Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Pension Scheme : ವೃದ್ಧರು ಪೆನ್ಶನ್ ಪಡೆಯಲು ಅತ್ಯಂತ ಒಳಿತಿನ ಯೋಜನೆ ಇದು! ಏನೆಲ್ಲಾ ಪ್ರಯೋಜನವಿದೆ ಗೊತ್ತಾ?

NPS ನಲ್ಲಿ ನಿಮಗೆ ಸಿಗುವ ಹಣಕ್ಕೆ ತೆರಿಗೆ ವಿಧಿಸುವುದಿಲ್ಲ, ಇದು ಹೆಚ್ಚು ಅನುಕೂಲ ಅಗುವಂಥ ವಿಚಾರ ಆಗಿದ್ದು, ಸೆಕ್ಷನ್ 80CCD (1B) ಇಂದ ಹೂಡಿಕೆ ಮಾಡುವವರಿಗೆ ಹೆಚ್ಚಿನ ತೆರಿಗೆ ಪ್ರಯೋಜನ ಸೌಲಭ್ಯ ಸಿಗುತ್ತದೆ.

Pension Scheme : ವಯಸ್ಸಾದ ಕಾಲದಲ್ಲಿ ಬದುಕು ನಿಷ್ಚಿಂತೆಯಿಂದ ಸಾಗಬೇಕು ಎಂದರೆ, ಆರ್ಥಿಕವಾಗಿ ನಾವು ಸ್ವಾತಂತ್ರ್ಯವಾಗಿ ಇರಬೇಕು. ಅದಕ್ಕಾಗಿ ಜನರು ಯಂಗ್ ಆಗಿದ್ದಾಗಲೇ ಹೂಡಿಕೆ ಮಾಡುವುದಕ್ಕೆ ಶುರು ಮಾಡುತ್ತಾರೆ. ವಯಸ್ಸಾದ ಕಾಲದಲ್ಲಿ ಬದುಕಿಗೆ ಭದ್ರತೆ ಇರಬೇಕು ಎಂದರೆ, ನಿಮಗೆ ಸರಿಹೊಂದುವ ಪೆನ್ಶನ್ ಸ್ಕೀಮ್ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

Pension Scheme

ಜನರಿಗೆ ಅನುಕೂಲ ಆಗುವುದಕ್ಕಾಗಿ ಇರುವ ಮುಖ್ಯವಾದ ಸ್ಕೀಮ್ ನ್ಯಾಷನಲ್ ಪೆನ್ಶನ್ ಸ್ಕೀಮ್ (NPS) ಆಗಿದೆ. National Pension Scheme ಎನ್ನುವುದು ಆರ್ಥಿಕ ಭದ್ರತೆ (Financial Security) ನೀಡುವುದರ ಜೊತೆಗೆ ಉಳಿತಾಯ (Savings Scheme) ಯೋಜನೆ ಕೂಡ ಆಗಿದೆ ಎನ್ನುವುದು ವಿಶೇಷ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣ ಸುರಕ್ಷಿತವಾಗಿರುತ್ತದೆ, ಏಕೆಂದರೆ ಇದು ಸರ್ಕಾರ ಜಾರಿಗೆ ತಂದಿರುವ ಸ್ಕೀಮ್ ಆಗಿದೆ.

ಸಾಲ ಹಾಗೂ ಈಕ್ವಿಟಿ ಎರಡು ವಿಷಯದಲ್ಲೂ ಜನರಿಗೆ ಅನುಕೂಲ ನೀಡುತ್ತದೆ. ನಂಬಿಕೆಗೆ ಅರ್ಹವಾಗಿರುವ ಈ ಯೋಜನೆಯ ಮೂಲಕ ಜನರು ನಿವೃತ್ತಿ ಬದುಕಿನ ಯೋಚನೆ ಮಾಡುವ ಅಗತ್ಯವಿಲ್ಲ ಎಂದು ಭರವಸೆ ಇಟ್ಟುಕೊಳ್ಳಬಹುದು. ಈ ಯೋಜನೆಯು ಸರಳತೆಯ ಕಾರಣದಿಂದ ಜನರಿಗೆ ಹತ್ತಿರವಾಗಿದೆ. ಹಾಗಿದ್ದಲ್ಲಿ ಏನೆಲ್ಲಾ ಉಪಯೋಗಗಳು NPS ಇಂದ ಸಿಗುತ್ತದೆ ಎಂದು ತಿಳಿದುಕೊಳ್ಳೋಣ..

