Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

BPL Card Benefits : ಬಿಪಿಎಲ್ ಕಾರ್ಡ್ ಇದ್ರೆ ಸಾಕು ಸಿಗುತ್ತೆ ಈ ಎಲ್ಲಾ ಪ್ರಯೋಜನ! ತಡ ಮಾಡದೆ ಪಡೆಯಿರಿ!

BPL Card Benefits : ಬಿಪಿಎಲ್ ರೇಷನ್ ಕಾರ್ಡ್ ಬಡತನದ ರೇಖೆಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಸರ್ಕಾರದಿಂದ ನೀಡಲಾಗುವ ಒಂದು ಪ್ರಮುಖ ದಾಖಲೆಯಾಗಿದೆ. ಇದರಿಂದ ಹಲವು ಯೋಜನೆಗಳು ನಿಮಗೆ ಸಿಗಲಿವೆ.

BPL Card Benefits : ಬಿಪಿಎಲ್ ರೇಷನ್ ಕಾರ್ಡ್ ಬಡತನದ ರೇಖೆಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಸರ್ಕಾರದಿಂದ ನೀಡಲಾಗುವ ಒಂದು ಪ್ರಮುಖ ದಾಖಲೆಯಾಗಿದೆ. ಇದರಿಂದ ಹಲವು ಯೋಜನೆಗಳು ನಿಮಗೆ ಸಿಗಲಿವೆ.

BPL Card Benefits

ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಸಲು ಕೆಲವೊಂದಿಷ್ಟು ನಿಯಮಗಳು ಇವೆ. ಅವುಗಳ ಬಗ್ಗೆ ತಿಳಿಯೋಣ.

* ಕುಟುಂಬದ ಎಲ್ಲ ಸದಸ್ಯರ ವಾರ್ಷಿಕ ಆದಾಯ ₹1,00,000 ರೂ.ಗಿಂತ ಕಡಿಮೆ ಇರಬೇಕು.
* ಕುಟುಂಬದ ಯಾವುದೇ ಸದಸ್ಯರು ಸ್ವಂತ ಕಾರು, ಟ್ರ್ಯಾಕ್ಟರ್, ಮೋಟಾರ್ ಸೈಕಲ್, 2 ಚಕ್ರ ವಾಹನ, 3 ಚಕ್ರ ವಾಹನ, ಟಿ.ವಿ., ಫ್ರಿಜ್, ಏರ್ ಕಂಡೀಷನರ್, ರಿಫ್ರಿಜರೇಟರ್, ವಾಷಿಂಗ್ ಮಷಿನ್ ಹೊಂದಿರಬಾರದು.
* ಕುಟುಂಬದ ಯಾವುದೇ ಸದಸ್ಯನ ಹೆಸರಿನಲ್ಲಿ 5 ಎಕರೆಗಿಂತ ಹೆಚ್ಚು ಭೂಮಿ ಇರಬಾರದು.
* ಕುಟುಂಬದ ಯಾವುದೇ ಸದಸ್ಯನು ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಇಲಾಖೆಯಲ್ಲಿ ಉದ್ಯೋಗ ಮಾಡುತ್ತಾ ಇರಬಾರದು.

Also Read: Government News : ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದ ಸರ್ಕಾರ! ಈ ರೀತಿ ಮಾಡಿ ಪ್ರಯೋಜನ ಪಡೆಯಿರಿ!

ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಯಾವ ಯಾವ ಯೋಜನೆಗಳನ್ನು ನೀಡುತ್ತಿದೆ :-

ಪ್ರಮುಖವಾಗಿ ಹೇಳುವುದಾದರೆ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಗೆ ರೇಷನ್ ಕಾರ್ಡ್ ಕಡ್ಡಾಯವಲ್ಲ, ಆದರೆ ಅರ್ಹತೆಯ ಪರಿಶೀಲನೆಗೆ ಬಹು ಮುಖ್ಯ ದಾಖಲೆ ಆಗಿದೆ. ಇದರಿಂದ ಕುಟುಂಬದ ಆದಾಯ ತಿಳಿಸಲು ಉಪಯುಕ್ತ ಆಗುತ್ತದೆ. ಈ ಯೋಜನೆ ಎ ಪಿ ಎಲ್ ಮತ್ತು ಬಿಪಿಎಲ್ ಎರಡು ಕುಟುಂಬದವರಿಗೆ ಈ ಯೋಜನೆ ಲಭ್ಯವಿದೆ. ಆದರೆ ಕುಟುಂಬದ ಆದಾಯದ ಮೇಲೆ ಸಿಗುವ ಸೌಲಭ್ಯಗಳು ನಿರ್ಣಯ ಆಗುತ್ತವೆ.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆಯಲ್ಲಿ ಕುಟುಂಬದ ಮುಖ್ಯಸ್ಥರಿಗೆ ₹2 ಲಕ್ಷಗಳ ಅಪಘಾತ ವಿಮಾ ಸಿಗುತ್ತದೆ. ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಲ್ಲಿ ₹2 ಲಕ್ಷಗಳ ಅಪಘಾತ ವಿಮಾ ಸಿಗುತ್ತದೆ. ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ವಾರ್ಷಿಕ ₹5 ಲಕ್ಷಗಳವರೆಗೆ ಆಸ್ಪತ್ರೆ ವೆಚ್ಚವನ್ನು ಸರ್ಕಾರ ಭರಿಸುತ್ತದೆ.

ಅಕ್ಕಿ, ಗೋಧಿ, ಸಕ್ಕರೆ, ಉಪ್ಪು, ಎಣ್ಣೆ ಮುಂತಾದ ಆಹಾರ ಪದಾರ್ಥಗಳು ಉಚಿತವಾಗಿ ಸಿಗುತ್ತದೆ. ಉಚಿತ ಅಥವಾ ಕಡಿಮೆ ದರದಲ್ಲಿ ಗ್ಯಾಸ್ ಸಿಗುತ್ತದೆ. ಉಚಿತ ಶಿಕ್ಷಣ, ಹಾಗೂ ವೈದ್ಯಕೀಯ ಸೌಲಭ್ಯಗಳ ಮೇಲೆ ರಿಯಾಯಿತಿ ಸಿಗುತ್ತದೆ. ಗೃಹ ನಿರ್ಮಾಣ ಯೋಜನೆಗಳಲ್ಲಿ ಸಾಲ ಸೌಲಭ್ಯ . ಸ್ವಯಂ ಉದ್ಯೋಗ ಮಾಡುವವರಿಗೆ ಸಾಲ ಸೌಲಭ್ಯ ಸಿಗುತ್ತದೆ. ಕುಶಲ ಕಾರ್ಮಿಕ ವರ್ಗದವರಿಗೆ ಉಚಿತವಾಗಿ ಕೆಲವೊಂದು ಕೊಡುಗೆಗಳು ಸಿಗುತ್ತವೆ. ಕಟ್ಟಡ ಕಾರ್ಮಿಕ ವರ್ಗದ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ಸಿಗುತ್ತದೆ. ಸರ್ಕಾರದ ಅನೇಕ ಸೌಲಭ್ಯಗಳು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ನೇರವಾಗಿ ಸಿಗುತ್ತವೆ. ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಕೆಲವು ರಿಯಾಯಿತಿ ದರದಲ್ಲಿ ಸೌಲಭ್ಯಗಳು ಸಿಗುತ್ತವೆ.

Also Read: Labor Card : ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ನೋಂದಣಿ ಅಭಿಯಾನ ಆರಂಭ, ಆಸಕ್ತರು ಬೇಗ ಈ ರೀತಿ ಅರ್ಜಿ ಸಲ್ಲಿಸಿ.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment