Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Solar Panel Subsidy : ಮನೆ ಮೇಲೆ ಸೌರ ಫಲಕ ಅಳವಡಿಸಿ 40% ಸಬ್ಸಿಡಿ ಪಡೆಯಿರಿ!

Solar Panel Subsidy : ಕೇಂದ್ರ ಸರ್ಕಾರವು ಜನವರಿ 22 ರಂದು ಸೌರ ಫಲಕ ಅಳವಡಿಸುವ ಹೊಸ ಯೋಜನೆಯ ಬಗ್ಗೆ ಘೋಷಣೆ ಮಾಡಿತ್ತು. ಅದನ್ನು ಮಧ್ಯ ಅಬ್ಧಿಯ ಬಜೆಟ್ ನಲ್ಲಿ ಅನುಷ್ಠಾನ ಮಾಡಲಾಗಿತ್ತು.

Solar Panel Subsidy : ಕೇಂದ್ರ ಸರ್ಕಾರವು ಜನವರಿ 22 ರಂದು ಸೌರ ಫಲಕ ಅಳವಡಿಸುವ ಹೊಸ ಯೋಜನೆಯ ಬಗ್ಗೆ ಘೋಷಣೆ ಮಾಡಿತ್ತು. ಅದನ್ನು ಮಧ್ಯ ಅಬ್ಧಿಯ ಬಜೆಟ್ ನಲ್ಲಿ ಅನುಷ್ಠಾನ ಮಾಡಲಾಗಿತ್ತು. ಈಗ ಸೌರಗೃಹ ಯೋಜನೆಡಿ ಮನೆಯ ಮೇಲ್ಛಾವಣಿಯ ಮೇಲೆ ಸೌರ ಫಲಕ (ಸೋಲಾರ್ ಪ್ಯಾನಲ್) ಅಳವಡಿಸಲು 40% ರಷ್ಟು ಸಬ್ಸಿಡಿ ನೀಡುತ್ತಿದೆ ಕೇಂದ್ರ ಸರ್ಕಾರ. ಈ ಯೋಜನೆಯನ್ನು ನೀವು ಸ್ವಂತವಾಗಿ ಸೌರ ಫಲಕ ಅಳವಡಿಸಿಕೊಂಡು ವಿದ್ಯುತ್ ಬಳಸಿ, ನಿಮ್ಮ ಮನೆಗೆ ಬಳಸಿಕೊಳ್ಳಬಹುದು ಅಥವಾ ಬೇರೆಯವರಿಗೆ ಮಾರಾಟ ಮಾಡಬಹುದು. ಈಯೋಜನೆಯ ಮುಖ್ಯ ಉದ್ದೇಶ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್ ನೀಡುವುದಾಗಿದೆ.

Solar Panel Subsidy

ಈ ಯೋಜನೆಯ ಬಗ್ಗೆ ಪೂರ್ಣ ಮಾಹಿತಿ :-

ಇದು ಕೇಂದ್ರ ಸರ್ಕಾರದ ಉತ್ತಮ ಯೋಜನೆ ಆಗಿದ್ದು. ಮನೆಯ ಮೇಲೆ ಸೋಲಾರ್ ಫಲಕ ಅಳವಡಿಸಲು ಸಬ್ಸಿಡಿ ಪಡೆಯಲು ಅರ್ಜಿ ಸಲ್ಲಿಸಬಹುದು

