Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Pan Card : ಇನ್ಮೇಲೆ ಪ್ಯಾನ್ ಕಾರ್ಡ್ ಪಡೆಯೋಕೆ ಎಲ್ಲೂ ಹೋಗಬೇಕಿಲ್ಲ, ಮನೆಯಲ್ಲೇ ಕೂತು ಈ ರೀತಿ ಮಾಡಿ ಸಾಕು

Pan Card: ಪ್ಯಾನ್ ಕಾರ್ಡ್ ಪಡೆಯಲು ಎಲ್ಲಿಗೂ ಹೋಗಬೇಕಾದ ಅವಶ್ಯಕತೆ ಸಹ ಇಲ್ಲ. ನಿಮ್ಮ ಮನೆಯಲ್ಲೇ ಕೂತು ಡ್ಯೂಪ್ಲಿಕೇಟ್ ಪ್ಯಾನ್ ಕಾರ್ಡ್ ಗೆ ಅಪ್ಲೈ ಮಾಡಿ ಪಡೆದುಕೊಳ್ಳಬಹುದು.

Pan Card: ನಮ್ಮ ದೇಶದ ನಾಗರೀಕರಿಗೆ, ಆಧಾರ್ ಕಾರ್ಡ್ ಎಷ್ಟು ಮುಖ್ಯವೋ ಪ್ಯಾನ್ ಕಾರ್ಡ್ ಕೂಡ ಅಷ್ಟೇ ಮುಖ್ಯ ಎಂದು ಹೇಳಿದರೆ ತಪ್ಪಲ್ಲ. ವಿಶೇಷವಾಗಿ ಹಣಕಾಸಿನ ವ್ಯವಹಾರ ಮಾಡುವವರಿಗೆ ಪ್ಯಾನ್ ಕಾರ್ಡ್ ಇರಲೇಬೇಕು. ಆದಾಯ ತೆರಿಗೆ ಇಲಾಖೆ ಪ್ರತಿ ವ್ಯಕ್ತಿಗು ನೀಡುವ ವಿಭಿನ್ನವಾದ 10 Alphanumeric ನಂಬರ್ ಗಳನ್ನು ಒಳಗೊಂಡಿರುವ ಕಾರ್ಡ್ ಪ್ಯಾನ್ ಕಾರ್ಡ್ ಆಗಿರುತ್ತದೆ.

Pan Card:

ಕೆಲಸಕ್ಕೆ ಹೋಗುವವರಿಗೆ, ಆದಾಯ ತೆರಿಗೆ ಪಾವತಿ ಮಾಡುವವರಿಗೆ, ಹಣಕಾಸಿನ ವಹಿವಾಟುಗಳನ್ನು ನಡೆಸುವವರಿಗೆ, ಇವರಿಗೆಲ್ಲಾ ಪ್ಯಾನ್ ಕಾರ್ಡ್ ತುಂಬಾ ಮುಖ್ಯ. ಆದರೆ ಕೆಲವೊಮ್ಮೆ ನಾವು ಎಷ್ಟೇ ಜಾಗರೂಕತೆಯಿಂದ ಇದ್ದರು ಕೂಡ ಪ್ಯಾನ್ ಕಾರ್ಡ್ ಕಳೆದು ಹೋಗಬಹುದು, ಅಥವಾ ಪ್ಯಾನ್ ಕಾರ್ಡ್ ಅನ್ನು ಎಲ್ಲಿಯಾದರೂ ಇಟ್ಟು ಸಿಗದೇ ಹೋಗಬಹುದು. ಈ ಥರ ಆದಾಗ ಪ್ಯಾನ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು ಎನ್ನುವ ಗೊಂದಲ ನಿಮ್ಮಲ್ಲಿ ಇದ್ದೇ ಇರುತ್ತದೆ..

