಣ್ಣೆ ಸಾಸಿವೆ ಎಣ್ಣೆಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಕೆಮ್ಮು ಮತ್ತು ನೆಗಡಿ ಯನ್ನು ಹೋಗಲಾಡಿಸುವ ಶಕ್ತಿಯು ಕೂಡ ಇದೆ ಹಾಗೂ ಚರ್ಮ ಮತ್ತು ಚರ್ಮಕ್ಕೆ ಸಂಬಂಧಿಸಿದಂತಹ ಎಲ್ಲಾ ಖಾಯಿಲೆಗಳನ್ನು ಹೋಗಲಾಡಿಸುತ್ತದೆ.
ಸೂರ್ಯಕಾಂತಿ ಎಣ್ಣೆ ಯಲ್ಲಿ ಅತಿ ಹೆಚ್ಚು ವಿಟಮಿನ್ ಇ ತತ್ವ ಇರುವುದರಿಂದ ಇದು ಹೃದಯಕ್ಕೆ ಮತ್ತು ಕ್ಯಾನ್ಸರ್ ಗೆ ಹೇಳಿ ಮಾಡಿಸಿರುವಂತಹ ಒಂದು ರಾಮಬಾಣವಾಗಿದೆ. ಅಷ್ಟೇ ಅಲ್ಲದೆ ಇದರಲ್ಲಿ ರೋಗನಿರೋಧಕ ಶಕ್ತಿ ಅದು ಹೆಚ್ಚು ಇರುವುದು ಅಲ್ಲವೇ ಕೊಲೆಸ್ಟ್ರಾಲ್ ಅನ್ನು ಕೂಡ ಕಡಿಮೆ ಮಾಡುವ ಅಂಶಗಳು ಇದರಲ್ಲಿ ಅಡಗಿಕೊಂಡಿವೆ.
ಕಡಲೆ ಬೀಜ ಎಣ್ಣೆ ಕಡಲೇ ಬೀಜದಲ್ಲಿ ಅತಿ ಹೆಚ್ಚು ಕೊಲೆಸ್ಟ್ರಾಲ್ ಇರುವುದರಿಂದ ದೇಹದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ಚರ್ಮದ ಒಳಪನ್ನು ಹೆಚ್ಚಿಸುತ್ತದೆ.
ಪಾಮ್ ಆಯಿಲ್ ಪಾಮ್ ಆಯಿಲ್ ನಲ್ಲಿ ಕ್ಯಾನ್ಸರ್ ಅನ್ನು ಕಡಿಮೆಗೊಳಿಸುವ ಶಕ್ತಿ ಹೊಂದಿದೆ ಮತ್ತು ಕೀಲು ನೋವುಗಳಿಗೆ ಹೇಳಿ ಮಾಡಿಸಿರುವಂತಹ ರಾಮಬಾಣವಾಗಿದೆ.
ಅಕ್ಕಿ ತೌಡಿನ ಎಣ್ಣೆ ಈ ಎಣ್ಣೆಯಲ್ಲಿ ಅತಿ ಹೆಚ್ಚು ಕೊಲೆಸ್ಟ್ರಾಲ್ ಅನ್ನು ಹೊಂದಿದೆ. ಅಗಸೆ ಬೀಜದ ಎಣ್ಣೆ ಅಗಸೆ ಬೀಜದ ಎಣ್ಣೆಯಲ್ಲಿ ಕರುಳಿನ ರೋಗಗಳನ್ನು ತಡೆಯುವ ಶಕ್ತಿ ಹೊಂದಿದೆ. ಎಳ್ಳೆಣ್ಣೆಯಲ್ಲಿ ಸಕ್ಕರೆಯ ಕಾಯಿಲೆಯನ್ನು ನಿಯಂತ್ರಿಸುವ ಶಕ್ತಿ ಇದೆ ಹಾಗೂ ಇದು ಹಲ್ಲು ಮತ್ತು ಬಾಯಿ ನೋವುಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.
ಆಲಿವ್ ಎಣ್ಣೆಯು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಗಟ್ಟುತ್ತದೆ ಮತ್ತು ಕೀಲು ನೋವುಗಳಿಗೆ ಒಳ್ಳೆಯ ರೀತಿಯಲ್ಲಿ ಪ್ರಭಾವ ಬೀರುತ್ತದೆ. ಬಾದಾಮಿ ಎಣ್ಣೆ ಬಾದಾಮಿ ಎಣ್ಣೆಯಲ್ಲಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಮತ್ತು ಬಿಪಿ ಯನ್ನು ಕಂಟ್ರೋಲ್ ನಲ್ಲಿ ಇಡುವುದು. ಅಷ್ಟೇ ಅಲ್ಲದೆ ಕರುಳಿಗೆ ಇದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ.
ಗೋಡಂಬಿ ಎಣ್ಣೆ ಇದರಲ್ಲಿ ಅತಿ ಹೆಚ್ಚಿನದಾಗಿ ರೋಗ ನಿರೋಧಕ ಶಕ್ತಿ ಇದೆ ಹಾಗೂ ಕೊಬ್ಬರಿ ಎಣ್ಣೆ ಕೊಬ್ಬರಿ ಎಣ್ಣೆಯಲ್ಲಿ ಚಯಾಪಚಯ ಕ್ರಿಯೆ ಸರಿಯಾಗಿ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಹೃದಯಕ್ಕೆ ಉತ್ತಮವಾಗಿ ಕೆಲಸ ಮಾಡುತ್ತದೆ.