Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Arecanut Price Drop: ಅಡಿಕೆ ಬೆಳೆಯಲಿ ಭಾರಿ ಕುಸಿತ ಆತಂಕದಲ್ಲಿ ಇರುವ ಬೆಳೆಗಾರರು

ಉತ್ತರ ಭಾರತದಲ್ಲಿ ಕರಾವಳಿ ಅಡಿಕೆಗೆ ಭಾರೀ ಬೇಡಿಕೆ ಇದೆ. ಪ್ರತಿ ಕಿಲೋ ಅಡಿಕೆ ಬೆಲೆ 500 ರೂಪಾಯಿ ಗಡಿ ದಾಟಿತ್ತು. ಈಗ ಬೆಲೆ ಕುಸಿದು ಕಿಲೋಗೆ 345-350 ರೂ.

Arecanut Price Drop: ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಅಡಿಕೆ ಬೆಳೆಯವ ಬೆಳೆಯುವ ಸಂಖ್ಯೆ ಹೆಚ್ಚಾಗಿದೆ. 50,000 ದಾಟಿದ ಅಡಿಕೆಯ ದರ ನಿಧಾನವಾಗಿ ಕುಸಿಯುತ್ತಾ ಇದೆ. ವಿದೇಶಗಳಿಂದ ಅಕ್ರಮವಾಗಿ ಅಡಿಕೆಯು ಕರಾವಳಿ ಮಾರುಕಟ್ಟೆಗಳಿಗೆ ಬರುತ್ತಿರುವ ಕಾರಣದಿಂದ ಈ ಭೀತಿಗೆ ಆರಂಭವಾಗಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪರಿಸ್ಥಿತಿ:

ಉತ್ತರ ಭಾರತದಲ್ಲಿ ಕರಾವಳಿ ಅಡಿಕೆಗೆ ಭಾರೀ ಬೇಡಿಕೆ ಇದೆ. ಪ್ರತಿ ಕಿಲೋ ಅಡಿಕೆ ಬೆಲೆ 500 ರೂಪಾಯಿ ಗಡಿ ದಾಟಿತ್ತು. ಈಗ ಬೆಲೆ ಕುಸಿದು ಕಿಲೋಗೆ 345-350 ರೂ. (ಹೊಸ ಅಡಿಕೆ) ಮತ್ತು 430-440 ರೂ. (ಹಳೆ ಅಡಿಕೆ) ಗೆ ಇಳಿದಿದೆ. ಬರ್ಮಾ ಮುಂತಾದ ದೇಶಗಳಲ್ಲಿ ಅಗ್ಗದ ದರದಲ್ಲಿ ಅಡಿಕೆ ಬೆಳೆಯಲಾಗುತ್ತದೆ ಮತ್ತು ಅಕ್ರಮವಾಗಿ ಅದನ್ನು ಭಾರತಕ್ಕೆ ಮಾರುಕಟ್ಟೆಗೆ ತಂದು ಮಾರಾಟ ಮಾಡಲಾಗುತ್ತದೆ.

ಬೆಳೆಗಾರರ ಕಳವಳ:

*ಕಡಿಮೆ ದರದಿಂದ ಉತ್ಪಾದನಾ ವೆಚ್ಚವೂ ಭರಿಸಲು ಸಾಧ್ಯವಾಗುತ್ತಿಲ್ಲ.
*ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ.

Arecanut Saplings: ಅಡಿಕೆ ಕೃಷಿಗೆ ಸರಿಯಾದ ಸಸಿ ಯಾವುದು? ಅದರ ಆಯ್ಕೆ ಮಾಡೋದು ಹೇಗೆ? ಪೂರ್ತಿ ಮಾಹಿತಿ ಇಲ್ಲಿದೆ

ಕಾರಣಗಳು ಏನೇನು ?

ಅಡಿಕೆಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲು ಹಲವು ನಿಯಮಗಳು ಹಾಗೂ ನಿರ್ಬಂಧಗಳು ಇವೆ. ಆದರೂ ಸಹ ಭಾರತಕ್ಕೆ ಕಳ್ಳ ದಾರಿ ಇಂದ ಅಡಿಕೆ ಬರುತ್ತಿದೆ. ಹೆಚ್ಚಿನ ಲಾಭ ಗಳಿಸುವ ಆಸೆಗೆ ಅಡಿಕೆ ಕೊಂದುಕೊಳ್ಳುವವರು ವಿದೇಶೀ ಅಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದ್ದಾರೆ. ಆಮದು ಮಾಡಿಕೊಳ್ಳುವ ಸ್ವಲ್ಪ ಪ್ರಮಾಣದ ಅಡಿಕೆ ಮಾತ್ರ ತೆರಿಗೆ ಕಟ್ಟಿ ಉಳಿದ ಅಡಿಕೆಯನ್ನು ತೆರಿಗೆ ನೀಡದೆ ದೇಶೀ ಮಾರುಕಟ್ಟೆಯಲ್ಲಿ ತಂದು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾ ಇದ್ದಾರೆ. ಇದು ಸ್ಥಳೀಯ ರೈತರು ಬೆಳೆದ ಅಡಿಕೆಗೆ ಬಹಳ ನಷ್ಟ ಆಗಲಿದೆ.