ಟ್ಯಾಕ್ಸ್ ಫ್ರೀ:

NPS ನಲ್ಲಿ ನಿಮಗೆ ಸಿಗುವ ಹಣಕ್ಕೆ ತೆರಿಗೆ ವಿಧಿಸುವುದಿಲ್ಲ, ಇದು ಹೆಚ್ಚು ಅನುಕೂಲ ಅಗುವಂಥ ವಿಚಾರ ಆಗಿದ್ದು, ಸೆಕ್ಷನ್ 80CCD (1B) ಇಂದ ಹೂಡಿಕೆ ಮಾಡುವವರಿಗೆ ಹೆಚ್ಚಿನ ತೆರಿಗೆ ಪ್ರಯೋಜನ ಸೌಲಭ್ಯ ಸಿಗುತ್ತದೆ.

ಸುಲಭವಾದ ಆಯ್ಕೆಗಳು:

ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಎಲ್ಲರಿಗೂ ಕೂಡ ಅವರ ಅನುಕೂಲ ಮತ್ತು ಸಾಮರ್ಥ್ಯಕ್ಕೆ ತಕ್ಕ ಹಾಗೆ ಹೂಡಿಕೆಯ ಆಯ್ಕೆಗಳನ್ನು ನೀಡುತ್ತದೆ NPS. ಯಾರಿಜಿ ಕೂಡ ಕಷ್ಟ ಆಗದೆ ಇರುವಂಥ ಒಂದು ಪಿಂಚಣಿ ಯೋಜನೆ ಇದು.

ಅಧಿಕ ಹೂಡಿಕೆ ಆಯ್ಕೆ:

ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕಾಗಿ ನಿಮಗೆ ಹೆಚ್ಚಿನ ಆಯ್ಕೆಗಳು ಸಿಗಲಿದೆ, ಈಕ್ವಿಟಿ, ಕಾರ್ಪೋರೇಟ್ ಬಾಂಡ್ಸ್, ಸರಕಾರಿ ಸೆಕ್ಯುರಿಟಿ ಮತ್ತು ಪರ್ಯಾಯ ಸ್ವತ್ತುಗಳು ಈ ಎಲ್ಲಾ ಆಯ್ಕೆಗಳಲ್ಲಿ ನಿಮಗೆ ಸರಿ ಅನ್ನಿಸುವ ಹೂಡಿಕೆಯನ್ನು ಆಯ್ಕೆಮಾಡಬಹುದು.

ಒಳ್ಳೆಯ ರಿಟರ್ನ್ಸ್ ಗ್ಯಾರೆಂಟಿ:

NPS ಅನ್ನು ಹ್ಯಾಂಡಲ್ ಮಾಡುವುದು ಪೆನ್ಶನ್ ಫಂಡ್ ರೆಗ್ಯಲೇಟರಿ ಹಾಗೂ ಡೆವಲಪ್‌ಮೆಂಟ್ ಅಥಾರಿಟಿ ಆಗಿದ್ದು, ಈ ಅಧಿಕಾರಿಗಳು ಹ್ಯಾಂಡಲ್ ಮಾಡುವ ಕಾರಣ ನೀವು ಹೂಡಿಕೆ ಮಾಡುವ ಹಣಕ್ಕೆ ತಕ್ಕದಾಗಿ ರಿಟರ್ನ್ಸ್ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.

ಕಡಿಮೆ ಮೊತ್ತ;

ಬೇರೆ ಪೆನ್ಶನ್ ಸ್ಕೀಮ್ ಗಳಿಗಿಂತ ಈ ಯೋಜನೆಯಲ್ಲಿ ನಿಮಗೆ ಹೂಡಿಕೆ ಮಾಡುವುದಕ್ಕಾಗಿ ಕಡಿಮೆ ಮೊತ್ತದ ಆಯ್ಕೆಯನ್ನು ನೀಡಲಾಗಿದೆ. ಹಾಗೆಯೇ ಇಲ್ಲಿ Fund Management ಗಾಗಿ ಪಾವತಿ ಮಾಡುವ ಹಣ ಕೂಡ ಕಡಿಮೆಯೇ ಇರುತ್ತದೆ. ಹೂಡಿಕೆ ಮಾಡಿದವರಿಗೆ ಮ್ಯಾಕ್ಸಿಮಮ್ ಆದಾಯ ಸಿಗುತ್ತದೆ.

