ಇಂದು ಜುಲೈ 9, 2023 ಭಾನುವಾರ, ಇಂದಿನ ದಿನ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲಾ ಫಲಗಳು ದೊರೆಯಲಿದೆ ಎನ್ನುವುದನ್ನು ತಿಳಿಯೋಣ ಬನ್ನಿ…
ಮೇಷ ರಾಶಿ: ಇಂದಿನ ದಿನ ಯಾರಿಗೂ ಸಾಲವನ್ನು ನೀಡಬೇಡಿ, ಸಾಲವನ್ನು ನೀಡುವುದಾದರೆ ಮರುಪಾವತಿಯ ದಿನವನ್ನು ಬರವಣಿಗೆಯ ರೂಪದಲ್ಲಿ ತೆಗೆದುಕೊಳ್ಳಿ. ನಿಮ್ಮ ಕುಟುಂಬಸ್ಥರು ನಿಮ್ಮ ಅಗತ್ಯಗಳನ್ನು ಪೂರೈಸಲು ನಿಮಗೆ ಸಹಾಯ ಮಾಡುತ್ತಾರೆ. ನಿಮ್ಮ ವೈವಾಹಿಕ ಜೀವನದಲ್ಲಿ ಇಂದು ನೀವು ಒಂದು ಸುಂದರವಾದ ಬದಲಾವಣೆಯನ್ನು ಕಾಣಲಿದ್ದೀರಿ. ನಿಮ್ಮ ಹಳೆಯ ಸ್ನೇಹಿತನನ್ನು ಇಂದು ನೀವು ಭೇಟಿ ಮಾಡುವ ಮೂಲಕ ನಿಮ್ಮ ಸಂತಸ ದುಪ್ಪಟ್ಟಾಗಲಿದೆ.
ವೃಷಭ ರಾಶಿ: ಇಂದಿನ ದಿನ ವೃಷಭ ರಾಶಿಯವರಿಗೆ ಬಹಳ ಲಾಭಕರವಾದ ದಿನವಾಗಲಿದೆ. ನಿಮ್ಮ ಆರೋಗ್ಯದಲ್ಲಿ ಸಹ ಚೇತರಿಕೆ ಕಾಣಲಿದ್ದೀರಿ. ನೀವು ಬಹಳ ಪ್ರೀತಿಸುವ ವ್ಯಕ್ತಿಗಳ ಆರೋಗ್ಯಕ್ಕಾಗಿ ಇಂದು ನೀವು ಸಾಕಷ್ಟು ಹಣವನ್ನು ಖರ್ಚು ಮಾಡಲಿದ್ದೀರಿ. ದೂರದ ಸಂಬಂಧಿ ಒಬ್ಬರಿಂದ ಇಂದು ನಿಮಗೆ ಸಂತೋಷದ ಸುದ್ದಿಯೊಂದು ಸಿಗಲಿದೆ. ಇಂದಿನ ದಿನ ಯಾವುದೇ ಕೆಲಸ ಮಾಡುವಾಗ ಕೊಂಚ ಎಚ್ಚರಿಕೆ ಬಯಸುವುದು ಉತ್ತಮ.
ಮಿಥುನ ರಾಶಿ: ಇಂದು ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಇಂದು ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಒಳ್ಳೆಯ ಫಲ ಕಾಣಲಿದ್ದೀರಿ. ಡೈರಿ ಅಥವಾ ಇನ್ಯಾವುದಾದರೂ ಉದ್ಯಮಕ್ಕೆ ಸೇರಿದವರು ಎಂದು ದೊಡ್ಡ ಮಟ್ಟದಲ್ಲಿ ಲಾಭ ಕಾಣಲಿದ್ದೀರಿ. ನಿಮ್ಮ ಕುಟುಂಬದವರ ಒಳಿತಿಗಾಗಿ ನೀವು ಇಂದು ಸಾಕಷ್ಟು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಇಂದಿನ ದಿನ ನಿಮಗೆ ಬಹಳ ಲಾಭಕಾರಿಯಾಗಿದ್ದು ಸಿಕ್ಕ ಸಮಯವನ್ನು ಉಪಯುಕ್ತ ಕೆಲಸಗಳಿಗೆ ಬಳಸಿಕೊಳ್ಳಿ.
ಕರ್ಕಾಟಕ ರಾಶಿ: ನಿಮ್ಮ ಸ್ನೇಹಿತರ ಸಹಾಯದಿಂದ ಇಂದು ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗುವ ಸಾಧ್ಯತೆ ಇದೆ. ಮಕ್ಕಳ ಜೊತೆಗೆ ಮಕ್ಕಳಾಗಿ ಆಟವಾಡುವ ಮೂಲಕ ನಿಮ್ಮ ಮಾನಸಿಕ ಸ್ಥಿತಿ ಕೊಂಚ ಸುಧಾರಿಸುತ್ತದೆ. ಇಂದು ನಿಮ್ಮ ವೈವಾಹಿಕ ಜೀವನ ಬಹಳ ಸಂತೋಷದಿಂದ ನಡೆಯಲಿದೆ. ಇನ್ನು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಲವು ಬಾರಿ ಯೋಚಿಸಿ ಹಿರಿಯರ ಸಲಹೆ ಪಡೆದು ನಂತರ ಕೆಲಸವನ್ನು ಶುರು ಮಾಡುವುದು ಉತ್ತಮ.
