MAHINDRA SUPRA CNG DUO : ಮಹೇಂದ್ರ ಕಂಪನಿಯಿಂದ CNG ಹಾಗು Petrol ಎರಡರಲ್ಲೂ ಚಲಿಸುವ ಕಮರ್ಷಿಯಲ್ ಗಾಡಿ ಬಿಡುಗಾಡೆಯಾಗಿದೆ ಕಡಿಮೆ ದರ ಹೆಚ್ಚು ಮೈಲೇಜ್.
MAHINDRA SUPRA CNG DUO : Mahindra Company has launched a commercial vehicle running on both CNG and Petrol with low price and high mileage.
ಸಣ್ಣ ವಾಣಿಜ್ಯ ವಾಹನಗಳ(Small commercial vehicles) ಕಂಪನಿಯ ವಿಭಾಗದಲ್ಲಿ ನಾಯಕರಾಗಿರುವ ಮಹೀಂದ್ರಾ(Mahindra) ಅವರು ಸಹ ಒಬ್ಬರು. ಇನ್ನು ಈ ಮಾರುಕಟ್ಟೆಯಲ್ಲಿ ಬಹಳ ಹೆಸರುವಾಸಿಯಾಗಿರುವ ಮಹೀಂದ್ರಾ ಅವರು ಇದೀಗ ಮಾರುಕಟ್ಟೆಗೆ ತಮ್ಮ ವಿಭಾಗದಿಂದ ಒಂದು ಹೊಸ ಮಾಡಲ್ ಕಾರ್ ಅನ್ನು ಬಿಡುಗಡೆ ಮಾಡಿದ್ದಾರೆ. ಹೌದು ಸುಪ್ರೋ ಸಿ ಎನ್ ಜಿ ಡ್ಯುಯೊವನ್ನು(MAHINDRA SUPRA CNG DUO) ಇದೀಗ 6.32 ಲಕ್ಷ ಬೆಲೆಯಲ್ಲಿ ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇನ್ನು ಈ ಸುಪ್ರೊ ಸಿ ಎನ್ ಜಿ ಡ್ಯುಯೊನ ಬೆಲೆ 6.32 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತಿದ್ದು, ಇನ್ನು ಎಕ್ಸ್ ಶೋರೂಂನಲ್ಲಿ ಈ ಹೊಸ ಮಾಡಲ್ ಅನ್ನು ಬಿಡುಗಡೆ ಮಾಡಲಾಗಿದೆ.
ಇನ್ನು ಮಹೀಂದ್ರಾ ಅವರ ಈ ಸುಪ್ರೊ CNG ಡ್ಯುಯೊ ವಾಹನ , 75-ಲೀಟರ್ ಸಿ ಎನ್ ಜಿ ಟ್ಯಾಂಕ್‌ನೊಂದಿಗೆ(CNG GAS), ಇದು 325 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ ಎಂಬುದು ಇದರ ವಿಶೇಷವಾಗಿದ್ದು, ಮತ್ತು 750 ಕೆಜಿಗಳ ಪೇಲೋಡ್(750KG PELODE) ಸಾಮರ್ಥ್ಯದೊಂದಿಗೆ ಈ ಹೊಸ ಮಾಡಲ್ ಇದೀಗ ಮಾರುಕಟ್ಟೆ ಬಂದಿದೆ. ಇನ್ನು ಈ ಮಾಡಲ್ ಎರಡು ಬಣ್ಣಗಳಲ್ಲಿ, ಡೈಮಂಡ್ ವೈಟ್(DIAMOND WHITE) ಹಾಗೂ ನೀಲಿ ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದೆ.