ಹೆಚ್ಚಿನ ಆಪ್ಶನ್ಸ್:

NPS ಖಾತೆಯನ್ನು ನೀವು ಆನ್ಲೈನ್ ಟ್ರ್ಯಾಕ್ ಮಾಡುವುದಕ್ಕೆ, ಆನ್ಲೈನ್ ನೋಡಿಕೊಳ್ಳುವುದಕ್ಕೆ ಕೂಡ ವ್ಯವಸ್ಥೆ ಇದೆ, ನಿಮ್ಮ ಅವಶ್ಯಕತೆ ಹೇಗಿರುತ್ತದೆಯೋ ಅದಕ್ಕೆ ತಕ್ಕ ಹಾಗೆ ಹಕ್ಕುಮತ್ತು ಅನುಮೋದನೆ ಕೂಡ ಬದಲಾಯಿಸಬಹುದು. ಇದಕ್ಕಾಗಿ ಕೂಡ ಅವಕಾಶಗಳು ಸಿಗುತ್ತದೆ …

ಅಕೌಂಟ್ ಕಂಟಿನ್ಯೂ ಮಾಡುವುದು ಸುಲಭ:

ಒಂದು ವೇಳೆ ನೀವು ಕೆಲಸ ಮಾಡುತ್ತಿರುವ ಕಂಪನಿ ಬದಲಾಯಿಸಿ, ಬೇರೆ ಕಂಪನಿಗೆ ಹೋದರು ಕೂಡ, ಯಾವುದೇ ತೊಂದರೆ ಇಲ್ಲದೇ ಸುಲಭವಾಗಿ NPS ಅಕೌಂಟ್ ಅನ್ನು ಮುಂದುವರೆಸಿಕೊಂಡು ಹೋಗಬಹುದು.

ವಾರ್ಷಿಕ ಆಯ್ಕೆ:

ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವಾಗ ವಾರ್ಷಿಕ ಕಾರ್ಪಸ್ ಅನ್ನು ಖರೀದಿ ಮಾಡಿದರೆ, ನೀವು ರೈಟೈರ್ ಆದ ನಂತರ ಪ್ರತಿ ತಿಂಗಳು ಖಂಡಿತವಾಗಿ ಆದಾಯ ಬರುತ್ತದೆ. ರಿಟೈರ್ಮೆಂಟ್ ನಂತರ ನಿಮಗೆ ಹಣಕಾಸಿನ ಭದ್ರತೆ ಸಿಗುತ್ತದೆ. ಹಾಗೆಯೇ NPS ನ ಕಾರ್ಪಸ್ ಹಣದಲ್ಲಿ 60% ಅನ್ನು ವಾಪಸ್ ಪಡೆಯಬಹುದು. 40% ಹಣ ವರ್ಷಾಶನ ಯೋಜನೆಗೆ ಸರಿಹೊಂದುತ್ತದೆ.

PFRDA ನಿರ್ವಹಣೆ;

NPS ನಲ್ಲಿ ನೀವು ಹೂಡಿಕೆ ಮಾಡಿದ ಹಣವನ್ನು ಸರ್ಕಾರದ ಸಂಸ್ಥೆಯೇ ಆಗಿರುವ PFRDA ನಿರ್ವಹಣೆ ಮಾಡುತ್ತದೆ. ಇದರಿಂದ ನಿಮ್ಮ ಹಣಕ್ಕೆ ಭದ್ರತೆ ಖಂಡಿತವಾಗಿ ಇರಲಿದೆ.

Also Read: Investment Ideas : ಈ 3 ಶೇರ್ ಗಳಲ್ಲಿ ಹೂಡಿಕೆ ಮಾಡಿದ್ರೆ ಸಾಕು, ಹಣ ಡಬಲ್ ಆಗೋದು ಗ್ಯಾರೆಂಟಿ!

Leave a comment