ಆ ಪರಿಸ್ಥಿತಿ ಬಂದಾಗ ನೀವು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ, ಹಾಗೆಯೇ ಮತ್ತೆ ಪ್ಯಾನ್ ಕಾರ್ಡ್ ಪಡೆಯಲು ಎಲ್ಲಿಗೂ ಹೋಗಬೇಕಾದ ಅವಶ್ಯಕತೆ ಸಹ ಇಲ್ಲ. ನಿಮ್ಮ ಮನೆಯಲ್ಲೇ ಕೂತು ಡ್ಯೂಪ್ಲಿಕೇಟ್ ಪ್ಯಾನ್ ಕಾರ್ಡ್ ಗೆ ಅಪ್ಲೈ ಮಾಡಿ ಪಡೆದುಕೊಳ್ಳಬಹುದು. ಅದು ಹೇಗೆ ಎಂದು ಇಂದು ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..

Also Read: Government News : ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದ ಸರ್ಕಾರ! ಈ ರೀತಿ ಮಾಡಿ ಪ್ರಯೋಜನ ಪಡೆಯಿರಿ!

ಡ್ಯೂಪ್ಲಿಕೇಟ್ ಪ್ಯಾನ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು:

ಆಧಾರ್ ಕಾರ್ಡ್ (Aadhar Card)
ವೋಟರ್ ಐಡಿ (Election Voter ID)
ಡಿಎಲ್ (DL)
ಪಾಸ್ ಪೋರ್ಟ್ (Passport)
ರೇಷನ್ ಕಾರ್ಡ್ (Ration Card)
ಬರ್ತ್ ಪ್ರೂಫ್ ಸರ್ಟಿಫಿಕೇಟ್ (Certificate to Confirm Date of Birth)
ಪ್ಯಾನ್ ಕಾರ್ಡ್ ನ ಸ್ವಯಂ ದೃಢೀಕೃತ ಕಾಪಿ

ಡ್ಯುಪ್ಲಿಕೇಟ್ ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡುವ ಪ್ರಕ್ರಿಯೆ:

*ಪ್ಯಾನ್ ಕಾರ್ಡ್ ಸೇವಾ ಪೋರ್ಟಲ್ ನ ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿ ನೀಡಿ, https://www.pan.utiitsl.com/ ಇದು ಅಧಿಕೃತ ವೆಬ್ಸೈಟ್ ಆಗಿದೆ.
*ಈ ಹೋಮ್ ಪೇಜ್ ನಲ್ಲಿರುವ ರೂಲ್ಸ್ ಗಳನ್ನು ಸರಿಯಾಗಿ ಓದಿ
*ಈಗ Duplicate Pan Card ಆಪ್ಶನ್ ಸೆಲೆಕ್ಟ್ ಮಾಡಿ
*ಇಲ್ಲಿ ನೀವು ನಿಮ್ಮ ಪ್ಯಾನ್ ಕಾರ್ಡ್ ನಂಬರ್ , ಹುಟ್ಟಿದ ದಿನಾಂಕ, ಕ್ಯಾಪ್ಚ ಕೋಡ್ ಇದಿಷ್ಟನ್ನು ಫಿಲ್ ಮಾಡಿ. ನಂತರ Submit ಆಪ್ಶನ್ ಸೆಲೆಕ್ಟ್ ಮಾಡಿ
*ಈಗ ಹಣಪಾವತಿ ಮಾಡುವ ಪೇಜ್ ಗೆ ಬರುತ್ತೀರಿ..

*ಎಲ್ಲಾ ರೂಲ್ಸ್ ಓದಿ, ಹಣವನ್ನು ಪಾವತಿ ಮಾಡಬೇಕು, ಇಲ್ಲಿಗೆ ಡ್ಯುಪ್ಲಿಕೇಟ್ ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದೀರಾ ಎಂದು ಅರ್ಥ.
*110 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
*ಈಗ ನಿಮ್ಮ ಅಪ್ಲಿಕೇಶನ್ ಆಕ್ಸೆಪ್ಟ್ ಆಗಿ, ಅಪ್ಲಿಕೇಶನ್ ನಂಬರ್ ಸಿಗುತ್ತದೆ.

Now you can easily apply for duplicate Pan Card from home.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: Grama Panchayiti Recruitment : ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯತಿಯಲ್ಲಿ ಸೂಪರ್ವೈಸರ್ ಹುದ್ದೆಗಳ ನೇಮಕಾತಿ! ಆಸಕ್ತರು ಅರ್ಜಿ ಸಲ್ಲಿಸಿ

Leave a comment