World Cheapest 5G Smartphone: ಭಾರತೀಯ ಮೊದಲ 5G ಸ್ಮಾರ್ಟ್ ಫೋನ್, ಇದರ ಬೆಲೆ, ಫೀಚರ್ಸ್ ನೋಡಿ ಬೆರಗಾದ ನೆಟ್ಟಿಗರು!
Lava Blaze 5G : ಈ ಆಧುನಿಕ ಯುಗದಲ್ಲಿ ಯಾರ ಬಳಿ ನೋಡಿದರೂ ಸಹ ಮೊಬೈಲ್ ಫೋನ್ ಇದ್ದೇ ಇರುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ 5G ಸ್ಮಾರ್ಟ್ ಫೋನ್ ಒಂದು ಟ್ರೆಂಡ್ ಆಗಿದೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಈ 5G ಸ್ಮಾರ್ಟ್ ಫೋನ್ ಬೆಲೆ ಕೇಳಿದರೆ ಕೆಲವರು ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಇನ್ನು ಇದೀಗ 5G ಸ್ಮಾರ್ಟ್ ಫೋನ್ ಪ್ರಿಯರಿಗೆ ಒಂದು ಸಂತಸದ ಸುದ್ದಿ ಹೊರಬಿದ್ದಿದೆ. ಹೌದು ಇದೀಗ ಎಲ್ಲರೂ ಕೊಂಡುಕೊಳ್ಳುವ ಕಡಿಮೆ ದರದಲ್ಲಿ ಇದೀಗ ಭಾರತದ ಸ್ಮಾರ್ಟ್ ಫೋನ್ ಕಂಪನಿಯೊಂದು 5G ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ.
ಹೌದು, ನಮ್ಮ ಭಾರತೀಯ ಸ್ಮಾರ್ಟ್ ಫೋನ್ ಗಳಲ್ಲಿ ಕೆಲವು ಫೀಚರ್ ಗಳ ಕೊರತೆ ಇರುವ ಕಾರಣದಿಂದಾಗಿ ನಮ್ಮ ದೇಶದ ಜನರು ಬೇರೆ ದೇಶದ ಫೋನ್ ಬ್ರಾಂಡ್ ಗಳನ್ನು ಖರೀದಿಸಲು ಇಚ್ಛಿಸುತ್ತಾರೆ. ಆದರೆ ಇದೀಗ ಇಲ್ಲೊಂದು ಭಾರತೀಯ ಕಂಪನಿ ಎಲ್ಲಾ ಆಧುನಿಕ ಫೀಚರ್ ಗಳು ಲಭ್ಯವಿರುವ ಹಾಗೆ ಕಡಿಮೆ ದರದಲ್ಲಿ ಸ್ಮಾರ್ಟ್ ಫೋನ್ ಒಂದನ್ನು ಲಾಂಚ್ ಮಾಡಿದೆ. ಹೌದು, ನಮ್ಮ ಭಾರತೀಯ ಲಾವಾ ಕಂಪನಿ ಇದೀಗ ಆಧುನಿಕ ಫೀಚರ್ ಗಳನ್ನು ಒಳಗೊಂಡಿರುವ ಒಂದು 5G ಸ್ಮಾರ್ಟ್ ಫೋನ್ ನ ತಯಾರಿಸಿ, ಅದನ್ನು ಬೇರೆ ಸ್ಮಾರ್ಟ್ ಫೋನ್ ಗೆ ಹೋಲಿಸಿದರೆ ಅತ್ಯಂತ ಕಡಿಮೆ ಧರದಲ್ಲಿ ಮಾರುಕಟ್ಟೆಯಲ್ಲಿ ಲಾಂಚ್ ಮಾಡುತ್ತಿದೆ.
ಇದೀಗ ಲಾವಾ ಕಂಪನಿಯ ಕಡೆಯಿಂದ Lava Blaze 5G ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, 720×1600 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದ್ದು, 6.5 HD+ ಡಿಸ್ಪ್ಲೇ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ ಫೋನ್ 4GB ಮತ್ತು 6GB ಸ್ಟೋರೇಜ್ ಸಾಮರ್ಥ್ಯದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವುದು ವಿಶೇಷ. ಇನ್ನು ಈ ಸ್ಮಾರ್ಟ್ ಫೋನ್ ನ ಮತ್ತೊಂದು ವಿಶೇಷತೆ ಏನೆಂದರೆ, ಇದರಲ್ಲಿ 3GB ವರ್ಚುಯಲ್ RAM ಅನ್ನು ಸಹ ಹೊಂದಿದೆ. ಅಲ್ಲದೆ LED ಫ್ಲಾಶ್ ನೊಂದಿಗೆ, ಮ್ಯಾಕ್ರೋ ಸೆನ್ಸರ್ ಸಹ ಹೊಂದಿದೆ.
ಇನ್ನು ಸೆಲ್ಫಿ ಪ್ರಿಯರನ್ನು ಘಮನದಲ್ಲಿ ಇಟ್ಟುಕೊಂಡು, Lava Blaze 5G ಸ್ಮಾರ್ಟ್ ಫೋನ್ ನಲ್ಲಿ 8Mp ಫ್ರಂಟ್ ಕ್ಯಾಮೆರಾ ಸಹ ಲಭ್ಯವಿದೆ. ಅಲ್ಲದೆ ಈ ಸ್ಮಾರ್ಟ್ ಫೋನ್ ನಲ್ಲಿ 5000mAh ಬ್ಯಾಟರಿಯನ್ನು ಪಡೆಯುತ್ತೀರಿ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 5G ಸ್ಮಾರ್ಟ್ ಫೋನ್ ಗಳ ಬೆಲೆ ದುಬಾರಿಯಾಗಿದ್ದು, ಆದರೆ ಈ Lava Blaze 5G ಸ್ಮಾರ್ಟ್ ಫೋನ್ ನ ಮಾರುಕಟ್ಟೆಯ ಬೆಲೆ ಕೇವಲ 16,345 ರೂಪಾಯಿಗಳು ಆಗಿದೆ. ಇನ್ನು ನೀವು ಅಮೆಜಾನ್ ಹಾಗೂ ಇನ್ನಿತರ ಆನ್ಲೈನ್ ವೆಬ್ ಸೈಟ್ ಗಳಲ್ಲಿ ಶೇಕಡ 27% ರಷ್ಟು ರಿಯಾಯಿತಿ ಪಡೆಯುವ ಮೂಲಕ ಕೇವಲ 11999 ರೂಗಳಿಗೆ ನೀವು ಖರೀದಿಸಬಹುದು. ಅಲ್ಲದೆ ಈ ಸ್ಮಾರ್ಟ್ ಫೋನ್ ಜೊತೆಗೆ ಕೆಲವು ಆಫರ್ ಗಳನ್ನು ಸಹ ನೀವು ಪಡೆಯಬಹುದು.