Gruhalakshmi: ಗೃಹಲಕ್ಷ್ಮಿ ಯೋಜನೆಯ ಒಂದೂ ಕಂತಿನ ಹಣ ಬರದವರಿಗೆ ಗುಡ್ ನ್ಯೂಸ್! ಈ ಒಂದು ಕೆಲಸ ಮಾಡಿ 10 ಸಾವಿರ ಒಟ್ಟಿಗೆ ಬರಲಿದೆ.
ಗೃಹಲಕ್ಷ್ಮಿ ಯೋಜನೆಯ ಮೂಲಕ ಈ ಯೋಜನೆಗೆ ಅಪ್ಲೈ ಮಾಡಿರುವ ಮಹಿಳೆಯರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಪ್ರತಿ ತಿಂಗಳು ₹2000 ರೂಪಾಯಿ ಹಣ ವರ್ಗಾವಣೆ ಮಾಡುತ್ತಿದೆ ಸರ್ಕಾರ.
Gruhalakshmi: ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲೇ ಮಹಿಳೆಯರಿಗಾಗಿ ವಿಶೇಷವಾಗಿ ಜಾರಿಗೆ ತಂದ ಯೋಜನೆ ಗೃಹಲಕ್ಷ್ಮಿ ಯೋಜನೆ ಆಗಿದೆ. ಮನೆ ನಡೆಸಿಕೊಂಡು ಹೋಗುವ ಎಲ್ಲಾ ಗೃಹಿಣಿಯರಿಗೆ ಅವರ ಖರ್ಚಿಗೆ ಸಹಾಯ ಆಗಲಿ ಎಂದು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿತೆ ತಂದು 6 ತಿಂಗಳ ಸಮಯ ಕಳೆಯುತ್ತಿದೆ. ಹಲವು ಮಹಿಳೆಯರಿಗೆ ಈ ಯೋಜನೆಯ ಹಣ ಸಿಕ್ಕಿದ್ದರು ಸಹ ಇನ್ನು ಸಾಕಷ್ಟು ಮಹಿಳೆಯರಿಗೆ ಈ ಯೋಜನೆಯ ಹಣ ಬಂದಿಲ್ಲ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಹಣ ಬರದೇ ಇರಲು ಕಾರಣವೇನು? Gruhalakshmi:
ಗೃಹಲಕ್ಷ್ಮಿ ಯೋಜನೆಯ ಮೂಲಕ ಈ ಯೋಜನೆಗೆ ಅಪ್ಲೈ ಮಾಡಿರುವ ಮಹಿಳೆಯರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಪ್ರತಿ ತಿಂಗಳು ₹2000 ರೂಪಾಯಿ ಹಣ ವರ್ಗಾವಣೆ ಮಾಡುತ್ತಿದೆ ಸರ್ಕಾರ. ಆದರೆ 1.18 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ಧರು ಸಹ 5 ರಿಂದ 6 ಲಕ್ಷ ಮಹಿಳೆಯರಿಗೆ ಯೋಜನೆಯ ಹಣ ಇನ್ನು ತಲುಪಿಲ್ಲ.. ಅದಕ್ಕೆ ಕಾರಣ ಅವರ ಬ್ಯಾಂಕ್ ಅಕೌಂಟ್ ನಲ್ಲಿ ಇರುವ ಸಮಸ್ಯೆ, ರೇಶನ್ ಕಾರ್ಡ್ ನಲ್ಲಿರುವ ಸಮಸ್ಯೆ ಅಥವಾ ಆಧಾರ್ ಕಾರ್ಡ್ ನಲ್ಲಿ ತಪ್ಪು ಮಾಹಿತಿ ಕೊಟ್ಟಿರುವುದು ಆಗಿರಬಹುದು.
ಒಂದು ಕಂತಿನ ಹಣವೂ ಬಂದಿಲ್ಲ:
ಗೃಹಲಕ್ಷ್ಮಿ ಯೋಜನೆಯಲ್ಲಿ ಕೆಲವು ಮಹಿಳೆಯರಿಗೆ ಇನ್ನು ಕೂಡ ಒಂದೇ ಒಂದು ಕಂತಿನ ಹಣ ಕೂಡ ಬಂದಿಲ್ಲ. ಮಹಿಳೆಯರು ಇದಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳಲು ಪ್ರಯತ್ನ ಪಟ್ಟು ಕಛೇರಿಗಳಿಯೇ ಅಲೆದಾಡುವ ಹಾಗೆ ಆಗಿದೆ. ಆದರೆ ಇನ್ನುಮುಂದೆ ಅಷ್ಟೆಲ್ಲಾ ತೊಂದರೆ ತೆಗೆದುಕೊಳ್ಳುವುದು ಬೇಡ, ಇದೀಗ ಸರ್ಕಾರಗೆ ನಿಮಗಾಗಿ ಒಂದು ಪರಿಹಾರ ತಂದಿದ್ದು, ಆ ರೀತಿ ಮಾಡಿದರೆ ಸಾಕು ಯೋಜನೆಯ ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಶೀಘ್ರದಲ್ಲೇ ವರ್ಗಾವಣೆ ಆಗುತ್ತದೆ..
