Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Government Scheme: ಮಹಿಳೆಯರ ಸಬಲೀಕರಣಕ್ಕೆ ಉಚಿತ ಹೊಲಿಗೆ ಯಂತ್ರ ನೀಡುತ್ತಿದೆ ಕೇಂದ್ರ ಸರ್ಕಾರ.. ನೀವು ಅರ್ಜಿ ಸಲ್ಲಿಸಬಹುದು.

Government Scheme: ಮಹಿಳೆಯರ ಜೀವನವನ್ನು ಇನ್ನಷ್ಟು ಹಸನು ಮಾಡುವ ಉದ್ದೇಶದಿಂದ ಮಹಿಳೆಯರಿಗೆ ಎಂದೇ ಈಗಾಗಲೇ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರ ಸಬಲೀಕರಣಕ್ಕೆ ಕಡಿಮೆ ದರದಲ್ಲಿ ಸಾಲ, ಉದ್ಯೋಗದಲ್ಲಿ ಮಹಿಳೆಯರಿಗೆ ಮೀಸಲಾತಿ ಹೀಗೆ ಹಲವಾರು ರೀತಿಯಲ್ಲಿ ಮಹಿಳೆಯರ ಪರವಾಗಿ ಸರ್ಕಾರ ನಿಂತಿದೆ. ಹಾಗಾದರೆ ಈ ಉಚಿತ ಹೊಲಿಗೆ ಯಂತ್ರದ ಉದ್ದೇಶಗಳು ಏನು ಹಾಗೂ ಯಾರು ಈ ಉಚಿತ ಹುಲಿಗೆ ಯಂತ್ರವನ್ನು ಪಡೆಯಬಹುದು ಎಂದು ಈ ಲೇಖನದಲ್ಲಿ ನೋಡೋಣ.

ಉಚಿತ ಹೊಲಿಗೆ ಯೋಜನೆಯ ಉದ್ದೇಶಗಳು ಏನು

1. ಮಹಿಳೆಯರ ಸ್ವಾವಲಂಬನೆ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಿಗೆ ಹೊಲಿಗೆ ಕೌಶಲ್ಯಗಳನ್ನು ಒದಗಿಸುವ ಮೂಲಕ ಸ್ವಾವಲಂಬನೆ ಪಡೆಯಲು ಸಹಾಯ ಆಗುತ್ತದೆ.
ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಗಳಿಸಲು ಮತ್ತು ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳಲು ಇದು ಒಂದು ಅವಕಾಶ ಆಗಲಿದೆ. .

2. ಉದ್ಯೋಗ ಸೃಷ್ಟಿ: ಹೊಲಿಗೆ ಯಂತ್ರಗಳನ್ನು ಒದಗಿಸುವ ಮೂಲಕ ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವುದು.
ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಸಣ್ಣ ಉದ್ಯಮಗಳ ಬೆಳವಣಿಗೆಗೆ ಉತ್ತೇಜನ ನೀಡಿದಂತೆ ಆಗುತ್ತದೆ.

3.ದಾರಿದ್ರ್ಯ ನಿರ್ಮೂಲನೆ: ಮಹಿಳೆಯರಿಗೆ ಆರ್ಥಿಕ ಸಬಲೀಕರಣ ಒದಗಿಸುವ ಮೂಲಕ ದಾರಿದ್ರ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುವುದು. ಜೀವನಮಟ್ಟವನ್ನು ಸುಧಾರಿಸಲು ಮತ್ತು ಸಮಾಜದಲ್ಲಿ ಮಹಿಳೆಯರ ಸ್ಥಾನಮಾನವನ್ನು ಹೆಚ್ಚಿಸಲು ಸಹಾಯ ಮಾಡುವುದು.

4. ಕೌಶಲ್ಯ ಅಭಿವೃದ್ಧಿ: ಮಹಿಳೆಯರಿಗೆ ಹೊಲಿಗೆ ಕೌಶಲ್ಯಗಳಲ್ಲಿ ತರಬೇತಿ ನೀಡುವುದು ಮತ್ತು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಅವರನ್ನು ಸಿದ್ಧಪಡಿಸುವುದು. ಮಹಿಳೆಯರ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಉದ್ಯಮದಲ್ಲಿ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸಲು ಸಹಾಯ ಮಾಡುವುದು.

5.ಸಾಮಾಜಿಕ ಸೇರ್ಪಡೆ: ಮಹಿಳೆಯರಿಗೆ ಸಮಾಜದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶಗಳನ್ನು ಒದಗಿಸುವುದು. ಸಾಮಾಜಿಕ ಸಮಾನತೆ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಸಹಾಯ ಮಾಡುವುದು

ಉಚಿತ ಹೊಲಿಗೆ ಯಂತ್ರ ಯೋಜನೆಯ ನಿಯಮಗಳು :-

1. ಅರ್ಜಿದಾರರು 18 ರಿಂದ 45 ವರ್ಷ ವಯಸ್ಸಿನ ಮಹಿಳೆಯರಿಗೆ ಮತ್ತು ಕನಿಷ್ಠ 8 ನೇ ತರಗತಿ ಉತ್ತೀರ್ಣರಾಗಿರಬೇಕು.
2.ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹ 1.00 ಲಕ್ಷ ಮೀರಬಾರದು.
3.ಆಯ್ಕೆಯಾದ ಅರ್ಜಿದಾರರಿಗೆ ಹೊಲಿಗೆ ಯಂತ್ರಗಳ ಜೊತೆಗೆ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುವುದು.

ಅಗತ್ಯ ದಾಖಲೆಗಳು:

1) ಅರ್ಜಿದಾರರ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
2) ವಯಸ್ಸಿನ ಪುರಾವೆ (ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ)
3) ಶೈಕ್ಷಣಿಕ ಅರ್ಹತೆ ಪುರಾವೆ (SSLC ಅಂಕಪಟ್ಟಿ)
4) ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಲ್ಪಸಂಖ್ಯಾತರಿಗೆ)
5) ಆದಾಯ ಪ್ರಮಾಣ ಪತ್ರ
6) ವಾಸಸ್ಥಳ ಪುರಾವೆ (ವಿದ್ಯುತ್ ಬಿಲ್, ರೇಷನ್ ಕಾರ್ಡ್)
7) ಹೊಲಿಗೆ ಕೌಶಲ್ಯದ ಬಗ್ಗೆ ಮಾಹಿತಿ, ಹಿಂದಿನ ತರಬೇತಿ ಪ್ರಮಾಣ ಪತ್ರ, ಉದ್ಯೋಗದ ಮಾಹಿತಿ
8)ಬ್ಯಾಂಕ್ ಖಾತೆ ವಿವರಗಳು

Also Read: Gruhalakshmi: ಗೃಹಲಕ್ಷ್ಮಿ ಯೋಜನೆಯ ಒಂದೂ ಕಂತಿನ ಹಣ ಬರದವರಿಗೆ ಗುಡ್ ನ್ಯೂಸ್! ಈ ಒಂದು ಕೆಲಸ ಮಾಡಿ 10 ಸಾವಿರ ಒಟ್ಟಿಗೆ ಬರಲಿದೆ.

Leave a comment