ಸಿಂಹ ರಾಶಿ: ನಿಮ್ಮ ಭಾವನೆಗಳನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಿ, ಇಲ್ಲವಾದರೆ ಇದರಿಂದ ನೀವು ಸಮಸ್ಯೆಗಳಿಗೆ ಸಿಲುಕುತ್ತೀರಿ. ಇಂದು ಹಣವನ್ನು ಮಿತಿ ಮೀರಿ ಕರ್ಚು ಮಾಡುವುದನ್ನು ಮಾಡಬೇಡಿ. ಹಣವನ್ನು ಉಳಿಸಲು ಪ್ರಯತ್ನಿಸಿ. ಇಂದಿನ ದಿನ ನಿಮ್ಮ ಸಂಗಾತಿಯ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯಲು ಪ್ರಯತ್ನಿಸಿ, ಈ ಮೂಲಕ ನಿಮ್ಮ ವೈವಾಹಿಕ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.
ಕನ್ಯಾ ರಾಶಿ: ಇಂದು ನಿಮ್ಮ ಸ್ನೇಹಿತರು ನಿಮ್ಮ ಆಲೋಚನೆಗಳಿಗೆ ಸೂಕ್ತವಾದ ವ್ಯಕ್ತಿ ಒಬ್ಬರನ್ನು ಭೇಟಿ ಮಾಡಿಸುವ ಸಾಧ್ಯತೆ ಇದೆ. ಇನ್ನು ನಿಮ್ಮ ಆಲೋಚನೆಗಳನ್ನು ನಿಮಗೆ ಸೂಕ್ತವಾದ ಸಲಹೆ ನೀಡುವ ವ್ಯಕ್ತಿಗಳ ಜೊತೆಗೆ ಹಂಚಿಕೊಳ್ಳುವ ಮೂಲಕ ನಿಮ್ಮ ಆಲೋಚನೆಗಳಿಗೆ ಇಂದು ಹೊಸ ದಾರಿ ಸಿಗಲಿದೆ. ಎಲ್ಲರನ್ನೂ ಪ್ರೀತಿಸುವ ಗುಣ ನಿಮ್ಮದು, ಆದರೆ ನಿಮ್ಮನ್ನು ಪ್ರೀತಿಸುವವರು ಯಾರು ಎನ್ನುವುದನ್ನು ಕಂಡುಕೊಳ್ಳಿ. ನಿಮ್ಮ ಮಾರ್ಗದರ್ಶಕರೊಂದಿಗೆ ಕೊಂಚ ಸಮಯ ಮಾತನಾಡುವ ಮೂಲಕ ನಿಮ್ಮ ಮನಸ್ಸಿಗೆ ಶಾಂತಿ ಸಿಗಲಿದೆ.
ತುಲಾ ರಾಶಿ: ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸಲು ನಿಮ್ಮ ಮಕ್ಕಳ ಜೊತೆಗೆ ಕೊಂಚ ಹೆಚ್ಚು ಸಮಯವನ್ನು ಕಳೆಯಿರಿ. ಇಂದಿನ ದಿನ ಹಣಕಾಸಿನ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ವೇಳೆ ತಾಳ್ಮೆಯಿಂದ ಬಹಳಷ್ಟು ಬಾರಿ ಯೋಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುವ ಮೂಲಕ ಆ ಕೆಲಸಗಳಿಂದ ನೀವು ಲಾಭವನ್ನು ಪಡೆಯಬಹುದಾಗಿದೆ. ಇನ್ನು ಕೆಲಸದ ಜಾಗದಲ್ಲಿ ಸಹ ಎಲ್ಲವೂ ನಿಮ್ಮ ಪರವಾಗಿ ನಿಂತಿರುತ್ತದೆ.
ವೃಶ್ಚಿಕ ರಾಶಿ: ನಿಮ್ಮ ಭಾವನೆಗಳನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಿ, ಇಲ್ಲವಾದರೆ ಇದರಿಂದ ನೀವು ಸಮಸ್ಯೆಗಳಿಗೆ ಸಿಲುಕುತ್ತೀರಿ. ಇಂದು ಹಣವನ್ನು ಮಿತಿ ಮೀರಿ ಕರ್ಚು ಮಾಡುವುದನ್ನು ಮಾಡಬೇಡಿ. ಹಣವನ್ನು ಉಳಿಸಲು ಪ್ರಯತ್ನಿಸಿ. ಇಂದಿನ ದಿನ ನಿಮ್ಮ ಸಂಗಾತಿಯ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯಲು ಪ್ರಯತ್ನಿಸಿ, ಈ ಮೂಲಕ ನಿಮ್ಮ ವೈವಾಹಿಕ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.