ಇದೇ ಮೊದಲ ಬಾರಿ ಮಹೀಂದ್ರಾ ಕಂಪನಿಯಿಂದ(MAHINDRA COMPANY) ಈ ವಿಭಾಗದಲ್ಲಿ ಡ್ಯುಯಲ್ ಇಂಧನವನ್ನು(DUAL FUEL) ಹೊಂದಿರುವ ವಾಹನ ಇದಾಗಿದ್ದು, ಈ ಹೊಸ ಸುಪ್ರೊ ಸಿಎನ್‌ಜಿ ಡ್ಯುಯೊ ಮಾಡಲ್ ಪೆಟ್ರೋಲ್ ಮತ್ತು CNG ಎರಡರಲ್ಲೂ ಸಹ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಉತ್ತಮ ಮೈಲೇಜ್ ನೀಡುವಲ್ಲಿ ಯಾವುದೇ ಸಂಶಯವಿಲ್ಲ ಎನ್ನಬಹುದು. ಇನ್ನು ಇದರ ಇಂಧನವನ್ನು ಮನಬಂದಂತೆ ಬದಲಾಯಿಸಬಹುದಾಗಿರುವುದು ಇದರ ಮತ್ತೊಂದು ವಿಶೇಷ ಎಂದರೆ ತಪ್ಪಾಗುವುದಿಲ್ಲ. ಇದಲ್ಲದೆ, ಈ ಎಸ್ ಸಿ ವಿ ಫೀಚರ್(ESCV) ಇರುವುದರಿಂದ ನೇರವಾಗಿ ಸಿಎನ್‌ಜಿ ಸ್ಟಾರ್ಟ್ ಮೂಲಕ ಸಿ ಎನ್ ಜಿ
ಮೋಡ್ ನಲ್ಲಿ ಸಹ ಪ್ರಾರಂಭಿಸಿಬಹುದಾಗಿದೆ.
ಸುಪ್ರೊ ಸಿಎನ್‌ಜಿ ಡ್ಯುಯೊ 26.6 ಎಚ್‌ಪಿ(26.6HP), 60 ಎನ್‌ಎಂ ಬಿಎಸ್ 6 ಆರ್‌ಡಿಇ ಕಂಪ್ಲೈಂಟ್ ಎಂಜಿನ್ ಅನ್ನು ಹೊಂದಿದೆ. ಅಲ್ಲದೆ ಮೈಲೇಜ್ ವಿಚಾರಕ್ಕೆ ಬಂದರೆ, ಅದು 23.35 ಕಿಮೀ/ಕೆಜಿ ಮೈಲೇಜ್ ನೀಡುತ್ತದೆ. ಇದು 12 ಇಂಚಿನ ಟೈರ್‌ಗಳನ್ನು ಹೊಂದಿದ್ದು, ನೆಲದಿಂದ ಸುಮಾರು 158 ಮಿಮೀ ಎತ್ತರದಲ್ಲಿದೆ. MM ಈ ವಾಣಿಜ್ಯ ವಾಹನವನ್ನು(COMMERCIAL VEHICLE ) ಮೂರು ವರ್ಷಗಳು/80,000 ಕಿಮೀಗಳ ವಾರಂಟಿಯೊಂದಿಗೆ ನೀಡುತ್ತಿರುವುದಾಗಿ ತಿಳಿದು ಬಂದಿದೆ. ಇನ್ನು ಅನೇಕರು ಈ ವಾಣಿಜ್ಯ ವಾಹನದ ಬುಕಿಂಗ್ ಅನ್ನು ಈಗಾಗಲೇ ಶುರು ಮಾಡಿದ್ದಾರೆ. ಇದೇ ರೀತಿ ಇನ್ನಷ್ಟು ಹೊಸ ಅಪ್ಡೇಟ್ ಗಳನ್ನು ಪಡೆಯಲು ನಮ್ಮ ಪೇಜ್ ಅನ್ನು ಫಾಲೋ ಮಾಡಿ ಹಾಗೆ ಲೈಕ್ ಮಾಡಿ ನಿಮ್ಮ ಆಪ್ತರೊಂದಿಗೆ ತಪ್ಪದೆ ಶೇರ್ ಮಾಡಿ..

MAHINDRA SUPRA CNG DUO : Mahindra Company has launched a commercial vehicle running on both CNG and Petrol with low price and high mileage.