Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Aadhar Update: ಆಧಾರ್ ಕಾರ್ಡ್ ನವೀಕರಣಕ್ಕೆ ಕೊನೆಯ ಎಚ್ಚರಿಕೆ!

Aadhar Update: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದೆ. ಹತ್ತು ವರುಷದ ಹಿಂದಿನ ಆಧಾರ್ ಕಾರ್ಡ್ ಅನ್ನು ಈಗ ಹೊಸದಾಗಿ ನಿಮ್ಮ ಎಲ್ಲಾ ಮಾಹಿತಿಗಳನ್ನು ನೀಡಿ ಹಾಗೂ ನಿಮ್ಮ ಫಿಂಗರ್ ಪ್ರಿಂಟ್ ಅನ್ನು ಹೊಸದಾಗಿ ನೀಡಿ ನವಿಕರಿಸಬೇಕು. ಮಾರ್ಚ್ 14 ರಂದು ಆಧಾರ್ ಕಾರ್ಡ್ ನವೀಕರಣಕ್ಕೆ ಕೊನೆಯ ದಿನವಾಗಿದೆ. ನೀವು ಮಾರ್ಚ್ 14 ರ ಒಳಗೆ ಆಧಾರ್ ಕಾರ್ಡ್ ನವೀಕರಣ ಮಾಡದೆ ಇದ್ದರೆ ಮುಂದಿನ ದಿನಗಳಲ್ಲಿ ನವೀಕರಣ ಮಾಡಿಸಲು ಹೆಚ್ಚಿನ ಶುಲ್ಕ ನೀಡಬೇಕಾಗುತ್ತದೆ. ಹೆಚ್ಚಿನ ಶುಲ್ಕ ನೀಡುವುದನ್ನು ತಪ್ಪಿಸಿಕೊಳ್ಳಲು ನೀವು ಆದಷ್ಟು ಬೇಗ ಆಧಾರ್ ನವೀಕರಣ ಮಾಡಿಸಿಕೊಳ್ಳಬೇಕು. ಹಾಗಾದರೆ ಆಧಾರ್ ನವೀಕರಣ ಹೇಗೆ ಮಾಡುವುದು ಎಂದು ತಿಳಿಯೋಣ.

ನವೀಕರಣ ಮಾಡಿಸುವುದು ಹೇಗೆ? :+

ನೀವು ಆನ್‌ಲೈನ್‌ ಮೂಲಕ ನಿಮ್ಮ ಆಧಾರ್ ಕಾರ್ಡ್‌ ಅನ್ನು ನವೀಕರಿಸಬಹುದು:

UIDAI ವೆಬ್‌ಸೈಟ್‌ಗೆ ಭೇಟಿ ನೀಡಿ (https://uidai.gov.in/)

“ಆಧಾರ್ ನವೀಕರಣ” ಟ್ಯಾಬ್ ಕ್ಲಿಕ್ ಮಾಡಿ

ನಿಮ್ಮ 12-ಅಂಕೆಗಳ ಆಧಾರ್ ಸಂಖ್ಯೆ ಅಥವಾ 16-ಅಂಕೆಗಳ VID ಯನ್ನು ನಮೂದಿಸಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಆ OTP ನಮೂದಿಸಿ.
ನಂತರ ನಿಮ್ಮ ಜನನ ದಿನಾಂಕ ಮತ್ತು ಲಿಂಗವನ್ನು ಹಾಕಿ.
* ನವೀಕರಣಕ್ಕಾಗಿ ವಿನಂತಿಸಿ ಎಂಬ ಬಟನ್ ಕ್ಲಿಕ್ ಮಾಡಿ
*ನಿಮ್ಮ ಫೋಟೋ ಮತ್ತು ಬಯೋಮೆಟ್ರಿಕ್ಸ್ ಅನ್ನು ಅಪ್‌ಲೋಡ್ ಮಾಡಿ
* ಶುಲ್ಕ ಪಾವತಿಸಿ.

ಅಂಚೆ ಕಛೇರಿಯ ಮೂಲಕ ನಿಮ್ಮ ಆಧಾರ್ ಕಾರ್ಡ್‌ ಅನ್ನು ನವಿಕರಿಸುವುದು ಹೇಗೆ? :-
ನಿಮ್ಮ ಹತ್ತಿರದ ಅಂಚೆ ಕಛೇರಿಗೆ ಭೇಟಿ ನೀಡಿ “ಆಧಾರ್ ನವೀಕರಣ” ಫಾರ್ಮ್ ತುಂಬಿ. ಅಗತ್ಯ ದಾಖಲೆಗಳನ್ನು ಒದಗಿಸಿ, ನಂತರ ಶುಲ್ಕ ಪಾವತಿಸಿ.

ನವೀಕರಣಕ್ಕೆ ಪ್ರಕ್ರಿಯೆಗೆ ನಿಸಬೇಕಾದ ದಾಖಲೆಗಳು:

1) ವಯಸ್ಸಿನ ಪುರಾವೆ (ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ)
2) ವಿಳಾಸ ಪುರಾವೆ (ವಿದ್ಯುತ್ ಬಿಲ್, ರೇಷನ್ ಕಾರ್ಡ್)
3) ಗುರುತಿನ ಪುರಾವೆ (ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್)
4)ನವೀಕರಣ ಶುಲ್ಕ

ಶುಲ್ಕದ ವಿವರ ಹೀಗಿದೆ :- 18 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರಿಗೆ 50 ರೂಪಾಯಿ ಹಾಗೂ 5 ರಿಂದ 18 ವರ್ಷದವರಿಗೆ 25 ರೂಪಾಯಿ.

ನಿಮ್ಮ ಆಧಾರ್ ಕಾರ್ಡ್ ಅನ್ನು ಲಭ್ಯವಿರುವ ದಾಖಲೆಗಳೊಂದಿಗೆ ನವೀಕರಿಸುವುದರಿಂದ ಅದರ ಮಾನ್ಯತೆಯನ್ನು ಖಚಿತಪಡಿಸುತ್ತದೆ.
ನವೀಕರಿಸಿದ ಆಧಾರ್ ಕಾರ್ಡ್ ಭವಿಷ್ಯದಲ್ಲಿ ಯಾವುದೇ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ನವೀಕರಿಸಿದ ಆಧಾರ್ ಕಾರ್ಡ್ ನಿಮ್ಮ ಗುರುತಿನ ಉತ್ತಮ ಪುರಾವೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-
UIDAI ವೆಬ್‌ಸೈಟ್‌ಗೆ ಭೇಟಿ ನೀಡಿ (https://uidai.gov.in/)
UIDAI ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿ: 1947

Also Read: Aadhar Update: ಆಧಾರ್ ಕಾರ್ಡ್ ನವೀಕರಣಕ್ಕೆ ಕೊನೆಯ ಎಚ್ಚರಿಕೆ!

Leave a comment