ಧನು ರಾಶಿ: ಇಂದು ನೀವು ಹಣ ಕೊಟ್ಟ ವ್ಯಕ್ತಿಗಳು ನಿಮ್ಮ ಸಾಲವನ್ನು ಹಿಂದಿರುಗಿಸುವ ಸಾಧ್ಯತೆಗಳಿದೆ ಅಥವಾ ನೀವು ಹೊಸ ಉದ್ಯಮಗಳಿಗೆ ಅಥವಾ ಹೂಡಿಕೆಗಳಿಗೆ ಬಂಡವಾಳ ಹಾಕುವ ಸಾಧ್ಯತೆಗಳು ಹೆಚ್ಚಾಗಿ ಕಾಣುತ್ತಿದೆ. ಇಂದು ನಿಮ್ಮ ಮನೆಯ ಸದಸ್ಯರಿಗೆ ನಿಮ್ಮ ಅಗತ್ಯ ಹೆಚ್ಚಾಗಿರುತ್ತದೆ ಅವರಿಗಾಗಿ ಕೊಂಚ ಸಮಯವನ್ನು ತೆಗೆಯುವುದರಿಂದ ನಿಮ್ಮ ಸಂಬಂಧಗಳು ಇನ್ನಷ್ಟು ಗಟ್ಟಿಯಾಗುತ್ತದೆ.
ಮಕರ ರಾಶಿ: ಇಂದಿನ ದಿನ ನಿಮ್ಮ ಬಳಿ ಸಾಕಷ್ಟು ಸಮಯವಿದ್ದು ಅದನ್ನು ಸರಿಯಾದ ಕೆಲಸಗಳಿಗೆ ಬಳಸಿಕೊಳ್ಳಲು ಪ್ರಯತ್ನಿಸಿ. ಇಂದಿನ ದಿನ ನಿಮ್ಮ ಜೊತೆಗಿರುವವರಿಗೆ ನಿಮ್ಮ ವರ್ತನೆ ಕಿರಿಕಿರಿ ಉಂಟುಮಾಡುವ ಸಾಧ್ಯತೆಗಳಿವೆ. ಯಾವುದೇ ಕೆಲಸ ಮಾಡುವ ಮುನ್ನ ಹಲವು ಬಾರಿ ಯೋಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಇಂದು ನಿಮ್ಮ ಪ್ರೆಮಿಕಾ ಅಥವಾ ಪ್ರಿಯಕರ ನಿಮ್ಮ ಮೇಲೆ ಕೋಪಗೊಳ್ಳುವ ಸಾಧ್ಯತೆ ಇದೆ.
ಕುಂಭ ರಾಶಿ: ಕೆಲಸದ ಜಾಗದಲ್ಲಿ ಕೊಂಚ ಒತ್ತಡವನ್ನು ಕಾಣಲಿದ್ದೀರಿ, ಇದೇ ಕಾರಣದಿಂದ ನೀವು ಅನಾರೋಗ್ಯ ಸಮಸ್ಯೆಗಳನ್ನು ಸಹ ಎದುರಿಸಬಹುದು. ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ ಹಾಗೆ ಇಂದು ಕೊಂಚ ಸಮಯ ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ. ಹಣದ ಬಗ್ಗೆ ಯೋಚಿಸದೆ ಗಮನಹರಿಸದೆ ಖರ್ಚು ಮಾಡಿದರೆ ಅದು ನಿಮಗೆ ಎಷ್ಟು ನಷ್ಟ ಉಂಟು ಮಾಡುತ್ತದೆ ಎನ್ನುವುದರ ಬಗ್ಗೆ ಇಂದು ನಿಮಗೆ ಅರಿವಾಗಲಿದೆ.
ಮೀನಾ ರಾಶಿ: ಇಂದಿನ ದಿನ ನೀವು ಹಣ ಖರ್ಚು ಮಾಡುವುದರ ಬಗ್ಗೆ ಕೊಂಚ ಗಮನಹರಿಸಿ ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಇದೇ ಕಾರಣದಿಂದ ನೀವು ತೊಂದರೆಗಳನ್ನು ಅನುಭವಿಸಬಹುದು. ನಿಮ್ಮ ಹಾಗೂ ನಿಮ್ಮ ಪೋಷಕರ ಆರೋಗ್ಯದ ಬಗ್ಗೆ ಕೊಂಚ ಗಮನ ಅರಿಸುವುದು ಉತ್ತಮ. ಇಂದು ನಿಮ್ಮ ಮನೆಯ ಸದಸ್ಯರೊಬ್ಬರು ನಿಮ್ಮ ಜೊತೆಗೆ ತಮ್ಮ ಕಷ್ಟಗಳನ್ನು ಹಂಚಿಕೊಳ್ಳಲಿದ್ದಾರೆ.