ಈ ಯೋಜನಯ ಪ್ರಯೋಜನಗಳು :-

1)ದೊಡ್ಡ ವಿದ್ಯುತ್ ಬಿಲ್ ವಿದಾಯ: ನಿಮ್ಮ ಮನೆಯ ಉತ್ಪನ್ನಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವುದರಿಂದ, ನಿಮ್ಮ ಮನೆಗೆ ಬೇಕಾದ ವಿದ್ಯುತ್ ಗೆ ಹಣ ಪಾವತಿಸಬೇಕಾಗಿಲ್ಲ. ನಿಮ್ಮ ವಿದ್ಯುತ್ ಬಿಲ್ ಗಣನೀಯವಾಗಿ  30% ರಿಂದ 50% ನಷ್ಟು ವಿದ್ಯುತ್ ಬಿಲ್ ಗೆ ನೀಡುವ ಹಣವನ್ನು ಉಳಿತಾಯ ಮಾಡಬಹುದು.
2)ಸ್ವಾವಲಂಬನೆ: ವಿದ್ಯುತ್ ಪೂರೈಕೆಗಾಗಿ ನೀವು ವಿದ್ಯುತ್ ಕಂಪನಿಗಳ ಮೇಲೆ . ಯಾವುದೇ ರೀತಿಯ ಅವಲಂಬನೆಯ ಅಗತ್ಯ ಇರುವುದಿಲ್ಲ
3)ದೀರ್ಘಕಾಲೀನ ಉಪಯೋಗಗಳು: ಸೌರ ಫಲಕಗಳನ್ನು 25 ವರ್ಷಗಳವರೆಗೆ ಬಳಸಬಹುದು ಇದರಿಂದ ನೀವು ಹೆಚ್ಚು ಬಾರಿ ಇನ್ವೆಸ್ಟ್ಮೆಂಟ್ ಮಾಡುವ ಅಗತ್ಯ ಇಲ್ಲ.
4)ಪರಿಸರ ಸ್ನೇಹಿ: ಸೌರ ಶಕ್ತಿಯು ಪರಿಸರ ಸ್ನೇಹಿ ಆಗಿದೆ. . ಇದು ಅನಿಲ ಉತ್ಸರ್ಜನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
4)ಸರ್ಕಾರದಿಂದ ಸಬ್ಸಿಡಿ: ಸರ್ಕಾರವು ಸೌರ ಫಲಕಗಳನ್ನು ಅಳವಡಿಸಲು ಸಬ್ಸಿಡಿ ನೀಡಿರುವುದರಿಂದ ಹೆಚ್ಚಿನ ಇನ್ವೆಸ್ಟ್ಮೆಂಟ್ ಅಗತ್ಯ ಇಲ್ಲ.

Also Read: Pan Card : ಇನ್ಮೇಲೆ ಪ್ಯಾನ್ ಕಾರ್ಡ್ ಪಡೆಯೋಕೆ ಎಲ್ಲೂ ಹೋಗಬೇಕಿಲ್ಲ, ಮನೆಯಲ್ಲೇ ಕೂತು ಈ ರೀತಿ ಮಾಡಿ ಸಾಕು

ಕೇಂದ್ರ ಸರ್ಕಾರದ ಸೌರ ಮೇಲ್ಛಾವಣಿ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:

*ಅಧಿಕೃತ ವೆಬ್‌ಸೈಟ್‌ https://pmsuryaghar.gov.in/ ಭೇಟಿ ನೀಡಿ ನಂತರ ಹೊಸ ಬಳಕೆದಾರ ನೋಂದಣಿ ಆಯ್ಕೆ ಮಾಡಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಇತರ ಮಾಹಿತಿಯನ್ನು ಭರ್ತಿ ಮಾಡಿ.ನಂತರ
ನೋಂದಾಯಿಸಿ ಬಟನ್ ಕ್ಲಿಕ್ ಮಾಡಿ
ನಿಮ್ಮ ನೋಂದಾಯಿತ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ಬಳಸಿ ಲಾಗಿನ್ ಆಗಬೇಕು.ನಂತರಬ್ ಅರ್ಜಿ ಸಲ್ಲಿಸಿ ಬಟನ್ ಕ್ಲಿಕ್ ಮಾಡಿ.
ಕೇಳುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. ನಿಮ್ಮದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆಗಳು

ಗುರುತಿನ ಪುರಾವೆ (ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಚಾಲನಾ ಪರವಾನಗಿ)
ವಿಳಾಸ ಪುರಾವೆ (ವಿದ್ಯುತ್ ಬಿಲ್, ರೇಷನ್ ಕಾರ್ಡ್)
ಮನೆಯ ಮಾಲೀಕತ್ವದ ಪುರಾವೆ (ಆಸ್ತಿ ದಾಖಲೆಗಳು)
ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
https://pmsuryaghar.gov.in/
ಟೋಲ್ ಫ್ರೀ ನಂಬರ್: 1800-233-3883

Also Read: Bhagyalakshmi Yojane : ಭಾಗ್ಯಲಕ್ಷ್ಮಿ ಯೋಜನೆ ರದ್ದತಿಯಿಂದ ಮಹಿಳೆಯರ ಕನಸು ನುಚ್ಚುನೂರು, ಏನಿದು !

Leave a comment