Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Mukhyamantri Prayojakatva Yojane : ಮಕ್ಕಳಿಗೆ ₹4000 ಕೊಡಲಿದೆ ಸರ್ಕಾರ, ಈ ಸ್ಕಾಲರ್ಶಿಪ್ ಗೆ ಈಗಲೇ ಅಪ್ಲೈ ಮಾಡಿ

ನಮ್ಮ ದೇಶದಲ್ಲಿ ಸಾಕಷ್ಟು ವಿದ್ಯಾರ್ಥಿಗಳಿಗೆ ಓದುವ ಆಸೆ ಇದ್ದರು ಸಹ, ಅವರಿಗೆ ಅನುಕೂಲ ಇಲ್ಲದ ಕಾರಣ ವಿದ್ಯಾಭ್ಯಾಸಕ್ಕೆ ಕಷ್ಟಪಡುತ್ತಾರೆ. ಅಂಥ ಮಕ್ಕಳಿಗೆ ಸಹಾಯ ಮಾಡುವುದಕ್ಕಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ

Mukhyamantri Prayojakatva Yojane : ನಮ್ಮ ದೇಶದಲ್ಲಿ ಸಾಕಷ್ಟು ವಿದ್ಯಾರ್ಥಿಗಳಿಗೆ ಓದುವ ಆಸೆ ಇದ್ದರು ಸಹ, ಅವರಿಗೆ ಅನುಕೂಲ ಇಲ್ಲದ ಕಾರಣ ವಿದ್ಯಾಭ್ಯಾಸಕ್ಕೆ ಕಷ್ಟಪಡುತ್ತಾರೆ. ಅಂಥ ಮಕ್ಕಳಿಗೆ ಸಹಾಯ ಮಾಡುವುದಕ್ಕಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅಂಥದ್ದೇ ಒಂದು ಯೋಜನೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಈ ಯೋಜನೆಯಲ್ಲಿ ಮಕ್ಕಳಿಗೆ ₹4000 ರೂಪಾಯಿ ಸ್ಕಾಲರ್ಶಿಪ್ ಸಿಗುತ್ತದೆ. ಇದರ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..

Mukhyamantri Prayojakatva Yojane

ಇದು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಕಲ್ಯಾಣ ನಿಧಿ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಕಷ್ಟದಲ್ಲಿದ್ದು, ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಲಾಗುತ್ತದೆ. ಅವರಿಗೆ ಹಣಕಾಸಿನ ವಿಷಯದಲ್ಲಿ ಸಹಾಯ ಮಾಡಿ, ಶಿಕ್ಷಣವನ್ನು ಮುಂದುವರೆಸಲು ಸಹಾಯ ಮಾಡುವುದಕ್ಕೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಸಾರ್ವಜನಿಕ ಯೋಜನೆಯ ಸೌಲಭ್ಯವನ್ನು ವಿದ್ಯಾರ್ಥಿಗಳು ಪಡೆಯಬಹುದು.

ಮುಖ್ಯಮಂತ್ರಿ ಪ್ರಾಯೋಜಕತ್ವ ಯೋಜನೆಯ ಹೈಲೈಟ್ಸ್:

ಈ ಯೋಜನೆಯು ಸಾರ್ವಜನಿಕ ಕಲ್ಯಾಣ ನಿಧಿ ಯೋಜನೆ ಆಗಿದೆ, 18 ವರ್ಷಕ್ಕಿಂತ ದೊಡ್ಡವರಾದ ಓದುತ್ತಿರುವ ವಿದ್ಯಾರ್ಥಿಗಳಿಗೆ ₹4000 ವರೆಗು ಸ್ಕಾಲರ್ಶಿಪ್ ಕೊಡಲಾಗುತ್ತದೆ. ಓದುವುದಕ್ಕೆ ಯಾರ ಸಹಾಯವು ಇಲ್ಲದ, ತಂದೆ ತಾಯಿಗೆ ಮಕ್ಕಳ ಓದಿಗೆ ಹಣ ಕೊಡಲು ಸಾಧ್ಯ ಆಗದೆ ಇರುವಂಥ ವಿದ್ಯಾರ್ಥಿಗಳಿಗೆ, ಸರ್ಕಾರದ ಕಡೆಯಿಂದ ಈ ಯೋಜನೆಯ ಮೂಲಕ ₹4000 ಕೊಡಲಾಗುತ್ತದೆ.

ಈ ಯೋಜನೆಗೆ ಯಾರೆಲ್ಲಾ ಅರ್ಹತೆ ಪಡೆಯುತ್ತಾರೆ?

*ಅರ್ಜಿ ಹಾಕುವ ವಿದ್ಯಾರ್ಥಿಯ ವಯಸ್ಸು 18 ವರ್ಷ ದಾಟಿರಬೇಕು
*ತಂದೆ ಅಥವಾ ತಾಯಿ ನಿಧನರಾದ ಅಥವಾ ವಿಚ್ಛೇದನ ಪಡೆದಿರುವಂಥ, ತಂದೆ ತಾಯಿ ಅನಾರೋಗ್ಯಕ್ಕೆ ಒಳಗಾಗಿರುವಂಥ ವಿದ್ಯಾರ್ಥಿಗಳು ಇದಕ್ಕೆ ಅರ್ಹತೆ ಪಡೆಯುತ್ತಾರೆ.
*ಆಶ್ರಯವಿಲ್ಲದ, ಆರ್ಥಿಕವಾಗಿ ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯ
*ಪ್ರಕೃತಿ ವಿಕೋಪದಿಂದ ಎಲ್ಲವನ್ನು ಕಳೆದುಕೊಂಡಿವವರು, ಮಕ್ಕಳ ಮಾರಾಟ, ಭಿಕ್ಷಾಟನೆ, ಬಾಲ್ಯವಿವಾಹ, ಬಾಲಕಾರ್ಮಿಕ ಇಡದಿಂದ ಹೊರಬಂದಿರುವ ಮಕ್ಕಳು ಅರ್ಹತೆ ಪಡೆಯುತ್ತಾರೆ.
*ತಂದೆ ಅಥವಾ ತಾಯಿ ಜೈಲು ಪಾಲಾಗಿದ್ದರೆ, HIV ಇರುವ ಮಕ್ಕಳಿಗೆ, ತಂದೆ ತಾಯಿ ಮಕ್ಕಳು ಎಲ್ಲಾ ರೀತಿಯಲ್ಲಿ ನೋಡಿಕೊಳ್ಳಲು ಸಾಧ್ಯವಾಗದೆ ಇದ್ದರೆ, ಅಂಥವರಿಗೆ ಈ ಯೋಜನೆ ಇಂದ ಸಹಾಯ ಆಗುತ್ತದೆ.
*ಹಣಕಾಸಿನ ಸಹಾಯ ಮತ್ತು ಪುನರ್ವಸತಿ ಬೇಕಿರುವ ಮಕ್ಕಳಿಗೆ, ದೌರ್ಜನ್ಯ ಅನುಭವಿಸಿದ, ಫುಟ್ ಪಾತ್ ನಲ್ಲಿರುವ ಮಕ್ಕಳಿಗೆ ಸಹಾಯ ಸಿಗುತ್ತದೆ.

ಇನ್ನು ಒಂದು ಮುಖ್ಯವಾದ ವಿಷಯ ಇದ್ದು, ಸೌಲಭ್ಯ ಪಡೆಯಬೇಕು ಎಂದರೆ, ಆ ವಿದ್ಯಾರ್ಥಿಯ ತಂದೆ ತಾಯಿಯ ವಾರ್ಷಿಕ ಆದಾಯ ಹಳ್ಳಿಗಳಲ್ಲಿ ವಾಸ ಮಾಡುವವರಿಗೆ ₹72,000 ಕ್ಕಿಂತ ಕಡಿಮೆ ಇರಬೇಕು. ಸಿಟಿಯಲ್ಲಿ ವಾಸ ಮಾಡುವವರಿಗೆ ₹96,000 ಕ್ಕಿಂತ ಕಡಿಮೆ ಇರಬೇಕು. ಒಂದು ವೇಳೆ ವಿದ್ಯಾರ್ಥಿಯ ತಂದೆ ತಾಯಿ ಇಬ್ಬರು ಆಕ್ಸಿಡೆಂಟ್ ನಲ್ಲಿ ತೀರಿ ಹೋಗಿದ್ದರೆ, ಅಂಥವರಿಗೆ ಯಾವುದೇ ಷರತ್ತು ಇರುವುದಿಲ್ಲ.

ಬೇಕಾಗುವ ದಾಖಲೆಗಳು:

ಆಧಾರ್ ಕಾರ್ಡ್
ಕ್ಯಾಸ್ಟ್ ಸರ್ಟಿಫಿಕೇಟ್
ವಯಸ್ಸಿನ ದೃಢೀಕರಣ ದಾಖಲೆ
ಓದುತ್ತಿರುವ ಸಂಸ್ಥೆಯ ಪ್ರಮಾಣ ಪತ್ರ

ಅರ್ಜಿ ಸಲ್ಲಿಕೆ:

ಈ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಆನ್ಲೈನ್ ಆಯ್ಕೆ ಇಲ್ಲ. ಬದಲಾಗಿ ನೀವು ನಿಮ್ಮ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ಜಿಲ್ಲಾ ಪ್ರೊಬೇಷನ್ ಅಧಿಕಾರಿ ಆಫೀಸ್ ಗೆ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

Also Read: Free Laptop Scheme : ಬಿಬಿಎಂಪಿ ಘೋಷಣೆ ಮಾಡಿದ ಉಚಿತ ಲ್ಯಾಪ್ಟಾಪ್ ಯೋಜನೆಗೆ ಮತ್ತೊಮ್ಮೆ ದಾಖಲೆ ಸಲ್ಲಿಸಲು ಅವಕಾಶ ನೀಡಲಾಗಿದೆ.

Leave a comment