ಬ್ಯಾಂಕ್ ಅಕೌಂಟ್ Ekyc ಮಾಡಿಸಿ:
ಒಂದು ವೇಳೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂದ್ರೆ ಮುಖ್ಯವಾಗಿ ಮಾಡಬೇಕಿರುವುದು ನಿಮ್ಮ ಬ್ಯಾಂಕ್ ಅಕೌಂಟ್ ಚೆಕ್ ಮಾಡುವ ಕೆಲಸ. ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರಬೇಕು ಅಂದರೆ ಮುಖ್ಯವಾಗಿ ಇಕೆವೈಸಿ ಮಾಡಿಸಿರಬೇಕು., ಒಂದು ವೇಳೆ ಆಗಿಲ್ಲ ಅಂದ್ರೆ ಈ ಕೂಡಲೇ ಮಾಡಿಸಿ..
ಆಧಾರ್ NPCI ಕಡ್ಡಾಯ:
ಆಧಾರ್ ಕಾರ್ಡ್ NPCI ಮ್ಯಾಪಿಂಗ್ ಮಾಡಿಸುವುದು ಕೂಡ ಕಡ್ಡಾಯ ಆಗಿದೆ. ಹೌದು, ಬ್ಯಾಂಕ್ ಅಕೌಂಟ್ ಇಕೆವೈಸಿ ಮಾಡಿಸುವುದರ ಜೊತೆಗೆ ಆಧಾರ್ ಕಾರ್ಡ್ ಇಕೆವೈಸಿ ಹಾಗೂ NPCI ಮ್ಯಾಪಿಂಗ್ ಚೆಕ್ ಮಾಡಿ, ಅದನ್ನು ಕೂಡ ಮಾಡಿಸಿ. ಈ ಎರಡು ಕೆಲಸಗಳನ್ನು ಮಾಡಿಸಿರುವವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಂಡಿತವಾಗಿ ತಲುಪುತ್ತದೆ. ಇತ್ತೀಚೆಗೆ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಇದ್ದು, ಈ ಎರಡು ಕೆಲಸ ಮಾಡಿಸಿದ ಮೂರೇ ದಿನಕ್ಕೆ ಹಣ ಬಂದಿದೆ. ಹಾಗಾಗಿ ನೀವು ಈ ಕೆಲಸ ಮಾಡಬಹುದು.
5ನೇ ಕಂತಿನ ಹಣ ಬಂದಿದ್ದರೆ ಅಂಥವರು ಇಕೆವೈಸಿ, NCPI Mapping ಮಾಡಿಸುವ ಅವಶ್ಯಕತೆ ಇಲ್ಲ. ಇನ್ನು ಒಂದೂ ಕಂತಿನ ಹಣ ಬರದೇ ಇರುವವರು ತಪ್ಪದೇ ಈ ಕೆಲಸ ಮಾಡಿ. ನಿಮಗೆ ಹಣ ಬರೋದು ಗ್ಯಾರೆಂಟಿ. ಈಗಾಗಲೇ ಸರ್ಕಾರವು 6ನೇ ಕಂತಿನ ಹಣವನ್ನು ಬಿಡುಗಡೆ ಮಾಡುತ್ತಿದ್ದು, ಪ್ರಸ್ತುತ 16 ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಈಗಾಗಲೇ ಬಿಡುಗಡೆ ಆಗಿದೆ, ಶೀಘ್ರದಲ್ಲೇ ಎಲ್ಲಾ ಜಿಲ್ಲೆಗಳ ಜನರಿಗೂ ಸಿಗಲಿದೆ.
ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡಿ:
ಒಂದು ವೇಳೆ ನಿಮಗೆ ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂದ್ರೆ, ಯಾವಾಗ ಬರುತ್ತದೆ ಎಂದು ತಿಳಿದುಕೊಳ್ಳಲು DBT ಕರ್ನಾಟಕ ಆಪ್ ಇನ್ಸ್ಟಾಲ್ ಮಾಡಿಕೊಳ್ಳಬಹುದು. ಅಥವಾ ಮಾಹಿತಿ ಕಣಜ ವೆಬ್ಸೈಟ್ ಮೂಲಕ ಸ್ಟೇಟಸ್ ಚೆಕ್ ಮಾಡಬಹುದು.
Gruhalakshmi The pending amount is released; do this work immediately to get your pending amount.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.