ಸಮಸ್ಯೆ ಪರಿಹಾರಕ್ಕೆ ಕೆಲವು ಸರ್ಕಾರ ಕೈಗೊಳ್ಳುಬೇಕಾದ ಕ್ರಮಗಳು ಏನು? :-

*ಸರ್ಕಾರವು ಅಕ್ರಮ ಅಡಿಕೆ ಭಾರತಕ್ಕೆ ಬರುವುದನ್ನು ತಡೆಯಬೇಕು.
* ಕನಿಷ್ಠ ಬೆಂಬಲ ಬೆಲೆ (MSP) ಘೋಷಿಸಬೇಕು.
* ರಫ್ತು ವಹಿವಾಟು ಸುಲಭವಾಗಬೇಕು.
*ಮೌಲ್ಯವರ್ಧಿತ ಅಡಿಕೆ ಉತ್ಪನ್ನಗಳ ತಯಾರಿಕೆಗೆ ಇನ್ನಷ್ಟು ಉತ್ತೇಜನ ನೀಡಬೇಕು.
* ವೈಜ್ಞಾನಿಕ ಬೆಳೆಗೆ ಇನ್ನಷ್ಟು ಉತ್ತೇಜನ ನೀಡಬೇಕು.
* ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಬೇಕು.
* ವಿದೇಶಿ ಅಡಿಕೆಗೆ ಇನ್ನಷ್ಟು ಹೆಚ್ಚಿನ ತೆರಿಗೆ ವಿಧಿಸಬೇಕು.
* ಮಧ್ಯವರ್ತಿಗಳ ಪ್ರವೇಶ ಇಲ್ಲದೆಯೇ ನೇರವಾಗಿ ಸರ್ಕಾರ ರೈತರ ಬಳಿ ಅಡಿಕೆಯನ್ನು ಖರೀದಿಸುವ ಮೂಲಕ ಅಡಿಕೆ ಬೆಳೆಗಾರರ ಪರವಾಗಿ ಸರ್ಕಾರ ನಿಲ್ಲಬೇಕು.

ಅಡಿಕೆಗೆ ಎಲೇಚುಕ್ಕೆ ರೋಗದ ಭೀತಿ :-

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 33,364 ಹೆಕ್ಟೇರ್ ಭೂಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಇವುಗಳಲ್ಲಿ 8,700 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಎಲೆಚುಕ್ಕಿ ರೋಗ ಬಾಧಿಸುತ್ತಿದೆ. ಕಳೆದ ವರ್ಷದ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ರೋಗವು ಈ ವರ್ಷ ತೇವಭರಿತ ಬಿಸಿಲಿನ ವಾತಾವರಣಕ್ಕೆ ಇನ್ನಷ್ಟು ಹೆಚ್ಚಾಗಿದೆ. ಕೊಳೆರೋಗ, ಬೇರೆಹುಳು ಸಮಸ್ಯೆ, ಬೆಳೆಗೆ ವನ್ಯಜೀವಿಗಳ ಕಾಟ ಸೇರಿದಂತೆ.

ವಿವಿಧ ಸಮಸ್ಯೆಗೆ ಕಂಗೆಟ್ಟ ಅಡಿಕೆ ಬೆಳೆಗಾರರಿಗೆ ಈಗ ಔಷಧೋಪಚಾರದ ನಡುವೆಯೂ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಬಾರದಿರುವುದು ಇನ್ನಷ್ಟು ಕಷ್ಟ ಆಗಿದೆ. . ಅಡಿಕೆ ಬೆಳೆಗಾರರು ಎಲೆಚುಕ್ಕಿ ರೋಗದಿಂದ ಚಿಂತೆಯಲ್ಲಿದ್ದಾರೆ‌. ಹಾಗೂ ರೋಗ ನಿಯಂತ್ರಣ ಬಗ್ಗೆ ಕೃಷಿ ವಿಜ್ಞಾನಿಗಳು, ತಜ್ಞರು ಹಲವೆಡೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳೇ ಪರಿಣಾಮಕಾರಿ ಎಂಬುದನ್ನು ತಿಳಿಸಲು ಯತ್ನಿಸುತ್ತಿದ್ದಾರೆ.

Due to the arecanut price drop, farmers are worried. Here are the complete details about the arecanut market.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment