Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Triumph Speed 400: ಬಂತು ಕೊನೆಗೂ ರಾಯಲ್ ಎನ್ಫೀಲ್ಡ್ ಗೆ, ಠಕ್ಕರ್ ಕೊಡಲು ಹೊಸ ಬೈಕ್ ಇದರ ವಿಶೇಷತೆ ನೋಡಿ ಖರೀದಿಸಲು ಮುಗಿ ಬಿದ್ದ ಜನ.

Triumph Speed 400 vs. RE Classic 350: ಇತ್ತೀಚೆಗಂತೂ ಎಲ್ಲಿ ನೋಡಿದರು ಬರಿ ಬೈಕ್ ಗಳದ್ದೇ ಸದ್ದು ಪ್ರತಿದಿನ ಹೊಸ ಹೊಸ ಬೈಕ್ಗಳು ಮಾರ್ಕೆಟ್ ಗೆ  ಬರುತ್ತಿವೆ ಅದರಲ್ಲೂ ಬಹು ಮುಖ್ಯವಾಗಿ, ಪ್ರತಿಯೊಂದು ಬೈಕ್ಗಳ ಮೇಲು ಕೂಡ ಹೊಸ ಹೊಸ ಸ್ಪರ್ಧೆ ಶುರುವಾಗುತ್ತಿದೆ, ಒಂದು ಹೊಸ ರೀತಿಯ ಬೈಕ್ ಮಾರುಕಟ್ಟೆಗೆ ಬಂದರೆ ಸಾಕು ಅದನ್ನೇ ಹೋಲುವಂತೆ ಬೇರೆ ಕಂಪನಿಯ ಬೈಕ್ ಸಹ ಕಾಂಪಿಟೇಷನ್ ಮಾಡಲು ಸಾಜಾಗುತ್ತದೆ.

ಏಕೆಂದರೆ ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ಸಾಕಷ್ಟು ಪ್ರಯತ್ನ ಮಾಡಬೇಕು ಇಲ್ಲವಾದರೆ ವಾಹನ ತಯಾರಕ ಕಂಪನಿಗಳು ಹಿಂದೆ ಹುಲಿದುಬಿಡುತ್ತವೆ, ಹಾಗಾಗಿ Royal Enfield Classic 350 ಗೆ ಕಾಂಪಿಟೇಷನ್ ಮಾಡಲೆಂದೇ ಟ್ರಯಂಪ್ ಕಂಪನಿ ತನ್ನ ಗ್ರಹಕರನ್ನ ತಮ್ಮತ್ತ ಸೆಳೆಯಲು ತಮ್ಮ ಹೊಸ ಬೈಕ್ ಅನ್ನು ಅನಾವರಣ ಗೊಳಿಸಿದೆ ಸದ್ಯಕ್ಕೆ ಈಗ ಎಲ್ಲ ಕಡೆ ಟ್ರಯಂಪ್ ಕಂಪನಿಯ Neo- Retro Roadster speed 400 ಎಂಬ ಬಿಕ ಅನ್ನು ಮಾರಕಟ್ಟೆಗೆ ತಂದಿದೆ.

ಸದ್ಯ ಈಗ ಟ್ರಯಂಫ್ ಇತ್ತೀಚೆಗೆ ತನ್ನ  ಹೊಸ ರೀತಿಯ  ಸ್ಪೀಡ್ ನಿಯೋ-ರೆಟ್ರೋ ರೋಡ್‌ಸ್ಟರ್ (Triumph Speed 400) ಅನ್ನು ಅನಾವರಣಗೊಳಿಸಿತು, ಇದರ ಎಕ್ಸ್ ಶೋ ರೂಂ ಬೆಲೆ 2,33 ಲಕ್ಷ ರೂ. ಟ್ರಯಂಪ್ ಸ್ಪೀಡ್ 400 ತನ್ನ  ಸ್ಪರ್ಧಾತ್ಮಕ ಬೆಲೆ ಮತ್ತು ವೈಶಿಷ್ಟ್ಯಗಳ ಕಾರಣದಿಂದ ಗ್ರಾಹಕರಿಂದ ಪಾಸಿಟಿವ್ ರೆಸ್ಪಾನ್ಸ್ ಅನ್ನು ಪಡೆದುಕೊಂಡಿದೆ. ಇಲ್ಲಿ ಎಲ್ಲರಗೂ ಮೂಡುವ ಪ್ರಶ್ನೆ ಎಂದರೆ  ಗ್ರಾಹಕರು , ಸ್ಪೀಡ್ ಬೈಕ್  ಅಥವಾ ಕ್ಲಾಸಿಕ್ 350 ಅನ್ನು ಖರೀದಿಸಬೇಕೆ ಎಂದು ಕನ್ಫ್ಯೂಸ್ ನಲ್ಲಿ ಇದ್ದಾರೆ.

ಹಾಗಾಗಿ ನಾವು ಇಂದು ಇವುಗಳ ವೈಶಿಷ್ಟ್ಯ, ಬೆಲೆ ಮತ್ತು ಎರಡು ಬೈಕ್ ಗಳ ಮಾದರಿಗಳ ವಿಶೇಷಣಗಳ ವೆತ್ಯಾಸವನ್ನು ತಿಳಿಸಲು ಹೊರಟಿದ್ದೇವೆ. ಟ್ರಯಂಪ್  ಸ್ಪೀಡ್ 400, 39.5 BHP ಅಶ್ವ ಶಕ್ತಿ ಮತ್ತು 37.3 Nm ಅನ್ನು ಉತ್ಪಾದಿಸುವ 398.15 cc ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ, ಆದರೆ ಕ್ಲಾಸಿಕ್ 350 19.9 BHP ಮತ್ತು 27 Nm ನೊಂದಿಗೆ 349.34 cc ಏರ್-ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಎರಡೂ ಮಾದರಿಗಳು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಅಳವಡಿಸಲ್ಪಟ್ಟಿವೆ. ಟ್ರಯಂಪ್ ಸ್ಪೀಡ್ 400, 2091 mm ಉದ್ದ, 814 mm ಅಗಲ, 1084 ಎಂಎಂ ಎತ್ತರ, 1377 ಎಂಎಂ ವೀಲ್‌ಬೇಸ್, 790 ಎಂಎಂ ಸೀಟ್ ಎತ್ತರ, 176 ಕೆಜಿ ತೂಕ ಮತ್ತು 13 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಸ್ಪೀಡ್ 400 ನ ಮುಂಭಾಗದ ಫೋರ್ಕ್‌ಗಳು 43mm USD ನಲ್ಲಿ ಚಲಿಸಿದರೆ, ಹಿಂಭಾಗವು ಮೊನೊ-ಶಾಕ್ ಅಬ್ಸಾರ್ಬರ್‌ಗಳನ್ನು ಪಡೆಯುತ್ತದೆ (Mono Shock Observer)

RE ಕ್ಲಾಸಿಕ್ 350 ನ ಮುಂಭಾಗದ ಫೋರ್ಕ್‌ಗಳು ಟೆಲಿಸ್ಕೋಪಿಕ್ ಆಗಿದ್ದರೆ, ಹಿಂಭಾಗದ ಶಾಕರ್‌ಗಳು ಡ್ಯುಯಲ್ ಸ್ಪ್ರಿಂಗ್-ಲೋಡ್ ಆಗಿವೆ. ಎರಡೂ ಬೈಕ್‌ಗಳು ಎರಡೂ ಕಡೆ  ಡಿಸ್ಕ್ ಬ್ರೇಕ್‌ಗಳೊಂದಿಗೆ ಬರುತ್ತವೆ, ಜೊತೆಗೆ ಡ್ಯುಯಲ್ ಚಾನೆಲ್ ಎಬಿಎಸ್ (Dual Channel ABS). ಟ್ರಯಂಪ್ ನ  ಹೊಸ ಸ್ಪೀಡ್ 400 ನಲ್ಲಿನ ಇತರ ವೈಶಿಷ್ಟ್ಯಗಳು ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಮತ್ತು ಟ್ರಾಕ್ಷನ್ ಕಂಟ್ರೋಲ್, ಜೊತೆಗೆ ಎಲ್‌ಇಡಿ ಲೈಟಿಂಗ್ ಅನ್ನು ಒಳಗೊಂಡಿವೆ.

ಇದು ವೈಶಿಷ್ಟ್ಯಗಳ ವಿಷಯದಲ್ಲಿ ಕ್ಲಾಸಿಕ್ 350 ಗಿಂತ ಒಂದು ಹೆಜ್ಜೆ ಮೇಲಿದೆ. ಕ್ಲಾಸಿಕ್ 350 ಮತ್ತು ಸ್ಪೀಡ್ 400 ಬೆಲೆಗಳು ಕ್ರಮವಾಗಿ 1.93 ಲಕ್ಷ ಮತ್ತು ರೂ 2.25 ಲಕ್ಷ ಎಕ್ಸ್ ಶೋರೂಂ ಆಗಿದೆ. ಕ್ಲಾಸಿಕ್ 350 ಬೆಲೆ 2.33 ಲಕ್ಷ ಎಕ್ಸ್ ಶೋರೂಂ ಆಗಿದೆ, ಆದರೆ ಈ ಬೆಲೆ ಮೊದಲ 10 ಸಾವಿರ  ಖರೀದಿದಾರರಿಗೆ ಮಾತ್ರ ಅನ್ವಯಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದಹ ಬೈಕ್ ಕಂಪನಿಗೆ ಭೇಟಿ ನೀಡಿ ಇದರ ಇನ್ನಷ್ಟು ಪರಿಚಯವನ್ನು ಪಡೆಯಬಹುದು.

Triumph Speed 400 vs. Royal Enfield Classic 350: price, features, and comparison revealed
Triumph Speed 400 vs. Royal Enfield Classic 350: price, features, and comparison revealed
Leave a comment