Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Aadhaar Card Update: ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ! ಇಲ್ಲಿದೆ ನಿಮಗೊಂದು ಗುಡ್ ನ್ಯೂಸ್, ಈ ಕೆಲಸಕ್ಕೆ ದಿನಗಳನ್ನು ಹೆಚ್ಚಿಸಿದ ಸರ್ಕಾರಾ! 

If you have an Aadhaar card, here is some good news for you from the government.

Aadhaar Card Update: ಆಧಾರ್ ಕಾರ್ಡ್ ಕುರಿತು ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಕೇಂದ್ರ ಸರ್ಕಾರವೂ ಇದೀಗ ಯಾವುದೇ ಕೆಲಸಗಳಿಗೆ ಅಥವಾ ಸರ್ಕಾರ ಕಚೇರಿ ಕೆಲಸಗಳಿಗೆ ಆಧಾರ್ ಕಾರ್ಡ್ ಅನ್ನು ಕಡ್ಡಾಯ ಎಂದು ಘೋಷಿಸಿದೆ. ಇನ್ನು ಇತ್ತೀಚೆಗೆ ಆಧಾರ್ ಕಾರ್ಡ್ ಜೊತೆಗೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿಸುವಂತೆ ಘೋಷಿಸಿತ್ತು.

ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಆಗದೆ ಹೋದರೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಬ್ಲಾಕ್ ಮಾಡುವುದಾಗಿ ಸಹ ತಿಳಿಸಿತ್ತು. ಇದರಂತೆ ಅನೇಕರು ತಮ್ಮ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿಸಿದ್ದಾರೆ. ಅಲ್ಲದೆ ಇದೀಗ ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್ ಹಾಗೂ ಇನ್ನಿತರ ಎಲ್ಲಾ ಧಾಖಲೆಗಳ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.

ಇನ್ನು ಇದಕ್ಕೆ ಸಂಬಂಧ ಪಟ್ಟಂತೆ ಎಲ್ಲರೂ ಸಹ ತಮ್ಮ ಎಲ್ಲಾ ದಾಖಲೆಗಳ ಜೊತೆಗೆ ತಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸುತ್ತಿದ್ದಾರೆ. ಆಧಾರ್ ಕಾರ್ಡ್ ಅನ್ನು ನಿಮ್ಮ ಇನ್ನಿತರ ದಾಖಲೆಗಳ ಜೊತೆಗೆ ಲಿಂಕ್ ಮಾಡಿಸದೆ ಹೋದರೆ ನೀವು ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಇನ್ನು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವುದೇ ತೊಂದರೆಗಳು ಇದ್ದಲ್ಲಿ ಅದನ್ನು ತಿದ್ದು ಪಡಿ ಮಾಡಿಸುವುದಕ್ಕೆ ಕೇಂದ್ರ ಸರ್ಕಾರ ಅವಕಾಶ ಮಾಡಿ ಕೊಟ್ಟಿತ್ತು. ಹೌದು, ಸೆಪ್ಟೆಂಬರ್ 14 ರ ವರೆಗೂ ಆಧಾರ್ ತಿದ್ದು ಪಡಿ ಮಾಡಿಸಲು ಕಾಲಾವಧಿಯನ್ನು ವಿಧಿಸಿತ್ತು. ಇನ್ನು ಸರ್ಕಾರದ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಪಾಸಿಟಿವ್ ರೆಸ್ಪಾನ್ಸ್ ದೊರಕಿದೆ.

ಇನ್ನು ಅನೇಕರು ಆಧಾರ್ ಕಾರ್ಡ್ ಲಿಂಕ್ ಮಾಡಿಸುವಲ್ಲಿ ಕೆಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಕಾರಣದಿಂದ ಇದೀಗ UIDAI ಆಧಾರ್ ಕಾರ್ಡ್ ತಿದ್ದುಪಡಿಯ ಅವಧಿಯನ್ನು ಹೆಚ್ಚಿಸಿದೆ. ಹೌದು, ಇದೀಗ ಡಿಸೆಂಬರ್ 14 ರ ವರೆಗೂ ಅವಕಾಶವನ್ನು ನೀಡಲಾಗಿದೆ. ಇನ್ನು ನೀವು ಸಹ ನಿಮ್ಮ ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಲು ಯೋಚಿಸುತ್ತಿದ್ದರೆ, ಇಂದೆ ನಿಮ್ಮ ಹತ್ತಿರದ ಆಧಾರ್ ಸೆಂಟರ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಕೆಲಸಗಳನ್ನು ಸುಲಭವಾಗಿಸಿಕೊಳ್ಳಿ.

ಇನ್ನು ನೀವು ನಿಮ್ಮ ಆಧಾರ್ ಕಾರ್ಡ್ ಡಾಕ್ಯುಮೆಂಟೇಷನ್ ಗಾಗಿ ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ನೀವು ಉಚಿತವಾಗಿ ನಿಮ್ಮ ಎಲ್ಲಾ ತಿದ್ದು ಪಡಿಯನ್ನು ಮಾಡಿ ಮುಗಿಸಬಹುದು. ನೀವು UIDAI ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಕೆಲಸವನ್ನು ಇನ್ನಷ್ಟು ಸುಲಭ ಮಾಡಿಕೊಳಬಹುದು. ಇನ್ನು ಈ ಕೆಳಗಿನ UIDAI ನ ಅಧಿಕೃತ ಲಿಂಕ್ ನ ಕ್ಲಿಕ್ ಮಾಡಿ, ಆಧಾರ್ ಅಪ್ಡೇಟ್ ಸುಲಭವಾಗಿ ಮಾಡಬಹುದು. UIDAI

If you have an Aadhaar card, here is some good news for you from the government.
If you have an Aadhaar card, here is some good news for you from the government.
Leave a comment